ಬಾಳೆಕಾಯಿ ಜೇನು ಸಕ್ಕರೆ
Team Udayavani, Aug 7, 2017, 11:50 AM IST
ಬೇಕಾಗುವ ಸಾಮಗ್ರಿ:
ದೊಡ್ಡ ಗಾತ್ರದ ಬಾಳೆಕಾಯಿ – 5-6, ಉದ್ದಿನಬೇಳೆ -250ಗ್ರಾಂ, ಸಕ್ಕರೆ- 500ಗ್ರಾಂ. ಜೇನುತುಪ್ಪ- 1 ಸಣ್ಣ ಲೋಟ, ಕರಿಯಲು ಎಣ್ಣೆ, ಉಪ್ಪು- ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆ ಸಮೇತ ಕಟ್ ಮಾಡಿ ಕುಕ್ಕರ್ನಲ್ಲಿ 12 ವಿಶಲ್ ಬರುವವರೆಗೆ ಬೇಯಿಸಬೇಕು. ಬೆಂದ ಬಾಳೆಕಾಯಿ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಒಂದು ಬಿಳಿ ಬಟ್ಟೆಗೆ ರಂಧ್ರವನ್ನು ಮಾಡಿ ಹಿಟ್ಟನ್ನು ತುಂಬಿಕೊಂಡು ಜಿಲೇಬಿ ಥರ ಕರಿಯಿರಿ. ಒಂದು ಪಾತ್ರೆಯಲ್ಲಿ ಸಕ್ಕರೆಯ ಪಾಕವನ್ನು ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ, ಕರಿದ ಹಿಟ್ಟನ್ನು ಹಾಕಿ 5 ರಿಂದ 10 ನಿಮಿಷ ಬಿಟ್ಟು ತೆಗೆದರೆ ಬಾಳೆಕಾಯಿ ಜೇನು ಸಕ್ಕರೆ ತಿನ್ನಲು ರೆಡಿ.
ಭಾರತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’