ಅಕ್ಕಿ ಹಿಟ್ಟಿನ ಬರ್ಫಿ
Team Udayavani, Aug 7, 2017, 10:36 AM IST
ಬೇಕಾದ ಸಾಮಗ್ರಿ:
250 ಗ್ರಾಂ ಅಕ್ಕಿ ಹಿಟ್ಟು, 150 ಗ್ರಾಂ ಸಕ್ಕರೆಪುಡಿ, 100 ಗ್ರಾಂ ತುಪ್ಪ, ಸ್ವಲ್ಪ ಹಾಲು, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ.
ತಯಾರಿಸುವ ವಿಧಾನ:
ಮೊದಲು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಮಾಡಿ. ಅದಕ್ಕೆ ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ ಹಾಕಿ ಹುರಿದು ತೆಗೆಯಿರಿ. ನಂತರ ಇದೇ ಬಾಣಲೆಯಲ್ಲಿ ಅಕ್ಕಿ ಹಿಟ್ಟು ಹಾಕಿ ಹುರಿಯಿರಿ. ಇದನ್ನು ಒಂದು ಬೇಸನ್ಗೆ ಹಾಕಿ ಹುರಿದ ಅಕ್ಕಿ ಹಿಟ್ಟಿಗೆ ಸಕ್ಕರೆ ಪುಡಿ ಮತ್ತು ಹುರಿದುಕೊಂಡಿದ್ದ ಗೋಡಂಬಿ ಮತ್ತು ಪಿಸ್ತಾ ಹಾಕಿ. ಒಂದು ತಟ್ಟೆಯಲ್ಲಿ ಮಿಶ್ರಣವನ್ನು ಹರಡಿ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ. ಸ್ವಲ್ಪ ಸಮಯದ ಬಳಿಕ ಅಕ್ಕಿ ಹಿಟ್ಟಿನ ಬರ್ಫಿ ಸವಿಯಲು ಸಿದ್ಧ.
ಅನಿತಾ ಗಣೇಶ್, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ