ಪಂಚವಾರ್ಷಿಕ ಯೋಜನೆಗೆ ವಿದಾಯ ಹಾಡಲು ಕ್ಷಣಗಣನೆ


Team Udayavani, Mar 20, 2017, 10:20 PM IST

20-ANKANA-1.jpg

ಸ್ವಾತಂತ್ರ್ಯಾನಂತರ ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಆರಂಭಿಸಿದ್ದ ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಗೆ ಇನ್ನೇನು ವಿದಾಯ ಹೇಳಲಿದ್ದೇವೆ. ಅದರ ಸ್ಥಾನವನ್ನು ರಾಷ್ಟ್ರೀಯ ಅಭಿವೃದ್ಧಿ ಗುರಿ ಆಕ್ರಮಿಸಿಕೊಳ್ಳಲಿದೆ. ಪರಿಕಲ್ಪನೆ ಯಾವುದೇ ಆಗಿರಲಿ; ಒಟ್ಟಾರೆ ಉದ್ದೇಶ ದೇಶದ ಸಮಗ್ರ ಅಭಿವೃದ್ಧಿ ಆಗಿರಬೇಕಾದದ್ದು ಮುಖ್ಯ. 

ನಾವು ಮಾಡುವ ಕೆಲಸಕ್ಕೆ ಏನಾದರೂ ಗುರಿಯನ್ನಿಟ್ಟುಕೊಂಡರೆ ಆ ಉದ್ದೇಶವನ್ನು ಈಡೇರಿಸುವುದು ಸುಲಭ ಸಾಧ್ಯ. ಗುರಿಯನ್ನು ದಾಟಿ ಮುನ್ನಡೆಯಬಹುದಾಗಿದೆ. ಗುರಿಯೇ ಇಲ್ಲದಿದ್ದರೆ ಕಾಯಕ ವ್ಯರ್ಥ. ದೇಶದ ಆರ್ಥಿಕ ಅಭಿಧಿವೃದ್ಧಿಯೆಂಬ ಉದ್ದೇಶವನ್ನು ಸಾಧಿಸಲು ದೇಶದ ಸರಕಾರವು ಭಾರತದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಮಹತ್ವಾಕಾಂಕ್ಷೆಯಿಂದಾಗಿ 1951ರಲ್ಲಿ ಭಾರತವು ಪಂಚವಾರ್ಷಿಕ ಯೋಜನೆಗಳ ಯುಗವನ್ನು ಪ್ರವೇಶಿಸಿತು. ಇಂತಹ ಯೋಜನೆಗಳು, ಆರ್ಥಿಕ ಸುಧಾರಣೆಗಳು ದೇಶದಲ್ಲಿ ಆಗಲೇಬೇಕು. ಬದಲಾವಣೆ ಇಲ್ಲದಿದ್ದರೆ ಬೆಳವಣಿಗೆ ಅಸಾಧ್ಯ. 

ಈಗ, ಸುಮಾರು 67 ವರ್ಷಗಳ ಅನಂತರ ನೀತಿ ಆಯೋಗವು 12ನೇ ಪಂಚವಾರ್ಷಿಕ ಯೋಜನೆಯನ್ನು ಮಾರ್ಚ್‌ 31ರಂದು ಕೊನೆಗೊಳಿಸುವುದರೊಂದಿಗೆ ಈ ಯೋಜನೆಯನ್ನೇ ಕೈಬಿಡಲಿದೆ. 1951ರಿಂದ ಪ್ರಾರಂಭಗೊಂಡು 2017 ಮಾರ್ಚ್‌ 31ರವರೆಗೆ ಅಂದರೆ ಸುಮಾರು 67 ವರ್ಷಗಳ ಪಂಚವಾರ್ಷಿಕ ಯೋಜನೆಗಳ ಲಾಭವನ್ನು ಭಾರತವು ಉಂಡಿದೆ. ಮೊದಲನೆಯ ಪಂಚವಾರ್ಷಿಕ ಯೋಜನೆಯ ಮುಂದುವರಿದ ಭಾಗ ಎರಡನೆಯದ್ದು. ಎರಡನೆಯ ಯೋಜನೆಯ ಮುಂದುವರಿದ ಭಾಗ ಮೂರನೆಯದ್ದು. ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಮುಂದುವರಿದ ಭಾಗ 12ನೆಯದು. ಹೀಗೆ ಯೋಜನಾವಧಿ ಮುಂದುವರಿಯುತ್ತಲೇ ಹೋಯಿತು. 1966-69ರ ಮೂರು ವರ್ಷಗಳಲ್ಲಿ ಪಂಚವಾರ್ಷಿಕ ಯೋಜನೆಯ ಬದಲಾಗಿ ವಾರ್ಷಿಕ ಯೋಜನೆಗಳಿದ್ದವು. 1979-80 ಮತ್ತು 1990-92ರ ಅವಧಿಯಲ್ಲಿ ಯಾವುದೇ ಯೋಜನೆಗಳಿರಲಿಲ್ಲ. ಅನೇಕ ಬಾರಿ ನಮ್ಮ ಗುರಿ ತಲುಪಲಸಾಧ್ಯವಾದಾಗ ನಮ್ಮ ಪ್ರಯತ್ನವನ್ನು ಮುಂದುವರಿಸುತ್ತಲೇ ಹೋಗುವುದುಂಟು. ಯೋಜನೆಯ ಅವಧಿ ಮುಂದುವರಿಯುತ್ತಲೇ ಹೋದರೆ ನಮ್ಮ ಯೋಜನೆ ದೀರ್ಘಾವಧಿ ಯೋಜನೆ ಎಂದು ಅನೇಕ ಬಾರಿ ಬೇಸರಗೊಂಡು ನಾವು ಹೇಳಿಕೊಳ್ಳುವುದಿದೆ. ಅಂತೂ ದೇಶದಲ್ಲಿ ಪಂಚವಾರ್ಷಿಕ ಯೋಜನೆಗೂ ವಿದಾಯ ಹೇಳುವ ದಿನಗಳು ಹತ್ತಿರವಾಗುತ್ತಿವೆ. ಇನ್ನೇನು ಕೆಲವೇ ದಿನಗಳು, ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಮಾರ್ಚ್‌ 31, 2017 ಪಂಚವಾರ್ಷಿಕ ಸುದೀರ್ಘ‌ ಯೋಜನೆಯ ಕೊನೆಯ ದಿವಸ. ಆ ಬಳಿಕ ಈ ಯೋಜನೆಯನ್ನು ಅರ್ಥಶಾಸ್ತ್ರ ಇತಿಹಾಸದ ಪುಟಗಳಲ್ಲಷ್ಟೇ ಕಾಣಬಹುದಾಗಿದೆ, ನೆನಪಿಸಬಹುದಾಗಿದೆಯಷ್ಟೇ. ಅಭಿವೃದ್ಧಿಯ ಗುರಿ ಮೊದಲೆರಡು ಯೋಜನೆಗಳಲ್ಲೇ ಈಡೇರಿದ್ದರೆ ಮತ್ತೆ ಪಂಚವಾರ್ಷಿಕ ಯೋಜನೆಗಳ ಅಗತ್ಯವಿರಲಿಲ್ಲವೇನೋ ಎಂದು ನಮಗನ್ನಿಸಿದ್ದುಂಟು. ನಮ್ಮ ಪ್ರಯತ್ನ ಗುರಿ ಸಾಧಿಸುವ ಬದಲು ಗುರಿ ದಾಟಿ ಮುನ್ನಡೆಯುವುದಾಗಿದ್ದರೆ ಇಂತೆಲ್ಲ ಯೋಜನೆಗಳಿಗೆ ಎಂದೋ ಪೂರ್ಣವಿರಾಮ ಹಾಕಬಹುದಿತ್ತೇನೋ?

ಇನ್ನೇನು ಪಂಚವಾರ್ಷಿಕ ಯೋಜನೆಗಳ ಬದಲಿಗೆ ಜಗತ್ತಿನ ರಾಷ್ಟ್ರಗಳು ಹಮ್ಮಿಕೊಂಡ ಶತಮಾನದ ಅಭಿವೃದ್ಧಿ ಗುರಿಯ ಮಾದರಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ನೀತಿ ಆಯೋಗವು ನಿರ್ಧರಿಸಲಿದೆ. ಈ ಗುರಿಗಳು ಮುಂದಿನ 15 ವರ್ಷಗಳೊಳಗೆ ಸಾಧಿಸಬೇಕೆಂಬ ಗುರಿಯನ್ನಿಟ್ಟುಕೊಂಡಿದೆ. ಗುರಿಗಳ ನೀಲನಕ್ಷೆ ಇನ್ನೇನು ಕೆಲದಿನಗಳಲ್ಲೇ ಹೊರಬಹುದಾಗಿದೆ.

ಚಿತ್ರಣ ಬದಲಾಗಿದೆ
ಕಳೆದ 67 ವರ್ಷಗಳ ಯೋಜನೆಗಳ ಅವಧಿಯಲ್ಲಿ ದೇಶವು ಆರ್ಥಿಕವಾಗಿ ಬಹಳಷ್ಟು ಬದಲಾಗಿದೆ. ಬಹಳಷ್ಟು ಒಳಿತಾಗಿದೆ, ನಿರೀಕ್ಷೆಗಳೆಲ್ಲ ಈಡೇರಲಿಲ್ಲ, ಬಡತನ ಸಮಸ್ಯೆ ಸಂಪೂರ್ಣ ನಿವಾರಣೆಗೊಂಡಿಲ್ಲ. 2016ರ ಅಂದಾಜಿನ ಪ್ರಕಾರ ಇನ್ನೂ ಶೇ.21.3ರಷ್ಟು ಜನರು ಬಡತನ ರೇಖೆಯ ಕೆಳಗಿದ್ದಾರೆ. ಜನರ ತಲಾ ಆದಾಯ 1 ಲಕ್ಷ ರೂ.ಗಳನ್ನು ದಾಟಿದೆ. ಒಂದನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದ ನೈಜ ಅಭಿವೃದ್ಧಿಯ ದರ ಶೇ.3.6ರಷ್ಟಿತ್ತು. ಇವತ್ತು ದೇಶದ ಅಭಿವೃದ್ಧಿ ದರ ಶೇ.7ರ ಆಸುಪಾಸಿನಲ್ಲಿದೆ. 1990ರ ಏಶ್ಯನ್‌ ಕರೆನ್ಸಿ ಸಮಸ್ಯೆ, 2008-2009ರ ಜಾಗತಿಕ ಹಿಂಜರಿತದಂತಹ ಆರ್ಥಿಕ ದುರಂತಗಳು ಜಗತ್ತಿನ ರಾಷ್ಟ್ರಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವುದರ ಹೊರತಾಗಿಯೂ ನಮ್ಮದು ಇವತ್ತು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. 

ಈ ಕಾರಣಕ್ಕಾಗಿಯೇ ನಮ್ಮ ರಾಷ್ಟ್ರಕ್ಕೆ ಬ್ರಿಕ್ಸ್‌ ಕ್ಲಬ್‌ನಲ್ಲಿ ಸದಸ್ಯ ಪಟ್ಟ ಸಿಕ್ಕಿದ್ದು.  1991ಕ್ಕೆ ಹಿಂದೆ 10 ಮಿಲಿಯನ್‌ ಭಾರತೀಯರು ಸ್ವಯಂ ಪ್ರೇರಿತರಾಗಿ ಅಡುಗೆ ಅನಿಲ ಸಬ್ಸಿಡಿ ಸೌಲಭ್ಯವನ್ನು ತ್ಯಜಿಸುವ ಮನಸ್ಥಿತಿಯನ್ನು ಕನಸು ಕಾಣುವುದಕ್ಕೆ ಕೂಡ ಅಸಾಧ್ಯವಿತ್ತು. ಇವತ್ತು ನಮ್ಮ ನಿತ್ಯ ಜೀವನ  lets painful ಎಂದರೆ ತಪ್ಪಾಗಲಿಕ್ಕಿಲ್ಲ. ಅಭಿವೃದ್ಧಿಯ ಜತೆಗೆ ನಿರುದ್ಯೋಗದ ಸಮಸ್ಯೆಯು ಗಂಭೀರ ರೂಪವನ್ನು ತಾಳುವ ವೈರುಧ್ಯವನ್ನು ನಾವು ಕಾಣುತ್ತಿದ್ದೇವೆ. ಅಪೌಷ್ಟಿಕತೆಯ ಸಮಸ್ಯೆ, ಲಿಂಗತಾರತಮ್ಯ, ಕೌಶಲಭರಿತ ಶ್ರಮದ ಕೊರತೆ, ಬುದ್ಧಿವಂತರ ಕೊರತೆ, ಆವಿಷ್ಕಾರಗಳ ಕೊರತೆ, ವಿಜ್ಞಾನಿಗಳ ಕೊರತೆ ಹೀಗೆ ಅನೇಕ ಸಮಸ್ಯೆಗಳು ಅಭಿವೃದ್ಧಿಗೆ ತಡೆಗೋಡೆಯಾಗಿ ನಿಂತಿವೆ. ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಖರ್ಚು ಮಾಡುವ ಹಣವು ತಲುಪಬೇಕಾದವರಿಗೆ ತಲಪಿಸುವುದೇ ಬಹುದೊಡ್ಡ ಸಮಸ್ಯೆ ಇವತ್ತು. ಭ್ರಷ್ಟ ರಾಷ್ಟ್ರ ಪಟ್ಟದಿಂದ ಹೊರಬೇಕಾದ ಅಗತ್ಯ ಇದೆ. ಶಿಕ್ಷಣ ಮತ್ತು ಆರೋಗ್ಯ ಸೇವೆ ವ್ಯಾಪಾರದ ವಸ್ತುಗಳಾಗಿವೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ನಿಂತ ನೀರಿನಂತಿದೆ. ಉದ್ಯಮ ಸ್ನೇಹಿ ವಾತಾವರಣವು ಇನ್ನಷ್ಟು ಬಲಗೊಳ್ಳಬೇಕಿದೆ. ಅಭಿವೃದ್ಧಿಯ ಗುರಿಯನ್ನು ತಲುಪುವಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಭ್ರಷ್ಟಾಚಾರ. ಉತ್ತಮ, ಪಾರದರ್ಶಕ, ಜವಾಬ್ದಾರಿಯುತ ಆಡಳಿತವು ಗವರ್ನರ್ಸ್‌ ಮತ್ತು ಗವರ್ನ್ಡ್ನ ಮಧ್ಯದ ಕಂದರವನ್ನು ನಿವಾರಿಸಬಹುದು. ಕೃಷಿ ಪ್ರಧಾನ ರಾಷ್ಟ್ರವಾಗಿ ಬೆಳೆಯಬೇಕಿದ್ದ ನಾವು ಬದಲಾಗಿ ಸೇವಾ ಕ್ಷೇತ್ರದ ಬೆಳವಣಿಗೆಯಿಂದ ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಅಭಿವೃದ್ಧಿಯ ಲೆಕ್ಕಾಚಾರ ಕಳೆದ 67 ವರ್ಷಗಳಲ್ಲಿ ಬದಲಾಗಿದೆ. ಹೊಸ ಐಡಿಯಾ, ಹೊಸ ತಾಂತ್ರಿಕತೆ, ಯುವ ಕೃಷಿ ಉದ್ಯಮಿಗಳ ನಾಯಕತ್ವವಷ್ಟೇ ಕೃಷಿಯನ್ನು ಸಂರಕ್ಷಿಸಬಹುದು.

ಸುಧಾರಣೆ ನಿಂತ ನೀರಾಗಲು ಸಾಧ್ಯವೇ ಇಲ್ಲ. ಸುಧಾರಣೆಯಿಂದ ಬದಲಾವಣೆ ಸಾಧ್ಯ. ಇವತ್ತು ಸುಧಾರಣೆಯೇ ಅಭಿವೃದ್ಧಿಯ ಹೊಸ ಮಂತ್ರ. ಭಾರತವು ಈ ಸುಧಾರಣಾ ಪರ್ವವನ್ನು ಮುಂದುವರಿಸಿ ದೇಶದ ಪ್ರಗತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಷ್ಟು ಸಶಕ್ತವಾಗಿದೆ. ಸಮಯಕ್ಕನುಸಾರವಾಗಿ ಸುಧಾರಣೆಯನ್ನು ಅಳವಡಿಸಿಕೊಳ್ಳುವುದಷ್ಟೇ ಮಾಡಬೇಕಾದ ಕೆಲಸ. ಸುಧಾರಣೆಗಳು ಪಂಚವಾರ್ಷಿಕ ಯೋಜನೆಯ ರೂಪದಲ್ಲಿರಬಹುದು ಅಥವಾ ರಾಷ್ಟ್ರೀಯ ಅಭಿವೃದ್ಧಿ ಗುರಿಯ ರೂಪದಲ್ಲಿರಬಹುದು. ಒಟ್ಟಾರೆ ಉದ್ದೇಶ ಅಭಿವೃದ್ಧಿ ಗುರಿಯನ್ನು ರೂಪಿಸುವುದರಲ್ಲಿ ದೇಶದ ರಾಜ್ಯಗಳೂ ತಮ್ಮನ್ನು ತೊಡಗಿಸಿಕೊಳ್ಳಬೇಕಾದುದು ಅತೀ ಅಗತ್ಯ. ಆಗ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರನ್ನೊಳಗೊಂಡ ಅಭಿವೃದ್ಧಿ ಸಾಧ್ಯ.

ರಾಘವೇಂದ್ರ ರಾವ್‌, ಬೈಲ್‌

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.