ಮೌಡ್ಯ ನಿಷೇಧಕ್ಕೆ ಹಿಂದೂಗಳೇ ಟಾರ್ಗೆಟ್‌ ಏಕೆ?


Team Udayavani, Oct 10, 2017, 8:02 AM IST

10-25.jpg

ವಿಧೇಯಕದಲ್ಲಿ ಬಳಸಿದ ಬಹಳಷ್ಟು ಪದಗಳ ಅರ್ಥವ್ಯಾಪ್ತಿ ಸ್ಪಷ್ಟವಾಗಿಲ್ಲ. ಅಥವಾ ಅವನ್ನು ಬೇಕೆಂದೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆಯಲಾಗಿದೆ ಎಂದೂ ಹೇಳಬಹುದು.  ಏಕೆಂದರೆ, ಈ ವಿಧೇಯಕವ  ನ್ನು ದುರುಪಯೋಗಪಡಿಸಿಕೊಂಡು ಹಿಂದೂ ಮಠಾಧಿಪತಿಗಳನ್ನು, ಸ್ವಾಮೀಜಿಗಳನ್ನು ಕಾನೂನಿನ ಅಡಕತ್ತರಿಲ್ಲಿ ಸಿಕ್ಕಿಸಬೇಕು ಎಂಬುದೇ ಇಲ್ಲಿನ ಉದ್ದೇಶ. 

ವೈಚಾರಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬುದ್ಧಿಜೀವಿ ಬಳಗವನ್ನು ಕಟ್ಟಿಕೊಂಡು ಮೌಡ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು, 3 ವರ್ಷಗಳಿಂದ ಯತ್ನಿಸುತ್ತಿದ್ದಾರೆ. ಈ ವಿಧೇಯಕದ ಕರಡು ಅಂತಿಮಗೊಳ್ಳುವ ಹೊತ್ತಿನಲ್ಲೂ ಸರಕಾರಕ್ಕೆ ನಂಬಿಕೆ ಎಂದರೇನು, ಮೌಡ್ಯ ಎಂದರೇನು, ಅವುಗಳ ನಡುವಿನ ವ್ಯತ್ಯಾಸವೇನೆಂ ದು ಸ್ಪಷ್ಟವಿಲ್ಲ. ಉದಾ: ಏಕಾದಶಿ ಉಪವಾಸ ಕೂರುವುದು ಒಬ್ಬನ ಪಾಲಿಗೆ ನಂಬಿಕೆಯ ಪ್ರಶ್ನೆಯಾಗಿರಬಹುದು; ಆದರೆ, ಇನ್ನೊ ಬ್ಬ ಅದನ್ನು ಮೌಡ್ಯದ ಪಾಲಿಗೆ ಸೇರಿಸಬಹುದು. ಹಾಗೆಯೇ ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವುದು ಒಬ್ಬನಿಗೆ ಧಾರ್ಮಿಕ ನಂಬಿಕೆಯಾದರೆ, ಇನ್ನೊಬ್ಬನಿಗೆ ಅವೈಜಾನಿಕ, ಮೌಡ್ಯ ಎನ್ನಿಸಬಹುದು. ಈ ಸೂಕ್ಷ್ಮಗಳನ್ನು ಅರಿಯದೇ, ಏಕಾಏಕಿ ಮೌಡ್ಯ ನಿಷೇಧ ವಿಧೇಯಕವನ್ನು ಜಾರಿಗೊಳಿಸಹೋದರೆ, ಎಂಥ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ರಾಜ್ಯ ಸರಕಾರ ಸದ್ಯ ತಯಾರಿಸಿರುವ ಕರಡು ಪ್ರತಿಯೇ ಸಾಕ್ಷಿ.

ಈ ಕರಡನ್ನು ಸಿದ್ಧಪಡಿಸಲು ಎಷ್ಟು ಧಾರ್ಮಿಕ ಮುಖಂಡರನ್ನು, ಪೀಠಾಧಿಪತಿಗಳನ್ನು ಸಂಪರ್ಕಿಸಲಾಗಿದೆ? ಯಾರನ್ನೂ ಇಲ್ಲ!
ಪ್ರೊ. ಕೆ.ಎಸ್‌. ಭಗವಾನ್‌, ಗೌರಿ ಲಂಕೇಶ್‌, ಅಗ್ನಿ ಶ್ರೀಧರ್‌, ಡಾ. ನರೇಂದ್ರ ನಾಯಕ್‌ ಮುಂತಾದ ಏಕಪಕ್ಷೀಯ ಅಭಿಪ್ರಾಯ ವಿರುವ ಬುದ್ಧಿಜೀವಿಗಳನ್ನಷ್ಟೇ ಈ ಕರಡು ರಚನೆ ಸಮಿತಿಯಲ್ಲಿ ಬಳಸಿಕೊಳ್ಳಲಾಗಿದೆ. ಹಿಂದೂ ಧರ್ಮದ ಕಟ್ಟು- ಕಟ್ಟಳೆ, ಆಚರಣೆ, ಸಂಪ್ರದಾಯಗಳು ಹೀಗೇ ಇರಬೇಕೆಂದು ನಿರ್ದೇಶಿಸಲು ಈ ಮೇಲಿನವರು ಯಾರು? ಇವರಿಗೆ ಹಿಂದೂ ಧರ್ಮದ ಆಳ- ಅಗಲ ಎಷ್ಟು ಗೊತ್ತಿದೆ? “ಹಿಂದೂವನ್ನು ಒಂದು ಧರ್ಮ ಅಂತಾರೇನ್ರೀ? ಅದಕ್ಕೆ ಒಬ್ಬ ಪ್ರವಾದಿ ಇಲ್ಲ, ಒಂದು ಧರ್ಮಗ್ರಂಥ ಇಲ್ಲ’ ಎಂದು ಹೇಳಿದ್ದ (ದಿವಂಗತ) ಗೌರಿ ಲಂಕೇಶ್‌ ಯಾವ ಅಮೂಲ್ಯ ಸಲಹೆಗಳನ್ನು ಈ ಸಮಿತಿಯಲ್ಲಿ ಹಂಚಿಕೊಂಡಿರಬಹುದು! ಸಂಕ್ಷಿಪ್ತ ವಾಗಿ ಹೇಳುವುದಾದರೆ, ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡಬೇಕೆಂಬ ಏಕೈಕ ಉದ್ದೇಶದಿಂದಲೇ ಈ ವಿಧೇಯಕವನ್ನು ಜಾರಿಗೊಳಿಸಲು ಹಿಂದೂ ವಿರೋಧಿ ಸಿದ್ದರಾಮಯ್ಯ ಸರಕಾರ ಉತ್ಸಾ ಹ ತೋರುತ್ತಿದೆ. ಈ ಕರಡು ರಚನೆ ಮತ್ತು ಕರಡು ಅಂತಿಮಗೊಳಿಸುವ  ನಿರ್ಣಾಯಕ ಸಭೆಗಳಲ್ಲಿ ಎಂಟಕ್ಕೂ ಹೆಚ್ಚು ರಾಜ್ಯಸಚಿವರು ಪಾಲ್ಗೊಂಡಿದ್ದರು; ಆದರೆ, ಅಲ್ಪಸಂಖ್ಯಾತ ಇಲಾಖೆಯ ಸಚಿವರೇ ಪಾಲ್ಗೊಂಡಿರಲಿಲ್ಲ! ಅಂದರೆ, ಹಿಂದೂ ಧರ್ಮದ ಹೊರತಾಗಿ ಮಿಕ್ಕ ಯಾವ ಧರ್ಮದಲ್ಲೂ ಮೌಡ್ಯ ಇಲ್ಲ; ಇದ್ದರೂ ಅವು ಈ ವಿಧೇಯಕದಡಿ ಬರುವುದಿಲ್ಲವೆಂಬ ಸರ್ಕಾರದ ಸಂದೇಶ ಸ್ಪಷ್ಟ ವಿದೆಯಲ್ಲವೇ? 2014ರಲ್ಲಿ ಹೊರತಂದಿದ್ದ ಮೌಡ್ಯ ನಿಷೇಧ ವಿಧೇಯಕದ ಕರಡು ಸಾಕಷ್ಟು ಉಗ್ರವಾಗಿದ್ದುದರಿಂದ ಮತ್ತು ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸುವುದು ಮೇಲ್ನೋಟಕ್ಕೇ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದನ್ನು ಆ ರೂಪದಲ್ಲಿ ಜಾರಿಗೊಳಿಸುವುದು ಕಷ್ಟವಿದೆ ಎಂಬುದು ಮನವರಿಕೆಯಾದ ಮೇಲೆ ಸರಕಾರ ಕರಡಿನ ಭಾಷೆಯನ್ನು ಮೆತ್ತಗೆ ಮಾಡಲು ಯತ್ನಿಸಿತು. ಹಲವು ಸುತ್ತಿನ ಪರಿಷ್ಕರಣೆಯ ನಂತರ ಇದೀಗ ಕರಡು ಅಂತಿಮಗೊಂಡಿದೆ.

ಹೊಸದಾಗಿ ಪ್ರಕಟಿಸಿರುವ ವಿಧೇಯಕ ಕರಡು ಭಾಷೆಯಲ್ಲಿ ಸೌಮ್ಯವಾಗಿದೆಯೇ ಹೊರತು ತನ್ನ ಉದ್ದೇಶದಲ್ಲಿ ಅಲ್ಲ! ವಿಧೇಯಕದಲ್ಲಿ ಬಳಸಿದ ಬಹಳಷ್ಟು ಪದಗಳ ಅರ್ಥವ್ಯಾಪ್ತಿ ಸ್ಪಷ್ಟವಾಗಿಲ್ಲ. ಅಥವಾ ಅವನ್ನು ಬೇಕೆಂದೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆಯಲಾಗಿದೆ ಎಂದೂ ಹೇಳಬಹುದು.  ಏಕೆಂದರೆ, ಈ ವಿಧೇಯಕವ  ನ್ನು ದುರುಪಯೋಗಪಡಿಸಿಕೊಂಡು ಹಿಂದೂ ಮಠಾಧಿಪತಿಗಳನ್ನು, ಸ್ವಾಮೀಜಿಗಳನ್ನು ಕಾನೂನಿನ ಅಡಕತ್ತರಿ¿ಲ್ಲಿ ಸಿಕ್ಕಿಸಬೇಕು ಎಂಬುದೇ ಇಲ್ಲಿನ ಉದ್ದೇಶ. ಉದಾ: ಈ ವಿಧೇಯಕದನುಸಾರ, ಯಾವುದೇ ವ್ಯಕ್ತಿ ಅಪರಾಧಿಯಾದಲ್ಲಿ ಆತ ಯಾವ ಆಧ್ಯಾತ್ಮಿಕ ಸಂಸ್ಥೆ,  ಸನ್ಯಾಸ, ಮಂದಿರಗಳಿಗೆ ಸೇರಿ ದ್ದಾನೋ, ಆಯಾ ಸಂಸ್ಥೆ/ ಮಂದಿರದ ಪದಾಧಿಕಾರಿಗಳ ಮೇಲೆ ಕಾರ್ಯಾಚರಣೆ ನಡೆಸಲು ಸರಕಾರಕ್ಕೆ ಅವಕಾಶವಿದೆ! ಧಾರ್ಮಿಕ ಸಂಸ್ಥೆಯಲ್ಲಿ ಯಾರನ್ನೇ ಆಗಲಿ, ಯಾವುದಾದರೊಂದು ಪ್ರಕರಣದಲ್ಲಿ ಸಿಕ್ಕಿಸಿಹಾಕಿ, ಆ ಸಂಸ್ಥೆಯನ್ನೇ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು ಸರಕಾರದ ಕಾರ್ಯತಂತ್ರ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ಸಂಬಂಧಪಟ್ಟ ಧಾರ್ಮಿಕ ಸಂಸ್ಥೆಗಳೆಲ್ಲ ವೂ ಒಂದಿಲ್ಲೊಂದು ಅಸರಕಾರಿ ಸಂಸ್ಥೆಯ ಸುಪರ್ದಿಗೆ ಸೇರುವುದರಿಂದ ಅವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಅವುಗಳ ಧಾರ್ಮಿಕ ಕಾನೂನುಗಳು ಅಡ್ಡಬರುತ್ತವೆ. ಆದರೆ, ಅಂಥ ಯಾವುದೇ ನಿರ್ಬಂಧದ ಭಯವಿಲ್ಲದೆ, ನೇರವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರಕಾರಕ್ಕೆ ಅವಕಾಶವಿರುವುದು ಹಿಂದೂ ಧರ್ಮ ಸಂಸ್ಥೆಗಳ ವಿಚಾರದಲ್ಲಿ ಮಾತ್ರ. ವಿಧೇಯಕದ 3ನೇ ಕಲಮಿನಲ್ಲಿ, ಶಾರೀರಿಕ, ಮಾನಸಿಕ, ಆರ್ಥಿಕ ಹಾನಿ ಉಂಟುಮಾಡುವ ಎಲ್ಲ ಧಾರ್ಮಿಕ ವಿಧಿಗಳೂ ಅಪರಾಧವೆಂದು ಪರಿಗಣಿಸಲ್ಪಡುತ್ತವೆ. 

ಬ್ರಾಹ್ಮಣರಲ್ಲಿರುವ ತಪ್ತಮುದ್ರಧಾರಣೆ ಕೂಡ ಇಲ್ಲಿ ಕಟಕಟೆಯಲ್ಲಿ ನಿಲ್ಲುವ ಅವಕಾಶವುಂಟು. ಮಾತ್ರವಲ್ಲ, ಮುಸ್ಲಿಮರಲ್ಲಿರುವ ಸುನ್ನತ್‌, ಮೊಹರಂನಲ್ಲಿ ಎದೆ ಬಡಿದುಕೊಂಡು ರಕ್ತ ಚೆಲ್ಲುವ, ಹಣೆಯ ಮೇಲೆ ಚಾಕುವಿನಲ್ಲಿ ಗೀರಿಕೊಳ್ಳುವ ವಿಧಿಗಳೂ ಇದೇ ವಿಧೇಯಕದಡಿಯೇ ಬರಬೇಕಾಗುತ್ತದೆ. ಹಾಗೆಯೇ ಭೂತೋಚ್ಛಾಟನೆಯ ಹೆಸರಲ್ಲಿ ಮಿಷನರಿಗಳು ಮಾಡುವ ದೈಹಿಕ ಆವೇಶದ ನಾಟಕಗಳು, ವ್ಯ ಕ್ತಿ ಗ ಳು ಮೈಯ ಲ್ಲಿ ಭೂತ ಪ್ರವೇಶವಾಗಿ ಓಲಾಡುವ, ನೆಲಕ್ಕೆ ಬಿದ್ದು ಕೊಸರಾಡುವ ಎಲ್ಲ ಕ್ರಿಯೆಗಳನ್ನು ಈ ಕಾಯ್ದೆಯ ಮೂಲಕ ನಿಷೇಧಿಸಲು ಅವಕಾಶವಿದೆ. ಆದರೆ, ಇಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಮತಸ್ಥರು ಅವೆಲ್ಲ ತಮ್ಮ ಧರ್ಮ, ತಮ್ಮ ನಂಬಿಕೆ ಎಂದು ವಾದಿಸಿ ಸರಕಾರವನ್ನು ಮಣಿಸಬಹುದು. ಬಲಿಪಶುಗಳಾಗುವವರು, ಮತ್ತೆ ಹಿಂದೂಗಳು ಮಾತ್ರ ಎಂಬುದನ್ನು ಮರೆಯಬಾರದು. ಮಾನವ ಘನತೆಗೆ ಧಕ್ಕೆ ತರುವ ಕ್ರಿಯೆಯಾದ ಮಡೆಸ್ನಾನವನ್ನು ನಿಷೇಧಿಸುವ ಮಾತೂ ಇಲ್ಲಿ ಬಂದಿದೆ. ಕೆಲವು ಹಿಂದೂ ದೇ ಗು ಲಗಳಲ್ಲಿ ಋತುಮತಿ ಯಾದವರು, ಸೂತಕ ಇದ್ದವರು ದೇಗುಲ ಪ್ರವೇಶಿಸಬಾರದು ಎಂಬ ನಿಯಮ ಇರುವುದುಂಟು. ಇಂಥ ಪ್ರದೇಶಗಳಲ್ಲಿ ತನಗೆ ಪ್ರವೇಶ ನಿರಾಕರಿಸಲಾಯಿತು, ಹಾಗಾಗಿ, ತನ್ನ ಘನತೆಗೆ ಕುಂದಾಯಿತು ಎಂದು ಯಾರಾದರೂ ದೂರಿದರೆ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಆ ದೇಗುಲ/ ಮಠವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು! ಅಂದರೆ, ದೇವಸ್ಥಾನ ಅಥವಾ ಧಾರ್ಮಿಕ ಶ್ರದ್ಧಾಕೇಂದ್ರಗಳ ಯಾವ ನಿಯಮವನ್ನು ಬೇಕಾದರೂ ಹೀಗೆ ಮಾನವ ಘನತೆಗೆ ಪೆಟ್ಟಾಯಿತು ಎಂಬ ಕಾರಣ ಒಡ್ಡಿ ಕಾನೂನು ಕ್ರಮ ಜರುಗಿಸಲು ವಿಧೇಯಕವು ಸರಕಾರಕ್ಕೆ ಅಧಿಕಾರ ಕೊಡುತ್ತದೆ. ಇದು ಎಷ್ಟು ಗಂಭೀರವಾದ ವಿಚಾರ, ಯೋಚಿಸಿ. ವಿಧೇಯಕದ ಸೆಕ್ಷನ್‌ 9ರ ಪ್ರಕಾರ, ಕರ್ನಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರ (ಕಾಸಾ) ಎಂಬ ಸಂಸ್ಥೆ ರಚನೆಯಾಗಲಿದೆಯಂತೆ. ಇದರಲ್ಲಿ ತುಂಬಿಕೊಳ್ಳುವ ಸದಸ್ಯರೆಲ್ಲರೂ ಹಿಂದೂವಿರೋಧಿ ಸರಕಾರದ ಕೃಪಾಪೋಷಿತರೇ ಎಂದು ಬಿಡಿಸಿ ಹೇಳಬೇಕಿಲ್ಲ. 

ಈ ಪ್ರಾಧಿಕಾರಕ್ಕೆ ಸಿವಿಲ್‌ ನ್ಯಾಯಾಲಯದಂತೆ ಪೂರ್ಣ ಅಧಿಕಾರ ಸಿಗುವುದರಿಂದ, ಅದು ಅಧಿಕಾರದ ದುರ್ಬಳಕೆ ಮಾಡಿಕೊಂಡು ಮನಸೋಇಚ್ಛೆ ದೇವಸ್ಥಾನದ ಆಡಳಿತ ಮಂಡಳಿಯವರನ್ನು, ಮಠಾಧಿಪತಿಗಳನ್ನು, ಸ್ವಾಮೀಜಿಗಳನ್ನು, ಸಂತರನ್ನು ತನ್ನಲ್ಲಿಗೆ ಕರೆಸಿಕೊಂಡು ವಿಚಾರಣೆಯ ನೆಪದಲ್ಲಿ ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡಬಹುದು. ನ್ಯಾಯಾಲಯಕ್ಕಿರುವ ಎಲ್ಲ ಅಧಿಕಾರಗಳು ಈ ಪ್ರಾಧಿಕಾರಕ್ಕೂ ಇರುವುದರಿಂದ, ಇದರ ಆದೇಶಗಳನ್ನು ವಿರೋಧಿಸುವುದಕ್ಕೂ ಅವಕಾಶ ಇರುವುದಿಲ್ಲ. ಅಂದರೆ, ಸಮಾಜದಲ್ಲಿ ಗಣ್ಯರೆಂದು ಗೌರವಿಸಲ್ಪಡುವ ವ್ಯಕ್ತಿಗಳೆಲ್ಲ ಇಂಥ, ಹಿಂದೂ ವಿರೋಧಿಗಳ ಮುಂದೆ ತಪ್ಪಿತಸ್ಥರಂತೆ ಕಟಕಟೆ ಯಲ್ಲಿ ನಿಲ್ಲುವ ಪರಿಸ್ಥಿತಿ ಬರಬಹುದು. ಇದೇ ವಿಧೇಯಕದ ಸೆಕ್ಷನ್‌ 14, 15, 16, 17, 18ರಂತೆ ಪ್ರಾಧಿಕಾರದ ಹೊರತಾಗಿ ಜಿಲ್ಲಾ ಜಾಗೃತ ದಳ ವೂ ಸ್ಥಾಪನೆಯಾಗಲಿದೆಯಂತೆ. ಈ ದಳಗಳಲ್ಲಿ ಬ್ರಾಹ್ಮಣರಿಗೆ ಅಥವಾ ಸರಕಾರ ಯಾರನ್ನು ಸಮಾಜದ ಮೇಲ್ವರ್ಗ ಎಂದು ಗುರುತಿಸುತ್ತದೋ ಅಂಥ ಯಾರಿಗೂ ಸದಸ್ಯರಾಗಲು ಅವಕಾಶ ಇರುವುದಿಲ್ಲ. ಈ  ಜಾಗೃತ ಸಮಿತಿಗೂ ಸಿವಿಲ್‌ ನ್ಯಾಯಾಲಯದಂತೆಯೇ ಸಂಪೂರ್ಣ ಅಧಿಕಾರ ಇರುವು ದರಿಂದ ಇದು ಮನಸ್ಸಿಗೆ ತೋಚಿದಂತೆ ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿ, ತನಿಖೆ ಎಲ್ಲ ನಡೆಸಲು ಅವಕಾಶ ಸಿಗುತ್ತದೆ.

ಈ ವಿಧೇಯಕವನ್ನೇಕೆ ವಿರೋಧಿಸಬೇಕು?
1    ಈ ವಿಧೇಯಕದ ಕರಡು ತಯಾರಿಸಿದವರು ಹಿಂದೂ ಧರ್ಮ ಅಥವಾ ಯಾವುದೇ ಮತದ ವಕ್ತಾರರಲ್ಲ. ಯಾವ ಮತ- ಧರ್ಮವನ್ನೂ ಆಳವಾಗಿ ತಿಳಿದುಕೊಂಡವರಲ್ಲ. ತಮಗೆ ಅರ್ಥ ವಾಗದ ಆಚರಣೆಗಳನ್ನೆಲ್ಲ ಯಾವ ವಿಮರ್ಶೆಯೂ ಇಲ್ಲದೆ ವîೌಡ್ಯ ಎನ್ನುವ ಬುದ್ಧಿಜೀವಿಗಳು. ಇವರಿಗೆ ಧರ್ಮಪಾಲನೆ ಮಾಡುವ ಶ್ರದ್ಧಾಳುಗಳು ಬೆಲೆ ಕೊಡಬೇಕೆ?

2    “ವಿಧೇಯಕದ ಕರಡು ತಯಾರಿಸುವ ಸಮಯದಲ್ಲಿ ಮೌಡ್ಯ ಮತ್ತು ನಂಬಿಕೆಗಳನ್ನು ಸ್ಪಷ್ಟವಾಗಿ ಬೇರ್ಪಡಿಸಲಾಗಿದೆ’ ಎಂದು ಸರಕಾರದ ಸಚಿವರೊಬ್ಬರು ಹೇಳಿದ್ದಾರೆ. ಆದರೆ, ಹಾಗೆ ಮಾಡಿರುವುದು ಯಾವ ಆಧಾರದಲ್ಲಿ? ಒಬ್ಬನ ನಂಬಿಕೆ ಇನ್ನೊಬ್ಬನಿಗೆ ಮೌಡ್ಯ ಅನ್ನಿಸಬಹುದಲ್ಲ? ಉದಾ: ಚಂದ್ರದರ್ಶನ ಮಾಡಿಯೇ ಉಪವಾಸ ಮುರಿಯಬೇಕು ಎಂಬುದು ಮುಸ್ಲಿ ಮರ ನಂಬಿಕೆ; ಅದನ್ನು ಉಳಿದವರು ಮೌಡ್ಯ ಎನ್ನಬಹುದು. ಹಾಗಾದರೆ, ಸರಕಾರ ಪರಿಗಣಿಸಿರುವ ಮೌಡ್ಯ- ನಂಬಿಕೆಗಳ ವ್ಯಾಖ್ಯೆ ಏನು? ಅದನ್ನೇಕೆ ಅವರು ಸಾರ್ವಜನಿಕಗೊಳಿಸಿಲ್ಲ?

3    ಪ್ರಾಣಿಬಲಿಯನ್ನು ಈ ವಿಧೇಯಕ ಮೌಡ್ಯಗಳ ಪಟ್ಟಿಗೆ ಸೇರಿ ಸಿದೆ. ಆದರೆ, ಹಬ್ಬದ ಹೆಸರಲ್ಲಿ ಸಾವಿರಾರು ಕುರಿ- ಕೋಳಿ ಗಳನ್ನು ಕೊಲ್ಲುವುದರ ಬಗ್ಗೆ, ದರ್ಗಾಗಳಲ್ಲಿರುವ ಪ್ರಾಣಿಬಲಿಯ ಬಗ್ಗೆ ಮೌನವಾಗಿದೆ. ಈ ದ್ವಿಮುಖನೀತಿ ಏಕೆ?

4    ಇಡೀ ಕರಡಿನಲ್ಲಿ ಹಿಂದೂ ಸಂಪ್ರದಾಯ/ ಆಚರಣೆಗಳ ಹೆಸರುಗಳನ್ನು ಮಾತ್ರ ನೇರವಾಗಿ ಉಲ್ಲೇಖೀಸಲಾಗಿದೆ. ಇದರರ್ಥ, ಬೇರೆ ಮತ- ಧರ್ಮಗಳ ಎಲ್ಲ ಆಚರಣೆಗಳನ್ನೂ ನಂಬಿಕೆಯ ಅಡಿಯಲ್ಲಿ ತಂದು ಅಲ್ಲಿನ ಅಪರಾಧಿಗಳನ್ನು ರಕ್ಷಿಸಲಾಗುತ್ತದೆ ಎಂದೇ ಅಲ್ಲವೆ?

5    ಸೆಕ್ಷನ್‌ (6)ರ ಪ್ರಕಾರ ಈ ವಿಧೇಯಕದಡಿ ಬರುವ ಎಲ್ಲ ಅಪರಾಧಗಳೂ ಜಾಮೀನುರಹಿತ! ಅಂದರೆ, ಓರ್ವನ ಮೇಲೆ ದೂರು ದಾಖಲಿಸಿದರೆ ಸಾಕು, ಆತನನ್ನು ಪೊಲೀಸರು ಯಾವ ಪೂರ್ವಸೂಚನೆ/ ವಾರಂಟ್‌ ಇಲ್ಲದೆ ಬಂಧಿಸಿ ವಿಚಾರಣೆ ಹೆಸರಲ್ಲಿ ಎಷ್ಟು ದಿನಗಳೂ ಜೈಲಿನಲ್ಲಿ ಉಳಿಸಿಕೊಳ್ಳಬಹುದು. ಸಂವಿಧಾನದಲ್ಲಿ ಇಂಥ ಕ್ರಮಕ್ಕೆ ಅವಕಾಶ ಇದೆಯೇ?

6    ಈ ವಿಧೇಯಕದಲ್ಲಿ ಸೂಚಿಸಿರುವ ಬಹಳಷ್ಟು ಅಪರಾಧಗಳನ್ನು ಈಗ ಇರುವ ಭಾರತೀಯ ದಂಡ ಸಂಹಿತೆಯ ಮೂಲಕವೇ ವಿಚಾರಿಸಿಕೊಳ್ಳಬಹುದು. ಉದಾ: ನರಬಲಿಯಂಥ ಅಪರಾಧಕ್ಕೆ ಈಗ ಇರುವ  ಭಾ.ದಂ.ಸಂ. ಪ್ರಕಾರ (ಸೆಕ್ಷನ್‌ 302) ಗಲ್ಲು ಶಿಕ್ಷೆ ಇದೆ. ಹಾಗಿರುವಾಗ ಹೊಸದೊಂದು ಕಾಯ್ದೆ ತಂದು ಅದೇ ಅಪರಾಧಕ್ಕೆ ಮತ್ತೆ ಶಿಕ್ಷೆ ವಿಧಿಸುವ ಅಗತ್ಯ ಇದೆಯೇ?

7    ಮೌಡ್ಯ ನಿಷೇಧ ಮಸೂದೆ ಮಂಡಿಸಿ ಕಾಯ್ದೆಯಾಗಿ ಜಾರಿ ಗೊಳಿಸಿದ ಮಹಾರಾಷ್ಟ್ರದ ನಿದರ್ಶನ ತೆಗೆದುಕೊಳ್ಳುವುದಾದರೆ, ಅಲ್ಲಿ ಕಾಯೆ ಬಂದ‌ ಮೊ ದಲ 18 ತಿಂಗಳಲ್ಲಿ ಒಟ್ಟು 150 ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ, ಅವುಗಳ ತನಿಖೆ ನಡೆದು ನಿಜವಾಗಿಯೂ ಅಪರಾಧಿಗಳು ಶಿಕ್ಷೆಗೊಳಪಟ್ಟದ್ದು ಒಂದು ಪ್ರಕರಣದಲ್ಲಿ ಮಾತ್ರ! ಅಂದರೆ, ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣ ಗಳನ್ನು ದಾಖಲಿಸುವ ಕೆಲಸವೂ ನಡೆಯುತ್ತಿದೆ ಎಂದಾಯಿತು. ಇಂಥ ಸುಳ್ಳು ಅಥವಾ ಕೆಲಸಕ್ಕೆ ಬಾರದ ಪ್ರಕರಣಗಳನ್ನು ಹಿಡಿದುಕೊಂಡು ಪೊಲೀಸರು ಕೆಲಸ ನಿರ್ವಹಿಸಬೇಕಾದರೆ ಆಗುತ್ತಿರುವ ಸಂಪನ್ಮೂಲದ ಪೋಲು ಎಷ್ಟು? ಲೆಕ್ಕ ಹಾಕಿ.

ಒಟ್ಟಿನಲ್ಲಿ ಈ ವಿಧೇಯಕ ರಚನೆಯ ಹೆಸರಿನಲ್ಲಿ ಹಲವಾರು ಬು ದ್ಧಿಜೀವಿಗಳು ಇಷ್ಟು ವರ್ಷ ಹೊಟ್ಟೆ ಹೊರೆದಿದ್ದಾರೆ. ಕರಡು ಮಸೂದೆಯಾಗಿ ಆಂಗೀಕಾರಗೊಂಡರೆ ಅದರ ಪ್ರಾಧಿಕಾರ, ಜಾಗೃತ ದಳ ಮುಂತಾದ ಹತ್ತುಹಲವು ಅನಗತ್ಯ ಸಮಿತಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ತುಂಬಿಕೊಳ್ಳಲು ಈ ಬುದ್ಧಿಜೀವಿಗಳಿಗೆ ಅವಕಾಶವಾಗುತ್ತದೆ. ಆ ಮೂಲಕ ಅವರ ಹೊಟ್ಟೆಪಾಡಿಗೊಂದು ದಾರಿ ಮಾಡಿದ ಪುಣ್ಯ ಸರಕಾರದ್ದಾಗುತ್ತದೆ. ಉಳಿದೆಲ್ಲ ಮತಗಳನ್ನು ಹೊರಗಿಟ್ಟು, ಕೇವಲ ಹಿಂದೂ ಧರ್ಮ ವ ನ್ನು ಮಾತ್ರ ಗುರಿ ಮಾಡಲೆಂದು ಈ ವಿಧೇಯಕವನ್ನು ಜಾರಿಗೊಳಿಸಲು ಸರಕಾರ ತುದಿಗಾಲಲ್ಲಿ ನಿಂತಿರುವುದರಿಂದ ಪ್ರತಿಯೊಬ್ಬ ಹಿಂದೂ ಇದನ್ನು ವಿರೋಧಿಸುವುದು ಅನಿವಾರ್ಯ. ಮಸೂದೆಯಲ್ಲಿನ ಬೆಕ್ಕಿನ ತಲೆ ಮೇಲಿಟ್ಟ ದೀಪದಂತಿರುವ ಅಸ್ಪಷ್ಟಾರ್ಥದ ಶಬ್ದಗಳನ್ನು ಅಳಿಸಿಹಾಕಿ, ಎಲ್ಲ ವಿಚಾರಗಳನ್ನು ಖುಲ್ಲಂ ಖುಲ್ಲಾ ಆಗಿ ಬರೆದರೆ ಮಾತ್ರ ಈ ವಿಧೇಯಕವನ್ನು ಒಪ್ಪಿಕೊಳ್ಳಬಹುದು.

(ಮುಕ್ತ ಚರ್ಚೆಗೆ ಆಹ್ವಾನ)

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.