ಸಾಗರದಲ್ಲಿದೆರಾಷ್ಟ್ರಕವಿ ಕುವೆಂಪು ಸ್ವ ಹಸ್ತಾಕ್ಷರದ ಅವರದೇಸನ್ಮಾನಪತ್ರ

Team Udayavani, Dec 29, 2018, 10:00 AM IST

29-december-12.jpg

ಸಾಗರ: ರಾಷ್ಟ್ರಕವಿ ಕುವೆಂಪು ಅವರ ಹಸ್ತಾಕ್ಷರವುಳ್ಳ ಪತ್ರವೊಂದು ನಗರದ ನಿವಾಸಿಯೊಬ್ಬರ ಮನೆಯಲ್ಲಿದೆ. 1989ರ ಆ. 22ರಂದು ಅಮೆರಿಕದ ಸ್ಯಾನ್‌ಅಂಟೋನಿಯೋದ ಕುವೆಂಪು ಕನ್ನಡ ಕೂಟದವರು ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವಿಸಿ ನೀಡಿದ ಸನ್ಮಾನ ಪತ್ರ ಇದಾಗಿದೆ. ನಗರದ ಸುಭಾಷ್‌ ನಗರದ ನಿವಾಸಿ ಲಕ್ಷ್ಮೀನಾರಾಯಣ ಹೆಗಡೆ ಅವರ ಮನೆಯಲ್ಲಿ ಇರುವ ಈ ಪತ್ರ ಹಲವು ನೆನಪುಗಳನ್ನು ಹಸಿರಾಗಿಟ್ಟಿದೆ.

ಅಮೇರಿಕದ ಸ್ಯಾನ್‌ಅಂಟೋನಿಯೋದ ಕುವೆಂಪು ಕನ್ನಡ ಕೂಟದ ಅಂದಿನ ಅಧ್ಯಕ್ಷ ಡಾ| ಹಳೇಕೋಟೆ ಕುಮಾರ್‌, ಕಾರ್ಯದರ್ಶಿ ಡಾ| ರಾಜಮ್ಮ ಹಾಗೂ ಖಜಾಂಚಿ ಡಾ| ಗಣೇಶಪ್ಪ ಮತ್ತು ಸದಸ್ಯರು ಕನ್ನಡ ಸಾಹಿತ್ಯ ಲೋಕದ ವಿಭೂತಿ ಪುರುಷ ಕುವೆಂಪು ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಸಮರ್ಪಿಸಿದ ಸನ್ಮಾನ ಪತ್ರ ಇದು. ಇಂದು ಕುವೆಂಪು ಕನ್ನಡ ಕೂಟವು ಅಮೆರಿಕದ ಕನ್ನಡ ಕೂಟಗಳ ಒಕ್ಕೂಟ- ಅಕ್ಕದಲ್ಲಿ ವಿಲೀನವಾಗಿದ್ದು, ಡಾ| ಹಳೇಕೋಟೆ ಕುಮಾರ್‌ ಗೌರವಾನ್ವಿತ ಪದಾಧಿಕಾರಿಯಾಗಿದ್ದಾರೆ.

ಈ ಸನ್ಮಾನ ಪತ್ರವನ್ನು 1989ರಲ್ಲಿ ಮೂಡಿಗೆರೆಯಲ್ಲಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಅಧಿ ಕಾರಿಯಾಗಿದ್ದ ಲಕ್ಷ್ಮೀನಾರಾಯಣ ಹೆಗಡೆ ಬರೆದಿದ್ದಾರೆ. ಕುವೆಂಪು ಕನ್ನಡ ಕೂಟದ ಅಂದಿನ ಅಧ್ಯಕ್ಷ ಕುಮಾರ್‌ ಅವರ ಸಹೋದರ ಹಳೇಕೋಟೆ ರಮೇಶ ಆ ಸಂದರ್ಭದಲ್ಲಿ ಮೂಡಿಗೆರೆಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯಾಸಕ್ತಿ ಸೇರಿದಂತೆ ಸಮಾನಾಸಕ್ತಿಗಳಿಂದಾಗಿ ಹಳೇಕೋಟೆ ರಮೇಶ ಮತ್ತು ಲಕ್ಷ್ಮೀ ನಾರಾಯಣ ಅವರ ನಡುವೆ ಸ್ನೇಹಸಂಬಂಧ ಏರ್ಪಟ್ಟಿತ್ತು. ಆ ಹಿನ್ನೆಲೆಯಲ್ಲಿ ರಮೇಶ ತಮ್ಮ ಗೆಳೆಯ ಲಕ್ಷ್ಮೀ ನಾರಾಯಣ ಅವರ ಬಳಿ ಕುವೆಂಪು ಕನ್ನಡ ಕೂಟವು ಕುವೆಂಪು ಅವರಿಗೆ ನೀಡುವ ಸನ್ಮಾನ ಪತ್ರ ಬರೆಯಲು ಕೇಳಿಕೊಂಡಿದ್ದರು. ಕುವೆಂಪು ಅವರ ಕೃತಿಗಳನ್ನು ಓದಿದ ಹಿನ್ನೆಲೆಯಲ್ಲಿ ಆಕರ್ಷಕ ಸನ್ಮಾನ ಪತ್ರವನ್ನು ಲಕ್ಷ್ಮೀನಾರಾಯಣ ಬರೆದುಕೊಟ್ಟಿದ್ದರು.

ಅಮೆರಿಕಾದ ಸ್ಯಾನ್‌ ಅಂಟೋನಿಯೋದ ಕುವೆಂಪು ಕನ್ನಡ ಕೂಟದ ಪದಾಧಿಕಾರಿಗಳೆಲ್ಲ ಒಟ್ಟಾಗಿ ಬಂದು ಕುವೆಂಪು ಅವರನ್ನು ಮೈಸೂರಿನ ಉದಯರವಿಯಲ್ಲಿ ಸನ್ಮಾನಿಸಿದ್ದರು. ಸನ್ಮಾನ ಪತ್ರದ ಹತ್ತಿಪ್ಪತ್ತು ಪ್ರತಿಗಳನ್ನು ಮಾಡಿಸಿ, ಅದರಲ್ಲಿ ಕುವೆಂಪು ಅವರ ಹಸ್ತಾಕ್ಷರವನ್ನು ಹಾಕಿಸಿದ್ದರು. ಅಂಥದ್ದೊಂದು ಸನ್ಮಾನ ಪತ್ರವನ್ನು ಲಕ್ಷ್ಮೀ ನಾರಾಯಣ ತಮ್ಮ ಮನೆಯಲ್ಲಿಟ್ಟುಕೊಂಡು ಆಪ್ತೇಷ್ಟರಿಗೆ ತೋರಿಸಿ ಸಂಭ್ರಮಿಸುತ್ತಾರೆ.

ಹಳೆ ನೆನಪುಗಳನ್ನು ಕೆದಕುವ ಲಕ್ಷ್ಮೀನಾರಾಯಣ, ಮೈಸೂರಿನಲ್ಲಿನ ಉದಯರವಿಯಲ್ಲಿ ಕುವೆಂಪು ಅವರನ್ನು ಸನ್ಮಾನಿಸುವ ಸಲುವಾಗಿ ಗೆಳೆಯ ರಮೇಶ ಹಳೇಕೋಟೆ ಸನ್ಮಾನ ಪತ್ರವೊಂದನ್ನು ಬರೆದುಕೊಡಲು ಸೂಚಿಸಿದ್ದರು. ನಾನಾಗ ಮೂಡಿಗೆರೆಯಲ್ಲಿ ಬ್ಯಾಂಕ್‌ ಅಧಿಕಾರಿಯಾಗಿದ್ದೆ. ರಮೇಶ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರ ಅಣ್ಣ ಡಾ| ಹಳೇಕೋಟೆ ಕುಮಾರ್‌ ಅಮೆರಿಕದಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು. ರಮೇಶ, ಕೆಂಜಿಗೆ ಪ್ರದೀಪ ಮುಂತಾದವರು ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಗಳು. ಕುಪ್ಪಳ್ಳಿಯ ಕವಿಮನೆಯಲ್ಲಿ ಸಹ ಈ ಸನ್ಮಾನ ಪತ್ರ ಇದೆ ಎಂದು ಸ್ಮರಿಸುತ್ತಾರೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.