ಶಬರಿಮಲೆ: ಚಿಂತನೆ ರೀತಿ ಬದಲಾಗಲಿ


Team Udayavani, Nov 9, 2018, 3:44 AM IST

shabari.jpg

ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿ ಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ನಿಂತಿರುವುದು ಮಾತ್ರವಲ್ಲ, ಬಹುತೇಕ ಆಚರಣೆಗಳು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣವಾದವುಗಳಾಗಿವೆ. ಆದ್ದರಿಂದ ಅಂತಹ ಆಚರಣೆಗಳನ್ನು ಕೇವಲ ಸಮಾನತೆಯ-ಆಧುನಿಕ- ಮನುಷ್ಯ ನಿರ್ಮಿತ ಕಾನೂನಿನ ದೃಷ್ಟಿಕೋನದಿಂದ ನೋಡುವ ಬದಲು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಹಿನ್ನೆಲೆಯಲ್ಲಿ ಏಕೆ ನೋಡಬಾರದು? ನಮ್ಮ ದೇಶದಲ್ಲಿ ಬಹಳಷ್ಟು ಆಚರಣೆ-ನಂಬಿಕೆಗಳನ್ನು ವಿದೇಶೀಯರ ಶಂಖದಿಂದ ಬಂದರೆ ತೀರ್ಥ ಎಂಬ ಧೋರಣೆಯಂತೆ, ವಿದೇಶಿಯರು ಸಾಬೀತುಪಡಿಸಿದರೆ ಮಾತ್ರ ನಂಬುವ ಜಾಯಮಾನ ನಮ್ಮದು. ಉದಾಹರಣೆಗೆ ಶ್ರೀರಾಮ ಸೇತುವನ್ನು ರಾಜಕೀಯ ಪ್ರೇರಿತ ಸ್ವಹಿತಾಸಕ್ತಿಯ ದೃಷ್ಟಿಯಿಂದ ಒಡೆಯುವ ಪ್ರಯತ್ನ ಮಾಡಲಾಯಿತು. ಓರ್ವ ಹಿರಿಯ ರಾಜಕೀಯ ಮಹಾಶಯರು ಶ್ರೀರಾಮ ಯಾವ ವಿಶ್ವ ವಿದ್ಯಾಲಯದ ಇಂಜಿನಿಯರ್‌? ಎಂಬ ಉದ್ಧಟತನದ ನುಡಿಮುತ್ತು ಉದುರಿಸುವವರೆಗೂ ಮುಂದುವರೆದರು. ಆದರೆ ದೈವಿಕ ನಿರ್ಮಾಣವೆಂಬ ನಂಬಿಕೆಯ ಹಿಂದಿರುವ ವೈಜ್ಞಾನಿಕ ನೆಲಗಟ್ಟನ್ನು ಒಂದಿಂಚೂ ಅಲುಗಾಡಿಸಲು ಸಾಧ್ಯವಾಗಿಲ್ಲ ಎನ್ನುವುದು ಬೇರೆ ಮಾತು. ಆದರೆ ಈ ರಾಮಸೇತು ಬಗ್ಗೆ ಅಮೆರಿಕದ ನಾಸಾ ಅಧ್ಯಯನ ಇದು ಮಾನವ ನಿರ್ಮಿತ ಅಲ್ಲ ಎಂದು ಘೋಷಿಸಿದ ನಂತರವಷ್ಟೇ ಎಲ್ಲವೂ ತಣ್ಣಗಾಯಿತು. 

ಶನಿ ಶಿಂಗಣಾಪುರ ಮತ್ತು ಶಬರಿಮಲೆ ಇವೆಲ್ಲದರ ಕುರಿತಾದ ತೀರ್ಪು ಮೇಲ್ನೋಟಕ್ಕೆ ಒಂದೇ ಎಂಬಂತೆ ಅನ್ನಿಸಿದರೂ ಪ್ರತ್ಯೇಕವಾಗಿ ಅವಲೋಕಿಸಿದರೆ ಎರಡೂ ಬೇರೆಯೇ ರೀತಿಯ ಆಚರಣೆಗಳು. ಶನಿ ಶಿಂಗಣಾಪುರಕ್ಕೆ ಸಾರ್ವಕಾಲಿಕವಾಗಿ ಎಲ್ಲಾ  ವರ್ಗದ ಮಹಿಳೆಯರಿಗೆ ಪ್ರವೇಶಕ್ಕೆ ನಿರ್ಬಂಧವಿತ್ತು, ಶನಿ ಶಿಂಗಣಾಪುರ ಕೇವಲ ಯಾತ್ರಾ ಸ್ಥಳವಾಗಿದ್ದು ಅಲ್ಲಿಗೆ ಭೇಟಿ ನೀಡಬೇಕಾದರೆ ಯಾವುದೇ ಪೂರ್ವ ನಿರ್ಬಂಧಗಳಿರುವುದಿಲ್ಲ. (ಅದಕ್ಕೂ ಯಾವುದಾದರೂ ಹಿನ್ನೆಲೆ ಇದ್ದಿರಬಹುದು, ಅದು ಬೇರೆ ವಿಷಯ) ಆದರೆ ಸುಮಾರು 48 ದಿನಗಳ ಕಠಿಣ ವ್ರತಾಚರಣೆಯೊಂದಿಗೆ ಪಾದಯಾತ್ರೆ ಮೂಲಕವೇ ದೇಗುಲಕ್ಕೆ ಪ್ರವೇಶಿಸುವ ಆಚರಣೆ ಶಬರಿಮಲೆಯಲ್ಲಿರುವ ಪದ್ಧತಿ. ಹೀಗಾಗಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಇರುವ ನಿರ್ಬಂಧ‌ಗಳ ಹಿನ್ನೆಲೆಯನ್ನು ಸ್ತ್ರೀಯರ ದೇಹ ಪ್ರಕೃತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ದಕ್ಷಿಣ ಭಾರತದ ದೇವಸ್ಥಾನಗಳ ನಿರ್ಮಾಣದಲ್ಲಿ ಇರುವ ಕೆಲವೊಂದು ವಿಶಿಷ್ಟ ವಿಚಾರಗಳ ಬಗ್ಗೆ ತಜ್ಞರ ಪ್ರತಿಪಾದನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯ. 

ಅದು ಹೀಗೂ ಇರಬಹುದಲ್ಲ?
ದಕ್ಷಿಣ ಭಾರತದ ಬಹುತೇಕ ಹಿಂದೂ ಮಂದಿರಗಳು ನಿರ್ದಿಷ್ಟವಾದ ಕಾಂತಕ್ಷೇತ್ರದಲ್ಲಿವೆ. ಕಾಂತಕ್ಷೇತ್ರಗಳ ಈ ದೇವಾಲಯಗಳಲ್ಲಿ ವಿಗ್ರಹದ ಪ್ರಾಣ ಪ್ರತಿಷ್ಠೆಯಾಗುವ ಸಮಯದಲ್ಲಿ ಪ್ರತಿಷ್ಠಾಪಕರು ವಿಗ್ರಹಕ್ಕೆ ಜೀವ ಶಕ್ತಿಯನ್ನು ವರ್ಗಾಯಿಸುತ್ತಾರೆ. ಹಾಗಾಗಿ ವಿಗ್ರಹ ಮತ್ತು ದೇವಾಲಯದ ಸಂಪೂರ್ಣ ಪರಿಸರದಲ್ಲಿ ಅವಿಛಿನ್ನ ಧನಾತ್ಮಕ ಶಕ್ತಿಯೊಂದು ಪ್ರವಹಿಸುತ್ತಿರುತ್ತದೆ.

ಮನುಷ್ಯನ ದೇಹದಲ್ಲಿಯೂ ವಿವಿಧ ಹಂತಗಳಿವೆ. ಪ್ರಾಣ ಅಥವಾ ಜೀವ ಶಕ್ತಿ ಎಂಬುದು ಶರೀರ ಶಕ್ತಿಯಾಗಿದ್ದು ಅದು ನಮ್ಮ ದೇಹದ ನರನಾಡಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಅದು ನಮ್ಮ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. 

ಮಹಿಳೆಯರ ದೇಹ ಪ್ರಕೃತಿ ಋತು ಚಕ್ರದ ಅವಧಿಯಲ್ಲಿ ಸೂಕ್ಷ್ಮವಾಗಿರುವುದರಿಂದ ಈ ರೀತಿಯ ದೇವಾಲಯಗಳಿಗೆ ಪ್ರವೇಶದ ಮೇಲೆ ನಿರ್ಭಂಧ ವಿಧಿಸಿರಬಹುದು. ಆದರೆ ನ್ಯಾಯಾಲಯದಲ್ಲಿ ಈ ಸಂಬಂಧದ ವಿಚಾರಣೆ ನಡೆದಾಗ ಇಂತಹ ತಜ್ಞರ ಅಭಿಪ್ರಾಯಗಳನ್ನು ಸಂಬಂಧಿಸಿದ ಯಾರೊಬ್ಬರೂ ಹಾಜರು ಪಡಿಸಿರಲಿಲ್ಲ. ಪತ್ರಿಕಾ ವರದಿಗಳ ಆಧಾರದಲ್ಲಿ ಒಂದು ಹಂತದಲ್ಲಿ ನ್ಯಾಯವಾದಿಯೊಬ್ಬರು ಶಬರಿಮಲೆ ಇನ್ನೊಂದು ಅಯೋಧ್ಯೆ ಆಗಬಹುದು ಎಂಬ ಎಚ್ಚರಿಕೆ ಮಾತುಗಳನ್ನು ಆಡಿದ್ದರೇ ಹೊರತು ಸಮರ್ಥ ದಾಖಲೆಗಳನ್ನು ಮಂಡಿಸಲಿಲ್ಲ. 

ನ್ಯಾಯಾಧೀಶರು ತಮ್ಮ ಮುಂದೆ ಮಂಡಿಸಿದ ದಾಖಲೆಗಳನ್ನು ಆಧರಿಸಿ ತೀರ್ಮಾನಕ್ಕೆ ಬರುವರೇ ಹೊರತು ಅದರಾಚೆಗೆ ವ್ಯವಹರಿಸುವ ಬಗ್ಗೆ ನ್ಯಾಯಾಲಯ ಪರಿಗಣಿಸುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ, ರಾಜಕೀಯ ದೃಷ್ಟಿಯಿಂದ ನೋಡದೆ ಮತ್ತೂಮ್ಮೆ ಈ ಕುರಿತು ಮೇಲ್ಮನವಿ ಸಲ್ಲಿಸಿ ಸಮರ್ಥವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನಿರ್ಧಾರಕ್ಕೆ ಬರುವುದು ಸಾಧ್ಯವಿದೆ. ಅದರ ಬದಲು ಈಗಿನಂತೆ ಸಾಂವಿಧಾನಿಕ ಪ್ರಾಧಿಕಾರವಾಗಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬೀದಿಯಲ್ಲಿ ನಿಂತು ಪ್ರತಿಭಟಿಸುವುದು ಪ್ರಜಾಪ್ರಭುತ್ವವನ್ನು ಅಣಕಿಸಿದಂತಲ್ಲವೇ?

 ಮೋಹನದಾಸ ಕಿಣಿ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.