ಕಾಡಿನ ದಾರಿಯಲ್ಲಿ ಕೇಳಿಸಿತು ಕರುಣೆಯ ಹಾಡು


Team Udayavani, Aug 7, 2018, 12:30 AM IST

16.jpg

ಈಗಷ್ಟೇ ಧರ್ಮಸ್ಥಳ ಬಿಟ್ಟಿದೀನಿ. ಮುಂದೆ ಪ್ರತಿ 20 ನಿಮಿಷಕ್ಕೆ ಒಮ್ಮೆ ನಿಡ್ಲೆ-ಕೊಕ್ಕಡ-ಉದನೆ-ಶಿರಾಡಿ-ಗುಂಡ್ಯ-ಮಾರತನಹಳ್ಳಿ …. ಹೀಗೆ ಊರುಗಳು ಸಿಕ್ತಾ ಹೋಗ್ತವೆ. ಕಾಫಿ-ತಿಂಡಿ-ಸಿಗರೇಟಿಗೆ ಕೊರತೆಯಿಲ್ಲ. ಆದರೆ ನೆಟ್‌ವರ್ಕ್‌ನದ್ದೇ ಸಮಸ್ಯೆ. ಮಾರ್ಗಮಧ್ಯೆ ಯಾವಾಗ ಬೇಕಾದರೂ ನೆಟ್‌ವರ್ಕ್‌ ಕೈಕೊಡಬಹುದು. ಫಾರೆಸ್ಟು- ಘಾಟ್‌ ಸೆಕ್ಷನ್‌ ಶುರುವಾಗುವ ಮೊದಲೇ ಆಗಬೇಕಿರುವ ಕೆಲಸದ ಬಗ್ಗೆ ಖಡಕ್ಕಾಗಿ ಹೇಳಿಬಿಡಬೇಕು… ಭರ್ರನೆ ಕಾರು ಓಡಿಸುತ್ತಲೇ ವರದ ಹೀಗೆಲ್ಲ ಯೋಚಿಸಿದ.

ಅಕಸ್ಮಾತ್‌ ಕೆಲಸ ಆಗದೇ ಹೋದರೆ? ಪಾರ್ಟಿ, ಕೈಗೆ ಸಿಗದೇ ತಪ್ಪಿಸಿಕೊಂಡರೆ? ಏನಾದ್ರೂ ಎಡವಟ್ಟಾಗಿ ಹುಡುಗರು ಪೊಲೀಸರ ಕೈಗೆ ಸಿಕ್ಕಿಬಿದ್ದರೆ -ಹೀಗೊಂದು ಯೋಚನೆ ಬಂದದ್ದೇ ತಡ, ಒಮ್ಮೆಗೇ ಮೈ ನಡುಗಿತು. ಕಾರಿನ ವೇಗ ತಂತಾನೇ ತಗ್ಗಿತು. ಹೆದರಿಕೆ, ಗಾಬರಿ, ಅನುಮಾನಗಳೆಲ್ಲ ಜೊತೆಯಾದರೆ ನೆಮ್ಮದಿಯಿಂದ ಪ್ರಯಾಣಿಸಲು ಆಗುವುದಿಲ್ಲ. ಒಂದೈದು ನಿಮಿಷ ಎಲ್ಲಾದ್ರೂ ನಿಂತು ಮೈ-ಮನಸ್ಸಿಗೆ ರೆಸ್ಟ್‌ ಕೊಡಬೇಕು ಅನ್ನಿಸಿತು. ಮರು ಕ್ಷಣವೇ ಕಾರನ್ನು ಒಂದು ಕಡೆ ನಿಲ್ಲಿಸಿ, ಒಂದು ಸಿಗರೇಟು ಸೇದಿ ರಿಲ್ಯಾಕ್ಸ್‌ ಆದ. ಆಗಲೇ ಅವನ ಒಳಮನಸ್ಸು ಪಿಸುಗುಟ್ಟಿತು: “ಪ್ರೊಫೆಶನ್‌ ಅಂದಮೇಲೆ ಇದೆಲ್ಲಾ ಇದ್ದದ್ದೇ. ಅದರಲ್ಲೂ ಅಂಡರ್‌ವರ್ಲ್ಡ್ ಅಂದಮೇಲೆ ಇಂಥಾ ರಿಸ್ಕ್ಗಳು, ಟಾಸ್ಕ್ಗಳು ಮಾಮೂಲಿ. ಹೇಗಿದ್ರೂ ಒಪ್ಪಿಕೊಂಡು ಆಗಿದೆ. ಆಗಿದ್ದು ಆಗಿಬಿಡಲಿ. ಈ ಕೆಲಸ ಮಾಡುವುದೇ ಸೈ…’

ಆನಂತರದಲ್ಲಿ ವರದ ತಡಮಾಡಲಿಲ್ಲ. ಮೆಚ್ಚಿನ ಶಿಷ್ಯನಿಗೆ ಫೋನ್‌ ಮಾಡಿ ಹೇಳಿದ: “ಪಾರ್ಟಿ ಎಷ್ಟೆಷ್ಟು ಹೊತ್ತಿಗೆ ಎಲ್ಲೆಲ್ಲಿಗೆ ಹೋಗ್ತಾನೆ ಅಂತ ಚೆನ್ನಾಗಿ ಸ್ಟಡಿ ಮಾಡಿದೀರ ತಾನೆ? ಪ್ಲಾನ್‌ ಮಾಡಿಕೊಂಡು ಕೆಲಸ ಮಾಡಿ. ಜನ ಕಡಿಮೆ ಇರುವ ಜಾಗದಲ್ಲಿ ಅಟ್ಯಾಕ್‌ ಮಾಡಿ. ಯಾವುದೇ ಕಾರಣಕ್ಕೂ ಬಿಡಬೇಡಿ. ತಪ್ಪಿಸಿ ಕೊಂಡು ಹೋಗಲು ಬಿಟ್ರೆ, ನಾಳೆ ನಮ್ಮ ಕುತ್ತಿಗೆಗೇ ಮಚ್ಚು ಬೀಳುತ್ತೆ. ನೆನಪಿರಲಿ. ಈ ಕೆಲಸ ಆಗಬೇಕು. ಯಾವುದೇ ಕಾರಣಕ್ಕೂ ವೆಪನ್ಸ್‌ ಸಿಕ್ಕಬಾರದು. ನಾಳೆ ಹೆಚ್ಚು ಕಮ್ಮಿ ಆದರೆ, ವೆಪನ್ಸೇ ಮುಖ್ಯ ಸಾಕ್ಷಿಯಾಗಿ ನಾವು ಕಂಬಿ ಹಿಂದೆ ಹೋಗಬೇಕಾಗುತ್ತೆ. ಇನ್ನೂ ನಾಲ್ಕು ದಿನ ನಾನು ಟೂರಲ್ಲಿ ಇರ್ತೇನೆ. ನನ್ನನ್ನ ಕಾಂಟ್ಯಾಕ್ಟ್ ಮಾಡಲು ಟ್ರೈ ಮಾಡಬೇಡ. ಹುಡುಗರನ್ನು ಜೊತೇಲಿಟ್ಕೊಂಡು ನಿನ್ನ ಪಾಡಿಗೆ ನೀನು ಕೆಲ್ಸ ಮುಗಿಸು. ನಾಳೆ ರಾತ್ರಿ ಈ ಕೆಲಸ ಆಗಿಬಿಡ್ಲಿ…’ 

ವರದ ಅಲಿಯಾಸ್‌ ವರದರಾಜ, ಬೆಂಗಳೂರು ಭೂಗತ ಲೋಕದ ಒಬ್ಬ ರೌಡಿ. ಮೊದಲು ಜೀವನೋಪಾಯಕ್ಕೆಂದು ಆಟೋ/ಕಾರ್‌ ಡ್ರೈವಿಂಗ್‌ ಕಲಿತವನು, ದಾದಾಗಿರಿಗೆ ಇರುವ ಕ್ರೇಜ್‌ ನೋಡಿಯೇ ಅವನು ಥ್ರಿಲ್‌ ಆಗಿದ್ದ. ನಂತರ ಅದು ಹೇಗೋ ಲಿಂಕ್‌ ತಗೊಂಡು ಕುಖ್ಯಾತ ರೌಡಿಗಳಿಗೆ ಕಾರ್‌ ಡ್ರೆçವರ್‌ ಆಗಿದ್ದ. ಹೀಗೇ ಐದಾರು ವರ್ಷ ಕಳೆದವನಿಗೆ “ಫೀಲ್ಡ್‌’ ಅಂದರೆ ಏನೆಂದು, ಡೀಲ್‌ ಮಾಡುವುದು ಹೇಗೆಂದು, ಸುಪಾರಿ ಪಡೆದು ಸುದ್ದಿಯಾಗುವುದು ಹೇಗೆಂದು ಅರ್ಥವಾಯಿತು. ಆನಂತರದಲ್ಲಿ ಅವನು ತಡಮಾಡಲಿಲ್ಲ. ತನ್ನದೇ ಒಂದು ಟೀಂ ಕಟ್ಟಿಕೊಂಡ. ಹೊಡೆದಾಟ, ರಾಜಿ ಪಂಚಾಯ್ತಿ, ಜೈಲ್‌-ಬೇಲ್‌ ಎಲ್ಲವೂ ಅವನಿಗೂ ಪರಿಚಯವಾಯಿತು.

ಇದೀಗ, ರಿಯಲ್‌ ಎಸ್ಟೇಟ್‌ ಮಾಲೀಕರೊಬ್ಬರು “ಪಾರ್ಟಿಯೊಬ್ಬನನ್ನು ಎತ್ತಿಬಿಡುವಂತೆ’ ಸುಪಾರಿ ಕೊಟ್ಟಿದ್ದರು. ಕೇಸಾದ್ರೆ ಚಿಂತೆಯಿಲ್ಲ, ಲಾಯರ್‌ಗಳನ್ನು ಇಡೋಣ ಎಂದು ಧೈರ್ಯ ಹೇಳಿದ್ದರು. ಘಟನೆ ನಡೆದಾಗ, ಊರಲ್ಲಿ ಇಲ್ಲದೇ ಹೋದರೆ ಕೇಸ್‌ನಲ್ಲಿ ಸಿಕ್ಕಿಬೀಳುವ ಛಾನ್ಸು ಬಹಳ ಕಮ್ಮಿ. ಹೀಗೆಲ್ಲ ಯೋಚಿಸಿಯೇ ವರದ, ಐದಾರು ದಿನ ಟ್ರಿಪ್‌ ಹೊರಟಿದ್ದ. ಈ ಮಧ್ಯೆಯೇ, ಹೇಗೆ ಕೆಲಸ ಮಾಡಬೇಕು ಎಂದು ತನ್ನ ಹುಡುಗರಿಗೆ ಸೂಚನೆ ನೀಡಿದ್ದ.

ಹುಡುಗರೆಲ್ಲಾ ಫ್ರೆಶ್‌ ಆಗಿದ್ದಾರೆ. ಜೋಶ್‌ನಲ್ಲೂ ಇದ್ದಾರೆ. ಚೆನ್ನಾಗಿ ಹೋಂವರ್ಕ್‌ ಮಾಡಿದಾರೆ. ಸೋ, ಫೇಲ್‌ ಆಗುವ ಛಾನ್ಸ್‌ ಇಲ್ಲ. ನಾಳೆ ಎಷ್ಟು ಗಂಟೆಗೆ ಬ್ರೇಕಿಂಗ್‌ ನ್ಯೂಸ್‌ ಬರಬಹುದು… ಹೀಗೆಲ್ಲ ಯೋಚಿಸುತ್ತಲೇ ಒಮ್ಮೆ ಸುತ್ತಲೂ ನೋಡಿದ. ಇದ್ದಕ್ಕಿದ್ದಂತೆ ಕತ್ತಲಾದಂಥ ಅನುಭವವಾಯ್ತು. ಓಹ್‌, ಆಗಲೇ ಶಿರಾಡಿ ಘಾಟ್‌ ಬಂದೇ ಬಿಡ್ತು ಅಂದುಕೊಳ್ಳುತ್ತಿದ್ದಾಗಲೇ, ಹಿಂದಿದ್ದ ಕಾರಿನ ವನು ಟೀಂಕ್‌ ಟೀಂಕ್‌ ಟೀಂಕ್‌ ಟೀಂಕ್‌ ಎಂದು ಒಂದೇ ಸಮನೆ ಹಾರ್ನ್ ಮಾಡಿ ಸೈಡ್‌ ಕೇಳತೊಡಗಿದ. ಮತ್ತೂಬ್ಬರು ಓವರ್‌ಟೇಕ್‌ ಮಾಡುವುದನ್ನು ಯಾವತ್ತಿಗೂ ಸಹಿಸದ ವರದ, ಬೇರೆ ಸಂದರ್ಭದಲ್ಲಾಗಿದ್ದರೆ, ಆ ಕಾರನ್ನು ಅಡ್ಡಗಟ್ಟಿ, ಡ್ರೈವರನ್ನು ಹೊರಕ್ಕೆಳೆದು, ಎರಡೇಟು ಹಾಕಿ- “ನನಗೇ ಸೈಡ್‌ ಹೊಡೆಯುವಷ್ಟು ಧಮ್‌ ಇದೆಯೇನೋ?’ ಎಂದು ಕೇಳುತ್ತಿದ್ದನೇನೋ. ಆದರೆ ಇವತ್ತು ಮನಸ್ಸು ಬೇರೆಯದೇ ಯೋಚನೆಯಲ್ಲಿತ್ತು. ಥತ್‌, ಒಂದೇ ಸಮ ಹಾರ್ನ್ ಮಾಡಿ ಡಿಸ್ಟರ್ಬ್ ಮಾಡ್ತಿದಾನೆ. ಹಾಳಾಗಿಹೋಗ್ಲಿ ಅತ್ಲಾಗೆ ಎಂದು ಬೈದುಕೊಂಡೇ ಸೈಡ್‌ ಕೊಟ್ಟ. ಗಂಡ-ಹೆಂಡತಿ-ಮಗುವಿದ್ದ ಒಂದು ಕಾರು, ರೊಯ್ಯನೆ ಮುಂದೆ ಹೋಯಿತು…

“ಯಾರು ಅಂತ ಗೊತ್ತಿಲ್ಲ ಸರ್‌. ಸ್ಪೀಡಾಗಿ ಬಂದು ಮರಕ್ಕೆ ಗುದ್ದಿಸಿದಾನೆ. ಎಲ್ರಿಗೂ ತುಂಬಾ ಪೆಟ್ಟಾಗಿದೆ. ನಾವು ಹಳ್ಳಿ ಜನ. ನಮ್ಗೆàನೂ ಗೊತ್ತಾಗಲ್ಲ. ಈಗ, ಹತ್ತು ನಿಮಿಷದ ಹಿಂದಷ್ಟೇ ಈ ಆ್ಯಕ್ಸಿಡೆಂಟ್‌ ಆಯ್ತು…’ ವರದನ ಕಾರಿಗೆ ಅಡ್ಡಲಾಗಿ ನಿಂತ ಜನ ಹೀಗೆಂದರು. ಅಲ್ಲಿಂದ ಸ್ವಲ್ಪ ದೂರದಲ್ಲಿ, ಒಂದು ಕಾರು, ಮರ ವೊಂದನ್ನು ಅಪ್ಪಿಕೊಂಡಂತೆ ನಿಂತಿತ್ತು. ಅದನ್ನು ನೋಡುತ್ತಿ ದ್ದಂತೆಯೇ, 15 ನಿಮಿಷದ ಹಿಂದಷ್ಟೇ ತನ್ನನ್ನು ಓವರ್‌ಟೇಕ್‌ ಮಾಡಿದ ಕಾರೇ ಇದೆಂದು ವರದನಿಗೆ ಗೊತ್ತಾಯ್ತು. ಕೇಸ್‌ ಬೀಳಬಹುದು ಎಂಬ ಕಾರಣದಿಂದ, ಆ್ಯಕ್ಸಿಡೆಂಟ್‌ ಆಗಿದ್ದನ್ನು ನೋಡಿದರೂ, ಆ ಕಾರನ್ನು ಮುಟ್ಟುವ ರಿಸ್ಕನ್ನೂ ಎದುರಿಗಿದ್ದ ಜನ ತಗೊಂಡಿರಲಿಲ್ಲ. ಬದಲಿಗೆ, ಹಿಂದಿನಿಂದ ಬಂದ ವರದನ ವಾಹನವನ್ನು ಅಡ್ಡಗಟ್ಟಿ ವಿಷಯ ತಿಳಿಸಿದ್ದರು.

ಆ್ಯಕ್ಸಿಡೆಂಟ್‌ಗೆ ತುತ್ತಾದವರು ಕಾರ್‌ನ ಒಳಗೇ ಸಿಕ್ಕಿಕೊಂಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸ್ಪ್ರಿಂಗ್‌ನಂತೆ ಜಿಗಿದು ಓಡಿಹೋದ ವರದರಾಜ್‌. ಕಾರು ಗುದ್ದಿದ ರಭಸಕ್ಕೆ, ಒಳಗಿದ್ದ ಮೂವರೂ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೆಲವೇ ಕ್ಷಣಗಳ ಹಿಂದೆ, ಒಂದು ಕೈಲಿ ಲಾಲಿಪಪ್‌ ಹಿಡಿದುಕೊಂಡೇ- ಓವರ್‌ಟೇಕ್‌ ಮಾಡಿದಾಗ ಟಾಟಾ ಮಾಡಿದ್ದ ಮಗು, ಆಗಷ್ಟೇ ನಿದ್ರೆಗೆ ಜಾರಿದಂತೆ ಕಾಣುತ್ತಿತ್ತು. “ಓಡಿ ಬನ್ರೀ, ಇವರನ್ನು ಆಸ್ಪತ್ರೆಗೆ ಸೇರಿಸಬೇಕು. ಬೇಗ ಬನ್ನಿ. ಇವರನ್ನೆಲ್ಲಾ ನನ್ನ ಕಾರ್‌ಗೆ ಹಾಕಿ…’ ವರದ, ತನಗೇ ಅರಿವಿಲ್ಲದೆ ಹೀಗೆ ಹೇಳಿಬಿಟ್ಟ. ಕಾರಿನ ಡೋರ್‌ ತೆಗೆದು, ಅಲ್ಲಿದ್ದ ಹೆಂಗಸನ್ನು ಮುಟ್ಟುತ್ತಿದ್ದಂತೆಯೇ- “ಆಕೆ, ಏನಾಯೂ¤ರೀ, ಮಗೂಗೆ ಪೆಟ್ಟು ಬಿತ್ತಾ? ಊರಿಗೆ ಬೇಗ ಫೋನ್‌ ಮಾಡಿ’  ಅಂದಳು. “ಈಕೆಗೆ ಸ್ವಲ್ಪ ಪ್ರಜ್ಞೆಯಿದೆ. ಇವರು ಯಾರು? ಯಾವ ಊರಿನವರು ಅಂತ ತಿಳೀಬೇಕಾದ್ರೆ ಹೆಲ್ಪ್ ಬೇಕು. ಈಕೆಯನ್ನು ಫ್ರಂಟ್‌ಲಿ ಕೂರಿಸಿ. ಇನ್ನಿಬ್ಬರನ್ನು ಹಿಂದಿನ ಸೀಟ್‌ನಲ್ಲಿ ಮಲಗಿಸಿ. ಹಾಸನದ ನರ್ಸಿಂಗ್‌ ಹೋಂಗೆ ಹೋಗ್ತೀನೆ. ಆಸ್ಪತ್ರೆಯಿಂದಲೇ ಪೊಲೀಸ್‌ಗೂ ಸುದ್ದಿ ಕೊಡ್ತೇನೆ’ ಎಂದ ವರದ, ಮಗುವನ್ನು ಎತ್ತಿಕೊಳ್ಳಲು ಹೋಗಿ ಶಾಕ್‌ ಹೊಡೆದವನಂತೆ ನಿಂತುಬಿಟ್ಟ. ಕಾರಣ, ಮಗುವಿನ ಮೈ ಸ್ವಲ್ಪ ತಣ್ಣಗಿತ್ತು!

“ರ್ರೀ.. ಏನಾಗೋಯ್ತು? ಊರಿಗೆ ವಿಷಯ ತಿಳಿಸಿ. ಅಮ್ಮನಿಗೆ ಹೇಳಿಬಿಡಿ. ಪಾಪು ಜೋಪಾನ. ನಂಗೆ ಏನಾದ್ರೂ ಚಿಂತೆ ಬೇಡ. ಪಾಪು ಹುಷಾರು ಕಣ್ರಿ. ನೀವೂ ಹುಷಾರಾಗಿರಿ. ಮಗೂನ ಚೆನ್ನಾಗಿ ನೋಡ್ಕೊಳ್ಳಿ…’ ಪಕ್ಕದ ಸೀಟಿನಲ್ಲಿದ್ದ ಆಕೆ, ಒಂದೊಂದೇ ಮಾತು ಜೋಡಿಸಿಕೊಂಡು ಹೇಳುತ್ತಿದ್ದಳು. ಆಕೆಗೂ ಸೀಟ್‌ ಬೆಲ್ಟ್ ಹಾಕಿ ಕೂರಿಸಿದ್ದರಿಂದ ಏನೂ ತೊಂದರೆಯಾಗಿರಲಿಲ್ಲ. ಆಸ್ಪತ್ರೆ ತಲುಪುತ್ತಿದ್ದಂತೆಯೇ, ವರದ ತಾನೇ ಮುಂದೆ ಹೋಗಿ ಡಾಕ್ಟರಿಗೆ ನಡೆದುದನ್ನೆಲ್ಲ ವಿವರಿಸಿದ.

ಆನಂತರದಲ್ಲಿ ಎಲ್ಲವೂ ವೇಗವಾಗಿ ನಡೆದುಹೋಯಿತು. ಮೂವರನ್ನೂ ಐಸಿಯುವಿನಲ್ಲಿ ಅಡ್ಮಿಟ್‌ ಮಾಡಿದಾಯ್ದಿತು. ಪೊಲೀಸರಿಗೆ, ಆಸ್ಪತ್ರೆಯ ವೈದ್ಯರೇ ಸುದ್ದಿ ಮುಟ್ಟಿಸಿದ್ದರು. ಅರ್ಧ ಗಂಟೆಯ ನಂತರ ಆಪರೇಷನ್‌ ಥಿಯೇಟರ್‌ನಿಂದ ಹೊರಬಂದ ವೈದ್ಯರು ವರದನ ಮುಂದೆ ನಿಂತು ಹೇಳಿದರು: “ಸಾರಿ ಸರ್‌, ಮಗುವಿನ ಕಂಡಿಷನ್‌ ಕ್ರಿಟಿಕಲ್‌ ಆಗಿದೆ. ಏನೂ ಹೇಳ್ಳೋಕಾಗಲ್ಲ. ಗಂಡ-ಹೆಂಡ್ತಿಗೂ ತುಂಬಾ ಪೆಟ್ಟು ಬಿದ್ದಿದೆ. ಬ್ಲಿಡ್‌ ಬೇಕು. ಅವರು ಯಾರು? ಏನ್ಮಾಡ್ತಾರೆ ಅಂತೇನಾದ್ರೂ ಗೊತ್ತಾ? ಈ ಕ್ಷಣಕ್ಕೆ ನೀವೇ ಅವರ ವೆಲ್‌ವಿಷರ್‌. ಅವರನ್ನು ಉಳಿಸಿ ಕೊಳ್ಳೋಣ. ಧೈರ್ಯವಾಗಿರಿ…’ 

ನಡೆಯುತ್ತಿರುವುದೆಲ್ಲ ಕನಸೋ, ನಿಜವೋ ಅರ್ಥವಾಗದೆ ವರದ ಒದ್ದಾಡಿಹೋದ. ಕೆಲವೇ ಕ್ಷಣಗಳ ಹಿಂದೆ ಒಂದು ಜೀವ ತೆಗೆಯಲು ಆದೇಶ ನೀಡಿದ್ದವನು, ಇದೀಗ ಮೂರು ಜೀವ ಉಳಿಸಿದ ಕ್ಷಣಕ್ಕೆ ಸಾಕ್ಷಿಯಾಗಿದ್ದ. ಜೀವ ಉಳಿಸಿದೆ ಎಂಬುದಕ್ಕಿಂತ ಹೆಚ್ಚಾಗಿ, ತಾನು ಎತ್ತಿಕೊಂಡ ಮರುಕ್ಷಣವೇ ಆ ಪುಟ್ಟ ಮಗುವಿನ ಮೈ ತಣ್ಣಗಾದಂತೆ ಅನಿಸಿದ ಕ್ಷಣವೇ ಅವನಿಗೆ ಮತ್ತೆ ಮತ್ತೆ ನೆನಪಾಗತೊಡಗಿತು. ಅಕಸ್ಮಾತ್‌ ಇದು ಕೇಸ್‌ ಆದರೆ, ಪೊಲೀಸ್‌ ವಿಚಾರಣೆಯ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದವನು ರೌಡಿಶೀಟರ್‌ ಅಂತ ಗೊತ್ತಾದರೆ, ಹಳೇ ಕೇಸ್‌ಗಳನ್ನು ನೆನಪಿಸಿಕೊಂಡು ಪೊಲೀಸರು ಅರೆಸ್ಟ್‌ ಮಾಡಿಬಿಟ್ಟರೆ… ಇಂಥವೇ ಹಲವು ಯೋಚನೆಗಳು ಬಂದಿದ್ದವು. ಆದರೂ, ಯಾವುದೋ ಮೋಡಿಗೆ ಒಳಗಾದವನಂತೆ ವರದ ಆಸ್ಪತ್ರೆಗೆ ಬಂದುಬಿಟ್ಟಿದ್ದ. ಅಲ್ಲಿ ಯಾವುದೇ ಯಡವಟ್ಟುಗಳಾಗಲಿಲ್ಲ. ಇವನ್ಯಾರೋ ಹೃದಯವಂತ ಎಂದಷ್ಟೇ ಅಲ್ಲಿನ ಡಾಕ್ಟರರೂ, ಪೊಲೀಸರೂ ಮಾತಾಡಿಕೊಂಡರು. 

“ಸರ್‌, ಎರಡು ನಿಮಿಷ ಬೇಗ ಬನ್ನಿ. ಆಕೆಗೆ ಪ್ರಜ್ಞೆ ಬಂದಿದೆ. ಏನು ಹೇಳ್ತಾರೋ ನೋಡೋಣ. ಎರಡು ಮೊಬೈಲ್‌ಗ‌ೂ ಪಾಸ್‌ವರ್ಡ್‌ ಇರೋದ್ರಿಂದ ಯಾವ ಊರಿನವರು, ಅವರ ಬಂಧುಗಳು ಯಾರು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ…’ ಡಾಕ್ಟರು ಹೇಳುತ್ತಲೇ ಇದ್ದರು. ವರದ, ಮೌನವಾಗಿ ಹೋಗಿ ಆ ಹೆಂಗಸಿನ ಕೈ ಮುಟ್ಟಿದ. ಆಕೆ- “ಪಾಪು ಹುಷಾರು, ಏನಾಗಿದೆ ನನೆY? ಅಮ್ಮನಿಗೆ ಫೋನ್‌ ಮಾಡಿ. ದೇವ್ರು ಕಾಪಾಡ್ತಾನೆ. ಹೆದರೊRàಬೇಡಿ…’ ಎಂದವಳೇ ಮತ್ತೆ ಪ್ರಜ್ಞೆ ತಪ್ಪಿಬಿಟ್ಟಳು. “ನೋಡಿದ್ರಾ ಸರ್‌, ಇಷ್ಟೇನೇ ಲೈಫ‌ು, ಎಚ್ಚರ ಇದ್ರೆ ಬದುಕು. ಎಚ್ಚರ ತಪ್ಪಿದ್ರೆ ಸಾವು. ಯಾರು ಯಾರಿಗೂ ಗ್ಯಾರಂಟಿ ಕೊಡಲು ಆಗಲ್ಲ. ಇವತ್ತು ಅವರಿಗೆ ಬಂದ ಸ್ಥಿತೀನೇ ನಾಳೆ ನಮಗೂ ಬರಬಹುದು. ಜವರಾಯ ನಮ್ಮ ಬೆನ್ನ ಹಿಂದೆಯೇ ಸುತ್ತಾಡ್ತಾ ಇರ್ತಾನೆ. ಯಾವಾಗ ಅಟ್ಯಾಕ್‌ ಮಾಡ್ತಾನೋ ಗೊತ್ತಾಗಲ್ಲ. ನಾವು ಮಾಡುವ ಒಳ್ಳೆಯ ಕೆಲಸವಷ್ಟೇ ನಮ್ಮ ಕೈ ಹಿಡಿಯುತ್ತೆ. ಒಬ್ಬರನ್ನು ಕೊಂದರೆ ಮನುಷ್ಯ ರಾಕ್ಷಸ ಆಗ್ತಾನೆ. ಕಾಪಾಡಿಬಿಟ್ರೆ ದೇವರಾಗ್ತಾನೆ. ಕಷ್ಟದಲ್ಲಿ ಇದ್ದವರನ್ನು ಮುಗಿಸೋದು ಸುಲಭ. ಉಳಿಸಿಕೊಳ್ಳೋದು ಬಹಳ ಕಷ್ಟ. ನಿಮ್ಮಂಥ ಗಟ್ಟಿ ಮನುಷ್ಯ, ನಾವು ಇಡೀ ಆಸ್ಪತ್ರೆಯ ಸ್ಟಾಫ್ ಇಲ್ಲಿದೀವಿ. ಆದ್ರೂ ಯಾರ ಜೀವಕ್ಕೂ ಗ್ಯಾರಂಟಿ ಕೊಡುವ ಧೈರ್ಯ ನಮಗೂ ಇಲ್ಲ…’ ವೈದ್ಯರು ಥೇಟ್‌ ವೇದಾಂತಿಯಂತೆ ಹೇಳತೊಡಗಿದ್ದರು.

ವೈದ್ಯರ ಒಂದೊಂದು ಮಾತೂ ವರದರಾಜನ ಎದೆಯೊಳಗೆ ಅಚ್ಚೊತ್ತಿದಂತೆ ಕುಳಿತುಬಿಟ್ಟವು. ಇಷ್ಟು ದಿನ ಕೊಲ್ಲುವ ಕೆಲಸವನ್ನಷ್ಟೇ ನಾನೂ ಮಾಡಿದೆ. ಅಕಸ್ಮಾತ್‌ ಇವತ್ತು ಆಯ್ತಲ್ಲ, ಅಂಥದೇ ಆ್ಯಕ್ಸಿಡೆಂಟ್‌ ನಾಳೆ ನನಗೂ ಆಗಿಬಿಟ್ರೆ? ಸದಾ ಮುಂದಿನ ಸೀಟಿನಲ್ಲೇ ಕೂರುವ ನನ್ನ ಮಗು ಕೂಡ… ಇಂಥದೊಂದು ಯೋಚನೆ ಬಂದ ತಕ್ಷಣ ವರದ ಬೆಚ್ಚಿಬಿದ್ದ. ಕೆನ್ನೆ ಕೆನ್ನೆ ಬಡಿದುಕೊಂಡು- ನನ್ನ ತಪ್ಪುಗಳನ್ನು ಕ್ಷಮಿಸಿಬಿಡು ದೇವರೇ ಎಂದು ಪ್ರಾರ್ಥಿಸಿದ. ನಂತರ ತನ್ನ ಹುಡುಗನಿಗೆ ಫೋನ್‌ ಮಾಡಿ ಹೇಳಿದ- ಶ್ರೀಧರಾ, ಆ ಡೀಲ್‌ ಕ್ಯಾನ್ಸಲ್‌ ಆಯ್ತು. ಯಾರೂ ರಿಸ್ಕ್ ತಗೋಬೇಡಿ. ಇಲ್ಲಿ ಹಾಸನದಲ್ಲಿ ನನ್ನ ತಂಗಿಗೆ ಆ್ಯಕ್ಸಿಡೆಂಟ್‌ ಆಗಿದೆ. ಅಡ್ಮಿಟ್‌ ಮಾಡಿದೀನಿ. ಅರ್ಜೆಂಟಾಗಿ ಆರು ಬಾಟಲಿ ಬ್ಲಿಡ್‌ ಬೇಕು. ತಕ್ಷಣ ನಾಲ್ಕು ಹುಡುಗರನ್ನು ಕರ್ಕೊಂಡು ಈಗಲೇ ಬಾ…’

*ಎ.ಆರ್.ಮಣಿಕಾಂತ್

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.