ಬ್ರೆಡ್ ಚಾಟ್
Team Udayavani, Aug 8, 2017, 5:11 AM IST
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ತುಂಡುಗಳು-2 ಕಪ್, ಖಾರಾಸೇವು-1 ಕಪ್, ಕತ್ತರಿಸಿದ ಈರುಳ್ಳಿ-1, ಕತ್ತರಿಸಿದ ಹಸಿಮೆಣಸಿನಕಾಯಿ-7-8 ತುಂಡುಗಳು, ಕತ್ತರಿಸಿದ ಟೊಮೆಟೊ ಹೋಳುಗಳು-1 ಕಪ್, ಕತ್ತರಿಸಿದ ಆಲೂಗಡ್ಡೆ ಹೋಳುಗಳು-1 ಕಪ್, ತೆಂಗಿನಕಾಯಿ ತುರಿ- 1 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/2 ಕಪ್, ಕತ್ತರಿಸಿದ ಪುದಿನಾ ಸೊಪ್ಪು-1/2 ಕಪ್, ಶುಂಠಿ ತುರಿ-1 ಚಮಚ, ಚಾಟ್ ಮಸಾಲೆ-3 ಚಮಚ,
ನಿಂಬೆರಸ-1 ಚಮಚ, ಹುಣಸೆ ರಸ-2 ಚಮಚ, ಜೀರಿಗೆ ಪುಡಿ-3 ಚಮಚ,
ಎಣ್ಣೆ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1 ಚಮಚ
ಮಾಡುವ ವಿಧಾನ:
ಆಲೂಗಡ್ಡೆ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ ಹೋಳುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ, ಶುಂಠಿ ತುರಿ, ಜೀರಿಗೆ ಪುಡಿ, ಹುಣಸೆ ರಸ,
ನಿಂಬೆರಸ, ಸಕ್ಕರೆ, ಉಪ್ಪು ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಕೆಳಗಿರಿಸಿ. ಈ ಮಿಶ್ರಣಕ್ಕೆ, ಬ್ರೆಡ್ ತುಂಡುಗಳು, ಖಾರಾ ಸೇವು ಹಾಕಿ ಚೆನ್ನಾಗಿ ಕಲಕಿ. ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪುಗಳಿಂದ ಅಲಂಕರಿಸಿ, ರುಚಿಯಾದ ಬ್ರೆಡ್ ಚಾಟ್ ಸರ್ವ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು