CONNECT WITH US  

ವಿಶ್ವಶಾಂತಿಯ ಮೂಲಪುರುಷ ಮಹಾವೀರ

ನೀನೂ ಬದುಕು, ಇತರರನ್ನೂ ಬದುಕಲು ಬಿಡು ಎಂಬ ಮಹಾವೀರ ವಾಣಿಯು ವಿಶ್ವಶಾಂತಿಗೆ ಅಪೂರ್ವ ಕೊಡುಗೆ. ನೀನು ಬದುಕುವುದು ನಿನ್ನ ಹಕ್ಕು. ಆದರೆ ಇತರರ ಬದುಕನ್ನು ಕಿತ್ತುಕೊಂಡು ಅವರ ಶಾಂತಿ, ನೆಮ್ಮದಿಯನ್ನು ಹಾಳು ಮಾಡುವ ಅಧಿಕಾರ ನಿಮಗಿಲ್ಲ ಎಂಬುದು ಮಹಾವೀರರ ಅತಿದೊಡ್ಡ ಸಂದೇಶ.

ನಮ್ಮ ದೇಶದ ಪ್ರಮುಖ ಧರ್ಮಗಳಲ್ಲಿ ಜೈನಧರ್ಮವೂ ಒಂದು. ಈ ಧರ್ಮವನ್ನು ಬೋಧಿಸಿದ ಮಹಾಪುರುಷರಿಗೆ ತೀರ್ಥಂಕರ ಎನ್ನುತ್ತಾರೆ. ಅವರಿಗೆ ಜಿನ ಎಂಬ ಹೆಸರೂ ಇದೆ. ಜಿನ ಎಂದರೆ ರಾಗದ್ವೇಷಗ‌ಳನ್ನು ಗೆದ್ದವನು. ಇವರು ಬೋಧಿಸಿದ್ದು ಜೈನಧರ್ಮ.

ಈ ಯುಗದ ಆರಂಭದಲ್ಲಿ ಜೈನಧರ್ಮವನ್ನು ಪ್ರಥಮ ತೀರ್ಥಂಕರನಾದ ಋಷಭದೇವ ಬೋಧಿಸಿದ. ಅವನಿಗೆ ಆದಿ ತೀರ್ಥಂಕರ ಎಂದೂ ಹೆಸರಿದೆ. ಆದಿ ತೀರ್ಥಂಕರರ ತರುವಾಯ ಕಾಲಕಾಲಕ್ಕೆ ಜೈನ ಪರಂಪರೆಯಲ್ಲಿ ಇಂತಹ ಮಹಾತ್ಮರು ಜನಿಸಿದ್ದಾರೆ. ಅವರೆಲ್ಲರೂ ಸಂಸಾರವನ್ನು ತೊರೆದು ಸನ್ಯಾಸ ಸ್ವೀಕರಿಸಿ ತಪಸ್ಸು ಮಾಡಿದವರು. ಸತ್ಯದ ಸ್ವರೂಪವನ್ನು ತಿಳಿದು ಲೋಕಹಿತಕ್ಕಾಗಿ ಜನರಿಗೆ ಬೋಧಿಸಿದವರು. ಆದಿನಾಥರಿಂದ ಮೊದಲ್ಗೊಂಡು ವರ್ಧಮಾನ ಮಹಾವೀರರವರೆಗೆ ವರ್ತಮಾನ ಕಾಲದ 24 ತೀರ್ಥಂಕರರನ್ನು ಜೈನರು ಪೂಜಿಸುತ್ತಾರೆ. ಈ ತೀರ್ಥಂಕರ ಪಂಕ್ತಿಯಲ್ಲಿ ಕೊನೆಯವರಾಗಿ ಬರುವ ಭಗವಾನ್‌ ಮಹಾವೀರ ಕೇವಲ ಪೌರಾಣಿಕ ಭಕ್ತಿ ಮಾನ್ಯತೆಗಳಿಗೆ ಮಾತ್ರ ಪಾತ್ರರಾಗದೆ ಚಾರಿತ್ರಿಕ ಮನ್ನಣೆಯನ್ನೂ ಪಡೆದು ಐತಿಹಾಸಿಕ ವ್ಯಕ್ತಿಯಾಗಿರುವುದು ವಿಶೇಷ.

ಬಿಹಾರದಿಂದ ಬಂದ ಮಹಾವೀರ
ಮಹಾವೀರ ಜನಿಸುವ ಪೂರ್ವದಲ್ಲಿ ಇಂದಿಗೆ ಸುಮಾರು 2600 ವರ್ಷಗಳ ಹಿಂದೆ ಭಾರತದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಕ ಸ್ಥಿತಿ ತೀರ ಹದಗೆಟ್ಟಿತ್ತು. 23ನೇ ತೀರ್ಥಂಕರರಾದ ಪಾರ್ಶ್ವನಾಥರು ಮುಕ್ತಿ ಪಡೆದು 250 ವರ್ಷಗಳು ಕಳೆದಿದ್ದವು. ಆ ವೇಳೆಗಾಗಲೇ ಜನತೆಯಲ್ಲಿ ಧರ್ಮ ಮರೆಯಾಗುತ್ತಾ ಬಂದಿತ್ತು. ಎಲ್ಲೆಡೆ ಅನ್ಯಾಯ, ಅನಾಚಾರ, ಅತ್ಯಾಚಾರ ತಾಂಡವವಾಡುತ್ತಿದ್ದವು. ಅಶಾಂತಿ ಅನಿರ್ದಿಷ್ಟತೆ ಮತ್ತು ಅಸಮತೋಲನೆಯಿಂದ ಜನತೆ ದಿಕ್ಕೆಟ್ಟು ತಮ್ಮನ್ನು ಋಜುಮಾರ್ಗದಲ್ಲಿ ಕೊಂಡೊಯ್ಯಬಲ್ಲ ಒಂದು ಮಹಾಚೇತನದ ನಿರೀಕ್ಷೆಯಲ್ಲಿತ್ತು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಹಾವೀರರ ಜನನವಾಯಿತು. ಉತ್ತರ ಭಾರತದ ಬಿಹಾರ ಪ್ರಾಂತದ ಸಿದ್ದಾರ್ಥ ಮಹಾರಾಜ ಮತ್ತು ತ್ರಿಶೂಲಾದೇವಿಯ ಮಗನಾಗಿ ಕುಂಡಲಪುರದಲ್ಲಿ ಮಹಾವೀರರು ಕ್ರಿ.ಪೂ.599ರಲ್ಲಿ ಚೈತ್ರ ಶುದ್ಧ ತ್ರಯೋದಶಿಯ ದಿನ ಜನಿಸಿದರು. ಆಗ ನಾಡಿನೆಲ್ಲೆಡೆ ಸುಭಿಕ್ಷ, ಸಂತೋಷದ ವಾತಾವರಣವುಂಟಾಯಿತು. ಹಾಗಾಗಿ ಇವರ ಹುಟ್ಟು ಹೆಸರು ವರ್ಧಮಾನರೆಂದು, ಇವರ ಜಾnನ, ಧೈರ್ಯ ಗುಣಗಳಿಂದ ಇವರನ್ನು ಸನ್ಮತಿ ಮತ್ತು ಮಹಾವೀರನೆಂದೂ ಕರೆಯುತ್ತಿದ್ದರು. ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹಗಳೆಂಬ ಪಂಚಶೀಲ ತತ್ವಗಳಿಂದ ದಿಕ್ಕೆಟ್ಟ ಜನತೆಯನ್ನು ಉದ್ಧರಿಸಿದರು. ಅವರ ಹಿತೋಪದೇಶಿ ತತ್ವಗಳು ಜನರಿಗೆ ಪ್ರಿಯವಾದವು. ಜನರ ದುಃಖ ಪರಿಹಾರಕ್ಕೆ ಉತ್ತಮವಾದ ಮಾರ್ಗೋಪಾಯ ಕಂಡುಕೊಳ್ಳಲು ಅಪೇಕ್ಷೆಪಟ್ಟರು.
ಅದಕ್ಕಾಗಿ ಬಾಲ್ಯದಿಂದಲೂ ವಿಚಾರ ಮಗ್ನರಾಗಿ, ಸಂಸಾರ ಭೋಗಗಳ ಬಗ್ಗೆ ಉದಾಸೀನರಾಗಿದ್ದರು. ಅರಮನೆಯ ಸಿರಿ ಸಂಪದಗಳಿಗೆ ಅಂಟಿಕೊಳ್ಳದೆ ಬಾಲಬ್ರಹ್ಮಚಾರಿಗಳಾಗಿಯೇ ತಮ್ಮ 30ನೇ ವಯಸ್ಸಿನವರೆಗೂ ದೇಶ ಸಂಚಾರ ಮಾಡಿ ಜನರ, ದೇಶದ, ಧರ್ಮದ ಅವ್ಯವಸ್ಥೆಗಳನ್ನು ಕಂಡು ವೈರಾಗ್ಯಮೂರ್ತಿಯಾದರು. ದಿಗಂಬರ ಮುನಿಯಾಗಿ 12 ವರ್ಷ ಘೋರ ತಪಸ್ಸು ಮಾಡಿ ಕೇವಲಜಾnನವೆಂಬ ದಿವ್ಯ ಜಾnನ ಹೊಂದಿದರು. ಆಗ ಅವರಿಗೆ ಜಗತ್ತಿನ ಸಕಲವೂ ಅರಿವಾಯಿತು. ಹಿಂದಿನ 23 ತೀರ್ಥಂಕರರು ಸಾರಿ ಹೋದ ಧರ್ಮದ ಎಲ್ಲಾ ವಿಚಾರವೂ ತಿಳಿಯಿತು. ಕಾಮಕ್ರೋಧಾದಿ ಅಂತರಂಗ ಶತ್ರುಗಳನ್ನು ಗೆದ್ದು ಜಿನರಾದರು.

ಮಹಾವೀರರು ತಾವು ಕಂಡ ಆತ್ಮ ಹಿತಕಾರಿ ಧರ್ಮ ಮಾರ್ಗವನ್ನು ಜನರಿಗೆ ಬೋಧಿಸಿದರು. ಅವರು ಸಮವರಣವೆಂಬ ಧರ್ಮ ಸಭೆಯಲ್ಲಿ ವಿರಾಜಮಾನರಾಗಿ 30 ವರ್ಷಗಳ ಕಾಲ ಜೈನ ಧರ್ಮದ ಪುನರುದ್ಧಾರ ಮಾಡಿದರು. ಪರಂಪರಾಗತವಾಗಿ ಬಂದಿದ್ದ ಧರ್ಮ-ನೀತಿ ಮಾರ್ಗಗಳನ್ನು ಪ್ರಚಾರ ಮಾಡಿದರು. ಕೊನೆಗೆ ತಮ್ಮ 72ನೇ ವಯಸ್ಸಿನಲ್ಲಿ ಪಾವಾಪುರಿಯ ಕೆರೆಯ ಮಧ್ಯದಲ್ಲಿದ್ದ ಶಿಲಾಫ‌ಲಕದ ಮೇಲೆ ಕುಳಿತು ಕರ್ಮಕ್ಷಯ ಮಾಡಿ ಮುಕ್ತರಾದರು. ಕ್ರಿ.ಪೂ.527ರಲ್ಲಿ ಅಶ್ವಯಜ, ಬಹುಳ ಅಮಾವಾಸ್ಯೆಯ ದಿನ ಅವರ ಪವಿತ್ರವಾದ ಆತ್ಮವು ಮುಕ್ತವಾಗಿ ಸಿದ್ಧಲೋಕವನ್ನು ಸೇರಿತು. ಅಂದರೆ ಅವರು ನಿರ್ವಾಣ ಹೊಂದಿ ಪರಮ ನಿರಂಜನ ಸಿದ್ಧಾತ್ಮರಾದರು.

ಪಂಚಾಣುವ್ರತವೇ ಪರಮ ಸಂದೇಶ
ಸರ್ವಜೀವಿಗಳ ಹಿತವನ್ನು ಗುರಿಯಲ್ಲಿರಿಸಿಕೊಂಡಿರುವ ಜೈನಧರ್ಮದ ಇಂದಿನ ರೂಪರೇಖೆಗಳನ್ನು ಹರಳುಗೊಳಿಸಿದವರು ಭಗವಾನ್‌ ಮಹಾವೀರ. ಅವರು ಧೀರೋದಾತ್ತರಾಗಿ ಸಾಧನಾವಧಿಯನ್ನು ಕಳೆದು ಸರ್ವಜ್ಞ-ಸರ್ವದರ್ಶಿಯಾಗಿ ಬೆಳೆದರು. ಮುಕ್ತಿ ಮಾರ್ಗದ ಆವಿಷ್ಕಾರನಾದ ನಂತರವಷ್ಟೆ ಅವರು ಉಪದೇಶಿಸತೊಡಗಿದರು. ಸರಳವಾದ ಆಯಾ ದೇಶದ ಭಾಷೆಗಳಲ್ಲೇ ಅವರ ಉಪದೇಶವಿರುತ್ತಿತ್ತು. ಅವರ ತತ್ವ ಬೋಧನೆಗಳು ಸರ್ವರಿಗೂ ಹಿತವಾಗಿದ್ದವು. ಮುಖ್ಯವಾಗಿ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂಬ ಪಂಚಶೀಲಗಳನ್ನು ತಿಳಿಸಿದರು. ಪಂಚಾಣುವ್ರತಗಳೆಂದು ಇವನ್ನು ಕರೆದರು. ಇವು ಮಾನವೀಯ ಗುಣಮೌಲ್ಯಗಳೆಂದು ಹೇಳಿದರು. ಇವನ್ನು ಪರಿಪೂರ್ಣವಾಗಿ ತಾವು ಪಾಲಿಸಿ ಸಿದ್ಧಿ ಹೊಂದಿ, ಇತರರೂ ಪಾಲಿಸಲು ಪ್ರೇರಣೆ ನೀಡಿದರು. ಇವು ಲೋಕಕಲ್ಯಾಣದ ಆತ್ಮ ಸಾಧನೆಯ ಸುಖ-ಶಾಂತಿಯ-ಜೀವ ಹಿತದ ಉಪಾಯಗಳೆಂದು ಹೇಳಿದರು. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಇದೆ ಎಂದರು. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಸಜ್ಜನಿಕೆಗಳನ್ನು ಜೀವನದಲ್ಲಿ ಅಳವಡಿಸಬೇಕೆಂದರು. ಹೀಗೆ ಧರ್ಮದಲ್ಲಿ ಒಳಸುಳಿದಿದ್ದ ಶಿಥಿಲಾಚಾರಗಳನ್ನು ಹೋಗಲಾಡಿಸಿ ಧರ್ಮದ ಪುನರುದ್ಧಾರ ಮಾಡಿದರು.

ಮಹಾವೀರರ ಉಪದೇಶ ಜಾತಿ ಮತ-ಪಂಥಗಳಿಗೆ ಮೀರಿದ್ದು. ಸರ್ವಜೀವರೂ ಸಮಾನರು, ಸಾಧನೆಯಿಂದ ಪುರುಷಾರ್ಥದಿಂದ ಎಲ್ಲರೂ ಮುಕ್ತಿ ಹೊಂದುವುದು ಸಾಧ್ಯ ಎಂಬುದು ಅವರ ಉಪದೇಶ. ಚೈತನ್ಯ ಸ್ವರೂಪಿಯಾದ, ನಿತ್ಯಾನಂದಮಯನಾದ ಜೀವ ಅಜಾnನದಿಂದ ತನ್ನ ನಿಜವನ್ನು ತಿಳಿಯದೆ ತನ್ನ ಸಾಮರ್ಥ್ಯವನ್ನು ಅರಿತು ಗುರುತಿಸದೆ ದುಃಖೀಯಾಗಿದ್ದಾನೆ. ಕ್ಷಣಿಕವಾದ ಮೋಹ-ಮಾಯೆಯ ಸಂಕ್ಷೇಪದಿಂದ ಭ್ರಮಾಧೀನನಾಗಿ ಹುಟ್ಟು ಸಾವಿನ ತಿರುಗಣೆಯಲ್ಲಿ ಬಿದ್ದಿದ್ದಾನೆ. ಒಂದು ಸಾರಿ ತನ್ನತನದ ಅರಿವು ಅವನಿಗಾದರೆ ಸಾಕು, ಶಾಶ್ವತ ಸುಖದ ಒಡೆತನ ಅವನಿಗೆ ದೊರೆಯುತ್ತದೆ ಎಂಬುದೇ ಮಹಾವೀರರ ಸಂದೇಶ. ಸರ್ವರಿಗೂ ಸಮಬಾಳು ಎಂಬುದು ಅವರ ಧ್ಯೇಯವಾಣಿ. ಅವರು ಉಪದೇಶಿಸಿದ ಅಮೂಲ್ಯ ತತ್ವವೆಂದರೆ ಅಪರಿಗ್ರಹತತ್ವ. ನಮಗೆ ಇಷ್ಟಿದ್ದರೆ ಮತ್ತಷ್ಟರಾಸೆ, ಕಡುಸುಖವ ಕಾಂಬಾಸೆ. ಆದರೆ ಆಸೆ ದುಃಖಕ್ಕೆ ಮೂಲ ಎಂದು ಎಚ್ಚರಿಸಿದರು ಮಹಾವೀರರು.

ನೀನು ಬದುಕು, ಬದುಕಲು ಬಿಡು
ಸತೆÌàಷು ಮೈತ್ರಿ ಗುಣಿಷು ಪ್ರಮೋದಂ
ಕ್ಲಿಷ್ಟೇಷು ಜೀವೇಷು ಕೃಪಾಪರತ್ವಮ್‌ |
ಮಾಧ್ಯಸ್ಥ ಭಾವಂ ವಿಪರೀತ ವೃತೌ¤
ಸದಾ ಮಮತ್ಮಾ ವಿಧಧಾತುದೇವಾ ||

ಜಗತ್ತಿನ ಜೀವಿಗಳೊಂದಿಗೆ ಮೈತ್ರಿಯಿಂದ ಇರಬೇಕು. ಗುರುಗಳು, ಗುಣಿಗಳು, ಸಭ್ಯರು, ಸಜ್ಜನರಲ್ಲಿ ಗೌರವದಿಂದ ನಡೆಯಬೇಕು. ದೀನದಲಿತರಿಗೆ, ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ವಿಪರೀತ ವರ್ತನೆಯುಳ್ಳವರನ್ನು ಶತ್ರುಗಳೆಂದು ಬಗೆಯದೆ, ನಿಂದಿಸದೆ ಹಾಗೂ ಪುರಸ್ಕರಿಸದೆ ಮಾಧ್ಯಸ್ಥ ರೀತಿಯಲ್ಲಿ ಕಾಣಬೇಕು. ನೀನು ಬದುಕು, ಇತರರನ್ನೂ ಬದುಕಲು ಬಿಡು ಎಂಬ ಅಹಿಂಸಾಧರ್ಮದ ತತ್ವವನ್ನು ಮಹಾವೀರರು ಸಾರಿದರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಯನ್ನು ಸಾರಿದರು. ಜೀವಿಸಲು ಸಸ್ಯಾಹಾರವೇ ಸಾಕು. ಮಾಂಸಾಹಾರ ಬೇಡವೆಂದರು. ಮದ್ಯಪಾನ, ಮಾದಕ ವಸ್ತುಗಳನ್ನು ತ್ಯಜಿಸಬೇಕೆಂದರು. ರಾತ್ರಿ ಭೋಜನ ತ್ಯಾಗ, ನೀರು ಸೋಸಿ ಕುಡಿಯುವುದೇ ಮುಂತಾದ ಅಹಿಂಸಾ ಧರ್ಮದ ಸಂಸ್ಕೃತಿ ಎಂದರು. ಕೈ, ಬಾಯಿ, ಮನ, ಮಾತುಗಳು ಸಂಯಮದಿಂದ ಕೂಡಿರಬೇಕು ಎಂದು ಎಚ್ಚರಿಸಿದರು. ಜೀವಿಗಳ ಶೋಷಣೆ ಮಾಡದೆ ಪ್ರೀತಿ, ವಾತ್ಸಲ್ಯ, ಕರುಣೆ, ಅನುಕಂಪ, ಸಮತಾಭಾವ, ಸಹಬಾಳ್ವೆ ಇರಬೇಕು ಎಂದರು. ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ ಎಂದು ಸಾರಿದರು.
ಪಂಚಾಣುವ್ರತಗಳ ಪಾಲನೆಯಿಂದ ವಿಶ್ವಶಾಂತಿ ಸಾಧ್ಯವೆಂದು ಮಹಾವೀರರು ಬೋಧಿಸಿದರು. ಈ ತತ್ವಗಳಿಂದ ಪ್ರಭಾವಿತರಾದ ಗಾಂಧೀಜಿಯವರು ದೇಶದ ಸ್ವಾತಂತ್ರÂ ಹೋರಾಟದಲ್ಲಿ ಇದನ್ನೂ ಬಳಸಿ ಗೆದ್ದರು. ನೀನೂ ಬದುಕು, ಇತರರನ್ನೂ ಬದುಕಲು ಬಿಡು ಎಂಬ
ಮಹಾವೀರ ವಾಣಿಯು ವಿಶ್ವಶಾಂತಿಗೆ ಅಪೂರ್ವ ಕೊಡುಗೆ. ನೀನು
ಬದುಕುವುದು ನಿನಗೆ ಪ್ರಿಯವೂ ನಿನ್ನ ಹಕ್ಕೂ ಆಗಿದೆ. ಆದರೆ ಇತರರ
ಬದುಕನ್ನು ಕಿತ್ತುಕೊಂಡು ಅವರ ಶಾಂತಿ, ನೆಮ್ಮದಿಯನ್ನು ಹಾಳು ಮಾ
ಡುವ ಅಧಿಕಾರ ನಮಗಿಲ್ಲ ಎಂಬುದು ಮಹಾವೀರರ ಬೋಧನೆ.
ಅಹಿಂಸೆಯೇ ಶ್ರೇಷ್ಠ ಧರ್ಮ, ದಯೆಯೇ ಧರ್ಮದ ಮೂಲ. ಸಕಲ ಜೀವಿಗಳಿಗೂ ಹಿತವನ್ನು ಬಯಸುವುದೇ ಜೈನಧರ್ಮ. ಜೀವದ

ಯೆಯೇ ಜೈನಧರ್ಮ. ಇದೇ ಸರ್ವೋದಯ ಧರ್ಮತೀರ್ಥ, ಇದೇ ವಿಶ್ವಧರ್ಮ, ಇಂತಹ ಸಂದೇಶವನ್ನು ಬೋಧಿಸಿ ಉಪಕಾರ ಮಾಡಿದ ಮಹಾವೀರ ಸ್ವಾಮಿಯವರನ್ನೂ ಸ್ಮರಿಸುತ್ತಾ ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಬಾಳ್ಳೋಣ.

ಕೆ. ಗುಣಪಾಲ ಜೈನ್‌, ಬೆಂಗಳೂರು

Trending videos

Back to Top