ಗಮನಿಸಿದಿರಾ, ಭಾರತವೀಗ ಸಂಭ್ರಮಿಸುತ್ತಿದೆ!


Team Udayavani, Jan 3, 2019, 12:30 AM IST

x-40.jpg

ನಿರ್ವಿವಾದವಾಗಿ ಒಪ್ಪಿಕೊಳ್ಳಬೇಕಾದ ವಿಷಯವೆಂದರೆ ದೇಶ ಸಂಭ್ರಮಿಸುತ್ತಿದೆ. ಈ ಸಂಭ್ರಮ ದೇಶದ ಪ್ರಸ್ತುತ ಸಾಮಾಜಿಕ, ಆರ್ಥಿಕ ಸ್ಥಿತಿಗೆ ಕನ್ನಡಿಯಾಗಿರುವುದನ್ನೂ ನಾವು ಗಮನಿಸಿಕೊಳ್ಳಬೇಕು.

ಮೊದಲು ಟೆನಿಸನ್‌ ಎನ್ನುವ ಬ್ರಿಟಿಷ್‌ ಕವಿಯ ಕವಿತೆಯೊಂದರ ಕುರಿತು ಹೇಳಿಕೊಳ್ಳುತ್ತೇನೆ. ಓಡಿಸ್ಸಿ ಮಹಾಕಾವ್ಯದ ಘಟನೆಯೊಂದನ್ನು ಆಧರಿಸಿ ಬರೆಯಲಾದ ಕವಿತೆ ಅದು. ಅಲ್ಲಿ ಪ್ರಯಾಣ ನಿರತರಾದ ಒಂದು ಹಡಗಿನ ಜನರು ಮರಳಿ ತಮ್ಮ ಮನೆಗೆ ಬರುತ್ತಿರುತ್ತಾರೆ. ದಾರಿಯಲ್ಲಿ ಅಕಸ್ಮಾತ್‌ ಆಗಿ ಒಂದು ದ್ವೀಪದಲ್ಲಿ ಇಳಿದುಕೊಳ್ಳುತ್ತಾರೆ. ಆಗ ಸಂಜೆಯ ಸಮಯ. ಆ ದ್ವೀಪ ಗಿರಿಗಳು, ಕಂದರಗಳು, ಹೊನ್ನಿನ ಬಣ್ಣದ ಬೀಚ್‌ಗಳು ಇತ್ಯಾದಿಗಳಿಂದ ತುಂಬಿಕೊಂಡಿರುವ ಪ್ರದೇಶ. ಅತಿ ಸುಂದರ. 

ಬಂದವರನ್ನು ಸ್ವಾಗತಿಸಿದ ಆ ದ್ವೀಪದ ಜನ ಅವರಿಗೆ ತಿನ್ನಲು ಸವಿಯಾದ ಕಮಲದ ಕಾಂಡವನ್ನು ನೀಡುತ್ತಾರೆ. ಅದನ್ನು ತಿಂದಿದ್ದೇ ತಡ ಪ್ರವಾಸಿಗರು ಮತ್ತಿಗೊಳಗಾಗುತ್ತಾರೆ. ಮಾದಕತೆ ಅವರ ಮನಸ್ಸುಗಳನ್ನು ತುಂಬಿಕೊಳ್ಳುತ್ತದೆ. ಈಗ ಸಂಭ್ರಮವೇ ಸಂಭ್ರಮ. ಅವರಿಗೆ ಬೇರೆಲ್ಲಿಗೂ ಹೋಗಬೇಕೆಂದು ಅನಿಸುವುದೇ ಇಲ್ಲ. ನಿರಂತರ ಸಂಭ್ರಮದಲ್ಲಿ, ಸಂತೋಷದಲ್ಲಿ ಅವರು ಮುಳುಗಿ ಹೋಗುತ್ತಾರೆ. ಸಂಭ್ರಮ ಅವರನ್ನು ಮುಚ್ಚಿ ಹಾಕಿಬಿಡುತ್ತದೆ. “ಲೋಟಸ್‌ ಈಟರ್’ ಎನ್ನುವ ಕವಿತೆ ಇರುವುದು ಈ ರೀತಿ ಇಡೀ ಒಂದು ಜನ ಸಮೂಹವೇ ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳುವುದರ ಕುರಿತು.

ಈ ಕವಿತೆಯ ಕುರಿತು ಹೇಳಿಕೊಳ್ಳಲು ಕಾರಣವಿದೆ. ಪದ್ಯದಲ್ಲಿ ಬರುವ ಜನರು ಅನುಭವಿಸುವಂತಹುದೇ ಸಂಭ್ರಮದ ವಾತಾವರಣ ನಮ್ಮ ಇಡೀ ದೇಶವನ್ನೆಲ್ಲ ಮುತ್ತಿಕೊಂಡಿತು. ಈ ಸಮಯ ಆನಂದಮಯವಾಗಿ ಹೋಯಿತು. ಹೊಸ ವರ್ಷದ ಸಂಭ್ರಮಾಚರಣೆಯ ಉತ್ಸಾಹ ವರ್ಣನಾತೀತ. ಕೆಲವು ವಿಷಯ ಹೇಳಬೇಕಾದರೆ ಇಡೀ ದೇಶದಲ್ಲಿ ಪ್ರವಾಸಿ ತಾಣಗಳೆಲ್ಲವೂ ತುಂಬಿ ತುಳುಕಿದವು. ಅಷ್ಟೇ ಅಲ್ಲ, ಸುಂದರವೆನಿಸುವ ಎಲ್ಲ ಸ್ಥಳಗಳೂ ಪ್ರವಾಸಿ ತಾಣಗಳಾಗಿ ಹೋದವು. ಬಣ್ಣ ಬಣ್ಣದ ಕಾರುಗಳು ರಸ್ತೆಗಳನ್ನೆಲ್ಲ ತುಂಬಿಕೊಂಡುಬಿಟ್ಟವು. ಬೈಕ್‌ಗಳಲ್ಲಿ ಇತರ ವಾಹನಗಳಲ್ಲಿಯೂ ಎಲ್ಲರೂ ಮನೆಗಳಿಂದ ಹೊರಬಂದುಬಿಟ್ಟರು. ಬೀಚ್‌ಗಳು, ರೆಸಾರ್ಟ್‌ಗಳು, ಸಾರ್ವಜನಿಕ ಸ್ಥಳಗಳು, ಚಿತ್ರ ಮಂದಿರಗಳು, ಮಾಲ್‌ಗ‌ಳು, ಮಾರ್ಕೆಟ್‌ಗಳು, ದಾರಿ ಬದಿಯ ಭಜಿ, ಮಿರ್ಚಿ ಅಂಗಡಿಗಳು, ಚಾಟ್‌ ಅಂಗಡಿಗಳು ತುಂಬಿ ತುಳುಕಿದವು. ಹೋಟೆಲ್‌ಗ‌ಳಲ್ಲಿ ಊಟ ಬೇಕಾದರೆ ತಾಸುಗಟ್ಟಲೆ ಕಾಯುವಂಥ ಸ್ಥಿತಿ. ದೊಡ್ಡ ದೊಡ್ಡ ಶೋ ರೂಮ್‌ಗಳು, ಬಟ್ಟೆಗಳು, ಬಂಗಾರ, ವಜ್ರದ ಅಂಗಡಿಗಳು ಕೂಡ ಯಾವ ರೀತಿ ತುಂಬಿರುತ್ತವೆಂದರೆ ಅಲ್ಲಿ ಸೇಲ್ಸ್‌ ಗರ್ಲ್ಸ್‌ಗಳಿಗೆ, ಬಾಯ್ಸಗಳಿಗೆ ಉಸಿರು ಬಿಡಲು, ತುರಿಸಿಕೊಳ್ಳಲು ಸಮಯವಿರುವುದಿಲ್ಲ.

ಉತ್ಸಾಹವೇ ಉತ್ಸಾಹ. ಸುದ್ದಿಗಳ ಪ್ರಕಾರ ಕಾರವಾರದ ಬೀಚ್‌ ಮೇಲೆ ನವ ವರ್ಷಾಚರಣೆಯ ಸಂದರ್ಭದಲ್ಲಿ ಸಾವಿರಾರು ಜನ ಸೇರಿದರು. ಪ್ರಸಿದ್ಧ ಪ್ರವಾಸಿ ತಾಣ ದಾಂಡೇಲಿಯಲ್ಲಿ ಒಂದು ವಸತಿ ಕೂಡ ಲಭ್ಯವಿರಲಿಲ್ಲ. ಹೀಗೆಯೇ ಉತ್ತರ ಕನ್ನಡ ಜಿಲ್ಲೆ, ಗೋವಾ ರಾಜ್ಯ, ದೇಶದಾದ್ಯಂತದ ಪ್ರಕೃತಿ ಧಾಮಗಳು, ಬೀಚುಗಳು, ರೆಸಾರ್ಟಗಳಲ್ಲಿ ಜನ ತುಂಬಿಕೊಂಡರು. ಕೋಟಿಗಟ್ಟಲೆ ಇರಬಹುದು.

ಸಂಭ್ರಮದ ವಿವರಗಳನ್ನು ಇನ್ನೂ ಒಂದು ಚೂರು ಗಮನಿಸಿಕೊಳ್ಳಬೇಕು. ಎಲ್ಲೆಲ್ಲೂ ನೂರಾರು ಕಾರುಗಳು ಕನ್ನಡಕ ತೊಟ್ಟ ಸುಂದರಿಯರು. ಸದೃಢ ಮೈಕಟ್ಟುಗಳ, ಆರು ಪ್ಯಾಕ್‌ಗಳ ಯುವಕರು. ವಯಸ್ಸಾದರೂ ಸೌಂದರ್ಯ ಪ್ರಜ್ಞೆ ಕಳೆದುಕೊಳ್ಳದ ಗಂಡಸರು ಮತ್ತು ಹೆಂಗಸರು. ವಯಸ್ಸಾಗುವುದು ನಿಂತು ಹೋಗಿರುವ ಮಹಿಳೆಯರು. ತಾಯಿ, ಮಗಳು, ಮೊಮ್ಮಗಳು ಎಲ್ಲರೂ ಹಾಕಿಕೊಳ್ಳುವುದು ಹೆಚ್ಚು ಕಡಿಮೆ ಒಂದೇ ರೀತಿಯ, ಶಾರೀರಿಕ ಸೌಂದರ್ಯವನ್ನು ಧಾರಾಳವಾಗಿ ಬಿಚ್ಚಿಡುವ ಬಟ್ಟೆಗಳು. ಮುಖ ಕ್ಲೀನ್‌ ಆಗಿ ಬ್ಲೀಚ್‌ ಮಾಡಿಸಿಕೊಂಡು ಅಥವಾ ಲೈಟ್‌ ದಾಡಿ ಮಾಡಿಕೊಂಡ ಅಥವಾ ಫ್ಯಾಷೆನೆಬಲ್‌ ದಾಡಿ ಬಿಟ್ಟುಕೊಂಡ ಮಿರುಗುವ ಮುಖದ, ತಮ್ಮ ಪ್ರೇಯಸಿಯ ಕೈ ಹಿಡಿದು ನಿದ್ದೆಯಲ್ಲಿರುವಂತೆ ನಡೆಯುವ ಗಂಡಸರು. ಎದೆ ತುಂಬಿ ನಡೆಯುವ ಗಜಗಮನೆಯರು, ಸಂಭ್ರಮಿಸುವ ಮಕ್ಕಳು. ಎಲ್ಲರ ಮುಖದಲ್ಲೂ ಸಂತೋಷ, ಗಲಗಲ ನಗು, ಉತ್ಸಾಹ ಹರಿಯುವ ತೊರೆ. ಎಲ್ಲೆಲ್ಲಿಯೂ ಕಾಯಬೇಕು. ಪಾರ್ಕ್‌ ಮಾಡಲು, ತಿಂಡಿ ತಿನ್ನಲು, ಟಾಯ್ಲೆಟ್‌ ಬಳಸಲು. ಎಲ್ಲೆಲ್ಲಿಯೂ. ಹೆಜ್ಜೆ ಹೆಜ್ಜೆಗೂ ಖರ್ಚಿಗೆ ಕನಿಷ್ಟವೆಂದರೂ ಐದು ನೂರು ರೂಪಾಯಿಯ ನೋಟನ್ನೇ ತೆಗೆಯಬೇಕು. ಅಚ್ಚರಿ ಎಂದರೆ ಅದು ಯಾವುದೂ ಸಂಭ್ರಮವನ್ನು ಕಳೆಗುಂದಿಸಿದಂತೆ ಕಾಣಲಿಲ್ಲ.

 ಮೊಮ್ಮಕ್ಕಳಾದವರು ಕೂಡ ಈಗ ಜೀನ್ಸ್‌ ತೊಟ್ಟು ಅಥವಾ ಬರ್ಮುಡಾ ತೊಟ್ಟು ಸಂಭ್ರಮಿಸುವವರೇ. ಯಕ್ಷಗಾನದಲ್ಲಿ ಬರುವ ಹಾಡಿನ ಹಾಗೆ ಈಗ  “”ಎಲ್ಲೆಲ್ಲು ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ, ಮಾಮರವು ಹೂತಿದೇ, ಸೊಬಗೇರಿ ನಿಂತಿದೆ.” ಟೆನ್ಸಿಸನ್‌ನ ಕವಿತೆಯಲ್ಲಿ ಬರುವ ಹಾಗೆ ಎಲ್ಲೆಲ್ಲೂ ಮಾದಕತೆ, ಸಂತೃಷ್ಟಿ ಜೀವನವನ್ನು ಕ್ಷಣ ಕ್ಷಣವೂ ಸವಿಯುವ ಉತ್ಸಾಹ. ಅರ್ಥವೆಂದರೆ ಭಾರತ ಸಂಭ್ರಮಿಸುತ್ತಿದೆ. ಏಕೋ, ಏನೋ ಒಮ್ಮೆಲೇ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹೊಸ ವರ್ಷ ಇತ್ಯಾದಿ ದಿನಗಳು ದೊಡ್ಡ ಸಂಭ್ರಮಾಚರಣೆಗಳಾಗಿ ಹೋಗಿವೆ. ಸಂಭ್ರಮಕ್ಕೆ ಎಲ್ಲೆಗಳೇ ಇಲ್ಲದ್ದನ್ನು ನೋಡುವುದಿದ್ದರೆ ಬೆಂಗಳೂರಿನಲ್ಲಿ ಎಮ್‌.ಜಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆಯನ್ನು ಗಮನಿಸಬೇಕು. ರಸಿಕರ ಸ್ವರ್ಗ ಅದು. ಅದು ಯಾವ ತುದಿಗೆ ಹೋಗುತ್ತದೆಂದರೆ ಕೊನೆ ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಬೇಕಾಗುತ್ತದೆ.

ವಿಶೇಷವಾದ ಗಮನಾರ್ಹವಾದ ವಿಷಯ ಇದು. ಏಕೆಂದರೆ ಬಹುಶಃ ಒಂದು ನಾಗರಿಕತೆಯಾಗಿ ನಮ್ಮ ದೇಶದ ಮನಸ್ಸು ತಾತ್ವಿಕತೆಗೆ ಓರಿಯಂಟ್‌ ಆದುದು ಎಂದೇ ಹೇಳಲಾಗಿದೆ. ಅಂದರೆ ನಮ್ಮ ನಾಗರಿಕತೆ ಇಹಕ್ಕಿಂತಲೂ ಪರದತ್ತ ಹೆಚ್ಚು ಮನಸ್ಸು ಮಾಡಿದ್ದು. ನಮ್ಮಲ್ಲಿ ಹುಟ್ಟಿಕೊಂಡಿರುವ ಯಾವ ಧರ್ಮವೂ ಇಹ ಜೀವನವನ್ನು ಸೆಲೆಬ್ರೇಟ್‌ ಮಾಡುವ ಕುರಿತು ಹೇಳುವುದಿಲ್ಲ. ನಮ್ಮ ತಾತ್ವಿಕತೆಯಲ್ಲಿ ಜೀವನ ಇರುವುದು ಮೋಕ್ಷ ಪಡೆಯುವುದಕ್ಕಾಗಿ. ತ್ಯಾಗ ಮಾಡುವುದು, ಬಯಕೆಗಳನ್ನು ಮೀರುವುದು, ಇಹದ ಭೋಗಗಳನ್ನು ತ್ಯಜಿಸುವುದು. ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ರಾಗ ದ್ವೇಷಗಳನ್ನು ಗೆಲ್ಲುವುದು, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ಗೆಲ್ಲುವುದು, ಗೆಲ್ಲುವ ಮೂಲಕ ಸ್ಥಿತ ಪ್ರಜ್ಞತೆಯನ್ನು ಗಳಿಸುವುದು ನಮ್ಮ ನಾಗರಿಕತೆಯ ಪ್ರಮುಖ ಅಂಶಗಳು. ಈ ರೀತಿಯಾಗಿ ಎಲ್ಲವನ್ನೂ ಬಿಡುವ ಆಸೆ ವೇದಕಾಲದಲ್ಲಿ ಹೇಳಲಾದ ಜೀವನದ ನಾಲ್ಕು ಅವಸ್ಥೆಗಳಲ್ಲಿಯೇ ಇಂಗಿತವಾಗಿದೆ. ಅದೇನೆಂದರೆ ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. 

ಅಂದರೆ ಜೀವನದ ಕೊನೆಯ ಎರಡು ಭಾಗಗಳ ಚಲನೆ ಇರುವುದು ಮೋಕ್ಷದ ದಾರಿಯಲ್ಲಿಯೇ. ಜೀವನದ ಇಹದ ಮಹತ್ವ ಇದ್ದಿದ್ದು ಸತ್ಕಾಯಗಳ ಮೂಲಕ ಪುಣ್ಯಗಳಿಸಿ ಹುಟ್ಟು, ಸಾವುಗಳ ಸಂಕೋಲೆಯಿಂದ ತಪ್ಪಿಸಿಕೊಂಡು ಚಿರವಾದ ನಕ್ಷತ್ರವಾಗಿಸುವ ಸಾಧನವಾಗಿ ಮಾತ್ರ. ಇನ್ನೂ ಒಂದು ವಿಷಯ ಗಮನಿಸಿಕೊಳ್ಳಬೇಕು. ಏನೆಂದರೆ ದೇಶದಲ್ಲಿ ಬಾಳಿ ಬದುಕಿದ, ಬದುಕಿ ನಾಗರಿಕತೆಗೆ ದಾರಿದೀಪವಾದ ಶ್ರೇಷ್ಟ ವ್ಯಕ್ತಿಗಳ ಬದುಕುಗಳು ಇದೇ ಪಾಠಗಳನ್ನೇ ಹೇಳುತ್ತವೆ. ಸಿದ್ದಾರ್ಥ ಎನ್ನುವ ರಾಜಕುಮಾರ ಇಹದ ಸರ್ವ ಸುಖವನ್ನೂ ಬಿಟ್ಟು ಜೀವನದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದ. ಜೈನ ಧರ್ಮವೂ ಅದನ್ನೇ ಹೇಳುತ್ತದೆ. ಬಾಹುಬಲಿ ಎಲ್ಲವನ್ನೂ ತ್ಯಜಿಸಿ ಆಕಾಶದತ್ತ ಎತ್ತರಕ್ಕೆ ಬೆಳೆದು ನಿಂತ. ಹಿಂದೂ ಧರ್ಮದ ಸಂತರು ಬದುಕಿದ್ದು ಕೂಡ ಹೀಗೆ. ಮೀರಾಬಾಯಿ, ಕನಕದಾಸ, ಪುರಂದರದಾಸರು, ಅಕ್ಕಮಹಾದೇವಿ ಎಲ್ಲರೂ ಇದೇ ಪಂಥಕ್ಕೆ ಸೇರಿದವರು. ಒಟ್ಟಾರೆ ಹೇಳಬೇಕಾದದ್ದೆಂದರೆ ನಮ್ಮ ಪರಂಪರೆಯ, ಸಂಸ್ಕೃತಿಯ ಸ್ವರೂಪ ಐತಿಹಾಸಿಕವಾಗಿ ಬೇರೆಯೇ ಇತ್ತು. ಇದೆ. 

ಅಂತಹ ಹರಿಯುವ ನದಿ ಇಂದು ತನ್ನ ಹರಿವಿನ ದಿಸೆಯನ್ನು ಬದಲಾಯಿಸಿ ಕೊಂಡಿದೆಯೇ ಎನ್ನುವುದು ಈ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ. ಮೂಲ ಸಂಸ್ಕೃತಿಯೇ ಬದಲಾಗಿ ಹೋಯಿತೇ? ಅಥವಾ ಹಣದ ಹರಿವಿನ ಹೊಳೆ ತುಂಬಿಕೊಳ್ಳುತ್ತ ಹೋದಂತೆ ಸಂಸ್ಕೃತಿಗಳು ತಮ್ಮನ್ನು ತಾವು ಬದಲಾಯಿಸಿಕೊಂಡು ಬಿಡುತ್ತವೆಯೇ ಎನ್ನುವ ಪ್ರಶ್ನೆ ಕೂಡ ಇಲ್ಲಿ ಹುಟ್ಟಿಕೊಳ್ಳುತ್ತದೆ.

   ಅದಿರಲಿ. ಪ್ರಶ್ನೆಗಳೇನೇ ಇರಲಿ, ನಿರ್ವಿವಾದವಾಗಿ ಒಪ್ಪಿಕೊಳ್ಳಬೇಕಾದ ವಿಷಯವೆಂದರೆ ದೇಶ ಸಂಭ್ರಮಿಸುತ್ತಿದೆ. ಈ ಸಂಭ್ರಮ ದೇಶದ ಪ್ರಸ್ತುತ ಸಾಮಾಜಿಕ, ಆರ್ಥಿಕ ಸ್ಥಿತಿಗೆ ಕನ್ನಡಿಯಾಗಿರುವುದನ್ನೂ ನಾವು ಗಮನಿಸಿಕೊಳ್ಳಬೇಕು. ಏನೆಂದರೆ ನಿಜವಾಗಿ ಇಂದು ದೇಶದ ಆರ್ಥಿಕ ಸ್ಥಿತಿ ತುಂಬ ಸುಧಾರಿಸಿದೆ. ಮೊದಲು ನಾವು ಅಮೆರಿಕಾದ ಕುರಿತು ಹೇಳುತ್ತಿದ್ದೆವು. ಏನೆಂದರೆ ಅಲ್ಲಿ ಕೆಲಸಗಾರರು ಕೂಡ ಕಾರಿನಲ್ಲಿ ಬರುತ್ತಾರೆ ಎಂದು. ಇಂದು ನಮ್ಮ ದೇಶದಲ್ಲಿಯೂ ಅಂತಹುದೇ ಸ್ಥಿತಿ ಬಂದಿದೆ. ಹೆಚ್ಚು ಕಡಿಮೆ ಕಾರುಗಳು ಎಲ್ಲರ ಬಳಿಯೂ ಬಂದಿದೆ. ಬೈಕ್‌ಗಳಂತೂ ಮನೆಗೆ ಮೂರು ನಾಲ್ಕು ಆಗಿ ಹೋಗಿವೆ. ಬಹುಶಃ ಅತಿ ಬಡವನೆಂದು ಹೇಳಬೇಕಾದ ವ್ಯಕ್ತಿಯ ಬಳಿ ಕೂಡ ಆತನ ಹಂತದ ಮನರಂಜನೆಗೆ ಮತ್ತು ಸಂಭ್ರಮಾಚರಣೆಗೆ ಸಾಲುವಷ್ಟು ಹಣವಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಒಮ್ಮೆ ಹೇಳಿದ್ದರು ಏನೆಂದರೆ ದೇಶದಲ್ಲಿ ಭಿಕ್ಷುಕನ ಕೈಯಲ್ಲಿ ಕೂಡ ಮೊಬೈಲ್‌ಗ‌ಳು ಇರುವಂತೆ ಮಾಡುತ್ತೇನೆ ಎಂದು. ಆ ಮಾತು ಅಕ್ಷರಶಃ ಸತ್ಯವಾಗಿ ಹೋಗಿದೆ. ಬಹುಶಃ ನಮ್ಮ ದೇಶದಲ್ಲಿ ದಟ್ಟ ದಾರಿದ್ರÂ ಮಾಯವಾಗಿ ಹೋಗಿದೆ. ನಮ್ಮ ಆರ್ಥಿಕ ಸರ್ವೆಗಳನ್ನು ಪುನರ್‌ವಿಮರ್ಶಿಸಿಕೊಳ್ಳಬೇಕು. 

ಎರಡನೆಯ ವಿಷಯವೆಂದರೆ ಮನರಂಜನೆ ಅಥವಾ ಎಂಜಾಯ್‌ಮೆಂಟ್‌ ಇಂದು ಕೇವಲ ಗಂಡು ಮಕ್ಕಳಿಗಾಗಿ ಇಲ್ಲ. ಸ್ತ್ರೀಯರೂ ಇದರಲ್ಲಿ ಸಮಾನ ಪಾಲುದಾರರಾಗಿದ್ದಾರೆ. ಸ್ತ್ರೀಯರೂ ಮೈ ಚಳಿ ಬಿಟ್ಟು ಆನಂದಿಸುತ್ತಿದ್ದಾರೆ ಎಂದೇ ಹೇಳಬೇಕು. ಸಂಭ್ರಮದಲ್ಲಿ ಅಕಸ್ಮಾತ್‌ ಸೆರಗು ಜಾರಿ ಹೋದರೆ/ಬಟ್ಟೆಗಳು ಜಾರಿ ಹೋದರೆ, ಬೇರೆ ಗಂಡಸರ ಮೈ-ಕೈ ತಾಗಿ ಹೋದರೆ ಇತ್ಯಾದಿ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟು ಗಂಡಸರ ಸಮಾನವಾಗಿ ಸಂಭ್ರಮಿಸಲಾರಂಭಿಸಿದ್ದಾರೆ ಎಂದೇ ಭಾವನೆ. ಗಂಡು ಹೆಣ್ಣು ಎಲ್ಲ ರೀತಿಯ ಸಂತೋಷಾಚರಣೆಗಳಲ್ಲಿ ಸಮಾನರೇ ಆಗಿ ಹೋಗಿದ್ದಾರೆ.ಯುವಕ ಯುವತಿಯರ ದಂಡುಗಳೇ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿರುವುದನ್ನು ಕಾಣುವುದು ಸಾಮಾನ್ಯವಾಗಿ ಹೋಗಿದೆ. ಇಬ್ಬರದೂ ಬಟ್ಟೆಗಳು ವರ್ತನೆಗಳು ಎಲ್ಲವೂ ಒಂದೇ. ಹೆಣ್ಣು ಗಂಡು ಬೇಧಗಳೇನೂ ಇಲ್ಲ. ಹಾಗೆಯೇ ಹಾಗೂ ಚಿಕ್ಕ ವಿಷಯಗಳು ದೊಡ್ಡ ವಿಷಯಗಳಾಗಿ ಉಳಿದಿಲ್ಲ. ಸ್ತ್ರೀ ಸಮಾನತೆ ಇಲ್ಲಿ ಬಂದೇ ಹೋಗಿದೆ. ಇನ್ನೂ ಒಂದು ವಿಷಯವೆಂದರೆ ಈ ಸಂಭ್ರಮ ಜಾತಿ, ಧರ್ಮ ಇತ್ಯಾದಿ ಬೇಲಿಗಳನ್ನು ತೆಗೆದು ಹಾಕಿಬಿಟ್ಟಿದೆ ಎಂದೇ ಅನಿಸುತ್ತದೆ. ಏಕೆಂದರೆ ಎಲ್ಲ ಧರ್ಮ ಜಾತಿಯವರು ಈ ಆನಂದೋತ್ಸವದಲ್ಲಿ ಕರಗಿ ಹೋಗಿದ್ದಾರೆ. ಬಹುಶಃ ಧರ್ಮ, ಜಾತಿ, ಇತ್ಯಾದಿ ಉಳಿದಿರುವುದು ರಾಜಕೀಯವಾಗಿ ಮಾತ್ರ. ಸಂಭ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ಜಾತಿ, ಧರ್ಮಗಳೂ ಒಂದೇ ಆಗಿ ಹೋಗಿವೆ. ಮುಂದುವರಿದವರು ಹಿಂದುಳಿದವರು ಇತ್ಯಾದಿ ವಿಭಾಗಗಳು ಇರುವುದೂ ಮತ್ತೆ ರಾಜಕೀಯವಾಗಿ ಮಾತ್ರ. ಉಡುಗೆ ತೊಡುಗೆ ವಿಷಯದಲ್ಲಿಯೂ ಹಾಗೆಯೇ: ಸ್ತ್ರೀ-ಪುರುಷ, ಜಾತಿ, ಧರ್ಮ ಎಲ್ಲವೂ ಒಂದೇ ಆಗಿ ಹೋಗಿವೆ.ಎದ್ದು ಕಾಣುತ್ತಿರುವುದು ಸಂಭ್ರಮವೊಂದೇ. ಭಾರತ ಸಂಭ್ರಮಿಸುತ್ತದೆ.

ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.