ಚೀನದಿಂದ ನಾವು ಕಲಿಯಬೇಕಾದ ಪಾಠಗಳು


Team Udayavani, Jan 10, 2018, 8:42 AM IST

10-37.jpg

ದೊಡ್ಡ ಮಟ್ಟದಲ್ಲಿ ಕಾರ್ಮಿಕರ ಬಳಕೆಯಿರುವ ಸಿದ್ಧ ಉಡುಪುಗಳಂಥ ಉದ್ದಿಮೆಗಳು ವಿಪರೀತ ತೆರಿಗೆ ದರ ಹಾಗೂ ನಿರ್ಬಂಧಗಳಿಂದ ತತ್ತರಿಸುವಂತಾಗಿದೆ. ಕಳೆದ 25 ವರ್ಷಗಳಲ್ಲಿ ಕಾರ್ಮಿಕರ ಅಗತ್ಯ ಅಧಿಕವಿರುವ ಕೈಗಾರಿಕೆಗಳ ಸಂಖ್ಯೆ ಜಾಗತಿಕ ಮಟ್ಟದಲ್ಲಿಯೇ ಇಳಿಮುಖಗೊಂಡಿದೆ. ವಿಶ್ವ ಮಟ್ಟದಲ್ಲಿ ಪಾರಮ್ಯ ಸಾಧಿಸಲು ಅಗತ್ಯವಿರುವ ಎಲ್ಲ ಸಂಪನ್ಮೂಲಗಳೂ ಇರುವ ಕ್ಷೇತ್ರ ಇದು.

1950ರ ದಶಕದ ಕತೆ ಇದು. ಜಾಗತಿಕ ಯುದ್ಧ ಹಾಗೂ ಅದರ ಪರಿಣಾಮವಾದ ಆರ್ಥಿಕ, ಸಾಮಾಜಿಕ ಪ್ರಕ್ಷುಬ್ಧತೆಯ ಸುದೀರ್ಘ‌ ಅವಧಿ ಮುಗಿದ ಬೆನ್ನಿಗೆ ಭಾರತ ಹಾಗೂ ಚೀನಾ ತಮ್ಮ ಅರ್ಥವ್ಯವಸ್ಥೆಯ ಪುನರ್‌ನಿರ್ಮಾಣದಲ್ಲಿ ತೊಡಗಿಸಿಕೊಂಡವು. ಈ ಹೊತ್ತಿಗೆ ಎರಡೂ ದೇಶಗಳು ಸ್ವತಂತ್ರವಾಗಿದ್ದವು. ಭಾರತ ಪ್ರಜಾರಾಜ್ಯ/ ಪ್ರಜಾಸತ್ತೆಯ ವ್ಯವಸ್ಥೆಯಾದರೆ, ಚೀನಾದ ಕಮ್ಯುನಿಸ್ಟ್‌ ಪ್ರಭುತ್ವದಡಿಯಲ್ಲಿತ್ತು. ಗಮನಿಸಬೇಕು, ಭಾರತದ ಆರ್ಥಿಕ ವ್ಯವಸ್ಥೆ ಚೀನಾಕ್ಕಿಂತ ಹೆಚ್ಚು ಉತ್ತಮವಾಗಿತ್ತು. ಆಧುನಿಕ ಸವಾಲುಗಳನ್ನು ಒಳಗೊಂಡು ಸಂಕೀರ್ಣವಾಗಿತ್ತು. ಅತ್ಯಂತ ಗೊಂದಲಮಯ ಹಾಗೂ ವಿನಾಶಕಾರಿ ಗುಣದ ಸಾಂಸ್ಕೃತಿಕ ಕ್ರಾಂತಿಯ ನಡುವೆಯೂ ಚೀನಾ ತನ್ನ ಆರ್ಥಿಕ ಆಶಯಗಳಿಗೆ ತಕ್ಕ ದಾರಿಯೊಂದನ್ನು ಹುಡುಕಿಕೊಂಡು ಸಾಗಿತು; ಮಹಾ ನೆಗೆತವೊಂದಕ್ಕೆ ತನ್ನನ್ನು ಸಜ್ಜುಗೊಳಿಸಿಕೊಂಡಿತು.

1978ರಲ್ಲಿ, ಮಾವೋ ಮರಣದ ಬಳಿಕ ಚೀನಾದ ಆರ್ಥಿಕ ವ್ಯವಸ್ಥೆ ಯಾವುದೇ ರೀತಿಯ ಏಳಿಗೆ ಪಡೆಯದಂಥ ಸ್ಥಿತಿಯಲ್ಲಿತ್ತು. ಒಂದೆಡೆ ನಿಯಂತ್ರಣಕ್ಕೆ ಸಿಗಲಾರದಷ್ಟು ವೇಗದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಇನ್ನೊಂದೆಡೆ ಕಿತ್ತು ತಿನ್ನುವ ಬಡತನ. ಭಾರತವಾದರೋ ತನ್ನ ದೀರ್ಘ‌ಕಾಲದ ಬಂಡವಾಳಶಾಹಿ ವ್ಯವಸ್ಥೆಗೆ ಬೆನ್ನು ಹಾಕಿ ಸರಕಾರಿ ನಿಯಂತ್ರಣದಡಿಯ ಸಮಾಜವಾದಿ ಆರ್ಥಿಕತೆಯ ಮಾದರಿ ಅಳವಡಿಸಿಕೊಂಡಿತು. ಆದರೆ ಆರ್ಥಿಕ ಪ್ರಗತಿಯ ಪ್ರಮಾಣ, ವರ್ಷಕ್ಕೆ ಕೇವಲ ಶೇ. 3.5ರಷ್ಟಿತ್ತು. ಜನಸಂಖ್ಯೆ ಏರಿಕೆ ಪ್ರಮಾಣ ವರ್ಷಕ್ಕೆ ಶೇ. 2.5ರಷ್ಟಿತ್ತು. ಸವಾಲು, ಸಂಕಟಗಳನ್ನು ಎದುರಿಸಲು ಸಾಧ್ಯವಿಲ್ಲದಂತಿದ್ದ ಅಂಥ ಸಂದರ್ಭದಲ್ಲೂ ಅದು ಜಪಾನಿನ, ಜರ್ಮನಿಯ ಹಾಗೂ ಆಗ್ನೇಯ ಏಶ್ಯಾದ ಪವಾಡ ಸದೃಶ ಆರ್ಥಿಕ ಬೆಳವಣಿಗೆಯನ್ನು ಗಮನಿಸುತ್ತಿತ್ತು. ಸರಕಾರಿ ನಿಯಂತ್ರಣ, ಹೆಚ್ಚುತ್ತಿದ್ದ ಭ್ರಷ್ಟಾಚಾರ ಹಾಗೂ ತೀವ್ರಗೊಳ್ಳುತ್ತಿದ್ದ ಜನತೆಯ ಅಸಮಾಧಾನ ಮುಂತಾದ ಅನಿಷ್ಟಗಳ ಪರಿಣಾಮವಾಗಿ ಅದರ ಅಭಿವೃದ್ಧಿ ಕುಂಟುತ್ತಲೇ ಸಾಗಿತ್ತು.

1978ರಲ್ಲಿ ಚೀನಾ ವಿದೇಶೀ ಬಂಡವಾಳವನ್ನು ಆಹ್ವಾನಿಸಲು ಮುಂದಾಯಿತು. ತನ್ನ ಬಂದರು ಪ್ರದೇಶಗಳಲ್ಲಿನ ಯೋಜನೆಗಳ ಹೂಡಿಕೆಗೆ ಉತ್ತೇಜನ ನೀಡಿತು. ಕೃಷಿ ಕ್ಷೇತ್ರವನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿತು. “ಮನೆಗೊಂದೇ ಮಗು’ ಎಂಬ ಯೋಜನೆ ಜಾರಿ ಮಾಡಿತು, ಮೂಲಭೂತ ಸೌಲಭ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಆರಂಭಿಸಿತು. ಇಂದು ಅದರ ಅರ್ಥವ್ಯವಸ್ಥೆ 12.5 ಟ್ರಿಲಿಯನ್‌ ಡಾಲರ್‌ ವಹಿವಾಟನ್ನು ಒಳಗೊಂಡಿದೆ, ಎಂದರೆ ವಿಶ್ವದಲ್ಲೇ ಎರಡನೆಯ ದೊಡ್ಡ ಆರ್ಥಿಕ ವ್ಯವಸ್ಥೆ ಎಂಬ ಹೆಗ್ಗಳಿಕೆ ಅದರದು. ರಾಷ್ಟ್ರೀಯ ವಹಿವಾಟು 22.5 ಟ್ರಿಲಿಯನ್‌ ಡಾಲರ್‌ಗಳಷ್ಟು! ಭಾರತ ವಿದೇಶೀ ಹೂಡಿಕೆ ವ್ಯವಹಾರದತ್ತ ಮುಖ ಮಾಡಿದ್ದು 1991ರಲ್ಲಿ, ಸುದೀರ್ಘ‌ ಅವಧಿಯ ಆರ್ಥಿಕ ಬಿಕ್ಕಟ್ಟಿನ ಬಳಿಕ. ಆ ವರ್ಷ ಹೀಗೆ ವಿದೇಶೀ ಹೂಡಿಕೆಗೆ ಸ್ವಾಗತ ಹೇಳಿದ ಭಾರತ ಶ್ಲಾಘನೀಯ ಬೆಳವಣಿಗೆ ಸಾಧಿಸಿ, ಡಾಲರ್‌ ಲೆಕ್ಕಾಚಾರದಂತೆ ಶೇ. 8.8ರಷ್ಟು ವಾರ್ಷಿಕ ಪ್ರಗತಿಯನ್ನು ದಾಖಲಿಸಿತು. ಇಂದು ಭಾರತ 2.5 ಟ್ರಿಲಿಯನ್‌ ಡಾಲರ್‌ಗಳ ಅರ್ಥವ್ಯವಸ್ಥೆಯನ್ನು ಹೊಂದಿದೆ, ಎಂದರೆ ಚೀನಾಕ್ಕಿಂತ ಎಷ್ಟೋ ಹೆಜ್ಜೆಗಳಷ್ಟು ಹಿಂದಿದೆ ಎಂದರ್ಥ.

ಭಾರತಕ್ಕೆ ಸಂದೇಶವೇನು?
ಎಲ್ಲಕ್ಕಿಂತ ಮೊದಲಿಗೆ ಚೀನಾ ತನ್ನ ಗಮನ ಕೇಂದ್ರೀಕರಿಸಿದ್ದು ಬೃಹತ್‌ ಸ್ವರೂಪದ ಕಾರ್ಮಿಕ ವರ್ಗಕ್ಕೆ ಉದ್ಯೋಗ ದೊರಕಿಸಬಲ್ಲ ಕೈಗಾರಿಕೆಗಳ ಮೇಲೆ. ಅರ್ಥಾತ್‌, ಜವುಳಿ ಉದ್ದಿಮೆ, ಸಿದ್ಧ ಉಡುಪು ವ್ಯವಹಾರ, ಬಿಡಿ ಭಾಗ ಜೋಡಣೆ, ಲಘು ಇಂಜಿನಿಯರಿಂಗ್‌ ಉದ್ದಿಮೆಗಳು, ಎಲೆಕ್ಟ್ರಾನಿಕ್‌ ವಸ್ತುಗಳ ಘಟಕಗಳು ಇತ್ಯಾದಿಗಳ ಮೇಲೆ. ಹಾಗೆಯೇ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆಗೂ ಅದು ಮುಂದಾಯಿತು.ಬಂದರುಗಳಿಗೆ ತಾಗಿಕೊಂಡಂತಿರುವ ಗ್ರಾಮಗಳ ಪೂರ್ಣ ಅಭಿವೃದ್ಧಿ ಕಾರ್ಯ ಕೈಗೊಂಡಿತು. ವಾಣಿಜ್ಯ ವ್ಯವಹಾರಗಳ ಸುರಳೀತ ನಿರ್ವಹಣೆಗೆ ಅಗತ್ಯವಿರುವ ಕಾಯ್ದೆ ಕಾನೂನುಗಳತ್ತ ಅದು ಗಮನಹರಿಸಿತು. ಹೀಗೆ ಉದ್ಯೋಗ ಸೃಷ್ಟಿಯಲ್ಲಿ ಯಶಸ್ಸು ದೊರೆತ ಪರಿಣಾಮ ಕೈಗಾರಿಕಾ ಸಾಮಗ್ರಿಯ ಬಳಕೆಯ ಪ್ರಮಾಣದಲ್ಲೂ ಹೆಚ್ಚಳವಾಯಿತು. ಇದರಿಂದ ಸಂಪ ನ್ಮೂಲ ಕ್ರೋಡೀಕರಣದ ಪ್ರಮಾಣ ಹೆಚ್ಚಿತು. ಇತ್ತ ಮೂಲ ಸೌಲಭ್ಯ ಕ್ಷೇತ್ರದಲ್ಲಿನ ಹೂಡಿಕೆಗಳ ಮೇಲಿನ ತೆರಿಗೆಯಿಂದಲೂ ಗಣನೀಯ ಪ್ರಮಾಣದ ಸಂಪನ್ಮೂಲ ಶೇಖರಣೆಯಾಯಿತು. ಹೂಡಿಕೆ ಸಾಮರ್ಥ್ಯವಿದ್ದ ಬೃಹತ್‌ ಉದ್ದಿಮೆ, ವ್ಯವಹಾರ ಸಂಸ್ಥೆಗಳ ಬೆಳವಣಿಗೆಗೂ ಇದರಿಂದ ಅನುಕೂಲವೇ ಆಯಿತು. ಅಲ್ಲಿನ ಬ್ಯಾಂಕುಗಳು ಸರಕಾರಿ ಅಧೀನದ ಉದ್ದಿಮೆಗಳಿಗೂ ಕರೆಕರೆದು ಸಾಲಕೊಟ್ಟವು. ಚೀನಾ ವಾಸ್ತವವಾಗಿ ಅನುಸರಿಸಿದ್ದು ವಿಕೇಂದ್ರೀಕೃತ ಆರ್ಥಿಕತೆಯ ಮಾದರಿಯನ್ನು ಎಂದರೆ ಬಹುತೇಕ ಆರ್ಥಿಕ ನಿರ್ಧಾರಗಳನ್ನು ಚೀನಾದ ಪ್ರಾಂತೀಯ ಸರಕಾರಗಳೇ ತೆಗೆದುಕೊಳ್ಳಬಲ್ಲ ಸ್ವಾತಂತ್ರ್ಯ, ಉದ್ಯಮ ಸಾಹಸಿಗಳಿಗೆ ಪ್ರಾಂತೀಯ ಸರಕಾರಗಳಿಂದ ಸಾಕಷ್ಟು ಉತ್ತೇಜನ, ಸರಕಾರದ ವತಿಯಿಂದಲೇ ನಡೆಸಲಾಗುವ ಮಾರಾಟ ವ್ಯವಸ್ಥೆ/ಮಾರುಕಟ್ಟೆ ಸಂಬಂಧಿ ವ್ಯವಹಾರ, ವಿಳಂಬ ನೀತಿಗೆ ಆಸ್ಪದವೇ ಇಲ್ಲವೆಂಬ ರೀತಿಯಲ್ಲಿ ಉದ್ದಿಮೆಗಳ ಬೆಳವಣಿಗೆ ಪ್ರಕ್ರಿಯೆಗೆ ಸಕಲ ರೀತಿಯ ಕ್ಲಪ್ತ ಸೌಲಭ್ಯಗಳ ಒದಗಣೆ. ಒಟ್ಟಿನಲ್ಲಿ ಸರಕಾರದ ಮುಖ್ಯ ಗುರಿ, ಉದ್ಯೋಗಗಳ ಸೃಷ್ಟಿ. ವೃತ್ತಿ ಪರಿಣತಿ ತರಬೇತಿ ಸಂಸ್ಥೆಗಳ ಮೇಲೆ, ವೃತ್ತಿಪರ ವಿಶ್ವವಿದ್ಯಾಲಯಗಳ ಮೇಲೆ ಚೀನಾ ಹೇರಳ ಪ್ರಮಾಣದಲ್ಲಿ ಹಣ ವಿನಿಯೋಗಿಸಿದ್ದನ್ನೂ ಗಮನಿಸಬೇಕು. ಅದು ಅಸಂಖ್ಯಾತ ನಗರಗಳನ್ನು ನಿರ್ಮಿಸಿದೆ, ನಗದೀಕರಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಕಂಡಿದೆ. 

ಚೀನಾ ಮೀನಾಮೇಷ ಎಣಿಸದೆ 1.5 ಟ್ರಿಲಿಯನ್‌ ಡಾಲರ್‌ಗಿಂತಲೂ ಅಧಿಕ ಮೊತ್ತದ ನೇರ ವಿದೇಶೀ ಬಂಡವಾಳವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ವಿಶ್ವಮಟ್ಟದಲ್ಲಿ ತನ್ನನ್ನೇ ಬೃಹತ್‌ ಕೈಗಾರಿಕಾ ಘಟಕವನ್ನಾಗಿಸಿಕೊಂಡಿತು. ಅಷ್ಟೇ ಅಲ್ಲ, ಜಗತ್ತಿನಲ್ಲೇ ಅತ್ಯಂತ ದೊಡ್ಡ ಆಮದು-ರಫ್ತು ವ್ಯವಹಾರಸ್ಥ ತಾನೆಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಆಕರ್ಷಕ ಮಾರುಕಟ್ಟೆ ನೀತಿಗಳ ಮೂಲಕ ಸುಮಾರು 4 ಟ್ರಿಲಿಯನ್‌ ಡಾಲರ್‌ಗಿಂತಲೂ ಅಧಿಕ ಮೊತ್ತದ ವಿದೇಶಿ ಕರೆನ್ಸಿಯ ಕೂಡು ನಿಧಿ/ಸಮಷ್ಟಿ ನಿಧಿಯೊಂದನ್ನು ಸ್ಥಾಪಿಸಿ ತನ್ನ ಕರೆನ್ಸಿಯ ಪ್ರಾಧಾನ್ಯವನ್ನು ರಕ್ಷಿಸಿಕೊಂಡಿತು. ಜಾಗತಿಕ ವ್ಯಾಪಾರ ವ್ಯವಹಾರದಲ್ಲಿ ತನ್ನ ಛಾಪು ಮೂಡಿಸಿತು. ಆಕರ್ಷಕ ಮಾರುಕಟ್ಟೆ ನೀತಿಗಳ ಮೂಲಕ 4 ಟ್ರಿಲಿಯನ್‌ ಡಾಲರ್‌ಗೂ ಅಧಿಕ ಮೊತ್ತದ ವಿದೇಶೀ ಕರೆನ್ಸಿಯ ಕೂಡು ನಿಧಿಯೊಂದನ್ನು ಸ್ಥಾಪಿಸಿ ತನ್ನ ಕರೆನ್ಸಿಯ ಪ್ರಾಧಾನ್ಯವನ್ನು ರಕ್ಷಿಸಿಕೊಂಡಿತು. ಜಾಗತಿಕ ವ್ಯಾಪಾರ ವ್ಯವಹಾರದಲ್ಲಿ ಪಾರಮ್ಯ ಸಾಧಿಸುವುದಕ್ಕಾಗಿ ಹಾಂಕಾಂಗ್‌ ಮೂಲಕ ಸಂಕೀರ್ಣ ಹಾಗೂ ಅತ್ಯಾಧುನಿಕ ಸರಕು ಪೂರೈಕೆ ಜಾಲ ತಾಣಗಳನ್ನು ಬಳಸಿಕೊಂಡಿತು. ಕೃಷಿಯಲ್ಲಿ ನಿರತರಾಗಿದ್ದ ತನ್ನ ಸುಮಾರು 40 ಕೋಟಿ ಜನರನ್ನು ನಗರ ಪ್ರದೇಶಗಳಿಗೆ ಹಾಗೂ ಫ್ಯಾಕ್ಟರಿಗಳಿಗೆ ತರಿಸಿಕೊಂಡಿತು. ಇಂದು ಅತ್ಯಂತ ಆಧುನಿಕ ಸೌಲಭ್ಯಗಳ ಕೈಗಾರಿಕೆಗಳು ತನ್ನಲ್ಲಿದೆ ಎಂದು ಚೀನಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಇತ್ತ ಭಾರತ, ವಿವಿಧ ಉದ್ದಿಮೆಗಳಿಗೆ ವಿವಿಧ ಬಗೆಯ ಪ್ರೋತ್ಸಾಹ ನೀತಿ ನಿಯಮಗಳು ಹಾಗೂ ತೆರಿಗೆ ಸಬ್ಸಿಡಿಯಂಥ ಉದ್ಯಮಪರ ಕ್ರಮಗಳ ಮೂಲಕ ಬಂಡವಾಳ ಕೇಂದ್ರಿತ ಕೈಗಾರಿಕೆಗಳಿಗೆ ಒತ್ತು ನೀಡಿತು. ಇದೇ ವೇಳೆ ಉದ್ಯೋಗ ಸೃಷ್ಟಿ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಲಿಲ್ಲ. ಇಂದು ಕೈಗಾರಿಕಾ ಕ್ಷೇತ್ರ ಕಾರ್ಪೊರೇಟ್‌ ಟ್ಯಾಕ್ಸ್‌ನ ಬಾಬಿ¤ನಲ್ಲಿ ಶೇ. 25ರಷ್ಟು ಪಾಲನ್ನು ತೆರುತ್ತಿದೆ. ಇದೇ ವೇಳೆ ಸೇವಾ ಒದಗಣೆ ಕ್ಷೇತ್ರ ಶೇ. 30ರಷ್ಟನ್ನು ಪಾವತಿಸುತ್ತಿದೆ. ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಸರಕು ಮೀಸಲಾತಿ ಕಲ್ಪಿಸುವ ಮೂಲಕ ಭಾರತ ಸರಕಾರ ಬೃಹತ್‌ ಕಂಪೆನಿಗಳಿಗೆ ತಾರತಮ್ಯ ತೋರಿತು. ಭಾರತದ ಕಾರ್ಮಿಕ ನೀತಿ, ಮಜೂರಿ ಅಥವಾ ಕೂಲಿ ಪದ್ಧತಿ ಸಲ್ಲದೆನ್ನುತ್ತದೆ, ಉದ್ಯೋಗ ಸೃಷ್ಟಿ ಪ್ರಯತ್ನವನ್ನು ನಿಷೇಧಿಸುತ್ತದೆ.

ದೊಡ್ಡ ಮಟ್ಟದಲ್ಲಿ ಕಾರ್ಮಿಕರ ಬಳಕೆಯಿರುವ ಸಿದ್ಧ ಉಡುಪುಗಳಂಥ ಉದ್ದಿಮೆಗಳು ವಿಪರೀತ ತೆರಿಗೆ ದರ ಹಾಗೂ ನಿರ್ಬಂಧಗಳಿಂದ ತತ್ತರಿಸುವಂ ತೆ ಆಗಿದೆ. ಕಳೆದ 25 ವರ್ಷಗಳಲ್ಲಿ ಕಾರ್ಮಿಕರ ಅಗತ್ಯ ಅಧಿಕವಿರುವ ಕೈಗಾರಿಕೆಗಳ ಸಂಖ್ಯೆ ಜಾಗತಿಕ ಮಟ್ಟದಲ್ಲಿಯೇ ಇಳಿಮುಖ ಗೊಂಡಿದೆ. ವಾಸ್ತವವಾಗಿ ವಿಶ್ವ ಮಟ್ಟದಲ್ಲಿ ಪಾರಮ್ಯ ಸಾಧಿಸಲು ಅಗತ್ಯವಿರುವ ಎಲ್ಲ ರೀತಿಯ ಸಂಪನ್ಮೂಲಗಳೂ ಇರುವ ಕ್ಷೇತ್ರ ಇದು. ಮೂಲಸೌಲಭ್ಯ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಹೂಡಿಕೆ ಮಾಡಿಲ್ಲ.  ಜಿಡಿಪಿಯ ಪೈಕಿ ಶೇ. 4.7ರಷ್ಟನ್ನು ಹೂಡಿಕೆ ಮಾಡಲಾಗಿದೆಯಷ್ಟೆ (ಶೇ. 6.5ರಷ್ಟು ಹೂಡಿಕೆಯಾಗಬೇಕಿತ್ತು). ಚೀನಾಕ್ಕೆ ಜಿಡಿಪಿಯ ಶೇ. 6.5 ಪ್ರಮಾಣದ ಹೂಡಿಕೆ ಅಗತ್ಯವಿದ್ದರೂ ಅದರ ಹೂಡಿಕೆಯ ಪ್ರಮಾಣ ಗರಿಷ್ಠವಾಗಿತ್ತು(ಅಗತ್ಯಕ್ಕಿಂತ ಹೆಚ್ಚು ಶೇ. 8.7ರಷ್ಟು). ಇದರ ಪರಿಣಾಮವಾಗಿ ಭಾರತದ ಪೂರೈಕೆ ಜಾಲದ ವೆಚ್ಚ ಜಿಡಿಪಿಯ ಶೇ. 14ರಷ್ಟು ಆಗಿದೆ; ತತ#ಲವಾಗಿ ಅಧಿಕ ವೆಚ್ಚದ, ಸ್ಪರ್ಧಾತ್ಮಕತೆಗೆ ಆಸ್ಪದವಿಲ್ಲದ ಆರ್ಥಿಕ ವಾತಾವರಣ ಸೃಷ್ಟಿಯಾಗಿದೆ. ಇದೇ ವೇಳೆ ಚೀನಾದ ಪೂರೈಕೆ ಜಾಲದ ವೆಚ್ಚ ಶೇ. 6ರಷ್ಟು ಮಾತ್ರ ಇರುವುದರಿಂದ ಸ್ಪರ್ಧಾತ್ಮಕತೆಗೆ ಅವಕಾಶವಿರುವ ಕಡಿಮೆ ವೆಚ್ಚದ ವಾತಾವರಣವಿದೆ. ಈಚೆಗಷ್ಟೇ ಜಾರಿಗೊಳಿ ಸಲಾಗಿರುವ ಜಿಎಸ್‌ಟಿ ವ್ಯವಸ್ಥೆ ಭಾರತದಲ್ಲಿನ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರಕಿಸೀತಾದರೂ ಮೂಲ ಸೌಲಭ್ಯ ಕ್ಷೇತ್ರದಲ್ಲಿನ ದೊಡ್ಡ ಮೊತ್ತದ ಹೂಡಿಕೆಯ ಅಗತ್ಯ ಇದ್ದೇ ಇದೆ. ಭಾರತ ತನ್ನ ನಗರಗಳಲ್ಲಿ ಹೂಡಿಕೆ ಮಾಡಲಿಲ್ಲ, ನಗರಾಭಿವೃದ್ಧಿ ಯೋಜನೆಗಳಿಗೆ ಪ್ರೋತ್ಸಾಹ ನೀಡಲಿಲ್ಲ. ನಗರಗಳ ಸ್ವಾಯತ್ತೆಗೆ ಹಾಗೂ ಉತ್ತಮ ಆಡಳಿತ ವ್ಯವಸ್ಥೆಗೆ ಕೂಡ ಅವಕಾಶ ನೀಡಲಿಲ್ಲ. ಭಾರತದ ಗಮನ ಗ್ರಾಮಾಭಿವೃದ್ಧಿಯ ಕಡೆಗಿದ್ದುದರಿಂದ, ತೀವ್ರಗತಿಯ ನಗರೀಕರಣ ಪ್ರಕ್ರಿಯೆಯೇ ದೇಶದ ಭವಿಷ್ಯ ರೂಪಿಸುತ್ತಿದೆ ಎಂಬ ಸತ್ಯ ನಮ್ಮ ನಾಯಕರಿಗೆ ಗೋಚರವಾಗದೆ ಹೋಯಿತು. 

ಚೀನದಿಂದ ಕಲಿಯಬೇಕಿರುವ ಪಾಠಗಳು ಅತ್ಯಂತ ಸ್ಪಷ್ಟ:
ಕಾರ್ಮಿಕರನ್ನು ಆಧರಿಸಿದ ಉದ್ದಿಮೆ, ಕೈಗಾರಿಕೆಗಳ ಬಂಡವಾಳ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಇದಕ್ಕೆ ಪ್ರೋತ್ಸಾಹ ನೀಡುವುದು. ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಗಾಗಿ ಕಾರ್ಮಿಕ ನೀತಿಯಲ್ಲಿನ  ತೊಡಕು ನಿವಾರಿಸುವುದು.

ಸಣ್ಣ ಹಾಗೂ ಮಧ್ಯಮ ಉದ್ಯಮ ಉದ್ದಿಮೆಗಳ ರಕ್ಷೆಗೆಂದು ನಿಗದಿಪಡಿಸಿರುವ ಸರಕು ಮೀಸಲಾತಿಯನ್ನು ಸ್ಥಗಿತಗೊಳಿಸಿ, ಎಲ್ಲ ಘಟಕಗಳ ತ್ವರಿತ ಬೆಳವಣಿಗೆಗೆ ಅನುವು ಮಾಡಿಕೊಡುವುದು.

ಕಾರ್ಪೊರೇಟ್‌ ತೆರಿಗೆ ದರವನ್ನು ಶೇ. 25ಕ್ಕೆ ಇಳಿಸುವುದು, ತನ್ಮೂಲಕ ಉದ್ಯಮ ಘಟಕಗಳ ಸಂಪನ್ಮೂಲ ಹೆಚ್ಚಳಕ್ಕೆ ಅನು ಕೂಲ ಮಾಡಿಕೊಡುವುದು. ಸವಕಳಿ ದರಗಳನ್ನು ಇಳಿಸುವುದು, ಮೂಲಕ ಬಂಡವಾಳ ಬಿಕ್ಕಟ್ಟಿನ ಪ್ರಮಾಣವನ್ನು ತಗ್ಗಿಸುವುದು

ವಿಶೇಷ ತೆರಿಗೆ ತಡೆ ಕ್ರಮದ ಮೂಲಕ ಉದ್ಯೋಗ ಸೃಷ್ಟಿ ಪ್ರಕ್ರಿಯೆಗೆ ಉತ್ತೇಜನ ನೀಡುವುದು 

ಮೂಲ ಸೌಲಭ್ಯಗಳ ಮೇಲಿನ ಹೂಡಿಕೆ ಪ್ರಮಾಣವನ್ನು ಕನಿಷ್ಠ ಪಕ್ಷ ಜಿಡಿಪಿಯ ಶೇ. 6.5ಕ್ಕೆ ಏರಿಸುವುದು 

ಸರಕಾರಿ ಒಡೆತನದ ಕಾರ್ಯ ಸಮರ್ಥ ಮೂಲ ಸೌಲಭ್ಯ ಪರಿಕರಗಳಿಗೆ ಹೂಡಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಮಂಜೂರು ಮಾಡಿ ಬಿಡುಗಡೆ ಮಾಡುವುದು 

ಬಂದರುಗಳ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುವುದು. 

ವಿದ್ಯುತ್‌ ಕಳವಿನಂಥ ಪ್ರಕರಣಗಳಿಗೆ ಕಡಿವಾಣ 

ಅನಗತ್ಯ ನಿಬಂಧನೆಗಳನ್ನು ತೆಗೆದು ಹಾಕಿ ಹೆದ್ದಾರಿ ಹಾಗೂ ರೈಲ್ವೇ ಸಾರಿಗೆ ವೇಗವನ್ನು ಇನ್ನಷ್ಟು ಉತ್ತಮ ಪಡಿಸುವ ಮೂಲಕ ವ್ಯವಹಾರ ವೆಚ್ಚದ ಪ್ರಮಾಣವನ್ನು ತಗ್ಗಿಸುವುದು 

ಭಾರತೀಯ ಉದ್ಯಮ ವ್ಯವಹಾರ-ಎಫ್ಡಿಐ ನಡುವೆ ಆರೋಗ್ಯಪೂರ್ಣ ಸಮತೋಲನ ಸಾಧಿಸುವುದು

ಸೇವಾ ಪರಿಣತಿ ಹಾಗೂ ಮಾನವ ಶಕ್ತಿಯ ಸಂವರ್ಧನೆಗಾಗಿ ಉದ್ಯಮ ಹೂಡಿಕೆಯ ವಿಷಯವನ್ನು ಶೈಕ್ಷಣಿಕ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಖಾಸಗಿ ಕ್ಷೇತ್ರದವರಿಗೆ ಅವಕಾಶ ಮಾಡಿಕೊಡುವುದು. ಈ ನಿಟ್ಟಿನಲ್ಲಿ ನವೀನ ಪ್ರಯತ್ನಗಳನ್ನು ನಡೆಸುವ ಸಲುವಾಗಿ ದೇಶದ 200 ಉನ್ನತ ವಿ.ವಿ.ಗಳಿಗೆ ಪೂರ್ಣ ಸ್ವಾಯತ್ತೆ ನೀಡುವುದು.

ಎಲ್ಲಕ್ಕಿಂತ ಮುಖ್ಯವಾಗಿ, ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ನೂತನ ನಗರಗಳೂ ಸೇರಿದಂತೆ ದೇಶದಲ್ಲಿರುವ ಪಟ್ಟಣ, ನಗರಪ್ರದೇಶಗಳು ಸುರಳೀತ ನಾಗರಿಕ ಸೇವೆಗಳನ್ನು ನಿರ್ವಹಿಸಿಕೊಳ್ಳಲು ಅನುಕೂಲವಾಗುವಂತೆ ಆಯಾ ನಗರಗಳಿಗೆ ಸೂಕ್ತ ರೀತಿಯಲ್ಲಿ ಮೂಲಸೌಲಭ್ಯ ಉದ್ದೇಶದ ಹೂಡಿಕೆ ಮಾಡಿಕೊಳ್ಳಲು ಉತ್ತೇಜನ ನೀಡುವುದು

ಇದೇ ರೀತಿ, ಸ್ವಾವಲಂಬನೆ ರೂಢಿಸಿಕೊಳ್ಳಲು, ಹೊಸ ಉದ್ಯೋ ಗಗಳನ್ನು ಸೃಷ್ಟಿಸಲು ಅನುಕೂಲವಾಗುವಂತೆ ಪಟ್ಟಣ-ನಗರಗಳ ಸ್ಥಳೀಯಾಡಳಿತ ವ್ಯವಸ್ಥೆಗೆ ಮುಕ್ತ ಅವಕಾಶ ಕಲ್ಪಿಸುವುದು ಹೀಗೆ ಚೀನಾದಿಂದ ನಾವು ಕಲಿಯಬೇಕಾದ ಪಾಠಗಳು ಹಲವಾರಿವೆ. ನೆನಪಿರಲಿ, ಭವಿಷ್ಯದಲ್ಲಿ ಚೀನೀ ಕಂಪೆನಿಗಳು ವಿಶ್ವದಲ್ಲಿ ತಮ್ಮ ಪಾರಮ್ಯವನ್ನು ಮೆರೆಯಲಿವೆ. ಭಾರತ ಚೀನಾದ ಯಶಸ್ವಿನಿಂದ ತಕ್ಕ ಪಾಠವನ್ನು ಕಲಿಯಲೇಬೇಕಿದೆ. ಯಾಕೆಂದರೆ ವಿಶ್ವದಲ್ಲೇ ಅತ್ಯಂತ ಅಧಿಕ (1.3 ಬಿಲಿಯಕ್ಕಿಂತಲೂ ಅಧಿಕ) ಜನಸಂಖ್ಯೆಯಿರುವ ದೇಶವಾಗಿದೆ ಭಾರತ. 1950ರಲ್ಲಿ ಚೀನಾದಲ್ಲಿದ್ದಂಥ ಸನ್ನಿವೇಶವೇ ಇಲ್ಲೂ ಇತ್ತು.

ಟಿ.ವಿ. ಮೋಹನದಾಸ್‌ ಪೈ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.