ರಜೆಯಲ್ಲೂ ಪಾಠ ನಿಲ್ಲಬೇಕೀ ಕೆಟ್ಟ ಪರಿಪಾಠ


Team Udayavani, Apr 15, 2018, 1:30 AM IST

15.jpg

ಬಿಡುವಿನ ವೇಳೆಯ ಲೋಕಾಭಿರಾಮದ ಮಾತುಕತೆಗೆ ಸಾಮಾನ್ಯವಾಗಿ ಜೊತೆಯಾಗುತ್ತಿದ್ದ ಆ ಸಹೋದ್ಯೋಗಿ ಅಂದು, ಶಿಕ್ಷಣ ವ್ಯವಸ್ಥೆ, ಮಕ್ಕಳ ಮನಸ್ಥಿತಿ, ಪೋಷಕರ ನಿರೀಕ್ಷೆ, ಸೃಷ್ಟಿಯಾಗುವ ಒತ್ತಡ ಅದರ ದುಷ್ಪರಿಣಾಮ ಇನ್ನಿತರೆ ವಿಚಾರಗಳ ಬಗ್ಗೆ ಚರ್ಚಿಸುತ್ತಿರುವಾಗ ಅಗತ್ಯಕ್ಕಿಂತ ಹೆಚ್ಚೇ ಗಲಿಬಿಲಿಗೊಂಡಂತೆ ಕಂಡರು. ಯಾವುದೋ ಆತಂಕವೊಂದು ಅವರ ಮಾತುಗಳನ್ನು ಆವರಿಸಿರುವುದು ಸ್ಪಷ್ಟವಾಗಿ ಅನುಭವಕ್ಕೆ ಬರುವಂತಿತ್ತು. ನಾನು ಚರ್ಚೆಯನ್ನು ಅರ್ಧಕ್ಕೆ ತುಂಡರಿಸಿ ಅವರ ಆ ಸ್ಥಿತಿಗೆ ಕಾರಣ ಕೇಳಿದೆ. ಅದಕ್ಕವರು “ಅಯ್ಯೋ ನನ್ನ ಮಗಳಿನ್ನು ಹತ್ತನೇ ಕ್ಲಾಸ್‌. ಬೋರ್ಡ್‌ ಎಕ್ಸಾಮ… ಮಾರಾಯೆ’ ಎಂದು, ಓದಿನಲ್ಲಿ ಆಕೆ ಅಷ್ಟೇನೂ ಚುರುಕಾಗಿಲ್ಲದ್ದರಿಂದ ಆಗಾಗ ಈ ವಿಚಾರ ನನ್ನನ್ನು ಆತಂಕಕ್ಕೆ ನೂಕುತ್ತದೆ ಎಂದೂ ತುಸು ಕಂಗೆಟ್ಟ ಧ್ವನಿಯಲ್ಲಿ ಹೇಳಿ ಮುಗಿಸಿದರು. ಈಗಷ್ಟೇ ಪರೀಕ್ಷೆ ಮುಗಿದಿದೆ. ಇನ್ನೂ ಫ‌ಲಿತಾಂಶವೇ ಘೋಷಣೆಯಾಗಿಲ್ಲ, ಈಗಲೇ ನಿಮಗೇಕೆ ಈ ಪರಿಯ ತಲ್ಲಣ? ಹೇಗೂ ಆ ನಡುವೆ ಹತ್ತಿರತ್ತಿರ ಒಂದೂವರೆ ಎರಡು ತಿಂಗಳು ರಜೆಯಿರುತ್ತದೆ. ಇನ್ನೂ ಸಾಕಷ್ಟು ಸಮಯವಿದೆ. ನಿರಾಳವಾಗಿ ಕುಳಿತು ನೀವು, ನಿಮ್ಮ ಮಗಳು ಆ ಬಗ್ಗೆ ಸಾವಧಾನದಿಂದ ಯೋಚಿಸಿ ಎಲ್ಲವನ್ನೂ ಸಜ್ಜುಗೊಳಿಸಿಕೊಳ್ಳಬಹುದು, ಭಯಪಡಬೇಕಾದ ಅಗತ್ಯವೇನಿಲ್ಲ ಎಂದು ಹೇಳಿ ಅವರ ಆತಂಕವನ್ನು ತಿಳಿಗೊಳಿಸಲು ಪ್ರಯತ್ನಿಸಿದೆ.

“ಇಲ್ಲಾ ಸಾರ್‌, ಪರೀಕ್ಷೆಗಳು ಮುಗಿದ ನಾಲ್ಕೇ ದಿನಕ್ಕೆ ಆಕೆಗೆ ಮುಂದಿನ ತರಗತಿಯ ಕ್ಲಾಸ್‌ಗಳು ಪ್ರಾರಂಭವಾಗುತ್ತವೆ’ ಎಂಬ ಅವರ ಉತ್ತರಕ್ಕೆ ನಾನಂತೂ ಬೆಚ್ಚಿಬಿದ್ದೆ. ಅವರ ಮಗಳು ಓದುತ್ತಿರುವುದು ನಗರದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ! ಪಬ್ಲಿಕ್‌ ಪರೀಕ್ಷೆ, ಉತ್ತಮ ಫ‌ಲಿತಾಂಶ ಬರಬೇಕು ಎಂಬಿತ್ಯಾದಿ ನೆವಗಳನ್ನು ಮುಂದೆ ಮಾಡಿಕೊಂಡು ರಜೆಯಲ್ಲಿಯೇ ಮುಂದಿನ ತರಗತಿಯ ಪಾಠಗಳನ್ನು ಪ್ರಾರಂಭಿಸುವ ಅಪಾಯಕಾರಿ ಪದ್ಧತಿಯೊಂದು ಇಂಥ ಕೆಲವು ಖಾಸಗಿ ಶಾಲಾ ಕಾಲೇಜುಗಳಲ್ಲಿ ಚಾಲ್ತಿಯಲ್ಲಿದೆ. ಇನ್ನು ಕೆಲವೊಂದು ಸಂಸ್ಥೆಯವರು ಇದನ್ನೇ ಒಂದಷ್ಟು ರೂಪಾಂತರಿಸಿ ದುಡ್ಡು ಮಾಡುವ ಮಾರ್ಗವನ್ನಾಗಿಯೂ ಪರಿವರ್ತಿಸಿಕೊಂಡಿದ್ದಾರೆ. 

ಶೈಕ್ಷಣಿಕ ವರ್ಷಗಳ ನಡುವೆ ನೀಡುವ ರಜಾ ಅವಧಿಯು ವಿದ್ಯಾರ್ಥಿಗಳ ಮಾನಸಿಕ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಒಂದಿಡೀ ವರ್ಷ ಪರೀಕ್ಷೆ, ಓದು, ಅಭ್ಯಾಸ, ಪ್ರಾಜೆಕ್ಟ್, ಆಟೋಟ ಸ್ಪರ್ಧೆಗಳು, ಮನೆಗೆಲಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಬಿಡುವಿಲ್ಲದ ತರಹೇವಾರಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ವಿಪರೀತವೆನಿಸುವ ಪೈಪೋಟಿ, ಅನಾರೋಗ್ಯಕರ ಸ್ಪರ್ಧೆ, ಅತಿರೇಕವೆನಿಸುವ ಪೋಷಕರ ನಿರೀಕ್ಷೆಗಳ ಭಾರದೊಂದಿಗೆ ನಿತ್ಯ ಏಗುವ ವಿದ್ಯಾರ್ಥಿಗಳಿಗೆ ಹೀಗೊಂದು ಬಿಡುವು ಅತ್ಯವಶ್ಯಕವಾಗಿದೆ. ಮಕ್ಕಳ ಮನೋವೈಜ್ಞಾನಿಕತೆಯೂ ಇದರ ಅಗತ್ಯವನ್ನು ಎತ್ತಿಹಿಡಿಯುತ್ತದೆ. ಇವುಗಳನ್ನೆಲ್ಲಾ ಮೂಲೆಗುಂಪಾಗಿಸಿ ರಜೆಯಲ್ಲೂ ಕ್ಲಾಸ್‌ ಮಾಡುವ ಮೂಲಕ ಅವರ ರಜಾ ಅವಧಿಯನ್ನು ಆಪೋಶನ ತೆಗೆದುಕೊಳ್ಳಲಾಗುತ್ತಿದೆ. ರಜೆಯ ಮಹತ್ವದ ಅರಿವಿಲ್ಲದೆ, ರಜೆಯಲ್ಲೂ ಪಾಠ ಮಾಡಿದರೆ ತಮ್ಮ ಮಕ್ಕಳು ಹೆಚ್ಚೆಚ್ಚು ಅಂಕಗಳಿಸುತ್ತಾರೆಂಬ ಪೋಷಕರ ಅಂಕ ವ್ಯಾಮೋಹ ಈ ಆತಂಕಕಾರಿ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಕಾರಣವಾಗುತ್ತಿದೆ. 

ಕ್ರಾಶ್‌ ಕೋರ್ಸ್‌, ಕ್ಯಾಶ್‌ ಸೊರ್ಸ್‌
ಖಾಸಗಿ ಸಂಸ್ಥೆಗಳು ಬೇಸಿಗೆ ರಜೆ ಹಾಗೂ ದಸರಾ ರಜಾ ಅವಧಿಯಲ್ಲಿ ನಡೆಸುವ ಕ್ರಾಶ್‌ ಕೋರ್ಸ್‌ ತರಗತಿಗಳು ಅಪ್ಪಟ ಹಣ ಮಾಡುವ ದಂಧೆಯಾಗಿವೆ. ಶುಲ್ಕ ಪಡೆದು, ಕಾಲೇಜು ಕಾರ್ಯಾರಂಭಗೊಂಡ ನಂತರ ಬೋಧಿಸಬೇಕಾದ ವಿಷಯಗಳನ್ನು ಮುಂಚಿತವಾಗಿ ತುಸು ಬದಲಾವಣೆಯೊಂದಿಗೆ ಬೋಧಿಸುವುದೇ ಇದರ ಮೂಲ ಸ್ವರೂಪ. ಆದರೆ ಅದಕ್ಕೆ ಪ್ರತ್ಯೇಕ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತದೆ. ಎರಡೆರಡು ಬೋಧಿಸುತ್ತೇವೆಂದು ಎರಡೆರಡು ಸಲ ಶುಲ್ಕ ವಸೂಲಿ. ಜನಪ್ರಿಯ ಬೋಧಕರುಗಳನ್ನು ಕರೆಯಿಸುತ್ತೇವೆಂದು ಹೇಳಿ ದುಪ್ಪಟ್ಟು ಶುಲ್ಕ ಪೀಕಿಸುವುದೂ ಇದೆ. ಅವರಿಂದ ಹೆಸರಿಗಷ್ಟೇ ಒಂದೆರಡು ತರಗತಿಗಳನ್ನು ಮಾಡಿಸಿ, ಉಳಿದವುಗಳನ್ನು ಅದೇ ಶಿಕ್ಷಕ ಹಾಗೂ ಉಪನ್ಯಾಸಕರಿಂದ ಮಾಡಿಸಿ, ಸಂಗ್ರಹಿಸಿದ ಮೊತ್ತದ ಒಂದಂಶವನ್ನು ಅವರಿಗೆ ನೀಡಿ ಉಳಿದ ಮೂರಂಶವನ್ನು ತಮ್ಮ ಖಜಾನೆಗೆ ತುಂಬಿಸಿಕೊಳ್ಳುವ ವ್ಯವಸ್ಥಿತ ತಂತ್ರ. ಹೀಗಾಗಿ ಈ ಕ್ರಾಶ್‌ ಕೋರ್ಸ್‌ಗಳು ಕ್ಯಾಶ್‌ ಮಾಡುವ ಸೋರ್ಸ್‌ಗಳಾಗಿ ಬದಲಾಗಿವೆ. 

ಪೋಷಕರ ಮನೋಧೋರಣೆ
ಪೋಷಕರ ಮನೋಧೋರಣೆಯೂ ಈ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ. ರಜೆಯಲ್ಲಿ ಮಕ್ಕಳು ಓದು ಪಾಠ ಬಿಟ್ಟು ಅವರ ಆಸಕ್ತಿಗೆ ಅನುಗುಣವಾಗಿ ಏನೇ ಮಾಡಿದರೂ ಅದು ಕೇವಲ ವ್ಯರ್ಥ ಕಾಲಹರಣ ಎಂದು ಪರಿಗಣಿಸುವ ಪೋಷಕರುಗಳು ತಮ್ಮ ಮಕ್ಕಳನ್ನು ಇಂತಹ ತರಗತಿಗಳಿಗೆ ಸೇರಿಸಲು ಇನ್ನಿಲ್ಲದ ಆಸಕ್ತಿ ತಳೆಯುತ್ತಾರೆ. ಮನೆಯಲ್ಲಿದ್ದರೆ ಅವರನ್ನು ನೋಡಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಹೀಗೆ ಮಾಡುವವರೂ ಇ¨ªಾರೆ. ಇದರೊಂದಿಗೆ ರಜೆಯಲ್ಲಿಯೂ ಪಾಠ ನಡೆದರೆ ಮಕ್ಕಳು ಉತ್ತಮ ಅಂಕಗಳನ್ನು ಗಳಿಸುತ್ತಾರೆ ಎಂಬ ವ್ಯಾಮೋಹವೂ ಜೊತೆಯಾಗುತ್ತದೆ. ಎಷ್ಟೇ ಶುಲ್ಕವಾದರೂ ಸರಿಯೇ ಪಾವತಿಸಿ, ನನ್ನ ಹೊಣೆಗಾರಿಕೆಯನ್ನು ನಿರ್ವಹಿಸಿದೆ ಎಂದು ನಿಡುಸುಯ್ಯುವುದರೊಂದಿಗೆ ತಮ್ಮ ನಿರೀಕ್ಷೆಗೆ ಕಾವು ಕೊಡಲಾರಂಭಿಸುತ್ತಾರೆ. ಆ ಕ್ಷಣದಿಂದಲೇ ಮಕ್ಕಳ ಮೇಲೆ ಒತ್ತಡ ಸಂಚಯಗೊಳ್ಳಲು ಪ್ರಾರಂಭವಾಗುತ್ತದೆ. 

ಅನಾಹುತಗಳಿಗೆ ದಾರಿ
ಫ‌ಲಿತಾಂಶಕ್ಕೆ ಮುನ್ನವೇ ಮುಂದಿನ ತರಗತಿಯ ಪಾಠಗಳನ್ನು ಬೋಧಿಸಲಾರಂಭಿಸಿದರೆ ವಿದ್ಯಾರ್ಥಿಗಳು ಅಸಹನೀಯವಾದ ಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಹಿಂದಿನ ತರಗತಿಯ ಫ‌ಲಿತಾಂಶದ ಬಗ್ಗೆ ಸಂಶಯವುಳ್ಳ ವಿದ್ಯಾರ್ಥಿಗಳಂತೂ ವಿಪರೀತ ಗೊಂದಲಕ್ಕೀಡಾಗುತ್ತಾರೆ. ಇನ್ನು ಅವಧಿಗೆ ಪೂರ್ವವೇ ಇಷ್ಟೆಲ್ಲಾ ಬೋಧಿಸಿ ತಾನು ಅಂತಿಮ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೆ ಎಂಬ ಆತಂಕದ ಸುಳಿ ಆರಂಭದಿಂದಲೇ ಅವರನ್ನು ಕಾಡಲಾರಂಭಿಸುತ್ತದೆ. “ಅಯ್ಯೋ ಇಷ್ಟೆಲ್ಲಾ ಮಾಡಿಯೂ ವಿಫ‌ಲನಾದೆನಲ್ಲಾ’ ಎಂಬ ಗಾಢ ನಿರಾಸೆಯು ಆವರಿಸಲು ಈ ಸರ್ಕಸ್‌ಗಳು ಕಾರಣವಾಗುತ್ತದೆ. ಇದು ವಿದ್ಯಾರ್ಥಿಗಳ ಮನಸ್ಸನ್ನು ಋಣಾತ್ಮಕ ವಿಚಾರಗಳೆಡೆಗೆ ಪ್ರಚೋದಿಸುವುದರಿಂದ ಆತ್ಮಹತ್ಯೆಯಂಥ ಅತಿರೇಕಗಳು ಘಟಿಸಲು ಕಾರಣವಾಗುತ್ತದೆ.

ಪಾಲನೆಯಾಗದ ನಿಯಮಗಳು 
ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಹಾಗೂ ಇಲಾಖೆ ಹೊರಡಿಸುವ ಆದೇಶಗಳೆಂದರೆ ತೀರಾ ಅಸಡ್ಡೆ ಹಾಗೂ ನಿರ್ಲಕ್ಷ. ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸದೇ ಮನಸೋಇಚ್ಛೆ ವರ್ತಿಸುತ್ತವೆ. ಶುಲ್ಕ ವಿಧಿಸುವಿಕೆ, ಲೇಖನ ಸಾಮಾಗ್ರಿಗಳ ಮಾರಾಟ, ಮೂಲಭೂತ ಸೌಕರ್ಯಗಳಂಥ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಇಲಾಖಾ ನಿಯಮ ಸೂಚನೆಗಳಿದ್ದರೂ ಅವು ಕಡತಗಳಿಗಷ್ಟೇ ಸೀಮಿತವಾಗಿವೆಯೇ ಹೊರತು ಪಾಲನೆಯಾಗುತ್ತಿಲ್ಲ ಎನ್ನುವುದು ಕಟುವಾಸ್ತವ. ರಜೆಯಲ್ಲೂ ಪಾಠ ಮಾಡುವ ಈ ಪರಿಪಾಠವೂ, ನಿಯಮಗಳನ್ನು ಗಾಳಿಗೆ ತೂರುವ ಖಾಸಗಿ ಸಂಸ್ಥೆಗಳ ಬೇಜವಾಬ್ದಾರಿತನದಿಂದಲೇ ಸೃಷ್ಟಿಯಾಗಿರುವಂಥದ್ದು. 

ಬೇರೆ ವಿಚಾರಗಳಲ್ಲಿನ ಖಾಸಗಿ ಸಂಸ್ಥೆಗಳ ಲೋಪದೋಷಗಳನ್ನು ಲಘುವಾಗಿ ಪರಿಗಣಿಸಿ ಸುಮ್ಮನಿದ್ದಂತೆ, ಮಕ್ಕಳ ಮಾನಸಿಕತೆಯ ಮೇಲೆ ನೇರ ಪರಿಣಾಮ ಬೀರಬಲ್ಲ ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆಯೂ ಮುಗುಮ್ಮಾಗಿರುವುದು ವ್ಯವಸ್ಥೆಯ ಗಂಭೀರ ಲೋಪವೇ ಸರಿ!  ಈ ಸಂಬಂಧ ಕೇರಳ ಸರ್ಕಾರ ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಈ ಸಂಬಂಧ ಪೋಷಕರೂ ಎಚ್ಚೆತ್ತುಕೊಂಡು ತುಸು ವಿವೇಚನೆಯಿಂದ ಆಲೋಚಿಸಬೇಕಾದ ಅಗತ್ಯವಿದೆ. ಏನೇ ಆದರೂ ವಿದ್ಯಾರ್ಥಿಗಳಿಗೆಂದು ನಿಗದಿಯಾದ ರಜೆ ಅವರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ  ಪ್ರಯತ್ನಗಳಾಗಬೇಕಿರುವುದು ಅತ್ಯಗತ್ಯ.

ಸಂದೇಶ್‌. ಎಚ್‌. ನಾಯ್ಕ…, ಕುಂದಾಪುರ

ಟಾಪ್ ನ್ಯೂಸ್

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.