ಅಂತರಂಗದ ಅರಿವು ವಿಸ್ತರಿಸುತ್ತಿಲ್ಲವೇಕೆ? 


Team Udayavani, Jul 5, 2018, 12:30 AM IST

9.jpg

ಶ್ಲೋಕಗಳನ್ನು, ಸೂಕ್ತಿಗಳನ್ನು, ಕಗ್ಗವನ್ನು, ತ್ರಿಪದಿಗಳನ್ನು, ಪದ್ಯವನ್ನು, ಗಣಿತದ ಸಿದ್ಧಾಂತ-ಸೂತ್ರಗಳನ್ನು, ವರ್ಷಗಳನ್ನು, ಗುಣಲಕ್ಷಣಗಳನ್ನು, ಯುದ್ಧದ ವಿವರಗಳನ್ನು, ವ್ಯಕ್ತಿ ವಿವರಗಳನ್ನೆಲ್ಲ ಬಾಯಿಪಾಠ ಮಾಡಲೇಬೇಕು. ಇವುಗಳನ್ನೆಲ್ಲಾ ಬೇರೆ ಕ್ರಮದಲ್ಲಿ ಬರೆಯಲಾಗದು; ಬರೆಯಲೂ ಬಾರದು. ಒಬ್ಬೊಬ್ಬರು ಒಂದೊಂದು ಶಿಕ್ಷಣ ಪದ್ಧತಿ ಜಾರಿಗೊಳಿಸಿದರೆ ಮಕ್ಕಳ ಕಲಿಕೆಯಲ್ಲಿ ಏರುಪೇರಾಗುವುದಿಲ್ಲವೇ?  

ಕಲಿಕೆ ಮತ್ತು ಬೋಧನೆಯ ಗುಣಮಟ್ಟ ಸುಧಾರಿಸಲು ತೆರೆದ ಪುಸ್ತಕ ಪರೀಕ್ಷೆಯ ಕುರಿತು ಮಂತ್ರಿಗಳಾಡಿದ ಮಾತಿನ ಬಗ್ಗೆ, ಅವರ ಆಲೋಚನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಇದಕ್ಕಿಂತ ಮುಖ್ಯವಾದ ವಿಚಾರಗಳಿವೆ. 

ಪುಸ್ತಕ ತೆರೆದು ಪರೀಕ್ಷೆ ಬರೆಯುವ ಕ್ರಮ ಕೆಲವೆಡೆ ಉನ್ನತ ಶಿಕ್ಷಣದಲ್ಲಿದೆ.ಆದರೆ ಅದು ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿಲ್ಲ. ಅಸೈನ್‌ಮೆಂಟ್‌ಗಳ ಸ್ವರೂಪ, ವಿಷಯ ಸಂಗ್ರಹಣೆ, ಆಕರಗ್ರಂಥಗಳ ಪರಾಮರ್ಶನ ಇವೆಲ್ಲವೂ ಪುಸ್ತಕ ತೆರೆದೇ ಮಾಡುವಂಥದ್ದು. ಇದು ಸ್ವಾಧ್ಯಾಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೇಕಾದ ಅಂಶಗಳನ್ನು ಕ್ರೋಡೀಕರಿಸುವಲ್ಲಿ ಸೃಷ್ಟಿಶೀಲತೆಯನ್ನು ಪರೀಕ್ಷಿಸಲು ಸಾಧ್ಯ. ಈ ಮಾದರಿಯನ್ನು ಪ್ರಾಥಮಿಕ ಹಂತದÇÉೇ ಅಳವಡಿಸಿದರೆ ಮಿದುಳಿಗೆ ಹೊರೆಯಾಗಿ ಕಲಿಕೆ ನಿಸ್ಸಾರವಾಗುವ ಸಂಭವನೀಯತೆ ಹೆಚ್ಚು. ಇದು ಮಕ್ಕಳ ಸ್ಮರಣಶಕ್ತಿಯನ್ನು ಎಳವೆಯÇÉೇ ಕುಂದಿಸುತ್ತದೆ. ಓದಿದ್ದನ್ನು ನೆನಪಿಟ್ಟುಕೊಂಡು 3 ತಾಸಿನ ಅವಧಿಯಲ್ಲಿ ಬರೆಯುವ ಪದ್ಧತಿಯಲ್ಲೇ ಬೆಳೆದ ನಾಡಿನ ಅನೇಕ ವಿದ್ವಾಂಸರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರಿದ್ದಾರೆ. ಕಿವಿಹಿಂಡಿ ಕೈಹಿಡಿದು ಬರೆಸಿದ ಶಿಕ್ಷಣ ಪದ್ಧತಿಯಲ್ಲೇ ಇವರೆಲ್ಲಾ ಬೆಳೆದದ್ದಲ್ಲವೇ? ಅಭ್ಯಾಸಾನುಗತ ವಿದ್ಯಾ, ಬುದ್ಧಿ ಕರ್ಮಾನುಸಾರಿಣೀ – ಓದಿದ್ದು ನೆನಪಿರಬೇಕು. ಮತ್ತೆ ಮತ್ತೆ ಮೆಲುಕು ಹಾಕುವ ಸಾಮರ್ಥ್ಯವನ್ನು ಮಕ್ಕಳಿಗೆ ರೂಢಿಸಬೇಕಾಗಿದೆ. ತಂದೆ-ತಾಯಿ, ಶಿಕ್ಷಕ, ಶಾಲೆ, ಸಮಾಜ, ಪಠ್ಯಪುಸ್ತಕ-ಇವುಗಳ ಬಗ್ಗೆ ಪ್ರೀತಿ-ವಿಶ್ವಾಸ, ಅಭಿಮಾನ, ಗೌರವವನ್ನು ಹೊಂದುವಂತೆ ಮಾಡಿದ ಹಳೆಯ ಶಿಕ್ಷಣ ಪದ್ಧತಿಯನ್ನೇ ಮೆಚ್ಚುವವರಿದ್ದಾರೆ. ಸಿಸಿಇ ಮೂಲಕ ಚಟುವಟಿಕೆಗಳ ನೆಪದಲ್ಲಿ ವಿದ್ಯಾವಂತ ದಡ್ಡರನ್ನು ಸೃಷ್ಟಿಸುವ ಕಾರ್ಯ ಈಗ ಭರಪೂರ ನಡೆಯುತ್ತಿದೆ. ಹಿಂದೆ ತ್ತೈಮಾಸಿಕ ಶಿಕ್ಷಣ ಪದ್ಧತಿ ಜಾರಿಗೆ ಬಂದಾಗ ಅದನ್ನು ಅನಂತಮೂರ್ತಿ ಬೆಂಬಲಿಸಿದ್ದರು. ಶಿಕ್ಷಣಭೀಷ್ಮ ಎಂದೇ ಚಿರಮಾನ್ಯರಾದ ವೃಂದಾವನಸ್ಥ ಶ್ರೀ ಅದಮಾರು ಮಠದ ವಿಬುಧೇಶ ಶ್ರೀಗಳು “ನೀವು ಈ  ಪದ್ಧತಿಯನ್ನು ಬೆಂಬಲಿಸುತ್ತೀರಾ?’ ಎಂದು ನನ್ನಲ್ಲಿ ಕೇಳಿದಾಗ, “ಅನಂತಮೂರ್ತಿಯಂಥವರೇ ಬೆಂಬಲಿಸುತ್ತಿದ್ದಾರೆ. ನಾನೇನು ಮಹಾ’ ಅಂತ ಹೇಳಿದೆ. ಆಗವರು “ಇನ್ನೊಬ್ಬ ಅನಂತಮೂರ್ತಿ ತಯಾರಾಗಬಾರದು ಎಂಬ ಹಿನ್ನೆಲೆಯಲ್ಲಿ ಅನಂತಮೂರ್ತಿ ಇದನ್ನು ಬೆಂಬಲಿಸುತ್ತಿರಬಹುದು’ ಎಂದಿದ್ದರು.  ಹಾಗಂತ ಅನಂತಮೂರ್ತಿ ಓದಿದ್ದು ತ್ತೈಮಾಸಿಕ 
ಶಿಕ್ಷಣ ಪದ್ಧತಿಯಲ್ಲಲ್ಲ. 

ಶ್ಲೋಕಗಳನ್ನು, ಸೂಕ್ತಿಗಳನ್ನು, ಕಗ್ಗವನ್ನು, ತ್ರಿಪದಿಗಳನ್ನು, ಪದ್ಯವನ್ನು, ಗಣಿತದ ಸಿದ್ಧಾಂತ-ಸೂತ್ರಗಳನ್ನು, ವರ್ಷಗಳನ್ನು, ಗುಣ ಲಕ್ಷಣಗಳನ್ನು, ಯುದ್ಧದ ವಿವರಗಳನ್ನು, ವ್ಯಕ್ತಿ ವಿವರಗಳನ್ನೆಲ್ಲ ಬಾಯಿಪಾಠ ಮಾಡಲೇಬೇಕು. ಇವುಗಳನ್ನೆಲ್ಲಾ ಅರ್ಥ ಮಾಡಿಕೊಂಡು ಬೇರೆ ಕ್ರಮದಲ್ಲಿ ಬರೆಯಲಾಗದು; ಬರೆಯಲೂ ಬಾರದು. ಒಬ್ಬೊಬ್ಬ ಮಂತ್ರಿಗಳು ಬಂದು ಒಂದೊಂದು ಶಿಕ್ಷಣ ಪದ್ಧತಿಯನ್ನು, ಪಠ್ಯಕ್ರಮವನ್ನು ಜಾರಿಗೊಳಿಸಿದರೆ ಮಕ್ಕಳ ಕಲಿಕೆಯಲ್ಲಿ ಏರುಪೇರಾಗುವುದಿಲ್ಲವೇ?  

ಸರಕಾರಿ ಶಾಲೆಗಳನ್ನು ಉನ್ನತೀಕರಿಸಬೇಕಿದೆ. ಮುಖ್ಯವಾಗಿ ಬೋಧನೆ ಮತ್ತು ಕಲಿಕೆಯು ಹೆಚ್ಚು ಕ್ರಿಯಾಶೀಲವಾಗಬೇಕಿದೆ. ಜೀವನ ಮೌಲ್ಯಗಳನ್ನು  ಮಕ್ಕಳಿಗೆ ಕಲಿಸಬೇಕಿದೆ. ಶಿಕ್ಷಕರಿಗೆ ಬೋಧನೆಗೆ ಸಂಬಂಧಿಸಿದ ಹೊಸ ವಿಧಾನಗಳು, ತರಗತಿ ನಿರ್ವಹಣೆ, ಕಲಿಕೆಯಲ್ಲಿ ಹಿಂದುಳಿದವರಿಗಾಗಿ ಅನುಸರಿಸಬೇಕಾದ ರಚನಾತ್ಮಕ‌ ವಿಧಾನವನ್ನು ವ್ಯವಸ್ಥೆ ಮಾಡಬೇಕಿದೆ. ಪ್ರತಿ ಮಗುವೂ ಉತ್ಸಾಹ, ಚೈತನ್ಯವನ್ನು ಉಳಿಸಿಕೊಂಡೇ ಶಾಲೆಗೆ ಬರುವಂತೆ ಶೈಕ್ಷಣಿಕ ನೀತಿಯಲ್ಲಿ ಬದಲಾವಣೆಗಳಾಗಬೇಕು. 

ಶಿಕ್ಷಣ ಕ್ಷೇತ್ರದಲ್ಲಿ ವ್ಯಕ್ತಿಯವಲಂಬಿತ ವ್ಯವಸ್ಥೆಯನ್ನು ಬದಲಾಯಿ ಸಬೇಕಿದೆ. ವಿದ್ಯಾಲಯಗಳ ಶೈಕ್ಷಣಿಕ ಸಂಗತಿಗಳನ್ನು ಅಲಿಖೀತ ನಿಯಮಗಳನ್ನು ನಿರ್ಧರಿಸುವ ಚರ್ಚೆಗಳು ಮುಖ್ಯಸ್ಥನನ್ನೇ ಅವಲಂಬಿಸಿರುತ್ತವೆ. ಹೆಡ್‌ ಮಾಸ್ತರರು, ಬಿಇಓ, ಡಿಡಿಪಿಐ ಒಳ್ಳೆಯವರೋ ಕೆಟ್ಟವರೋ? ದಕ್ಷರೋ ಅದಕ್ಷರೋ? ಹಿಂದೆ ಕಾರ್ಯ ನಿರ್ವಹಿಸಿದ ವ್ಯಕ್ತಿಗಳೊಂದಿಗೆ ಹೋಲಿಕೆ ಮಾಡಿ ಪ್ರಸಕ್ತ ವ್ಯವಸ್ಥೆಯನ್ನು ಅಳತೆ ಮಾಡುವುದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷವಲ್ಲದೆ ಇನ್ನೇನು? ಯಾರೇ ಅಧಿಕಾರಕ್ಕೆ ಬಂದರೂ ವಿದ್ಯಾಲಯಗಳ ನಿರ್ವಹಣೆಗೆ ರಚನೆಗೊಂಡ ನಿಯಮಗಳಂತೆ ಕಾರ್ಯನಿರ್ವಹಿಸಬೇಕು. ನಿಯಮಗಳು ವ್ಯಕ್ತಿಯಾಧಾರಿತ ಆಗುವುದಕ್ಕೆ ಆಸ್ಪದವಾಗಲೀ ಅವಕಾಶವಾಗಲೀ ನೀಡಬಾರದು. ಸರಕಾರಿ ಶಾಲೆಗಳಿಗಿಂತ ಖಾಸಗಿ ವಿದ್ಯಾಲಯಗಳಲ್ಲಿ ಶೈಕ್ಷಣಿಕ ನಿರ್ವಹಣೆಯ ನಿಯಮಗಳು ವ್ಯಕ್ತಿ ಕೇಂದ್ರಿತವಾಗಿರುತ್ತದೆ. ಅದರಿಂದಾಗಿ ಅಲ್ಲಿ ಬಾಸಿಸಂ ಇರುತ್ತದೆ. ಅಂಥ ವಿದ್ಯಾಲಯಗಳು ಅವನತಿ ವ್ಯಕ್ತಿಯವಲಂಬಿತ ವ್ಯವಸ್ಥೆಯಿಂದಾಗಿಯೇ ಆಗುತ್ತದೆ. ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ನಿಯಮಗಳು ವ್ಯಕ್ತಿ ಕೇಂದ್ರಿತ ಆಗಿರುವುದಿಲ್ಲ. ಆದರೆ ಮೇಲಧಿಕಾರಿಗಳಿಗೆ ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬ ಕುಯುಕ್ತಿಯಿರುವುದರಿಂದ ಅಲ್ಲಿ ಅವ್ಯವಸ್ಥೆ, ಕೊರತೆ, ನಿಯಮ ಉಲ್ಲಂಘನೆ, ಹೆರಾಸ್‌ಮೆಂಟ್‌, ಭ್ರಷ್ಟಾಚಾರಕ್ಕೆ ಅವಕಾಶಗಳು ವಿಪುಲವಾಗಿರುತ್ತವೆ. ಇವೆಲ್ಲವನ್ನೂ ನಿಯಂತ್ರಿಸುವ ನಿಯಮಗಳನ್ನೊಳಗೊಂಡ ಸುವ್ಯವಸ್ಥೆ ಜಾರಿ ಆಗಬೇಕಿದೆ. ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ನಿಯಂತ್ರಿ ಸುವಂಥ ವ್ಯವಸ್ಥೆಯಿಂದ ಅನಪೇಕ್ಷಿತ ಬೆಳವಣಿಗೆಗಳು ಆಗುತ್ತವೆ. ಬೋಧನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ವಸ್ಥ ಮನಸ್ಸು, ನಿರ್ಭಯದಿಂದ ಶಿಕ್ಷಕರು ತರಗತಿಗೆ ಪ್ರವೇಶಿಸಬೇಕು. ವೃತ್ತಿ ಸಂಬಂಧಿತ ಯಾವ ಭಯವೂ ಶಿಕ್ಷಕರನ್ನು ಕಾಡಬಾರದು. 

ರಾಷ್ಟ್ರಹಿತ-ಪ್ರೇಮವನ್ನು, ರಾಷ್ಟ್ರ ಸಂಸ್ಕೃತಿ-ಪರಂಪರೆಯನ್ನು ಅರ್ಥಮಾಡಿಕೊಳ್ಳಬಲ್ಲ ಯೋಗ್ಯ ನಾಗರಿಕರನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗುವ ರೀತಿಯಲ್ಲಿ ಪ್ರಾಥಮಿಕ ಹಂತದ ಪಠ್ಯಗಳು ರಚನೆಯಾಗಬೇಕು. ಧಾರ್ಮಿಕ ಸೌಹಾರ್ದತೆ, ನಿಷ್ಠೆ, ಶ್ರಮಗೌರವ, ತ್ಯಾಗ, ಬದ್ಧತೆಗಳನ್ನು ಎಳವೆಯಲ್ಲೇ ರೂಢಿಸಬೇಕಾಗಿದೆ. ಶಾಲೆಯಲ್ಲಿ ಕಲಿಸಿದ್ದನ್ನು ಹೊರತುಪಡಿಸಿ ಸ್ವಾಸಕ್ತಿಯಿಂದ ವಿದ್ಯಾರ್ಥಿಗಳು ಕಲಿಯುವಂತೆ ಮಾಡಬೇಕಿದೆ. ಕೆಟ್ಟದ್ದರಿಂದ ಮಕ್ಕಳನ್ನು ಪಾರುಮಾಡಬೇಕಾದ ಜವಾಬ್ದಾರಿ ಅನೌಪಚಾರಿಕ ಶಿಕ್ಷಣದಿಂದಾಗಬೇಕಿದೆ. ಇವುಗಳನ್ನು ಸಾಧಿಸಲು ತಕ್ಕಮಟ್ಟಿಗಾದರೂ ಸಾಧ್ಯವಾಗುವಂತೆ ಶೈಕ್ಷಣಿಕ ನೀತಿನಿಯಮಗಳು ರೂಪಿತ ವಾಗಬೇಕು. ಭೌತಿಕ ಮತ್ತು ವ್ಯಾವಹಾರಿಕ ಶಿಕ್ಷಣದಿಂದ ಸಾಧಿಸಬ ಹುದಾದ ಆರ್ಥಿಕ ಪ್ರಗತಿಯ ಬೆಳವಣಿಗೆಯನ್ನು ಗುರುಕುಲ ಮಾದರಿಯ ಶಿಕ್ಷಣದಿಂದ ಸಾಧಿಸಲು ಸಾಧ್ಯವಾಗದೇ ಇರುವುದರಿಂದ ವರ್ತಮಾನದ ಶಿಕ್ಷಣ ವ್ಯವಸ್ಥೆ ಪೂರ್ತಿಯಾಗಿ ಜೀವನ ಮೌಲ್ಯಗಳಾದ ಜ್ಞಾನಾರ್ಜನೆ, ಸಮೃದ್ಧತೆ, ಬದ್ಧತೆಯನ್ನು ಮಕ್ಕಳಿಗೆ ನೀಡಲು ಅಸಮರ್ಥವಾಗಿದೆ.

ಉದ್ಯೋಗದಲ್ಲಿ ಹೆಚ್ಚು ಆದಾಯ ಗಳಿಸುವ, ಆದರೆ ವೃತ್ತಿಬದ್ಧತೆಯಿಲ್ಲದ, ರಾಜಕೀಯದಲ್ಲಿ ಸಾಮಾಜಿಕ ಬದ್ಧತೆಯಿಲ್ಲದ ಆಕೃತಿಗಳೇ ಎಲ್ಲೆಲ್ಲೂ ಆವರಿಸಿಕೊಂಡಿರುವುದರಿಂದ ಶಿಕ್ಷಣ ಕ್ಷೇತ್ರವೂ ಮಲಿನವಾಗಿದೆ. ಯಾವ ಮಾರ್ಗದಲ್ಲಾದರೂ ಸರಿ ಹಣ ಮಾಡಬೇಕೆಂಬ ದುರಾಸೆ ಶಿಕ್ಷಣ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ. ಶಿಕ್ಷಣ ಕ್ಷೇತ್ರವೊಂದು ಹೊಂದಿರಬಹುದಾದ ಶೀಲವೇ ರಾಷ್ಟ್ರದ ಶೀಲವಾಗಿರುತ್ತದೆಂಬ ಪ್ರಜ್ಞೆ ಜನತೆಯಲ್ಲಿಲ್ಲ. ಇವೆಲ್ಲ ರಾಷ್ಟ್ರೀಯ ದುರಂತಗಳಾಗಿಯೂ ನಮಗೆ ಕಾಣಿಸುವುದಿಲ್ಲ. ಶಿಕ್ಷಣ ವ್ಯವಸ್ಥೆಯ ನಿಯಮಗಳಿಂದಾದ ದುರಂತವಿದು. ವ್ಯಾವಹಾರಿಕ ಶಿಕ್ಷಣ ಹುಟ್ಟಿಸಿದ ವಿಷವಿದು. ಜೀವನ ಮೌಲ್ಯಗಳು ಶೈಕ್ಷಣಿಕ ಪಠ್ಯನಿರ್ಮಿತಿಯಲ್ಲಿದ್ದರೂ ಶೈಕ್ಷಣಿಕ ನಿಯಮಗಳಲ್ಲಿ ಮೌಲ್ಯಗಳ ಶ್ರದ್ಧೆಯಿಲ್ಲದೆ ಹೋದರೆ ಎಲ್ಲವೂ ಬಾಯಿಮಾತಿಗಷ್ಟೇ ಸೀಮಿತವಾಗಿಬಿಡುತ್ತದೆ. ಗಾಂಧಿ ಜಯಂತಿಯಂದು ಒಬ್ಬ ರಾಜಕಾರಣಿ ವೇದಿಕೆಯಲ್ಲಿ ಆಡುವ ಗಾಂಧಿ ಜೀವನದ ಮೌಲ್ಯಗಳಲ್ಲಿ ಒಂದೂ ಮೌಲ್ಯವೂ ಅವನ ಬದುಕಿನಲ್ಲಿ ಇಲ್ಲದೇ ಹೋದರೆ ಅವನಾಡುವ ಮಾತುಗಳು ಸಮಾಜದ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಹಾಗೆಯೇ ಪಠ್ಯಗಳಲ್ಲಿ ಅಡಕವಾಗಿರುವ ಮೌಲ್ಯಗಳು ಮಕ್ಕಳಲ್ಲಿ ಯಾವ ಪರಿಣಾಮವನ್ನೂ ಸೃಜಿಸುವುದಿಲ್ಲ. ಯಾವುದೂ ಮಕ್ಕಳ ವರ್ತನೆಯ ಮೇಲೆ ಪ್ರಭಾವ ಬೀರಲಾರದು. “ಎಂಥಾ ಕೊರೀತಾರೆ ಮಾರಾಯಾ’ ಎಂದು ಮಕ್ಕಳು ಹೇಳುತ್ತಾರೆಂದರೆ ನಮ್ಮ ಪಠ್ಯಗಳು ಯಾವ ಪರಿವರ್ತನೆ ನೀಡಲು ಸಾಧ್ಯವಿದೆ? ಶಿಕ್ಷಣವು ಅಂತರಂಗದ ಅರಿವನ್ನು ವಿಸ್ತರಿಸಲು ಅಸಮರ್ಥವಾಗಿದೆಯೇ? ಅಂತರ್ಮುಖೀಯಾಗಿ ಯೋಚಿಸುವುದನ್ನು ಕಲಿಸುವುದಿಲ್ಲವೇಕೆ? ಜೀವನಮೌಲ್ಯಗಳನ್ನು ಬೆಳೆಸಲಾರದೆ? ಯಾಕೆ ಹೀಗಾಗುತ್ತಿದೆ? ನಾವು ಹಳಿ ತಪ್ಪಿದ್ದೆಲ್ಲಿ? ಹಿಂದೆಲ್ಲ ನಮ್ಮ ಶಿಕ್ಷಕರು ನಮ್ಮೂರಿನವರು ಅಥವಾ ಪಕ್ಕದೂರಿನವರೇ ಆಗಿರುತ್ತಿದ್ದರು. ಶಾಲೆಯ ಹೊರಗೂ ಅವರು ನಮಗೆ ಶಿಕ್ಷಕರಾಗೇ ಇರುತ್ತಿದ್ದರು. ಎಲ್ಲೆಡೆಯೂ ನಾವು ವಿದ್ಯಾರ್ಥಿಗಳಾಗಿಯೇ ಇರಬೇಕಿತ್ತು. ನಾವೇನೇ ಮಾಡಿದರೂ ಶಾಲೆಯಿಂದಲೂ ಸಮಾಜದಿಂದಲೂ ಹೊರತಾಗಿರಲು ಸಾಧ್ಯವಿರಲಿಲ್ಲ. 

ಈ ನಿಯಂತ್ರಣದಿಂದಾಗಿ ನಮ್ಮ ವರ್ತನೆಯಲ್ಲಿ ಅನಪೇಕ್ಷಿತ ಬೆಳವಣಿಗೆಗಳಾಗುತ್ತಿರಲಿಲ್ಲ. ಶಿಕ್ಷಕರನ್ನು ಅಪಾರ ಪ್ರೀತಿ, ವಿಶ್ವಾಸ ಮತ್ತು ಗೌರವದೊಂದಿಗೆ ಕಾಣುತ್ತಿದ್ದ ವಾತಾವರಣದಲ್ಲಿ ಶಿಕ್ಷಕರು, ಶಾಲೆ, ಸಮಾಜದ ಬಗ್ಗೆ ಒಂದು ರೀತಿಯ ಆರೋಗ್ಯಯುತವಾದ ಭಯ ನಮ್ಮಲ್ಲಿತ್ತು. ಆಡಳಿತಾತ್ಮಕ ಕಿರಿಕಿರಿಗಳು ಮತ್ತು  ಹಿಂಸೆಗಳು ಈಗಿನಂತಿರಲಿಲ್ಲ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವಂಥ ವಾತಾವರಣ ಮೂಡಬೇಕು. ತರಗತಿಗೆ ಹೋಗುವುದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಹೆಚ್ಚು ಶ್ರಮವಹಿಸುವಂತೆ ನಿಯಮಗಳು ರಚನೆಯಾಗಬೇಕು. ಉಳಿದೆಲ್ಲ ಕೆಲಸ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ ಹೆಚ್ಚು ಅವಧಿಯನ್ನು ತರಗತಿಯಲ್ಲಿ ಮಕ್ಕಳೊಂದಿಗೆ ಕಳೆಯುವಂತೆ ಶಾಲಾವಧಿಯಿರಬೇಕಾಗಿದೆ. ಆಕರ ಪುಸ್ತಕಗಳನ್ನು ಒದಗಿಸುವುದರ ಮೂಲಕ ಬೋಧನೆ ಚೆನ್ನಾಗಿ ಆಗುವಂತೆ ಮಾಡಬೇಕಿದೆ. 

ಹಿಂದೆಲ್ಲಾ ಕಡಿಮೆ ಸಂಬಳವಿದ್ದರೂ ಶಿಕ್ಷಕರಲ್ಲಿ ಕಮಿಟ್‌ಮೆಂಟ್‌ ಇತ್ತು. ಆರ್ಥಿಕ ಕೊರತೆಯಿದ್ದರೂ ಸಮಾಜ ತೋರುವ ಪ್ರೀತಿ ವಿಶ್ವಾಸದ ಭಾವನಾತ್ಮಕ ಸಂಬಂಧದಲ್ಲಿ ಅವರಿಗೆ ಭದ್ರತೆಯಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಶಿಕ್ಷಕನೊಬ್ಬನ ಸಂಬಳದ ಬಗ್ಗೆ ಬಹಿರಂಗವಾಗಿ ಮಾತಾಡುವಷ್ಟರ ಮಟ್ಟಿಗೆ ಸಮಾಜ ಮುಂದುವರಿದಿದೆ. ಬದುಕುವುದಕ್ಕೆ ಪಡೆಯುವ ಸಂಬಳ ಸಾಕಾಗದೇ ಟ್ಯೂಷನ್‌ ಆರಂಭಿಸಿದವರಿ¨ªಾರೆ. ಸರಕಾರಿ ಶಿಕ್ಷಕರೇ ತರಗತಿಯಲ್ಲಿ ಮಾಡುವ ಪಾಠಗಳನ್ನು ತಮ್ಮ ಟ್ಯೂಷನ್‌ಗಳಲ್ಲಿ ಚೆನ್ನಾಗಿ ಮಾಡುತ್ತಾರೆ. ಖಾಸಗಿ ವಲಯದಲ್ಲೂ ಇದು ನಡೆಯುತ್ತಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನವನ್ನು ನಾಮಕಾವಾಸ್ಥೆಗೆ ಮಾಡಿ ತಮ್ಮ ಟ್ಯೂಷನ್‌ಗಳಲ್ಲಿ ಹಣ ಪಡೆಯುವುದರೊಂದಿಗೆ ಸರಿಯಾದ ಮೌಲ್ಯಮಾಪನ ಮಾಡುವ ಒಂದು ವ್ಯವಸ್ಥಿತ ಜಾಲವಿದೆ. ಪ್ರಶ್ನೆಪತ್ರಿಕೆಗಳು ಲೀಕ್‌ ಆಗುವುದು, ಯಾವುದೋ ಆರ್ಗನೈಸೇಶನ್‌ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯೇ ಪರೀಕ್ಷೆಯಲ್ಲೂ ಬರುವುದು- ಇವೆಲ್ಲ ವ್ಯವಸ್ಥೆಯೊಳಗಿನ ದೌರ್ಬಲ್ಯಗಳಲ್ಲವೆ? ಇಂಥವುಗಳನ್ನು ನೂತನ ಮಂತ್ರಿಗಳು ನಿಯಂತ್ರಿಸಬೇಕಾಗಿದೆ.

ತೆರೆದ ಪುಸ್ತಕ ಪರೀಕ್ಷೆಯು ಆರಂಭದ ಹಂತದಲ್ಲೇ ಕಲಿಕೆಯ ಗಾಂಭೀರ್ಯವನ್ನೇ ಕಳೆದುಕೊಳ್ಳಬಹುದೆಂಬ ಭಯ ಮೂಡಿಸುವಂಥದ್ದು. ಇಡೀ ವರ್ಷ ಓದಿರುವುದನ್ನು ಕೇವಲ 3 ಗಂಟೆಗಳ ಅವಧಿಯಲ್ಲಿ ನೆನಪಲ್ಲಿರುವಷ್ಟು ಬರೆದ ಮಾತ್ರಕ್ಕೆ ಯಾರನ್ನೂ ಸಂಪೂರ್ಣವಾಗಿ ಮೌಲ್ಯಮಾಪನ ಮಾಡಿದಂತೆ 
ಆಗುವುದಿಲ್ಲ. ವರ್ಷವಿಡೀ ಕಲಿಕೆಯ ಜೊತೆಗೆ ಮೌಲ್ಯಮಾಪನವೂ ನಡೆಯಬೇಕು. ಹೆಚ್ಚು ಸಂಬಳ ಪಡೆಯುವ ಉದ್ಯೋಗಕ್ಕೆ ಮಕ್ಕಳನ್ನು ತಯಾರು ಮಾಡುವ ಮನೋಭಾವ ಶೈಕ್ಷಣಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಮುಖ್ಯವಾಗುವುದು ಆರ್ಥಿಕತೆಯನ್ನಾಧರಿಸಿ. ಈ ಸ್ಥಿತಿ ಬದಲಾಗಬೇಕಿದೆ. ಇಂಥ ಮನಸ್ಥಿತಿಯಿಂದಾಗಿಯೇ ಕಾಲೇಜು, ಉನ್ನತ ಮಟ್ಟದ ಅಧ್ಯಯನ ಮಾಡುತ್ತಿರುವವರಿಗೆ ದೇಶ, ಭಾಷೆ, ಸಂಸ್ಕೃತಿ, ವರ್ತಮಾನದ ಬಗ್ಗೆ ಯಾವ ಸಾಮಾನ್ಯ ಅರಿವೂ ಇಲ್ಲದೆ ಮೊಬೈಲ್‌, ಕಂಪ್ಯೂಟರ್‌, ವಾಟ್ಸಾಪ್‌, ಫೇಸ್‌ಬುಕ್‌, ಸೆಲ್ಫಿ, ಲವ್‌, ಸಿನೆಮಾ ಅಂತ ತಮ್ಮದೇ ಲೋಕದಲ್ಲಿ ಮುಳುಗಿಕೊಂಡಿರುವ ಯುವಜನತೆಯನ್ನು ನೋಡಿದರೆ ನಮ್ಮ ಶಿಕ್ಷಣದ ನೀತಿಗಳು, ಪರಿಕಲ್ಪನೆಗಳ ಮೌಲ್ಯಗಳು ಹಳಿತಪ್ಪಿದೆಯೆನಿಸುತ್ತಿದೆ ಅಥವಾ ಸಾಮಾಜಿಕ ಮೌಲ್ಯಗಳು ಅಧಃಪತನಗೊಂಡಿವೆಯೇ? ವ್ಯಕ್ತಿ, ಕುಟುಂಬ, ಸಮಾಜದ ಮೌಲ್ಯಗಳು ನಿರ್ಜೀವವಾಗಿವೆಯೇ? ಯಾಕೆ ಹೀಗೆ ಆಗುತ್ತಿದೆ? ಎಲ್ಲರೂ ಚಿಂತಿಸಬೇಕಿದೆ.            

ಟಿ. ದೇವಿದಾಸ್‌

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.