CONNECT WITH US  

ಪಕ್ಷದ ನೊಗಹೊರಲು ಇದು ಸೂಕ್ತ ಸಮಯ

ಯಾರು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಜನರು ಗಮನಿಸುತ್ತಿದ್ದಾರೆ. ರಾಹುಲ್‌ ಜನಪರ ವಿಚಾರಗಳ ಬಗ್ಗೆ ಮಾತನಾಡಿದರೆ, ಬಿಜೆಪಿ ಜನರ ವಿಭಜಿಸುವಂಥ ಮಾತನಾಡುತ್ತಿದೆ. ರಾಹುಲ್‌ರನ್ನು ಎದುರಿಸಲು ಬಿಜೆಪಿಗೆ ವಿಷಯವೇ ಇಲ್ಲದಾಗಿದೆ.

ಆಂತರಿಕ ಚುನಾವಣೆಯ ಮೂಲಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮುಂದಾದಾಗ ಎಂದಿನಂತೆ ಬಿಜೆಪಿಯಿಂದ ಟೀಕಾಪ್ರಹಾರಗಳು ಆರಂಭವಾಗಿವೆ. ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್‌ನಲ್ಲಿ ನಡೆಯುವ ಆಂತರಿಕ ಚುನಾವಣೆಯನ್ನು ಪ್ರಶ್ನಿಸಲಾಗುತ್ತಿದೆ. ಸರಿ, ಹಾಗಿದ್ದರೆ ನನ್ನ ಪ್ರಶ್ನೆಯಿಷ್ಟೆ- ಬಿಜೆಪಿಯಲ್ಲಿ ಅಧ್ಯಕ್ಷರ ಆಯ್ಕೆ ಹೇಗೆ ನಡೆಯುತ್ತದೆ? ಪ್ರಜಾಪ್ರಭುತ್ವಿàಯ ಮಾರ್ಗ ದಲ್ಲಿ ನಡೆಯುತ್ತದಾ? ಅಮಿತ್‌ ಶಾ ಅಧ್ಯಕ್ಷರಾಗಿ ಆಯ್ಕೆ ಯಾದದ್ದು ಹೇಗೆ ಎಂದು ಇವರು ಹೇಳಲಿ ನೋಡೋಣ? ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಆರ್‌ಎಸ್‌ಎಸ್‌ ಯಾರನ್ನು ತೋರಿಸುತ್ತದೋ ಅವರೇ ಅಲ್ಲಿ ಅಧ್ಯಕ್ಷರಾಗುತ್ತಾರೆ. ಆದರೆ ನಮ್ಮಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಆ ಅವಕಾಶ ನಮ್ಮಲ್ಲಿ ಮುಕ್ತವಾಗಿ ಇದೆ(2000ನೇ ಇಸವಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗಳಲ್ಲಿ ಸೋನಿಯಾ ಗಾಂಧಿಯವರ ವಿರುದ್ಧ ಜಿತೇಂದ್ರ ಪ್ರಸಾದ್‌ ಸ್ಪರ್ಧೆಗಿಳಿದಿದ್ದು ಇದಕ್ಕೊಂದು ಉದಾಹರಣೆ).  ಮಾತೆತ್ತಿದರೆ "ಕಾಂಗ್ರೆಸ್‌ ಮುಕ್ತ ಭಾರತ' ನಿರ್ಮಿಸುತ್ತೇ ವೆಂದು ಘೋಷಿಸು ತ್ತಿರುವ ಬಿಜೆಪಿಯು ರಾಹುಲ್‌ರ ಉತ್ಥಾನದಿಂದ ಹೆದರಿರುವು ದಂತೂ ನಿಚ್ಚಳವಾಗಿ ಕಾಣಿಸುತ್ತಿದೆ. ಒಟ್ಟಲ್ಲಿ ತನಗೆ ವಿರೋಧಿಗಳೇ ಇರಬಾರದು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ. ರಾಹುಲ್‌ ಗಾಂಧಿಯವರ ಮೇಲೆ ಅದು ವ್ಯವಸ್ಥಿತವಾಗಿ ನಡೆಸುತ್ತಿರುವ ಕ್ಯಾಂಪೇನ್‌ ನೋಡಿದರೆ ಇದು ಸ್ಪಷ್ಟವಾಗುತ್ತದೆ. 2014ರ ಚುನಾವಣೆಯ ನಂತರದಿಂದಂತೂ ರಾಹುಲ್‌ರನ್ನು ವ್ಯವಸ್ಥಿತವಾಗಿ ಟಾರ್ಗೆಟ್‌ ಮಾಡುತ್ತಾ ಬರಲಾಗುತ್ತಿದೆ. ಆದರೆ ರಾಹುಲ್‌ರಲ್ಲಿ ನನಗೆ ಬಹಳ ಇಷ್ಟವಾಗುವ ಗುಣವೆಂದರೆ, ಇಷ್ಟೆಲ್ಲ ಕಷ್ಟಗಳು ಎದುರಾದರೂ ಅವರು ಒಂದಿಷ್ಟೂ ಧೃತಿಗೆಡದೇ ಎಂದಿನ ಉತ್ಸಾಹದಲ್ಲಿ ದುಡಿಯುತ್ತಿದ್ದಾರೆ ಎನ್ನುವುದು. ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವುದಷ್ಟೇ ಮುಖ್ಯವಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದೂ ನಮ್ಮ ಗುರಿಯಾಗಬೇಕು ಎಂಬ ಇಚ್ಛೆ ರಾಹುಲ್‌ ಗಾಂಧಿ ಅವರಿಗಿದೆ.

ಬಿಜೆಪಿ ತಾನು ರಾಹುಲ್‌ ಬಗ್ಗೆ ಪ್ಯಾನಿಕ್‌ ಆಗಿಲ್ಲವೆನ್ನುತ್ತದೆ. ಹಾಗಿದ್ದರೆ ರಾಹುಲ್‌ರ ಒಂದು ಹೇಳಿಕೆ/ಪ್ರಶ್ನೆಗೆ ಪ್ರತಿಕ್ರಿಯಿಸಲು ಹತ್ತು ಜನ ಕೇಂದ್ರ ನಾಯಕರೇಕೆ ಮುಗಿಬೀಳುತ್ತಿದ್ದಾರೆ? ಅವರನ್ನು ನಾನಾ ರೀತಿಯಲ್ಲಿ ಟಾರ್ಗೆಟ್‌ ಏಕೆ ಮಾಡುತ್ತಿದ್ದಾರೆ? ಏಕೆಂದರೆ ಕಳೆದ ಮೂರು ವರ್ಷಗಳಲ್ಲಿ ಪ್ರಶ್ನಾತೀತವಾಗಿ ಬದಲಾಗಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಜೋರಾ ಗಿಯೇ ಪ್ರಶ್ನಿಸುತ್ತಿದ್ದಾರೆ ರಾಹುಲ್‌ ಗಾಂಧಿ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಲೇಬೇಕಾದ ಸಮಯ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಸದೃಢ ಪ್ರತಿಪಕ್ಷದ ಅಗತ್ಯವಿರುತ್ತದೆ ಎನ್ನುವುದೂ ಇದೇ ಕಾರಣಕ್ಕಾಗಿ. ಇಲ್ಲದಿದ್ದರೆ ದೇಶ ನಿರಂಕುಶ ಆಡಳಿತಕ್ಕೆ ಸಿಲುಕುವ ಅಪಾಯವಿರುತ್ತದೆ. ರಾಹುಲ್‌ ಜಿಎಸ್‌ಟಿಯನ್ನು "ಗಬ್ಬರ್‌ ಸಿಂಗ್‌ ಟ್ಯಾಕ್ಸ್‌' ಎಂದು ಕರೆದ ಮೇಲೆ ಏನಾಯಿತೋ ನೋಡಿ, ಜಿಎಸ್‌ಟಿಯ ಸ್ಲಾಬ್‌ಗಳಲ್ಲಿ ಬದಲಾ ವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕಾಯಿತು. 

ಈ ಸಮಯದಲ್ಲಿ ಮತ್ತೂಂದು ಸಂಗತಿ ಚರ್ಚೆಗೊಳಗಾ ಗುತ್ತಿದೆ. 2019ರಲ್ಲಿ ನರೇಂದ್ರ ಮೋದಿಯವರಿಗೆ ಪ್ರಬಲ ಪೈಪೋಟಿ ನೀಡಬಲ್ಲರಾ ರಾಹುಲ್‌ ಗಾಂಧಿ ಎಂಬ ಚರ್ಚೆ ಯಿದು. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. 2014ರಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರು ಯಾವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದರೋ ನೆನಪು ಮಾಡಿಕೊಳ್ಳಿ? ವಾರ್ಷಿಕ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದಿದ್ದರವರು. ಅಭಿವೃದ್ಧಿ ರಾಜಕಾರಣದ ಮಾತನಾಡಿ ದ್ದರು. ಆದರೆ ಆದದ್ದೇನು?  ಡಿಮಾನಿಟೈಸೇಷನ್‌ ನಂತರದಿಂದ ಎಕಾನಮಿಯೇ ನಿಂತುಹೋಗಿದೆ. 

ಜಿಎಸ್‌ಟಿಯು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಪೆಟ್ಟುಕೊಟ್ಟು ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ವಿಚಾರ ಒತ್ತಟ್ಟಿಗಿರಲಿ, ಇರುವ ಲಕ್ಷಾಂತರ ಉದ್ಯೋಗಗಳಿಗೇ ಕುತ್ತು ಬಂದಿದೆ. ರಾಹುಲ್‌ ಈ ಅಂಶಗಳನ್ನು ಹಿಡಿದುಕೊಂಡು ಜನರ ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಜನರು ಅವರಿಗೆ ಕಿವಿಗೊಡುತ್ತಿದ್ದಾರೆ. ಅಂದರೆ ರಾಹುಲ್‌ ದೇಶಕ್ಕೆ ಮುಖ್ಯವಾಗಿರುವ ಇಶ್ಯೂಗಳನ್ನೇ ಎತ್ತಿಕೊಳ್ಳುತ್ತಿದ್ದಾರೆ.  ಇನ್ನೊಂದೆಡೆ ಬಿಜೆಪಿ ಯಾವ ವಿಷಯಗಳ ಬಗ್ಗೆ ಮಾತನಾಡುತ್ತಿದೆ? ಅಭಿವೃದ್ಧಿ, ಉದ್ಯೋಗ ಸೃಷ್ಟಿ ವಿಷಯ ಕೈಬಿಟ್ಟು ಲವ್‌ ಜಿಹಾದ್‌, ಗೋಹತ್ಯೆ, ಟಿಪ್ಪೂ ಜಯಂತಿ, ಈಗ ಪದ್ಮಾವತಿ ಸಿನೆಮಾದಂಥ ವಿಚಾರಗಳ ಬಗ್ಗೆ ವಿವಾದವೆಬ್ಬಿಸಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಪ್ರಧಾನಿ ವಿರುದ್ಧ ಮಾತನಾಡಿದರೆ ಬೆರಳು ಕತ್ತರಿಸುತ್ತೇವೆ ಎಂದು ಹೆದರಿಸಲಾಗುತ್ತಿದೆ.  

ಯಾರು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಜನರು ಗಮನಿಸುತ್ತಿದ್ದಾರೆ. ರಾಹುಲ್‌ ಜನಪರ ವಿಚಾರಗಳ ಬಗ್ಗೆ ಮಾತನಾಡಿದರೆ, ಬಿಜೆಪಿ ಜನರನ್ನು ವಿಭಜಿಸುವ ಮಾತನಾಡುತ್ತಿದೆ. ರಾಹುಲ್‌ರನ್ನು ಎದುರಿಸಲು ಬಿಜೆಪಿಗೆ ವಿಷಯವೇ ಇಲ್ಲದಾಗಿದೆ, ಹೀಗಾಗಿ, "ಮಂದಿರದಲ್ಲಿ ರಾಹುಲ್‌ ನಮಾಜ್‌ಗೆ ಕೂತಂತೆ ಕೂಡುತ್ತಾರೆ' ಎಂಬ ಅಸಂಗತ ಮಾತನಾಡುತ್ತಾರೆ ಯೋಗಿ ಆದಿತ್ಯನಾಥ್‌. ಇದೆಲ್ಲ ಸೂಚಿಸುವುದೇನನ್ನು? ಬಿಜೆಪಿಯ ನೀತಿಗಳೆಲ್ಲ ವಿಫ‌ಲವಾಗಿದೆ. ಹೀಗಾಗಿ ದಿಕ್ಕು ತೋಚದೆ ಅದು ವೈಯಕ್ತಿಕ ದಾಳಿ ನಡೆಸಿದೆ ಎಂದೇ ಅಲ್ಲವೇ?

ಸನ್ಮಾನ್ಯ ಮೋದಿಯವರಿಗೆ ಪರ್ಯಾಯವಾಗಿ ನಿಲ್ಲಬಲ್ಲ ನಾಯಕನನ್ನು ಪ್ರತಿಪಕ್ಷಗಳ ಮತದಾರರು ಬಯಸಿದ್ದಾರೆ. ಮತದಾರ ವರ್ಗ ಹಿಂದೆ ನಿತೀಶ್‌ರಲ್ಲಿ ಆ ಸಾಮರ್ಥ್ಯ ಗುರುತಿಸಿತ್ತು¤, ಆದರೆ ಅವರು ಬಿಜೆಪಿ ಜೊತೆ ಕೈ ಜೋಡಿಸಿ ಬಿಟ್ಟರು. ಹೀಗಾಗಿ ಮೋದಿಯವರಿಗೆ ಸರೆಂಡರ್‌ ಆಗದ ನಾಯಕ ಜನ‌ರಿಗೆ ಬೇಕಾಗಿದ್ದಾನೆ. ರಾಹುಲ್‌ ಗಾಂಧಿಯವರಲ್ಲಿ ಆ ನಾಯಕ ನನ್ನು ಈ ಮತದಾರರು ಗುರುತಿಸಿದ್ದಾರೆ. ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ರಾಹುಲ್‌ ಅಧ್ಯಕ್ಷರಾದರೆ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಅವಕಾಶ ಸಿಗಲಿದೆ. ಕಳೆದ ಹತ್ತು ವರ್ಷದಲ್ಲಿ ದೇಶಾದ್ಯಂತ ಸಂಚರಿಸಿ ಅವರು ಯುವಪಡೆಯೊಂದನ್ನು ಕಟ್ಟಿದ್ದಾರೆ. ನನ್ನಂಥ ಯುವಕರು ಇಂದು ಮುಂದೆ ಬರಲು ಅವರೇ ಕಾರಣ ಎನ್ನುವುದನ್ನು ಇಲ್ಲಿ ಹೇಳಲು ಬಯಸುತ್ತೇನೆ. 

ರಾಹುಲ್‌ ನೇತೃತ್ವದಲ್ಲಿ ಪಕ್ಷ ಯಶಸ್ವಿಯಾಗಿ ಮುನ್ನಡೆ ಯಲಿದೆ ಎನ್ನುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ. 130 ವರ್ಷಗಳ ಇತಿಹಾಸವಿರುವ ಪಕ್ಷಕ್ಕೆ ಯುವ ಅಧ್ಯಕ್ಷರು ಸಿಗುವುದು ಬದಲಾವಣೆಯ ಸಂಕೇತವೇ ಸರಿ. ಪ್ರತಿಯೊಬ್ಬ ನಾಯಕನಿಗೂ ತನ್ನ ಸಾಮರ್ಥಯವನ್ನು ತೋರಿಸುವ ಸಂದರ್ಭ ಬಂದೇ ಬರುತ್ತದೆ. ಹಾಗೆಯೇ ರಾಹುಲ್‌ ಅವರಿಗೆ ಪಕ್ಷದ ನೊಗಹೊರಲು ಇದು ಸೂಕ್ತ ಸಮಯ. 

ರಿಜ್ವಾನ್‌ ಅರ್ಶದ್‌, ಕಾಂಗ್ರೆಸ್‌ ಶಾಸಕ

Trending videos

Back to Top