CONNECT WITH US  

ಪ್ರೇಯಸಿನಾ ಕಿಡ್ನಾಪ್ ಮಾಡಿ 70 ಸಾವಿರಕ್ಕೆ ಹರಾಜಿನಲ್ಲಿ ಮಾರಿದ ಪ್ರೇಮಿ

ರಾಮಪುರ, ಉತ್ತರ ಪ್ರದೇಶ: ಬಾಯ್‌ ಫ್ರೆಂಡ್‌ ಒಬ್ಬ ಅಪ್ರಾಪ್ತ ವಯಸ್ಸಿನ ತನ್ನ ಪ್ರಿಯತಮೆಯನ್ನು ಅಪಹರಿಸಿ, ಬಳಿಕ ಹರಾಜಿನಲ್ಲಿ ಆಕೆಯನ್ನು 70,000 ರೂ.ಗಳಿಗೆ ಮಾರಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗೆ ಇನ್ನೂ ಹುಡುಕಾಡುತ್ತಿದ್ದಾರೆ. ಆದರೆ ಹುಡುಗಿಯನ್ನು ಪಾರು ಮಾಡುವಲ್ಲಿ ಅವರ ಸಫ‌ಲರಾಗಿದ್ದಾರೆ.

ತನ್ನ ಗ್ರಾಮದಿಂದ ತನ್ನ ಬಾಯ್‌ ಫ್ರೆಂಡ್‌ನಿಂದಲೇ ಅಪಹರಣಕ್ಕೆ ಗುರಿಯಾಗಿ ಹರಾಜಿನಲ್ಲಿ ಆತನಿಂದ ಮಾರಲ್ಪಟ್ಟ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಉತ್ತರ ಪ್ರದೇಶದ ಸಂಭಾಲ್‌ ಎಂಬಲ್ಲಿ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡರು. ಬಾಯ್‌ ಫ್ರೆಂಡ್‌ನಿಂದ ತನಗಾದ ಗತಿಯನ್ನು ಹುಡುಗಿಯೇ ಪೊಲೀಸರಿಗೆ ವಿವರವಾಗ ತಿಳಿಸಿದಳು.

ತನಿಖಾಧಿಕಾರಿ ಮಹೇಶ್‌ ಪ್ರಸಾದ್‌ ಅವರು ನೀಡಿರುವ ವಿವರಗಳ ಪ್ರಕಾರ ಬದಾವೂಂ ಗ್ರಾಮದ ಆರೋಪಿ ತರುಣನು ಬಾಲಕಿಯನ್ನು ಅಪಹರಿಸಿ ಹಳ್ಳಿಯೊಂದರಲ್ಲಿ ನಾಲ್ಕು ದಿನಗಳ ಕಾಲ ತನ್ನ ವಶದಲ್ಲಿ ಇರಿಸಿಕೊಂಡು ಬಳಿಕ ಆಕೆಯನ್ನು ಹರಾಜಿನಲ್ಲಿ 70,000 ರೂ.ಗಳಿಗೆ ಮಾರಿದ್ದಾನೆ.

ಈ ಬಗ್ಗೆ ಖಚಿತ ಸುಳಿವು ಪಡೆದ ಪೊಲೀಸರು ಮಾಜಿ ಗ್ರಾಮ ಪ್ರಧಾನರೊಬ್ಬರ ಮನೆಗೆ ದಾಳಿ ನಡೆಸಿ ಅಲ್ಲಿ ಕೂಡಿಡಲ್ಪಟ್ಟಿದ್ದ ಹುಡುಗಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಈ ಪ್ರಕರಣದ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ಬಳಿಕ ಅದನ್ನು ರಾಮಪುರ ಜಿಲ್ಲೆಗೆ ವರ್ಗಾಯಿಸಿದ್ದಾರೆ.

Trending videos

Back to Top