ಜಲಪಾನಕ್ಕೊಂದು ಕೈಗನ್ನಡಿ ಆಯುರ್ವೇದದ ಸರಳ ಸೂತ್ರ 


Team Udayavani, Nov 4, 2018, 12:30 AM IST

1.jpg

ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. 
ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. 

ಜೀವನಂ ತರ್ಪಣಂ ಹೃದ್ಯಂ ಹ್ಲಾದಿ ಬುದ್ಧಿ ಪ್ರಬೋಧನಮ…| ತನ್ವವ್ಯಕ್ತರಸಂ ಮೃಷ್ಟಂ ಶೀತಂ ಲಘÌಮೃತೋ ಪಮಮ…|| 
(ಅಷ್ಟಾಂಗ ಹೃದಯ ಸೂತ್ರ 5)
ಜಲ, ಅಂಬು, ಉದಕ ಆದಿಗಳು ಸಂಸ್ಕೃತದಲ್ಲಿ ನೀರಿಗೆ ಇರುವ ಹೆಸರು. ನೀರು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗ. ನೀರು ಸ್ನಾನ ಸಂಧ್ಯಾದಿ ಕರ್ಮಗಳಿಗಾಗಲಿ, ಬಟ್ಟೆ ಪಾತ್ರೆಗಳ ಶುಚಿಗಾಗಲಿ ಬೇಕೆ ಬೇಕು. ನಮ್ಮ ದೇಹಪಾಲನೆಗಂತೂ ನೀರು ಅತ್ಯಾವಶ್ಯಕ. ನಾವು ಆಹಾರವಿಲ್ಲದೆ ಒಂದೆರಡು ದಿನ ಬದುಕ ಬಲ್ಲೆವೇನೋ ಆದರೆ ನೀರಿಲ್ಲದೆ ಬದುಕುವುದು ಕಷ್ಟಸಾಧ್ಯ. ಮನುಷ್ಯನಿಗೆ ಮಾತ್ರವಲ್ಲ ನೀರು ಪ್ರಾಣಿಪಕ್ಷಿಗಳ, ಗಿಡಮರಗಳ ಉಳಿವಿಗೂ ಬೇಕಾದದ್ದು. ಆದ್ದರಿಂದ ಆಯುರ್ವೇದ ಗ್ರಂಥಗಳಲ್ಲಿ ಜಲವು ಅಮೃತ ತುಲ್ಯವಾದದ್ದು ಎಂದು ಉಲ್ಲೇಖೀಸಲಾಗಿದೆ.

ನೀರಿನ ಸೇವನೆಯ ಕ್ರಮದ ಬಗ್ಗೆ ತಿಳಿಯುವು ದಾದರೆ ಆಯುರ್ವೇದ ಹೇಳುವುದೇನು ನೋಡೋಣ. ನಮ್ಮ ದೇಹದ ಶೇ.65 ಭಾಗವು ನೀರಿನಿಂದ ಕೂಡಿದೆ ಎಂದು ಆಧುನಿಕ ವಿಜ್ಞಾನ ತಿಳಿಸುತ್ತದೆ. ಈ ಪ್ರಮಾಣವನ್ನು ಸಮತೋಲಿಸಿ ಅವಶ್ಯ ಕತೆಗೆ ಅನುಗುಣವಾಗಿ ಯಾರು, ಎಷ್ಟು, ಯಾವಾಗ ಜಲಪಾನ ಮಾಡಬೇಕೆಂದು ಆರೋಗ್ಯಾರ್ಥಿಗಳಿಗೆ ಸದಾ ಕಾಡುವ ಪ್ರಶ್ನೆ. ಅದಕ್ಕೆ ನಾವು ಅತಿಮುಖ್ಯವಾಗಿ ತಿಳಿದುಕೊಳ್ಳಬೇಕಾದ ಸಂಗತಿ ಏನೆಂದರೆ ಎಲ್ಲರ ತಲೆಗೆ ಒಂದೇ ಮಂತ್ರ ಸಲ್ಲ ಎಂಬುದು. ಅಂದರೆ ಪ್ರತಿಯೊಬ್ಬ ಮನುಷ್ಯನು ದಿನಕ್ಕಿಂತಿಷ್ಟು ನೀರು ಕುಡಿಯಲೇಬೇಕು ಎಂದು ಯಾವುದೇ ನಿಯಮವಿಲ್ಲ. ಇದಕ್ಕೆ ತರ್ಕ ಇಷ್ಟೆ- ಒಬ್ಬ ಎ.ಸಿ. ರೂಮಿನಲ್ಲಿ ಕುಳಿತು ಕಂಪ್ಯೂಟರ್‌ ಮೇಲೆ ಕೆಲಸ ಮಾಡುವ ವ್ಯಕ್ತಿಗೂ, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವ ವ್ಯಕ್ತಿಗೂ, ನಿರಂತರ ಮಾತನಾಡುವ ಅಧ್ಯಾಪಕನಿಗೂ, ಬಿಸಿಲ ನಾಡು(ಬಯಲು ಸೀಮೆ), ಮಲೆನಾಡು, ಕರಾವಳಿ ವಾಸಿಗಳಿಗೂ, ಬೇಸಿಗೆ ಯಲ್ಲೂ, ಮಳೆಗಾಲದಲ್ಲೂ, ಚಳಿಗಾಲದಲ್ಲೂ, ಪ್ರತಿ ಯೊಬ್ಬ ಮನುಷ್ಯನ ದೇಹ ಪ್ರಕೃತಿ ಹಾಗೂ ಸದ್ಯದ ದೇಹದ ಸ್ಥಿತಿಗೆ ಅನುಗುಣವಾಗಿ ನೀರಿನ ಅವಶ್ಯಕತೆ ವಿಭಿನ್ನವಾಗಿರುತ್ತದೆ. ಇಷ್ಟೆಲ್ಲಾ ಪ್ರಮಾಣವನ್ನು ಇಟ್ಟು ಕೊಂಡು ಲೆಕ್ಕಹಾಕಿ ನೀರು ಕುಡಿಯಬೇಕಾ ಎಂದು ಚಿಂತಿಸುವುದು ಬೇಡ. ಅದಕ್ಕೂ ಆಯುರ್ವೇದ ಸುಲಭ ಸೂತ್ರ ನೀಡಿದೆ. ಅದು ಇಷ್ಟೆ- 

ನೀರು ಯಾವಾಗ ಕುಡಿಯ ಬೇಕು?- ನೀರಡಿಕೆಯಾದಾಗ. ಎಷ್ಟು ಕುಡಿಯಬೇಕು?- ಆ ನೀರಡಿಕೆ ನೀಗಿಸಲು ಎಷ್ಟು ಬೇಕೋ ಅಷ್ಟೆ. ಅತಿ ಸರಳವಲ್ಲವೇ! ಸರ್ವೇ ರೋಗಾ ಪಿ ಜಾಯಂತೆ ವೇಗೋದೀರಣ ಧಾರಣೈಃ| (ಅಷ್ಟಾಂಗ ಹೃದಯ ಸೂತ್ರ 4) 13 ಅಧಾರಣೀಯ ವೇಗಗಳು (ಹಸಿವೆ, ನಿದ್ರೆ, ಬಾಯಾರಿಕೆ, ಮಲ, ಮೂತ್ರದ ಕರೆ, ಶ್ರಮ ಶ್ವಾಸ, ಕೆಮ್ಮು, ಕಣ್ಣೀರು, ವಾಂತಿ, ಶುಕ್ರ, ಬಿಕ್ಕಳಿಕೆ, ಸೀನು, ಅಪಾನ ವಾಯು) ಶರೀರವು ನಮ್ಮೆದುರು ತನ್ನ ಬೇಕು ಬೇಡವನ್ನು ವ್ಯಕ್ತಪಡಿಸುವ ರೀತಿ. ಈ ಸೂಕ್ಷ್ಮ ಸಂಕೇತವನ್ನು ನಾವು ಅಥೆìçಸಿಕೊಂಡು ಸಕಾಲದಲ್ಲಿ ಕಾರ್ಯಶೀಲರಾಗಬೇಕು. ಈ ಮೇಲಿನ ಯಾವುದೇ ವೇಗವನ್ನು ಧಾರಣೆ (Suppress) ಅಥವಾ ಉದೀರಣ(Voluntary forceful initiation)ಮಾಡತಕ್ಕದ್ದಲ್ಲ. ಹಾಗೆ ಮಾಡಿದಲ್ಲಿ ರೋಗ ಪ್ರಕ್ರಿಯೆಗೆ ನಾಂದಿ ಬಿದ್ದಂತೆ. ಈ ಅಧಾರಣೀಯ ವೇಗದ ಸಾಲಿನಲ್ಲಿ “ತೃಷ್ಣಾ’ ಬಾಯಾರಿಕೆ ಕೂಡ ಒಂದು. ಆದ್ದರಿಂದ ನೀರನ್ನು ಅತಿಯಾಗಿ ಸೇವಿಸಿದರೆ ಅಗ್ನಿಮಾಂದ್ಯಾದಿ (Digestive/metabolic disorders) ಆಗುವ ಸಾಧ್ಯತೆ ಇರುತ್ತದೆ ಹಾಗೂ ಅತಿ ಕಡಿಮೆ ಸೇವಿಸಿದರೂ ವಾತವ್ಯಾಧಿ, ಅಶ್ಮರಿ ಗಳಂತಹ (Kidney stone) ವ್ಯಾಧಿಗಳಾಗುವ ಸಂಭಾವನೆ ಇರುತ್ತದೆ. 

“ಋತೆ ಶರನ್ನಿದಾಗಾಭ್ಯಾಂ ಪಿಬೇತ್‌ ಸ್ವಸೊ§à ಪಿ ಚ ಅಲ್ಪಶ:’| (ಅಷ್ಟಾಂಗ ಹೃದಯ ಸೂತ್ರ 8) 
ಗ್ರೀಷ್ಮ (ಬೇಸಿಗೆ) ಹಾಗೂ ಶರದ್‌(ಮಳೆಗಾಲದ ನಂತರದ ಎರಡು ತಿಂಗಳು) ಋತುಗಳಲ್ಲಿ ಸಹಜವಾಗಿಯೇ ನೀರಡಿಕೆ ಜಾಸ್ತಿ. ಈ ಎರಡು ಋತುಗಳನ್ನು ಹೊರತುಪಡಿಸಿ ಸ್ವಸ್ಥನಿಗೆ ನೀರಿನ ಅವಶ್ಯಕತೆ ಪ್ರಾಕೃತಿಕವಾಗಿಯೇ ಕಡಿಮೆ ಇರುತ್ತದೆ. 

 ಇನ್ನು ಜನರಲ್ಲಿ ಸಾಮಾನ್ಯವಾಗಿ ಮೂಡುವ ಕೆಲವು ಪ್ರಶ್ನೆಗಳು:

1) ಆಹಾರದೊಂದಿಗೆ ನೀರು ಸೇವಿಸುವುದು ಸೂಕ್ತವೇ? 
ಆಹಾರದ ಮುನ್ನ ನೀರು ಕುಡಿದರೆ ಅಗ್ನಿಮಾಂದ್ಯವಾಗಿ ದೇಹ ಕೃಶವಾಗಬಹುದು. ಅದೇ ಆಹಾರದ ನಂತರ ಸೇವಿಸಿದರೆ ಬೊಜ್ಜಿನ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯವಂತನು ಆಹಾರದೊಂದಿಗೆ ಸ್ವಲ್ಪ ಸ್ವಲ್ಪ ಉಗುರು ಬೆಚ್ಚಗಿನ ನೀರು ಕುಡಿಯುವುದು ಸೂಕ್ತ. 

2) ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳಿತೆ? 
ಬೆಳಗ್ಗೆ ಎದ್ದಾಕ್ಷಣ ನೀರಡಿಕೆಯಾದರೆ ಮಾತ್ರ ನೀರು ಕುಡಿಯಿರಿ. ಕುಡಿಯಲೇಬೇಕೆಂದು ಅನಾವಶ್ಯಕವಾಗಿ ಕುಡಿದರೆ ಅತಿಯಾಗಿ ಹೇರಿದ ನೀರು ಮೂತ್ರಾಂಗಗಳಿಗೆ ತೊಂದರೆಯಾದೀತು ಜೋಕೆ. ನಿಯಮ ಬದ್ಧವಾಗಿ ಉಷಃಪಾನ ಮಾಡಬಹುದು ಆದರೆ ಅದನ್ನು ನುರಿತ ಆಯುರ್ವೇದ ವೈದ್ಯರಲ್ಲಿ ಕೇಳಿ ತಿಳಿಯಿರಿ. 

3) ಈ ಮೇಲೆ ಹೇಳಿದ ಕ್ರಮ ಸರ್ವರಿಗೂ ಅನ್ವಯವೇ? 
 ಬಹಳಷ್ಟು ಮಟ್ಟಿಗೆ ಹೌದು! ಆದರೆ ಜಲೋದರ(Ascites), ಮೂತ್ರಾಂಗದ ವ್ಯಾಧಿ(Kidney disease), ಶೋಥ (oedema/swelling) ಇನ್ನಿತರ ವ್ಯಾಧಿತಾವಸ್ಥೆಯಲ್ಲಿ ವೈದ್ಯಕೀಯ ಸಲಹೆ ಪಡೆದು ಜಲಪಾನದ ಕ್ರಮ ತಿಳಿದುಕೊಳ್ಳತಕ್ಕದ್ದು. 
ನೀರು ಅಮೃತ ತುಲ್ಯವಾದದ್ದು, ಹಿತವಾಗಿ ಸೇವಿಸೋಣ ಮಿತವಾಗಿ ಬಳಸೋಣ.

ಡಾ| ಚಿನ್ಮಯ ಫ‌ಡಕೆ ಎಂ.ಡಿ.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.