ಐಓಟಿ ಬಂತು ದಾರಿಬಿಡಿ

Team Udayavani, May 20, 2018, 12:30 AM IST

o-1.jpg

ನಾವು ಎಲ್ಲೇ ಇದ್ದರೂ ಗ್ಯಾಸ್‌ ಸಿಲಿಂಡರ್‌ನೊಡನೆ ಸಂಪರ್ಕದಲ್ಲಿ ಇರಲು ಸಾಧ್ಯವಾದರೆ? ಕಚೇರಿಯಲ್ಲಿ ಕುಳಿತು ಮನೆಯಲ್ಲಿನ ಸಿಲಂಡರನ್ನು  ಆರಿಸುವಂತಾದರೆ? ಗ್ಯಾಸ್‌ ಸಿಲಿಂಡರ್‌ ಆಫ್ ಮಾಡಿಲ್ಲ ಎನ್ನುವ ಸಂದೇಶ ನಿಮ್ಮ ಮೊಬೈಲಿಗೇ ಬಂದರೇ? ಸಿಲಿಂಡರ್‌ ಒಂದೇ ಅಲ್ಲದೇ ಮನೆ ಯಲ್ಲಿರುವ ಎಲ್ಲ ಉಪಕರಣಗಳನ್ನು ಐಓಟಿಗೆ ಒಳಪಡಿಸಿ ನಿಮ್ಮ ಫೋನ್‌ನಿಂದಲೇ ಅವುಗಳ ಮೇಲೆ ನಿಗಾ ಇಡಬಹುದು, ಅವನ್ನು ನಿಯಂತ್ರಿಸಬಹುದು.

ಕಳ್ಳನೆಂದುಕೊಂಡು ಒಬ್ಬ ವ್ಯಕ್ತಿಯನ್ನು ಪೊಲೀಸ್‌ ಬೆನ್ನಟ್ಟಿದ್ದಾನೆ, ಸಾಕಷ್ಟು ಓಡಾಟದ ಬಳಿಕ ಆ ವ್ಯಕ್ತಿ ಎದುರಿಗೆ ಕಾಣಿಸಿಕೊಳ್ಳುತ್ತಾನೆ. ಆತ ಕಳ್ಳ ಹೌದೋ ಅಲ್ಲವೋ? ಎಂದು ಪೊಲೀಸ್‌ ಅನುಮಾನದಲ್ಲಿ ರುವಾಗ ತನ್ನ ಕನ್ನಡಕಕ್ಕೆ ಸಿಲುಕಿಸಿದ ಸಲಕರಣೆಯ ಮೂಲಕ ಎದುರಿನ ವ್ಯಕ್ತಿಯ ಪೋಟೋ ತೆಗೆದು, ತನ್ನ ನೆಲೆಗೆ ನೆರವಿಗಾಗಿ ಕರೆ ಮಾಡುತ್ತಾನೆ. ಎದುರಿನ ವ್ಯಕ್ತಿ ಯಾರು? ಆತ ಕಳ್ಳತನ ಮಾಡಿರುವ ಇತಿಹಾಸ ಇದೆಯೇ? ಎನ್ನುವುದನ್ನು ಕೂಡಲೇ ಪೊಲೀಸ್‌ಗೆ ತಿಳಿಸುತ್ತದೆ ಠಾಣೆಯಲ್ಲಿನ ಕಂಪ್ಯೂಟರ್‌. ಈಗ ಇನ್ನೊಂದು ಸನ್ನಿವೇಶ. ಬೆಂಕಿ ನಂದಿಸಲು ದೊಡ್ಡ ಕಟ್ಟಡದೊಳಗೆ ಹೋದ ತಂಡಕ್ಕೆ ಎದುರಾಗುವ ಸಮಸ್ಯೆಯೆಂದರೆ ಜನರು ಎಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅನ್ನುವುದನ್ನು ತಿಳಿಯುವುದು. ನಾಲ್ಕಾರು ತಂಡದಲ್ಲಿ 
ಚದುರಿದ ಬೆಂಕಿ ನಂದಿಸುಗರು ತಮ್ಮ ಹೆಲ್ಮೆಟ್‌ಗೆ ಹಾಕಿಕೊಂಡ ಕೆಮೆರಾದಿಂದ ಚಿತ್ರಗಳನ್ನು ಸೆರೆಹಿಡಿದು ಹೊರಗಡೆಯಿರುವ ಕಂಪ್ಯೂಟರ್‌ಗೆ ಮಾಹಿತಿ ಕಳಿಸಿದಾಗ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹಾಕಿಕೊಂಡ ಜನರು ಯಾವ ಜಾಗದಲ್ಲಿದ್ದಾರೆ, ಅವರನ್ನು ತಲುಪಲು ಸುಲಭವಾದ ದಾರಿ ಯಾವುದು? ಇಂತಹ ಹಲವು ಸಹಾಯದ ಮಾಹಿತಿಗಳನ್ನು ಬೆಂಕಿ ಆರಿಸುವವರಿಗೆ ಕಂಪ್ಯೂಟರ್‌ ತಿಳಿಸುತ್ತದೆ. 

ಆಗಾಗ ಸುದ್ದಿಯಲ್ಲಿ ಕಾಣಿಸುವ, ಹಲವು ಸಿನೆಮಾಗಳಲ್ಲಿ ಮೂಡಿಬಂದಿರುವ ಇನ್ನೊಂದು ಸನ್ನಿವೇಶ. ಡಾಕ್ಟರ್‌ ಆಪರೇಶನ್‌ ಮಾಡಿದ ಮೇಲೆ ಕತ್ತರಿಯನ್ನು ರೋಗಿಯ ಹೊಟ್ಟೆಯಲ್ಲಿಯೇ ಮರೆತಿರುವ ಸಂಗತಿ! ಇದು ಮೇಲ್ನೋಟಕ್ಕೆ ಡಾಕ್ಟರ್‌ ಬೇಜವಾ ಬ್ದಾರಿಯ ಕೆಲಸ ಅನ್ನಿಸಿದರೂ ಇಂತಹ ಕಣ್ತಪ್ಪಿನ ಪ್ರಮಾದಗಳು ಆಗದಂತೆ ತಂತ್ರಜ್ಞಾನವನ್ನು ಬಳಸಿ ತಡೆಯಬಹುದು. ಆಪರೇಶನ್‌ಗಾಗಿ ಬಳಸಲಾಗಿರುವ ಸಲಕರಣೆಗಳನ್ನು ರೋಗಾಣುಗಳಿಲ್ಲದಂತೆ ಚೊಕ್ಕಗೊಳಿಸಲಾಗಿದೆಯೇ? ಆಪರೇಶನ್‌ ಮಾಡುವಲ್ಲಿಗೆ ಎಷ್ಟೆಷ್ಟು ಸಲಕರಣೆಗಳನ್ನು ಒಯ್ಯಲಾಗಿದೆ? ಅಗತ್ಯವಿರುವ ಎಲ್ಲಾ ಸಲಕರಣೆ ಗಳೂ ಇವೆಯೇ? ಆಪರೇಶನ್‌ ಬಳಿಕ ಎಲ್ಲ ಸಲಕರಣೆಗಳು ಹೊರ ಬಂದವೆ? ಮುಂತಾದ ಮಾಹಿತಿಯನ್ನು ಪಡೆಯಬಹುದು. ಈ ಉದಾಹರಣೆಗಳು ಚಿತ್ರವೊಂದರ ಕಟ್ಟುಕತೆಯಂತೆ ಅನ್ನಿಸಬಹುದು. ಆದರೆ ಇವುಗಳು ಇಂಟರ್ನೆಟ್‌ ಆಫ್ ಥಿಂಗ್ಸ್‌ (ಐಓಟಿ) ಚಳಕದ ಕೊಡುಗೆಗಳು ಅಂದರೆ ಅಚ್ಚರಿಯಾದೀತು. ವಸ್ತುಗಳನ್ನು ಇಂಟರ್ನೆ ಟ್‌ ನೊಂದಿಗೆ ಬೆಸೆಯುವುದೇ ಐಓಟಿ ಎಂಬ ತಂತ್ರಜ್ಞಾನ. ಇದರ ಮೂಲಕ ಪ್ರತಿಯೊಂದು ವಸ್ತು-ಸಲಕರಣೆಗಳನ್ನೂ ಹತೋಟಿ ಯಲ್ಲಿಟ್ಟುಕೊಳ್ಳಬಹುದು, ಅದರಿಂದ ಹೆಚ್ಚಿನ ಮಾಹಿತಿ, ಬಳಕೆಯನ್ನು ಪಡೆಯಬಹುದು.

ಐಓಟಿ ತಂತ್ರಜ್ಞಾನವನ್ನು ಇನ್ನಷ್ಟು ಸುಲಭವಾಗಿ ತಿಳಿದುಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ನೀವು ಹೊರ ಗೆಲ್ಲೋ ಹೋಗುತ್ತೀರಿ. ಕೂಡಲೇ ಅನುಮಾನ ಶುರುವಾಗುತ್ತದೆ? “ಗ್ಯಾಸ್‌ ಸಿಲೆಂಡರ್‌ ಆಫ್ ಮಾಡಿ ಬಂದೇನಾ?’. ಅದನ್ನು ಆರಿಸಲಾಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಅಡುಗೆ ಮನೆಗೆ ಹೋಗಿಯೇ ನೋಡಬೇಕು. ಅವಸರದಲ್ಲಿ ಹೊರಟಾಗ ಅಮ್ಮ ಕೇಳುವ ಮೊದಲ ಪ್ರಶ್ನೆ ಎಂದರೆ “ಗ್ಯಾಸ್‌ ಆರಿಸಿದ್ದೀಯಾ?’ ಎಂದೇ ಅಲ್ಲವೇ? ಯೋಚಿಸಿ ನೋಡಿ, ನಾವು ಎಲ್ಲೇ ಇದ್ದರೂ ಗ್ಯಾಸ್‌ ಸಿಲಿಂಡನೊìಡನೆ ಸಂಪರ್ಕದಲ್ಲಿ ಇರಲು ಸಾಧ್ಯವಾದರೆ? ಕಚೇರಿಯಲ್ಲಿ ಕುಳಿತು ಮನೆಯಲ್ಲಿನ ಗ್ಯಾಸ್‌ ಸಿಲಂಡರನ್ನು  ಆರಿಸುವಂತಾದರೆ? ಗ್ಯಾಸ್‌ ಸಿಲಿಂಡರ್‌ ಆಫ್ ಮಾಡಿಲ್ಲ ಎನ್ನುವ ಸಂದೇಶ ನಿಮ್ಮ ಮೊಬೈಲಿಗೇ ಬಂದರೆ? ಐಓಟಿ ತಂತ್ರಜ್ಞಾನದಿಂದ ಇದು ಸಾಧ್ಯ. ಸಿಲಿಂಡರ್‌ ಒಂದೇ ಅಲ್ಲದೇ ಮನೆ ಯಲ್ಲಿರುವ ಎಲ್ಲ ಉಪಕರಣಗಳನ್ನು ಐಓಟಿಗೆ ಒಳಪಡಿಸಿ ನಿಮ್ಮ ಫೋನ್‌ನಿಂದಲೇ ಅವುಗಳ ಮೇಲೆ ನಿಗಾ ಇಡಬಹುದು, ಅವನ್ನು ನಿಯಂತ್ರಿಸಬಹುದು.  ಇಷ್ಟೊಂದು ನೆರವಾಗಬಲ್ಲ ಐಓಟಿ ಹೇಗೆ ಕೆಲಸ ಮಾಡುತ್ತದೆ ಅಂತ ಈಗ ತಿಳಿದುಕೊಳ್ಳೋಣ. ಐಓಟಿಯ ಮೊದಲ ಭಾಗವಾಗಿರುವುದೆಂದರೆ ಸೆನ್ಸರ್‌ಗಳು. ಒತ್ತಡ, ಬಿಸಿ, ತಂಪು, ಅಲುಗಾಟ, ದೂರ ಹೀಗೆ ಯಾವುದಾದರೊಂದು ಪರಿಮಾಣಗಳನ್ನು ಅಳೆಯಬಲ್ಲಂತಹ ಸಲಕರಣೆಗಳಿವು. ಸೆನ್ಸರ್ಸ್‌ ಬಳಿಕ ಐಓಟಿ ಭಾಗವಾಗಿರುವುದು ಕನೆಕ್ಟಿವಿಟಿ, ಇದು ವಸ್ತುಗಳನ್ನು ಇಂಟರ್ನೆಟ್‌ಗೆ ಬೆಸೆಯಲು ಇರುವ ಕೊಂಡಿ. ಇದು ವೈಫೈ, ಲ್ಯಾನ್‌ ಮುಂತಾದ ಯಾವುದೇ ಮಾಧ್ಯಮವಾಗಿರಬಹುದು. ಆಮೇಲೆ ಬರುವುದು ಇಂಟರ್ನೆಟ್‌ನಲ್ಲಿ ಮಾಹಿತಿಗಳನ್ನು ಕೂಡಿಡಲು ಇರುವ ತಾಣ. ಇದನ್ನು ಇಂಗ್ಲಿಷ್‌ನಲ್ಲಿ ಕೌÉಡ್‌ (ಮೋಡ) ಎಂದು ಕರೆಯುತ್ತಾರೆ. ಮಾಹಿತಿಯನ್ನು ಇಡಲು ಇರುವ ತಾಣ ವಸ್ತುವಿನಿಂದ ದೂರ, ಬೇರೆÇÉೋ ಇರುವುದರಿಂದ ಅದನ್ನು ಆ ಹೆಸರಿನಿಂದ ಕರೆಯುವುದುಂಟು. ಐಓಟಿಯ ಮುಂದಿನ ಭಾಗವಾಗಿರುವುದು ಕೂಡಿಟ್ಟ ಮಾಹಿತಿಯ ವಿಶ್ಲೇಷಣೆ. ಇದನ್ನು ಡೇಟಾ ಅನಾಲಿಸಿಸ್‌ ಅನ್ನುತ್ತಾರೆ. ಹೀಗೆ ವಸ್ತುವೊಂದಕ್ಕೆ ಸೆನ್ಸರ್‌ ಕೂಡಿಸಿ, ಅವು ನೀಡುವ ಮಾಹಿತಿಯನ್ನು ಇಂಟರ್ನೆಟ… ಮೂಲಕ ಒಂದೆಡೆ ಕೂಡಿಟ್ಟು, ಅಲ್ಲಿಯ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿ, ವಸ್ತುಗಳನ್ನು ಹಿಡಿತಲ್ಲಿಟ್ಟು ಕೊಳ್ಳುವುದೇ ಐಓಟಿ ತಂತ್ರಜ್ಞಾನ. ಐಓಟಿ ಬಳಕೆ ಮುಂದಿನ ವರುಷಗಳಲ್ಲಿ ತುಂಬಾ ಬೆಳೆಯಲಿದೆ ಅನ್ನುವುದು ಬಲ್ಲವರ ಅನಿಸಿಕೆ. ಮಿಂದುಂಬಿ (ಡ್ರೋನ್‌) ಬಳಸಿ ದಂಗೆಕೋರರನ್ನು ಮಟ್ಟ ಹಾಕುವುದು, ಟ್ರಾಫಿಕ್‌ ಲೈಟ್‌ಗಳನ್ನು ಹಿಡಿತದಲ್ಲಿಡುವುದು, ಆಪರೇಶನ್‌ ಮಾಡಲು ವೈದ್ಯರಿಗೆ ನೆರವಾಗುವುದು ಹೀಗೆ ಐಓಟಿ ತಂತ್ರಜ್ಞಾನದ ಬಳಕೆ ಎಲ್ಲೆಡೆಯು ಆಗಲಿದೆ, ತನ್ನ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಿದೆ.

(ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆ , ತಿಂಗಳಿಗೊಮ್ಮೆ ತಿಳಿಗನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಾತುಕತೆ ಏರ್ಪಡಿಸುತ್ತಿದೆ. ಈ ಬಾರಿ ನಡೆದ ಮಾತುಕತೆಯ ಆಯ್ದ ಭಾಗವಿದು)

ರಾಜೀವ ರಾಮಚಂದ್ರ, ಉದ್ಯಮಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.