ಬೆಳಕಿನ ಊಟಕ್ಕೆ ಹೃದಯ ಹಾತೊರೆಯಬೇಕು


Team Udayavani, May 13, 2018, 12:30 AM IST

x-11.jpg

ವಿನೀತ ಭಾವ ಬರದ ಹೊರತು ಯಾವ ಸಂಬಂಧವನ್ನೂ ತುಂಬ ದಿನ ಕಾಯ್ದುಕೊಳ್ಳಲಾಗುವುದಿಲ್ಲ. ಪ್ರೀತಿಯ ಬೆಲೆ ನಮಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮಗದು ಯಥೇತ್ಛವಾಗಿ ದೊರೆಯುತ್ತಿರುತ್ತದೆ. ಇರುವುದರ ಬೆಲೆ ಇದ್ದಾಗ ಅರಿಯೆವು, ಇರುವುದು ಇಲ್ಲದಾದಾಗ ಇರುವುದರ ಬೆಲೆ ಅರಿಯುವುದು ಬದುಕಿನ ವಿಪರ್ಯಾಸಗಳಲ್ಲಿ ಒಂದು.

ಪರಸ್ಪರ ಕಲೆತು, ಬೆರೆತು ನಡೆಯುವುದೇ ಬಾಳು. ಅಂತಿಪ್ಪ ಬಾಳಲ್ಲಿ ಕೆಲವೊಂದು ಅಡ್ಜಸ್ಟ್‌ಮೆಂಟ್‌, ಕೊಡು-ಕೊಳ್ಳುವಿಕೆ ಇರಬೇಕಾದದ್ದೇ. ಕೊಡು-ಕೊಳ್ಳುವಿಕೆಯ ಪ್ರಮಾಣ ವ್ಯತ್ಯಸ್ತವಾಗಬಹುದು, ಬಯಸಿದ್ದಷ್ಟು ಸಿಗದೆ ಇರಬಹುದು, ಕೆಲವೊಮ್ಮೆ ತುಸು ಹೆಚ್ಚೇ ಪಡಕೊಂಡಿದ್ದಿರಬಹುದು ಅಥವಾ ಹೆಚ್ಚೇ ಕೊಟ್ಟಿದ್ದಿರಬಹುದು. ಹಾಗಂತ ಅವುಗಳ ಲೆಕ್ಕಪಟ್ಟಿಯನ್ನು ಹಿಡಕೊಂಡು ಎದುರ-ಬದುರ ನಿಂತು ಜಗ್ಗುವುದಿದೆ ನೋಡಿ ದೊಡ್ಡ ದುರಂತ ಕಣ್ರೀ. ತೀರಾ ಕೆಲವೊಮ್ಮೆ ಇನ್ನೊಬ್ಬರನ್ನು ಹೆಚ್ಚೇ ಅವಲಂಬಿಸಿ ಬಿಡುತ್ತೇವೆ. ಬದುಕಿನ ಏರಿಳಿತಗಳು ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಅಬ್ಬರ-ಇಳಿತಗಳು ಸಾಮಾನ್ಯ. ನಮ್ಮ ನಡವಳಿಕೆ, ನಾವು ತೋರುವ ಪ್ರೀತಿ ಮತ್ತು ಕಾಳಜಿಯು ನಿಷ್ಕಲ್ಮಶವಾಗಿದ್ದಲ್ಲಿ ಬಾಳ ಯಾತ್ರೆಯ ಯಾವುದೋ ಒಂದು ಘಟ್ಟದಲ್ಲಿ ನಮಗದು ಪ್ರಾಪ್ತಿಸುತ್ತದೆ. ಇನ್ನೊಬ್ಬರಿಗೆ ತೋರುವ ಕಾಳಜಿಯು ಅವರನ್ನು ಕಳೆದು ಕೊಳ್ಳಬಾರದು ಎಂಬ ಪ್ರೀತಿ, ಮಮಕಾರವೇ ಹೊರತು ಮತ್ತೇ ನಲ್ಲ. ಆದರೆ ಅದನ್ನೇ ಅವರು “ನಾವಿಲ್ಲದೆ ಇನ್ನಿಲ್ಲ, ನಾವೇ ಎಲ್ಲ’ ಎಂಬ ಭಾವನೆಯಲ್ಲಿ ತೇಲಿದರೆ, ಮುಳುಗಲು ಹೆಚ್ಚಿನ ಹೊತ್ತೇನು ಬೇಕಿಲ್ಲ. ಸಂಕಟದ-ನೋವಿನ ಕರೆ ಕಿವಿಗೆ ತಲುಪಲಿಲ್ಲವೆಂದರೆ ಬೌದ್ಧಿಕ ಪ್ರಪಂಚದವರಲ್ಲೊಬ್ಬರಾಗಿರುವುದು ಕೂಡ ದಂಡ. 

ಬದುಕಲ್ಲಿ ಬರುವವರು ಒಂದೋ ನಮಗೆ ಪಾಠವಾಗಿ ಬರು ತ್ತಾರೆ, ಇಲ್ಲವೇ ಒಂದು ಆಶೀರ್ವಾದವಾಗಿಯೂ ಬರುತ್ತಾರೆ ಎಂಬುದರ ಅರಿವು ನಮಗಿರಬೇಕು. ಅಷ್ಟಕ್ಕೂ ಹೇಳಿ-ಕೇಳಿ ಬಂಧವನ್ನು ಕಟ್ಟಲು-ಕೆಡವಲು ಸಾಧ್ಯವಿದೆಯೇನ್ರಿ? ನೀರಿನ ಹರಿವನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನದಂತೆ ಪ್ರೀತಿಯ ಹರಿವನ್ನು ಕಟ್ಟಿಡುವ ವ್ಯರ್ಥ ಶ್ರಮಕ್ಕೆ ಅರ್ಥವಿಲ್ಲ. ಅರ್ಥವಾದೀತು ಬೆಳೆದಾಗ ಹೊಲ ತುಂಬಾ ಹೊನ್ನ ಕದಿರು ಎನ್ನುವ ಮಾತಿಗಂತೂ ಖಂಡಿತಾ ಬರವಿಲ್ಲ. ಬದುಕು ಶಾಶ್ವತವಲ್ಲವೆಂದು ಕೈ ತಪ್ಪಿ$ಹೋದ ಪ್ರೀತಿಗೆ ಚಿಂತೆ ಯಾಕೆ ಎಂದು ಕೇಳಿಕೊಳ್ಳುವ ಚಾರ್ವಾಕನಾಗ ಬಾರದು. ನಂಬಿದ ಪ್ರೀತಿ ಕೈ ತಪ್ಪುವುದಿಲ್ಲ ಎಂಬ ವಿಶ್ವಾಸ ಮುಖ್ಯ. ಅದು ಬದುಕಿನ ಜೀವಾಳವೂ ಹೌದು! ಅನುಮಾನ, ಅವಮಾನ ಬಳಿಕ ಬಹುಮಾನ. ಇಲ್ಲಿ ಸುಮ್ಮನಿರುವ ಮನಸ್ಸಿಗೂ ಹಬ್ಬ, ಓಡುತ್ತಿರುವ ವಯಸ್ಸಿಗೂ ಹಬ್ಬ. ಪ್ರೀತಿಸುವುದು ಕಷ್ಟ. ಅದನ್ನು ಪ್ರೀತಿಯಾಗಿಯೇ ಉಳಿಸಿಕೊಳ್ಳುವುದು ಮತ್ತೂ ಕಷ್ಟ. ಪ್ರೀತಿ ಹಬ್ಬಲಿ. ಆರಂಭದಲ್ಲಿ ಸಂಬಂಧ ಹಗುರ ಅನ್ನಿಸುತ್ತದೆ. ಹೋಗ ಹೋಗುತ್ತಿದ್ದಂತೆ ಅದೇ ಎಷ್ಟೊಂದು ಭಾರ ಎಂದು ಭಾಸವಾಗು ವುದಕ್ಕೆ ಶುರುವಾಗುತ್ತದೆ. ಹಾಗಾಗಿ ಸಂಬಂಧವನ್ನು ಎದೆಗವಚಿ ಹಿಡಕೊಂಡಿರಬೇಕು. ಹಾಗೆ ಇಡೀ ದಿನ ಹಿಡಕೊಂಡರೂ ಏನೂ ಅನ್ನಿಸುವುದಿಲ್ಲ. ಹತ್ತಿರವಾದದ್ದು ಭಾರವಲ್ಲ, ದೂರವಿದ್ದದ್ದು ಮಾತ್ರ ಭಾರ. ವಿನೀತ ಭಾವ ಬರದ ಹೊರತು ಯಾವ ಸಂಬಂಧವನ್ನೂ ತುಂಬ ದಿನ ಕಾಯ್ದುಕೊಳ್ಳಲಾಗುವುದಿಲ್ಲ. ಪ್ರೀತಿಯ ಬೆಲೆ ನಮಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮಗದು ಯಥೇತ್ಛವಾಗಿ ದೊರೆಯುತ್ತಿರುತ್ತದೆ. ಇರುವುದರ ಬೆಲೆ ಇದ್ದಾಗ ಅರಿಯೆವು, ಇರುವುದು ಇಲ್ಲದಾದಾಗ ಇರುವುದರ ಬೆಲೆ ಅರಿಯುವುದು ಬದುಕಿನ ವಿಪರ್ಯಾಸಗಳಲ್ಲಿ ಒಂದು. ಪ್ರತಿ ಯೊಬ್ಬನಿಗೂ ಭಾವನಾತ್ಮಕ ಅವಶ್ಯಕತೆಯಿರುತ್ತವೆ. ಪ್ರೀತಿ ತೋರಿ ಸುವುದು ಮತ್ತು ಪ್ರೀತಿಸಲ್ಪಡುವುದು ಮನುಷ್ಯನ ಮನಸ್ಸು- ಹೃದಯಗಳ ಅವಶ್ಯಕತೆ. ವಸ್ತುಗಳನ್ನು ಹೆಚ್ಚೆಚ್ಚು ಪ್ರೀತಿಸುವ 

ನಾವು ಜನರನ್ನು ಹೆಚ್ಚಾಗಿಯೇ ಬಳಸಿಕೊಳ್ಳುತ್ತೇವೆ. ಬಳಸಿಕೊಳ್ಳು ವುದು ಮತ್ತು ಪ್ರೀತಿಸಲ್ಪಡುವುದು ಇದೆ ನೋಡಿ, ಇದು ಮನುಷ್ಯ ಬುದ್ಧಿಯ ಪ್ರಯೋಗಗಳು. ವಸ್ತುಗಳನ್ನು ಬಳಸಬೇಕು – ಬಂಧ ಗಳನ್ನು ಪ್ರೀತಿಸಬೇಕು. ಒಟ್ಟಿನಲ್ಲಿ ಕೃಷ್ಣ ಪ್ರಜ್ಞೆ ನಮ್ಮಲ್ಲಿ ಮೂಡಬೇಕು. ಬೆಲೆ ಇರೋದು ನಂಟಿಗಲ್ಲ ಅದರ ಹಿಂದೆ ಮಿಡಿಯುವ ಅಕ್ಕರೆಗೆ ಎನ್ನುವ ಅರಿವಿರಬೇಕು.

ಶಬ್ದಗಳು ಬದುಕಲ್ಲಿ ಹುಟ್ಟಿಸುವ ತನ್ಮಯತೆಗೆ ನಾವೊಮ್ಮೆ ಕಳೆದು ಹೋಗಿಯೇ ಬಿಡಬೇಕು ಅನ್ನಿಸುವಷ್ಟು ಜೀವನ ಪ್ರೀತಿ ನಮ್ಮಲ್ಲಿರಬೇಕು. ಅಂತಹ ಆನಂದದ ಗಳಿಗೆಯಲ್ಲಿ ಒಮ್ಮೆ ಕಳೆದು ಹೋಗಿಬಿಡಬೇಕು. ಮತ್ತದನ್ನು ಅನುಭವಿಸಿಯೇ ತೀರಬೇಕು. ಪರಸ್ಪರ ಒಬ್ಬರೊಳಗೊಬ್ಬರು ಕಳೆದು ಹೋಗುತ್ತಾ ಮತ್ತೆ ಇಬ್ಬರೂ ಒಬ್ಬರಾಗುವ ಬೆರಗನ್ನು ಬದುಕಲ್ಲಿ ಆಗಾಗ ಅನುಭವಿಸು ತ್ತಿರ ಬೇಕು. ಮನಸ್ಸಿನಲ್ಲಿ ತುಸು ಖಾಲಿ ಜಾಗವಿದ್ದರೆ ಕಳೆದು ಹೋಗಲು ನಮಗೆ ಸಾಧ್ಯ. ಒಂದು ಪದ್ಯವನ್ನು ಓದುತ್ತಾ, ಹಾಡನ್ನು ಕೇಳುತ್ತಾ, ಚಿತ್ರಕಲೆಯನ್ನು ನೋಡುತ್ತಾ ನೋಡುತ್ತಾ… ಆ ಭಾವದೊಳಗೆ, ರಾಗದೊಳಗೆ, ಬಣ್ಣದೊಳಗೆ ಲೀನವಾಗಿ ಕಳೆದುಹೋಗುತ್ತಿರಬೇಕು. ಹಾಗೆ ಕಳೆದು ಹೋಗುತ್ತಿರುವಾಗಲೇ ಇರುವಿಕೆಯ ಅರಿವು ನಮ್ಮೊಳಗಾಗುವುದು. ಬದುಕಿನ ವಿಭಿನ್ನ, ವಿಶಿಷ್ಟ ವಿನ್ಯಾಸಗಳು ಕ್ಷಣ ಕ್ಷಣಕ್ಕೂ ಬೇರೆ ಬೇರೆ ರೂಪು-ರೇಖೆ, ಬಣ್ಣಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿರುತ್ತವೆ. ಹಾಗೆ ಪಡೆದು ಕೊಂಡ ವಿನ್ಯಾಸಗಳ ಮೇಲೆ ಆ ಕ್ಷಣದ ಬದುಕನ್ನು ಲೈಫ್ ಎಂಬ “ಕ್ಯಾನ್‌ವಾಸ್‌’ನಲ್ಲಿ ಚಿತ್ರಿಸುತ್ತಾ ಹೋಗುತ್ತೇವೆ. ಮತ್ತೆ ಆ ಕ್ಷಣ ಹೊರಳಿ ಮುಂದಿನ ಕ್ಷಣದೊಳಗೆ ಪ್ರವೇಶಿಸುತ್ತಲೇ ಮತ್ತೆ ವಿನ್ಯಾಸ ಬದಲು. ಮತ್ತದೇ ಅಚ್ಚರಿ, ಬೆರಗು, ಕುತೂಹಲಗಳ ನಿರಂತರ ಯಾನ. ಹೀಗೊಂದು ಮನಸ್ಥಿತಿಯೊಳಗೆ ಯಾವಾಗ ನಮಗೆ ಇರಲು ಸಾಧ್ಯವಾಗುತ್ತದೋ ಅಂದು ಬದುಕಲ್ಲಿ ಪೌರ್ಣಮಿ. ಬೆಳಕಿನ ಊಟವನ್ನು ಉಣ್ಣಲು ಹೃದಯ-ಮನಸ್ಸು ಹಾತೊರೆ ಯುತ್ತಿರ ಬೇಕು. ಆಗಾಗ ಕಳೆದು-ಹೋಗಿ-ಬಂದು, ಕಳೆದು ಹೋಗುತ್ತಿರಬೇಕು. 

ಬದುಕಿನ ಎಲ್ಲಾ ಕ್ಷಣಗಳು, ಘಟನೆಗಳು ಸಂತೋಷದಾಯ ಕವೂ, ಸಮಾಧಾನಕರವೂ ಆಗಿರಲಾರದು. ಆದರೆ ಬೇರೆಯವರ ಕಂಗಳಲ್ಲಿ ನಮ್ಮ ಬಗೆಯ ಕಾಳಜಿಯನ್ನು ನೋಡಿದಾಗ ಆಗುವ ಖುಷಿಯನ್ನು ವರ್ಣಿಸುವಲ್ಲಿ ಪದಗಳೇ ಸೋತುಬಿಡುತ್ತವೆ. ಖುಷಿಯನ್ನು ಹೀಗೂ ಅನುಭವಿಸಬಹುದೇ? ಎಂಬ ಜಿಜ್ಞಾಸೆ ಯೊಂದು ಆ ಘಟ್ಟದಲ್ಲಿ ಮೂಡುವುದು ಸುಳ್ಳಲ್ಲ. ಯಾರೂ ಯಾರಿಗೂ ತಲೆಬಾಗದೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವಂತಿರ ಬೇಕು. ಯಾರಿಂದಲೋ ಮೋಸಹೋದರೆ ಮೂರ್ಖರೆಂದೋ, ಲೆಕ್ಕಾಚಾರ ತಪ್ಪಾದರೆ ಹೆಡ್ಡರೆಂದೋ, ಅವಮಾನಿತರಾದರೆ ವ್ಯಕ್ತಿತ್ವ ಸರಿ ಇಲ್ಲವೆಂದೋ, ನೆನೆದಂತೆ ಬಾಳು ನಡೆಯುತ್ತಿಲ್ಲವೆಂದರೆ ಹಣೆಬರಹ ಸರಿಯಿಲ್ಲವೆಂದಲ್ಲ. ಇವುಗಳೆಲ್ಲಾ ಬದುಕು ಕಲಿಸುವ ಪಾಠಗಳು. ಪದೇ ಪದೇ ಹೀಗಾದಾಗ, ಬದುಕು ಕಲಿಸಿದ ಪಾಠವನ್ನು ಸರಿಯಾಗಿ ಮನನ ಮಾಡಿಕೊಳ್ಳಲಿಲ್ಲವೆಂದರ್ಥ. ಎಲ್ಲವೂ ಕ್ಷಣ ಮಾತ್ರದಲ್ಲಿ ಒದಗುವ ಕೊಳ್ಳುಬಾಕ ಯುಗದಲ್ಲಿ ಯಾವುದಕ್ಕೆ ಕೊರತೆಯಿದೆ ಹೇಳಿ? ಕೊರತೆ ಇರುವುದೇ ಆದಲ್ಲಿ ಅದು ಪ್ರೀತಿ ಮತ್ತು ನಂಬಿಕೆಗಳಿಗೆ ಮಾತ್ರ. ಅವುಗಳ ದಾಸ್ತಾನು ಯಥೇತ್ಛವಾಗಿದ್ದಲ್ಲಿ ಯಾರನ್ನಾದರೂ ಗೆಲ್ಲಬಹುದು, ಅದೆಂತಹ ಬಂಧವನ್ನಾದರೂ ಉಳಿಸಿಕೊಳ್ಳಬಹುದು, ಎಂತಹವರೊಂದಿಗೂ ವ್ಯವಹರಿಸಬಹುದು. ಸುಲಭವಾಗಿ ದಕ್ಕಿಸಿಕೊಳ್ಳಬೇಕಾದದ್ದನ್ನು ಅದೆಷ್ಟು ಕ್ಲಿಷ್ಟಕರವನ್ನಾಗಿಸಿಕೊಳ್ಳುತ್ತೇವೆಯಲ್ಲ! ಉಳಿ ತಾಕಿದ ಶಿಲೆ ಶಿಲ್ಪವಾದರೆ, ಸುಟ್ಟುಕೊಂಡ ಬತ್ತಿ ಬೆಳಕಾಗುತ್ತದೆ. ಕಷ್ಟವಿಲ್ಲದೆ ಬದುಕಿಲ್ಲ, ಸುಟ್ಟುಕೊಳ್ಳದ ದೇಹವಿಲ್ಲ. ಕಷ್ಟದಲ್ಲೂ ಬದುಕಿನ ಬಗೆಗಿನ ಅದಮ್ಯ ಉತ್ಸಾಹವಿದೆಯಲ್ಲ ಅದುವೇ ಮುಂದೆ ಒದಗಿ ಬರಲಿರುವ ಸುಖದ ಬದುಕಿನ ಅಡಿಪಾಯ. ಬದುಕು ನಿಂತಿರುವುದೇ ಜೀವನೋತ್ಸಾಹದ ಮೇಲೆ. ಬಿ¨ªಾಗ ಕುಗ್ಗದೆ, ಗೆ¨ªಾಗ ಬೀಗದೆ. ಸಮಚಿತ್ತತೆಯನ್ನು ಕಾಪಾಡಿಕೊಂಡು ಬಂದಲ್ಲಿ ಬದುಕೊಂದು ನವನವೀನ. ಸಮಚಿತ್ತತೆಯನ್ನು ಅಳವಡಿಸಿಕೊಳ್ಳು ವುದು ಸುಲಭ ಕಾರ್ಯವಲ್ಲ. ವಿವೇಕದ ಎಚ್ಚರವಿದ್ದಲ್ಲಿ ಅಳವಡಿಸಿ ಕೊಳ್ಳುವುದು ಸುಲಭ. ವಿವೇಕದ ಅರಿವು ಬದುಕಿನ ಬಹಳಷ್ಟು ಗೊಂದಲಗಳನ್ನು ನಿವಾರಿಸಿಬಿಡುತ್ತದೆ. ಅಂತಹ ಅರಿವಿನೆಡೆಗೆ ನಮ್ಮ ನಡೆಯಾಗಬೇಕು. ಬದುಕನ್ನು ಆಗಾಗ ರೀವೈಂಡ್‌ ಮೋಡ್‌ಗೆ ಹಾಕಿ ರಿಫ್ರೆಶ್‌ ಆಗುತ್ತಿರಬೇಕು. ನಾವು ಸತ್ತ ಮೇಲೆಯೇ ನಮ್ಮನ್ನು ಇತರರು ಅರ್ಥ ಮಾಡಿಕೊಳ್ಳಬೇಕಾದ ದುರ್ಗತಿ ಬರಬಾರದು.

ಮನಸ್ಸನ್ನು ಕಾಡುವ ಇಚ್ಛೆಗಳನ್ನು ಸಂತೃಪ್ತಿಪಡಿಸದಿದ್ದರೆ ಅವುಗಳಿಂದ ಬಿಡುಗಡೆಯಿಲ್ಲವಂತೆ! ಹೃದಯವು ಸಾಧನೆಯಿಂದ ಮೃದುವಾಗದೆ ಹೋದಲ್ಲಿ ಸಾಧನೆಯೇ ನಿರುಪಯುಕ್ತ. ಈಶೋಪನಿಷತ್ತಿನಲ್ಲಿ ಹೇಳಿದಂತೆ “ತ್ಯಜಿಸಿ ಹರ್ಷಿಸಬೇಕು’. ನಮ್ಮದೇನಿದ್ದರೂ ಆರಿಸಿಕೊಂಡ ಬದುಕಲ್ಲವಲ್ಲ! ಬದುಕೇ ನಮ್ಮನ್ನು ಆರಿಸಿಕೊಂಡದ್ದು. ಕ್ಷೇತ್ರವೊಂದು ತಯಾರಾಯಿತು ನಾವಲ್ಲಿ ಮೊಳಕೆಯೊಡೆದೆವು. ಅಷ್ಟೆ. ಮುಂದಿನದ್ದು ನಾವು ಕಟ್ಟಿಕೊಳ್ಳಲಿರುವ ಬದುಕು. ಅದು ಹೇಗೆ? ಏನು? ಎಂಬುದನ್ನು ಕೂಡಾ ನಿರ್ಧರಿಸುವವರು ಖಂಡಿತಾ ನಾವಲ್ಲ. ಯಾವುದೂ ನಾವಲ್ಲ ವಾದರೆ ನಾವು ಯಾರು? ಏನು? ಮುಂದಿನ ದಾರಿ ಯಾವುದು? ಈ ಎಲ್ಲಾ ಪ್ರಶ್ನೆಗಳ ನಿರಂತರ ಹುಡುಕಾಟವೇ ಬದುಕು. ಹಾಗಾದರೆ ಪ್ರತಿಯೊಂದು ಕಾರ್ಯದಲ್ಲೂ ಅಗಮ್ಯ ಸ್ಥಾನದತ್ತ ತಲುಪಲು ಇಚ್ಛಿಸುವ ಯಾತ್ರೆಯನ್ನು ಬದುಕು ಎನ್ನಬಹುದೇ? ಇಲ್ಲಿ ನನ್ನದು ಎನ್ನುವುದು ಕೇವಲ ತೋರಿಕೆಯದ್ದು. ಎಲ್ಲವೂ ಅವನಿಂದ ದೊರೆತ ಬಳುವಳಿ. ಹಾಗಾಗಿ ಯಾಕೆ ಹೂಡ್ತಿರಾ ಸುಖಾ ಸುಮ್ಮನೆ ಚಳುವಳಿ? ಇರಲಿ ಒಂದಿಷ್ಟು ಕಳಕಳಿ. ಜೈಕಾರ, ಘೋಷಣೆಗಳ ಮೆರವಣಿಗೆಯಲ್ಲಿ ಯಡವಟ್ಟುಗಳು, ಅವಾಂತರ ಗಳು ನಿರಂತರ. ಒಟ್ನಲ್ಲಿ ಸಂಭ್ರಮಿಸುವ ಬಗೆಯನ್ನು ಮಾತ್ರ ತಿಳಿಯದಾಗುತ್ತೇವೆ. ಅಂತೂ ಇಂತೂ ಸಂಭ್ರಮಿಸುವ ಗಳಿಗೆ ಬಂದಾಗ ವಿದಾಯದ ಮೆಟ್ಟಲಿಳಿಯಲು ಸಜ್ಜಾಗಿರುತ್ತೇವೆ. ಬದುಕು ಇಷ್ಟೇನಾ? ಎಂದುಕೊಳ್ಳುತ್ತಲೇ, ಛೇ…ಎಷ್ಟೆಲ್ಲಾ ಕ ‌ಕೊಂಡೆ ನಲ್ಲ ಎಂದು ಹಿಂದುರುಗಿ ಕೈ ಚಾಚಲು ಯಾತ್ರೆಯು ತನ್ನ ಕೊನೆಯ ಹಂತವನ್ನು ತಲುಪಿರುತ್ತದೆ. ಹೃದಯ ಕಮಲದಲ್ಲಿ ದಿವ್ಯ ಬೆಳಕೊಂದು ಬೆಳಗುವ ಉತ್ಸುಕತೆಯಲ್ಲಿರುತ್ತದೆ.

ಸಂತೋಷ್‌ ಅನಂತಪುರ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.