CONNECT WITH US  

ಚಪ್ಲಿಗೆ ಚುಚ್ಚಿದ‌ ಪಿನ್ನು ಹೃದಯ ಮೀಟಿತು

ಹತ್ತೇ ಹತ್ತು ನಿಮಿಷ ಕಷ್ಟಪಟ್ಟು, "ಸಂಪಾದನೆ' ಆಯ್ತು ಅಂದೊRಂಡು ಓಡುವ ನಿಮಗೇ ಆ ಒಡವೆ ಮೇಲೆ ಅಷ್ಟೊಂದು ಆಸೆ ಇರುವಾಗ, ಎಷ್ಟೋ ವರ್ಷಗಳ ಕಾಲ ಪೈಸೆಗೆ ಪೈಸೆ ಕೂಡಿಸಿ, ಕನಸು ಈಡೇರಿಸಿಕೊಂಡವರಿಗೆ ಎಷ್ಟೆಲ್ಲಾ ಮೋಹ ಇರುತ್ತದೋ ಲೆಕ್ಕ ಹಾಕಿ. ಯಾವತ್ತೂ ಅಷ್ಟೆ. ನೀವು ಒಳ್ಳೇದು ಮಾಡಿದ್ರೆ ನಿಮಗೂ ಒಳ್ಳೆಯದೇ ಆಗುತ್ತೆ. ನೀವು ಒಬ್ಬರ ಬದುಕಿಗೆ ಕತ್ತರಿ ಹಾಕಿದ್ರೆ, ನಾಳೆ ನಿಮ್ಮ ಕುತ್ತಿಗೆಗೇ ಕತ್ತರಿ ಬೀಳುತ್ತೆ. ಜೀವ° ಇಷ್ಟೇನೇ, ಅರ್ಥವಾಯ್ತಾ?. ಈ ಸಲ ಕ್ಷಮಿಸ್ತೀನಿ. ಇನ್ಮೆಲಾದ್ರೂ ದುಡ್ಕೊಂಡು ತಿನ್ನಿ..

"ಅಮ್ಮ ವರ್ಷಪೂರ್ತಿ ಊರಲ್ಲೇ ಇರ್ತಾಳೆ. ಎರಡು ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ಹತ್ತಿರದ ದೇವಸ್ಥಾನಕ್ಕೋ, ಜಾತ್ರೆಗೋ ಹೋಗಿಬಂದರೆ, ಅದೇ ಅವಳ ಪಾಲಿನ ಪಿಕ್ನಿಕ್ಕು, ಟ್ರಿಪ್ಪು. ವಾರಕ್ಕೊಮ್ಮೆ ಸಂತೆಗೂ ಹೋಗ್ತಾಳೆ ನಿಜ.ಆದರೆ, ಅಲ್ಲಿ ತನಗಾಗಿ ಏನನ್ನೂ ತಗೊಳ್ಳೋದಿಲ್ಲ. ಇಂಥ ಅಮ್ಮ, ಅಪರೂಪಕ್ಕೆ ಬೆಂಗಳೂರಿಗೆ ಬಂದಿದ್ದಾಳೆ. ಇವತ್ತು ಸಂಜೆ ಅಮ್ಮನ ಜೊತೆ ಮಕ್ಕಳನ್ನೂ ಕರ್ಕೊಂಡು ಯಾವುದಾದ್ರೂ ಮಾಲ್‌ಗೆ ಹೋಗು. ಅಲ್ಲೆಲ್ಲಾ ಸ್ವಲ್ಪ ಸುತ್ತಾಡಿಸು. ಅವಳ ಚಪ್ಪಲಿ ಸವೆದು ಹೋಗಿದೆ. ಒಳ್ಳೇ ಬ್ರಾಂಡ್‌ದು ಎರಡು ಜೊತೆ ಚಪ್ಲಿ ತೆಗೆದುಕೊಡು. ನಂತರ, ಅಲ್ಲೇ ಯಾವಾªದ್ರೂ ಹೋಟೆಲಲ್ಲಿ ತಿಂಡಿ ತಿಂದು ಬನ್ನಿ. ಹೀಗೆ ಮಾಡಿದ್ರೆ, ಅಮ್ಮನಿಗೆ ನಿಜಕ್ಕೂ ಖುಷಿಯಾಗುತ್ತೆ. ಎಟಿಎಂ ಕಾರ್ಡ್‌ ಹೇಗಿದ್ರೂ ನಿನ್ನ ಹತ್ರಾನೇ ಇದೆಯಲ್ಲ; ಅಗತ್ಯ ಇರುವಷ್ಟು ದುಡ್ಡು ತಗೋ... ಗೊತ್ತಾಯ್ತಾ ಕಮಲಾ...' ರುದ್ರೇಶ ಹೇಳುತ್ತಲೇ ಇದ್ದ.

"ರ್ರೀ... ಸ್ವಲ್ಪ ಇಲ್ಲಿ ಕೇಳಿ. ಮನೇಲಿ ನಾಲ್ಕು ಜನ ಮಾಡಿದ್ರೂ ಮುಗಿಯದಷ್ಟು ಕೆಲ್ಸ ರಾಶಿ ಬಿದ್ದಿದೆ. ವಾಟರ್‌ ಬಿಲ್‌ ಕಟ್ಟಬೇಕು, ಬಾತ್‌ರೂಮ್‌ನಲ್ಲಿ ನೀರು ಸೋರುತ್ತಿದೆ. ಆ ನಲ್ಲಿ ರಿಪೇರಿ ಮಾಡಿಸ್ಬೇಕು, ಮಕ್ಕಳಿಗೆ ಮಂತ್ಲೀ ಟೆಸ್ಟ್‌ ಇದೆ. ಅವರನ್ನು ಈಗಿಂದೆÉà ರೆಡಿ ಮಾಡಬೇಕು, ಉಫ್...ಒಂದಾ ಎರಡಾ? ನಿಮಗೆ ಹೇಗೆ ಗೊತ್ತಾಗ್ಬೇಕು ಇದೆಲ್ಲಾ? ಮಾಲ್‌ಗೆ ಹೋಗ್ತೀವೆ ಅಂದೊRಳ್ಳಿ, ಒಬ್ಬೊಬ್ಬರಿಗೆ ಬಸ್‌ ಚಾರ್ಜ್‌ಗೇ 100 ರೂಪಾಯಿ ಆಗುತ್ತೆ. ಸುಮ್ನೆà ಹೋಗಿ ಬಂದ್ರೂ ಒಂದಾÕವ್ರ ಗೋವಿಂದ. ಅಲ್ಲಾರೀ, ಬರೀ ಚಪ್ಲಿ ತಗೊಳ್ಳೋಕೆ ಅಷ್ಟು ದೂರ ಹೋಗ್ಬೇಕಾ? ಊರ ಹತ್ರ ಸಂತೆ ಆಗುತ್ತಲ್ಲ; ಅಲ್ಲಿ ಸಿಗಲ್ವೇನ್ರೀ? ಹಳ್ಳಿ ಜನರೆಲ್ಲಾ ಬೆಂಗ್ಳೂರಿಗೆ ಬಂದೇ ತಗೊಂಡು ಹೋಗ್ತಾರ? ಹೀಗೆ ಬೇಕಾಬಿಟ್ಟಿ ಖರ್ಚು ಮಾಡೋಕೆ ನಿಮ್ಗೆ ತಲೆ ಓಡುತ್ತೆ. ಒಂದು ಸೀರೆ ಚೀಟಿನೋ, ಗೋಲ್ಡ್‌ ಪರ್ಚೇಸ್‌ಗೊà ಚೀಟಿ ಹಾಕೋಕೆ ಮನಸ್ಸು ಬರಲ್ಲ. ಮಕ್ಳು ಬೆಳೀತಾ ಇದ್ದಾರೆ. ಯಾರ್ಯಾರಿಗೋ ದಾನ ಮಾಡುವ ಬದಲು ಮಕ್ಕಳ ಹೆಸರಲ್ಲಿ ಸ್ವಲ್ಪ ಉಳಿತಾಯ ಮಾಡಿ. ಈಗ್ಲೆà ಹೇಳ್ತಿದೀನಿ. ಸಂಜೆ ಮಾಲ್‌ಗೆ ಹೋಗಲು ನನ್ನಿಂದ ಸಾಧ್ಯವೇ ಇಲ್ಲ' - ಕಮಲಾ, ಒರಟಾಗಿಯೇ ಹೇಳಿಬಿಟ್ಟಿದ್ದಳು.

ಅರಸೀಕೆರೆಗೆ ಸಮೀಪದ ಹಳ್ಳಿಯವನು ರುದ್ರೇಶ. ಅವನಿಗೆ ಪ್ರ„ವೇಟ್‌ ಕಂಪನಿಯಲ್ಲಿ ಕೆಲಸವಿತ್ತು. ಕೆಲಸಕ್ಕೆ ಸೇರಿದಾಗ, ಅಮ್ಮನನ್ನು ತನ್ನೊಂದಿಗೇ ಉಳಿಸಿಕೊಳ್ಳಬೇಕು ಎಂದೆಲ್ಲಾ ಅವನು ಕನಸು ಕಂಡಿದ್ದ. ಆದರೆ, ಅತ್ತೆ-ಸೊಸೆಗೆ ಹೊಂದಾಣಿಕೆ ಆಗಿರಲಿಲ್ಲ. "ಗಂಡ-ಮಕ್ಕಳು' -ಇಷ್ಟೇ ನನ್ನ ಪ್ರಪಂಚ. ಮಿಕ್ಕವರೆಲ್ಲಾ ಬೆಳಗ್ಗೆ ಬರ್ಬೇಕು, ಸಂಜೆ ಹೋಗಿಬಿಡಬೇಕು. ಮಧ್ಯಾಹ್ನವೇ ಹೋಗಿಬಿಟ್ರೆ... ಇನ್ನೂ ಒಳ್ಳೆಯದು. ಹೀಗೆಲ್ಲಾ ಹೇಳಿಬಿಡುತ್ತಿದ್ದಳು ಕಮಲಾ. ರುದ್ರೇಶ ಇಂಥ ಮಾತುಗಳನ್ನೆಲ್ಲ ವಿರೋಧಿಸುತ್ತಿದ್ದ. ಒಂದೆರಡು ಬಾರಿ ಇದೇ ವಿಷಯಕ್ಕೆ ಜಗಳವೂ ಆಗಿ ಹೆಂಡತಿಗೆ ಎರಡೇಟು ಹಾಕಿಬಿಟ್ಟಿದ್ದ. ಆಗ ಅತ್ತು ರಂಪ ಮಾಡಿದ್ದ ಕಮಲಾ, ತವರುಮನೆಗೆ ಹೋಗಿಬಿಟ್ಟಿದ್ದಳು. "ನಿಮ್ಮ ಸಂಸಾರ ಮುಖ್ಯ ಕಣಪ್ಪಾ. ಮಕ್ಕಳಿಗೆ ಅಮ್ಮ ಇರಲೇಬೇಕು. ನಾನು ಊರಲ್ಲಿರಿ¤àನಿ. ನನ್ನ ಬಗ್ಗೆ ಯೋಚನೆ ಮಾಡ್ಬೇಡ. ಹೊಂದಾಣಿಕೆ ಮಾಡಿಕೊಂಡು ಇದಿºಡಪ್ಪ. ಯಾವತ್ತೂ ದುಡುಕಬೇಡ. ಕೋಪದ ಕೈಗೆ ಬುದ್ಧಿ ಕೊಡಬೇಡ...' ಎಂದೆಲ್ಲಾ ಮಗನಿಗೆ ಬುದ್ಧಿ ಹೇಳಿ, ರುದ್ರೇಶನ ತಾಯಿ ಊರಿಗೆ ಹೋಗಿಬಿಟ್ಟಿದ್ದರು. 

ಅಂಥ ಅಮ್ಮ, ವರ್ಷದ ನಂತರ ಬೆಂಗಳೂರಿಗೆ ಬಂದಾಗ, ಅವಳನ್ನು ಖುಷಿಪಡಿಸಬೇಕು, ಸಿಟಿಯ ಝಗಮಗವನ್ನು ಅವಳಿಗೆ ತೋರಿಸಬೇಕು. ಒಂದು ಸೀರೆ, ಒಂದು ಜೊತೆ ಚಪ್ಪಲಿ, ಒಂದಷ್ಟು ದುಡ್ಡು ಕೊಟ್ಟು ಊರಿಗೆ ಕಳಿಸಬೇಕು ಎಂದೆಲ್ಲಾ ರುದ್ರೇಶ್‌ ಯೋಚಿಸಿದ್ದ.

ಅಮ್ಮನನ್ನು ಸಂಜೆ ಮಾಲ್‌ಗೆ ಕರ್ಕೊಂಡು ಹೋಗು ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಲೆಕ್ಕಾಚಾರಗಳಿದ್ದವು. ಅಕಸ್ಮಾತ್‌, ಹೆಂಡತಿಯಿಂದ ನೆಗೆಟಿವ್‌ ಉತ್ತರ ಬಂದರೆ, ಅದನ್ನು ಕೇಳಿ ಅಮ್ಮನಿಗೆ ಬೇಸರ ಆಗಬಹುದು ಎಂದು ಊಹಿಸಿ, ಹಾಲು ತರಲೆಂದು ಆಕೆ ಅಂಗಡಿಗೆ ಹೋಗಿದ್ದಾಗಲೇ ರುದ್ರೇಶ್‌ ಮಾತನಾಡಿದ್ದ. ನಾನು ಹೋಗಲ್ಲ ಅಂದ್ಮೇಲೆ ಹೋಗಲ್ಲ ಅಷ್ಟೆ ಎಂದು ಕಡ್ಡಿ ಮುರಿದಂತೆ ಹೇಳುವ ಮೂಲಕ ಅವನ ಎಲ್ಲಾ ಆಸೆಗಳಿಗೂ ಕಮಲಾ ತಣ್ಣೀರು ಎರಚಿದಳು.

ಎರಡು ದಿನಗಳ ನಂತರ, ರುದ್ರೇಶ್‌ನ ತಾಯಿ ಊರಿಗೆ ಹೊರಟಾಗ, ರೈಲು ನಿಲ್ದಾಣಕ್ಕೆ ತಾನೂ ಹೋದಳು ಕಮಲಾ. ಅತ್ತೆಯನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನೆರೆಹೊರೆಯವರಿಗೆ ತೋರಿಸುವುದು ಹಾಗೂ ಗಂಡ ಗುಟ್ಟಾಗಿ ಅಮ್ಮನಿಗೆ ಹಣ ಕೊಡುವುದನ್ನು ತಡೆಯುವುದು, ಈ ನಡೆಯ ಹಿಂದಿನ ಉದ್ದೇಶವಾಗಿತ್ತು. ಅದು ರುದ್ರೇಶನಿಗೂ ಗೊತ್ತಾಗಿ, ಇಂಥ ನಡವಳಿಕೆ ಕಂಡಾಗಲೆಲ್ಲ, ನಡುರಸ್ತೆಯಲ್ಲೇ ನಿಲ್ಲಿಸಿ ಹೆಂಡತಿ ಕೆನ್ನೆಗೆ ಪೈಡ್‌ ಪೈಡ್‌ ಎಂದು ಬಾರಿಸಬೇಕು ಅನಿಸುತ್ತಿತ್ತು. ಉಹುಂ, ನಾನು ಅಷ್ಟೊಂದು ಅನಾಗರಿಕ ಆಗಬಾರದು ಎಂದು ತನ್ನನ್ನು ತಾನೇ ಸಮಾಧಾನಿಸಿಕೊಳ್ಳುತ್ತಿದ್ದ.

ಮಗನೊಂದಿಗೆ ಅದೂ ಇದೂ ಮಾತನಾಡುತ್ತ ನಿಧಾನಕ್ಕೆ ಹಳಿ ದಾಟುತ್ತಿದ್ದಳು ಅಮ್ಮ. ಆಗಲೇ ಒಂದು ಕಲ್ಲು ಎಡವಿ, ಪಟ್‌ ಎಂಬ ಸದ್ದಿನೊಂದಿಗೆ ಚಪ್ಪಲಿ ಕಿತ್ತುಹೋಯಿತು. ರೈಲು ಬರಲು 10 ನಿಮಿಷವಷ್ಟೇ ಬಾಕಿ ಉಳಿದಿತ್ತು. ಹೊರಡುವ ಅವಸರದಲ್ಲಿ ರುದ್ರೇಶ, ಅವತ್ತು ಜಾಸ್ತಿ ದುಡ್ಡನ್ನೂ ತಂದಿರಲಿಲ್ಲ. "ಅಯ್ಯಯ್ಯೋ, ಅಮ್ಮನ ಚಪ್ಪಲಿ ಕಿತ್ತುಹೋಯ್ತಲ್ಲ, ಏನ್‌ ಮಾಡೋದು?' ಎಂದು ಅವನು ಉದ್ಗರಿಸಿದ. ಕಮಲಾ ಮಾತಾಡಲಿಲ್ಲ. ಸಂದರ್ಭದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡ ಆ ತಾಯಿ, ತಕ್ಷಣವೇ ತಾಳಿ ಸರದೊಂದಿಗೆ ಜೋತು ಬಿದ್ದಿದ್ದ ಬಟ್ಟೆ ಪಿನ್‌ ತೆಗೆದು, ಅದನ್ನೇ ಆ ಚಪ್ಪಲಿಗೆ ಹಾಕಿಕೊಂಡು, "ಏನೂ ಆಗಲ್ಲ ನಡಿಯಪ್ಪ, ಇದಕ್ಕೆಲ್ಲ ಯಾಕೆ ತಲೆ ಕೆಡಿಸಿ ಕೊಳ್ತೀಯಾ? ಊರಿಗೆ ಹೋಗಿ ಹೊಸಾದು ತೆಗೊಳೆ¤àನೆ' ಎಂದುಬಿಟ್ಟಳು.

ಅವತ್ತು ಇಡೀ ದಿನ ರುದ್ರೇಶ ನಿಂತಲ್ಲಿ ನಿಲ್ಲಲಾಗದೆ ತತ್ತರಿಸಿಹೋದ. ಕಿತ್ತುಹೋದ ಚಪ್ಪಲಿ, ವಯಸ್ಸಾದ ಅಮ್ಮ, ಬಿರುಕು ಬಿಟ್ಟ ಪಾದದ ಚರ್ಮ, ಅದರಿಂದ ಆಗಿಂದಾಗ್ಗೆ ಹರಿಯುವ ರಕ್ತದ ಚಿತ್ರಗಳು ಮತ್ತೆ ಮತ್ತೆ ನೆನಪಾಗಿ ನಿಂತಲ್ಲೇ ನರಳಿದ. "ಮನಸ್ಸಿಗೆ ನೆಮ್ಮದಿ ಇಲ್ಲದ ಮೇಲೆ ಎಷ್ಟು ಸಂಪಾದನೆ ಇದ್ರೆ ಏನುಪಯೋಗ? ಈ ದರಿದ್ರ ಹೆಂಗಸಿಗೆ ಬುದ್ಧಿ ಬರೋದ್ಯಾವಾಗ? ಇನ್ನೂ ಎಷ್ಟು ವರ್ಷ ಇವಳ ಜೊತೆ ಹೀಗೆ ಹೆಣಗಾಡಿ ಸಾಯಲಿ? ಥೂ, ನನ್ನದೂ ಒಂದು ಬದುಕಾ' ಎಂದೆಲ್ಲಾ ತನಗೆ ತಾನೇ ಹೇಳಿಕೊಂಡು ವ್ಯಥೆಪಟ್ಟ.
*****
"ಪೇಪರ್‌ ನೋಡಲಿಲ್ಲಾ ನೀವು? ಇವತ್ತಿಂದ ಆ ಮಾಲ್‌ನಲ್ಲಿ ಸೀರೆಗಳಿಗೆ ಫಿಫ್ಟಿ ಪರ್ಸೆಂಟ್‌ ಡಿಸ್ಕೌಂಟ್‌ ಇದೆಯಂತೆ. ಲೇಟಾಗಿ ಹೋದ್ರೆ ಒಳ್ಳೆಯ ಸೀರೆಯನ್ನೆಲ್ಲ ಬೇರೆಯವರು ತಗೊಂಡು ಹೋಗಿಬಿಡ್ತಾರೆ. ಹೋಗಿ ಬರೋಣ ಬನ್ನಿ.' ಎದುರು ಮನೆಯ ಸಾವಿತ್ರಿ ಹೀಗೆ, ಮಾತು ಮುಗಿಸುವ ಮೊದಲೇ ಕಮಲಾ ಹೊರಟು ನಿಂತಿದ್ದಳು.

ಇವರು ಶಾಪಿಂಗ್‌ ಮುಗಿಸಿಕೊಂಡು ಹೊರಗೆ ಬರುತ್ತಲೇ, ಬಸ್‌ ನಿಲ್ದಾಣದ ಪಕ್ಕವೇ ಕುಳಿತಿದ್ದ ಅಜ್ಜಿ, "ಅವ್ವ, ಹತ್ತು ರೂಪಾಯಿ ಕೊಡವ್ವ. ಚಪ್ಲಿ ಕಿತ್ತುಹೋಗಿದೆ. ರಿಪೇರಿ ಮಾಡಿಸ್ಕೋಬೇಕು. ಕಾಲಲ್ಲಿ ಐರು ಬೆಳೆದಿದೆ. ಚಪ್ಪಲಿ ಇಲೆª ಒಂದು ಹೆಜ್ಜೆಯನ್ನೂ ಎತ್ತಿಡಲು ಆಗಲ್ಲ...' ಎನ್ನುತ್ತ ಅಳು ಮೋರೆಯಲ್ಲಿ ಪ್ರಾರ್ಥಿಸಿತು. ಕರಗಿದ ಸಾವಿತ್ರಿ, ಅಜ್ಜಿಗೆ ಹಣ ಕೊಟ್ಟು, "ಮಕ್ಕಳಿಗೆ ಹೇಳಿ ಹೊಸಾ ಚಪ್ಲಿ ತೆಗೆಸ್ಕೋ ಅಜ್ಜಿ' ಅಂದಳು. ಹಿಂದೆಯೇ ,"ಇಷ್ಟು ವಯಸ್ಸಾದವರಿಗೂ ಒಂದು ಜೊತೆ ಚೆನ್ನಾಗಿರೋ ಚಪ್ಲಿ ಕೊಡಿಸಲ್ವಲ್ಲ.. ಏನ್‌ ಮಕ್ಳು ರೀ ಅವರೆಲ್ಲ...' ಅಂದು ಬಿಟ್ಟಳು. ತಕ್ಷಣವೇ ಆ ಅಜ್ಜಿ "ಅವ್ವಾ, ನನ್ನ ಮಕ್ಕಳನ್ನು ಬೈ ಬೇಡ. ಏನೋ ನನ್ನ ಹಣೆಬರಹವೇ ಚೆನ್ನಾಗಿಲ್ಲ. ಅದಕ್ಕೆ ಅವರೇನು ಮಾಡೋಕಾಗುತ್ತೆ?' ಅಂದಿತು. ಈ ವೇಳೆಗೆ ಬಸ್‌ ಬಂದಿದ್ದರಿಂದ, ಏನೂ ಮಾತಾಡದೆ ಇವರೂ ಬಸ್‌ ಹತ್ತಿದರು.

ಬಸೊÕಳಗೆ ವಿಪರೀತ ರಶ್‌ ಇತ್ತು. ಆ ಗಜಿಬಿಜಿಯಲ್ಲಿ "ನೂಕಬೇಡ್ರಮ್ಮಾ, ನೂಕಬೇಡಿ...' ಅನ್ನುತ್ತಲೇ ನಾಲ್ಕು ಮಂದಿ ಹೆಂಗಸರು, ಸಾವಿತ್ರಿಯ ಸುತ್ತಮುತ್ತ ನಿಂತರು. ಅವರಲ್ಲಿ ಇಬ್ಬರು "ಹುಷ್‌..ರಶುÏ.. ರಶುÏ..' ಎನ್ನುತ್ತಾ ಏದುಸಿರುಬಿಟ್ಟರು. ಇದಾಗಿ ಎರಡೇ ನಿಮಿಷಕ್ಕೆ ಒಂದು ಸ್ಟಾಪ್‌ ಬಂತು. ಮತ್ತೆ ಹಿಂದಿನಿಂದ ನೂಕಾಟ ನಡೆಯಿತು. ಈ ನಾಲ್ಕು ಮಂದಿ ತುಂಬಾ ಅವಸರದಲ್ಲಿ ಬಸ್‌ ಇಳಿಯತೊಡಗಿದರು. ಅದನ್ನು ಗಮನಿಸಿದ ಕಂಡಕ್ಟರ್‌ "ಯಾಕಿಷ್ಟು ಗಡಿಬಿಡೀಲಿ ಇಳೀತಿದ್ದಾರೆ? ಇವರೆಲ್ಲಾ ಕಳ್ಳಿಯರೋ ಏನೋ .. ಯಾವುದಕ್ಕೂ ಎಲ್ಲಾ ಪ್ಯಾಸೆಂಜರ್ ತಮ್ಮ ಬಳೆ, ಸರ, ಮೊಬೈಲ್‌ ಇದ್ಯಾ ನೋಡಿಕೊಳ್ಳಿ' ಎಂದು ಜೋರಾಗಿ ಹೇಳಿಬಿಟ್ಟ . ತಕ್ಷಣವೇ ತನ್ನ ಕೈ ನೋಡಿಕೊಂಡು "ಅಯ್ಯಯ್ಯೋ, ಕಳ್ಳಿ , ಕಳ್ಳಿ ಹಿಡೀರಿ,.. ನನ್ನ ಬಳೆ ಇಲ್ಲ...' ಎಂದು ಗಾಬರಿಯಿಂದ ಕೂಗು ಹಾಕಿದಳು ಸಾವಿತ್ರಿ. ಈ ವೇಳೆಗೆ ಆ ನಾಲ್ಕೂ ಹೆಂಗಸರು ಓಡುತ್ತಲೇ ರಸ್ತೆಯ ಇನ್ನೊಂದು ಬದಿ ತಲುಪಿದ್ದರು. ಆಗಲೇ, ಆ ಬಸ್‌ನ ಕಂಡಕ್ಟರ್‌, ಚಿರತೆಯಂತೆ ಓಡಿ ಹೋಗಿ ಆ ಹೆಂಗಸರ ಪೈಕಿ ಇಬ್ಬರನ್ನು ಹಿಡಿದುಬಿಟ್ಟ. ಬಾಯಿಗೆ ಬಂದಂತೆ ಬೈಯ್ಯುತ್ತಾ ಎರಡೇಟು ಹಾಕಿದ್ದಲ್ಲದೆ, ಅದ್ಹೆಂಗೆ ತಪ್ಪಿಸಿಕೊಂಡು ಹೋಗ್ತಿàರೋ ನೋಡುವಾ ಎಂದು ದಾರಿಗೆ ಅಡ್ಡಲಾಗಿ ನಿಂತುಬಿಟ್ಟ.

ನಂತರದ ಒಂದೇ ನಿಮಿಷದಲ್ಲಿ ಬಸ್‌ನ ಜನರೆಲ್ಲಾ ಅಲ್ಲಿದ್ದರು. ಎಲ್ಲರೂ, ಹೆಂಗಸರು ಎಂಬ ಮುಲಾಜು ನೋಡದೆ, ಆ ಕಳ್ಳಿಯರಿಗೆ ಸಮಾ ಬಾರಿಸಿದರು. ಕಂಡಕ್ಟರ್‌ನ ಧೈರ್ಯವನ್ನು ಹೊಗಳಿದರು. "ನೋಡೋಕೆ ಗೂಳಿಗಳ ಥರಾ ಇದೀರ. ದುಡಿದು ತಿನ್ನಲು ಏನ್‌ ರೋಗ? ಇದೇ ಕೆಲ್ಸಾನ ಎಷ್ಟು ದಿನದಿಂದ ಮಾಡ್ತಿದೀರಿ? ಎಷ್ಟು ಹೆಂಗಸರಿಗೆ ಕಣ್ಣೀರು ಹಾಕಿಸಿದ್ದೀರಿ?' ಎಂದೆಲ್ಲಾ ಕೇಳುತ್ತ, ಆವೇಶ ಬಂದಾಗೆಲ್ಲ ಏಟು ಹಾಕುತ್ತಿದ್ದರು. ಈ ಮಧ್ಯೆಯೇ ಇನ್ಸ್‌ಪೆಕ್ಟರ್‌- ಪೇದಗಳಿದ್ದ ಜೀಪು ಬಂತು. "ಎಳಕೊಳಿÅà ಅವರನ್ನು ಎಂದ ಇನ್ಸ್‌ ಪೆಕ್ಟರ್‌, ಒಡವೆ ಕಳ್ಕೊಂಡವ್ರು ಯಾರು? ಅವರೂ ಬನ್ನಿ' ಎಂದರು.

"ನಾವು ಕೊಡಬೇಕಿದ್ದ ಏಟನ್ನೆಲ್ಲ ಜನರೇ ಕೊಟ್ಟಿದ್ದಾರೆ. ಅಲ್ಲಮ್ಮಾ ನೋಡೋಕೆ ಗಟ್ಟಿಮುಟ್ಟಾಗಿ ಇದೀರ. ದುಡಿದು ತಿನ್ನೋಕೆ ಏನ್‌ ರೋಗ ನಿಮ್ಗೆ? ಹತ್ತೇ ಹತ್ತು ನಿಮಿಷ ಕಷ್ಟಪಟ್ಟು, "ಸಂಪಾದನೆ' ಆಯ್ತು ಅಂದೊRಂಡು ಓಡುವ ನಿಮಗೇ ಆ ಒಡವೆ ಮೇಲೆ ಅಷ್ಟೊಂದು ಆಸೆ ಇರುವಾಗ, ಎಷ್ಟೋ ವರ್ಷಗಳ ಕಾಲ ಪೈಸೆಗೆ ಪೈಸೆ ಕೂಡಿಸಿ, ಕನಸು ಈಡೇರಿಸಿಕೊಂಡವರಿಗೆ ಎಷ್ಟೆಲ್ಲಾ ಮೋಹ ಇರುತ್ತದೋ ಲೆಕ್ಕ ಹಾಕಿ. ಯಾವತ್ತೂ ಅಷ್ಟೆ. ನೀವು ಒಳ್ಳೇದು ಮಾಡಿದ್ರೆ ನಿಮಗೂ ಒಳ್ಳೆಯದೇ ಆಗುತ್ತೆ. ನೀವು ಒಬ್ಬರ ಬದುಕಿಗೆ ಕತ್ತರಿ ಹಾಕಿದ್ರೆ, ನಾಳೆ ನಿಮ್ಮ ಕುತ್ತಿಗೆಗೇ ಕತ್ತರಿ ಬೀಳುತ್ತೆ. ಜೀವ° ಇಷ್ಟೇನೇ, ಅರ್ಥವಾಯ್ತಾ?. ಈ ಸಲ ಕ್ಷಮಿಸ್ತೀನಿ. ಇನ್ಮೆàಲಾದ್ರೂ ದುಡ್ಕೊಂಡು ತಿನ್ನಿ' ಎಂದು ಬುದ್ಧಿ ಹೇಳಿದರು. ಕಮಲಾ- ಸಾವಿತ್ರಿಯನ್ನು ಜೀಪಿನಲ್ಲಿ ಮನೆಗೆ ಕಳುಹಿಸಿಕೊಟ್ಟರು.

ಅವತ್ತು ರಾತ್ರಿ ಕಮಲಾಗೆ ಸರಿಯಾಗಿ ನಿದ್ರೆ ಬರಲಿಲ್ಲ. ಕಣ್ಮುಚ್ಚಿದರೆ ಸಾಕು, "ಐರು ಬೆಳೆದುಬಿಟ್ಟಿದೆ ಕಣವ್ವ. ಚಪ್ಲಿ ಇಲೆª ಹೆಜ್ಜೆ ಇಡೋಕೂ ಆಗ್ತಿಲ್ಲ' ಎಂದ ಅಜ್ಜಿಯ ಮಾತುಗಳು "ಒಮ್ಮೆ; ಅದೆಷ್ಟೋ ವರ್ಷ ದುಡಿದು, ಸಂಪಾದಿಸಿದ ವಸ್ತು ಇನ್ನೊಬ್ಬರ ಪಾಲಾದಾಗ ಎಷ್ಟೊಂದು ಸಂಕಟ ಆಗುತ್ತೆ ಗೊತ್ತ' ಎಂದಿದ್ದ ಇನ್ಸ್‌ ಪೆಕ್ಟರ್‌ ಮಾತು ಬಿಟ್ಟೂ ಬಿಡದೆ ನೆನಪಾದವು.

ಬೆಳಗ್ಗೆ, ಆಫೀಸಿಗೆ ಹೊರಟಿದ್ದ ಗಂಡನ ಎದುರು ನಿಂತ ಕಮಲಾ ಹೇಳಿದಳು: "ಈ ಭಾನುವಾರ ಊರಿಗೆ ಹೋಗಿ ಬನ್ರಿ. ಅತ್ತೆಗೆ ಸೀರೆ, ಒಂದು ಜತೆ ಚಪ್ಲಿ ತೆಗೆದು ಇಡ್ತೀನಿ. ಮೊನ್ನೇನೇ ಕೊಡಿಸಬೇಕಾಗಿತ್ತು. ನನಗೆ ಆಗ ಗೊತ್ತಾಗಿರಲಿಲ್ಲ. ನಿಮ್ಮ ಜತೆ ನಾನೂ ಬರೋಣ ಅಂತೀದೀನಿ ಆಗಬಹುದೇನ್ರೀ..'- ಇಷ್ಟು ಹೇಳುವುದರೊಳಗೆ ಆಕೆ ಕಣ್ತುಂಬಿಕೊಂಡಳು.
ರುದ್ರೇಶ ಮಾತಿಲ್ಲದೆ ನಿಂತುಬಿಟ್ಟ...

- ಎ.ಆರ್‌. ಮಣಿಕಾಂತ್‌


Trending videos

Back to Top