CONNECT WITH US  

ಒಂದೇ ರಾಕೆಟ್‌ 20 ಉಪಗ್ರಹ

ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಾದ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೂಂದು ದಾಖಲೆಗೆ ಬರೆದಿದೆ. ಏಕಕಾಲಕ್ಕೆ 20 ಉಪಗ್ರಹ ಉಡ್ಡಯನವನ್ನುಅದು ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಬುಧವಾರನೆರವೇರಿಸಿದೆ.  ಭಾರತದ ಕಾಟೋìಸ್ಯಾಟ್‌-2 ಸೇರಿ 19 ಇತರ ಉಪಗ್ರಹಗಳನ್ನು ಕಕ್ಷೆಗೆ ಕೂರಿಸಲಾಗಿದೆ.ಇಷ್ಟೊಂದು ಪ್ರಮಾಣದಲ್ಲಿ ಉಪಗ್ರಹಗಳನ್ನು ಇಸ್ರೋ ಏಕಕಾಲಕ್ಕೆ ಉಡ್ಡಯನಮಾಡುತ್ತಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಇಸ್ರೋದ ಈ ಹೊಸ ಕಾರ್ಯಕ್ರಮದ ಕುರಿತವಿವರಗಳು ಇಲ್ಲಿವೆ. 

37 ಉಪಗ್ರಹ ಉಡಾವಣೆ ಮೂಲಕ ರಷ್ಯಾ ದಾಖಲೆ
ಇದುವರೆಗೆ ಏಕಕಾಲದಲ್ಲಿ 37 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ರಷ್ಯಾ. ತನ್ನ ಡೆನೆಪ್‌Å ರಾಕೆಟ್‌ನಲ್ಲಿ ಈ ಸಾಧನೆ ಮಾಡಲಾಗಿದೆ. 2014ರಲ್ಲಿ ಈ ಉಡ್ಡಯನ ನಡೆದಿತ್ತು. ಅದೇ ರೀತಿ ಅಮೆರಿಕದ ನಾಸಾ 29 ಉಪಗ್ರಹಗಳನ್ನು 2013ರಲ್ಲಿ ಉಡಾವಣೆ ಮಾಡಿತ್ತು. ಡ್ಯಾಝ್ಲಿಂಗ್‌ ನೈಟ್‌ಟೈಮ್‌ ರಾಕೆಟ್‌ ಅನ್ನು ಇದಕ್ಕೆ ಬಳಸಲಾಗಿತ್ತು.

ಒಂದೇ ಬಾರಿಗೆ 20 ಉಪಗ್ರಹ: ಇಸ್ರೋದಿಂದ ಇದೇ ಮೊದಲು!
ಇಸ್ರೋ ಒಂದೇ ಬಾರಿಗೆ 20 ಉಪಗ್ರಹಗಳ ಉಡಾವಣೆಗೆ ಯೋಜಿಸಿದ್ದು ಇದೇ ಮೊದಲು. ಸಾಮಾನ್ಯವಾಗಿ ಒಂದು
ರಾಕೆಟ್‌ನಲ್ಲಿ ಒಂದೇ ಉಪಗ್ರಹವನ್ನು ಉಡಾವಣೆ ಮಾಡಿದ್ದೇ ಹೆಚ್ಚು. ಆದರೂ ಕೆಲವೊಮ್ಮೆ ವಿವಿಧ ಉಪಗ್ರಹಗಳನ್ನು
ಯಶಸ್ವಿಯಾಗಿ ಕಕ್ಷೆಗೆ ಕೂರಿಸಿದ ಖ್ಯಾತಿ ಇಸ್ರೋಗಿದೆ. 2008 ಏಪ್ರಿಲ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ ಬಳಸಿ ಇಸ್ರೋ 10
ದೇಶ-ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಒಂದು ಸಾಧನೆ. 2015ರಲ್ಲಿ ಮೂರು ಬಾರಿ ಜುಲೈನಲ್ಲಿ
5, ಸೆಪ್ಟೆಂಬರ್‌ನಲ್ಲಿ 7, ಡಿಸೆಂಬರ್‌ನಲ್ಲಿ 6 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಿದ್ದೂ ದಾಖಲೆಯಾಗಿದೆ.
ಇದರ ಪೂರ್ವದಲ್ಲೂ ಏಕಕಾಲದಲ್ಲಿ ಹಲವು ಉಪಗ್ರಹ ಉಡಾವಣೆ ಮಾಡಿದ ಅನುಭವವನ್ನು ಇಸ್ರೋ ಹೊಂದಿತ್ತು.
ಈ ಕುರಿತ ತಂತ್ರಜ್ಞಾನವನ್ನೂ ಇಸ್ರೋ ಹೊಂದಿದ್ದು, ಹೆಚ್ಚು ಹೆಚ್ಚು ಉಪಗ್ರಹಗಳ ಉಡಾವಣೆಗೆ ಸಹಕಾರಿಯಾಗಿದೆ.
ಇದೇ ಕಾರಣಕ್ಕೆ ವಿವಿಧ ದೇಶಗಳು ಈಗ ಇಸ್ರೋ ಎದುರು ಕ್ಯೂ ನಿಂತಿವೆ!

ಒಂದೇ ಬಾರಿಗೆ ಹಲವು ಉಪಗ್ರಹ ಉಡಾವಣೆ ಹೇಗೆ?
ಒಂದು ರಾಕೆಟ್‌ನಲ್ಲಿ ಒಂದು ಉಪಗ್ರಹ ಉಡಾವಣೆಯ ತಂತ್ರಜ್ಞಾನ ವಿಶ್ವದ ಹಲವು ದೇಶಗಳಿಗೆ ಇನ್ನೂ ಲಭ್ಯವಾಗಿಲ್ಲ. ಆದರೆ ಇಸ್ರೋ, ಈ ವಿಚಾರದಲ್ಲಿ ಗಟ್ಟಿಗನೆನಿಸಿಕೊಂಡಿದೆ. ಸದ್ಯ ಏಕಕಾಲಕ್ಕೆ ಹಲವು ಉಪಗ್ರಹ ಉಡಾವಣೆಗೆ ಇಸ್ರೋ ತನ್ನ ಅತಿ ಯಶಸ್ವಿ ರಾಕೆಟ್‌ ಪಿಎಸ್‌ಎಲ್‌ವಿ ಸಿ-34 ಮಾದರಿಯ ರಾಕೆಟ್‌ ಅನ್ನು ಬಳಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ರಾಕೆಟ್‌ನ ಕೊನೆಯ ಹಂತದ ಬಳಿಕ (ತುದಿಯಲ್ಲಿ) ಉಪಗ್ರಹಗಳನ್ನು ಇಡಲಾಗುತ್ತದೆ. ದೊಡ್ಡ ಉಪಗ್ರಹಗಳನ್ನು ಮೇಲ್ಭಾಗದಲ್ಲೂ, ಅದರ ಕೆಳಭಾಗದಲ್ಲಿ ಇತರ ಸಣ್ಣ ಉಪಗ್ರಹಗಳನ್ನೂ ಇಡಲಾಗುತ್ತದೆ. (ಟಿಫಿನ್‌ ಬಾಕ್ಸ್‌ ಮಾದರಿ ಪೇರಿಸಿ ಇಟ್ಟಂತೆ, ಇದನ್ನು ಸ್ಯಾಟಲೈಟ್‌ ಪ್ಯಾಕೇಜ್‌ ಎನ್ನುತ್ತಾರೆ) ಅಂತರಿಕ್ಷಕ್ಕೆ ತಲುಪುತ್ತಿದ್ದಂತೆ ವಿಶಿಷ್ಟ ತಂತ್ರಜ್ಞಾನದ ಮೂಲಕ ಪ್ರತಿಯೊಂದು ಒಂದಾದ ಮೇಲೊಂದರಂತೆ ಕಳಚಿಕೊಳ್ಳುತ್ತದೆ. "ಸ್ಯಾಟಲೈಟ್‌ ಪ್ಯಾಕೇಜ್‌' ಎಂಬ ಉಪಗ್ರಹ ಪೇರಿಸುವ ಮೂರು ವಿಧಾನಗಳು ಸದ್ಯ ಚಾಲ್ತಿಯಲ್ಲಿವೆ. ಇದರೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸುವುದನ್ನು ಕ್ರಮಬದ್ಧವಾಗಿ ನಡೆಸುವುದು, ಎಲ್ಲಾ ಉಪಗ್ರಹಗಳನ್ನು ರಾಕೆಟ್‌ ಒಳಗೆ ಜೋಡಿಸುವುದು ಸವಾಲು. 

ಏಕಕಾಲಕ್ಕೆ ಹಲವು ಉಪಗ್ರಹ ಉಡ್ಡಯನ: ಪ್ರಯೋಜನವೇನು?
ಮೊದಲನೆಯದು ಕಡಿಮೆ ಖರ್ಚಿನಲ್ಲಿ ಹಲವು ಉಪಗ್ರಹದ ಉಡ್ಡಯನವಾಗುತ್ತದೆ. ಎರಡನೆಯದು
ಉಪಗ್ರಹಗಳ ಸರಣಿಯ ಕ್ಷಿಪ್ರ ನಿಯೋಜನೆ. ಪುಟಾಣಿ ಉಪಗ್ರಹ ವ್ಯವಸ್ಥೆಗಳಿದ್ದಲ್ಲಿ (ಭೂ ನಕಾಶೆ, ಸರ್ವೇಕ್ಷಣೆ
ಇತ್ಯಾದಿ) ಏಕಕಾಲದಲ್ಲಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸಬೇಕಾದ ಅಗತ್ಯವಿರುತ್ತದೆ. ಅಂತಹ ಸಂದರ್ಭ ಇದು
ಸಹಕಾರಿ. ಇದರೊಂದಿಗೆ ಸಮಯ, ಪ್ರತಿ ಬಾರಿ ಉಡ್ಡಯನದ ಖರ್ಚುಗಳು, ಮಾನವ ಶ್ರಮ ಇತ್ಯಾದಿ
ಉಳಿಕೆಯಾಗುವುದು ಪ್ಲಸ್‌ ಪಾಯಿಂಟ್‌. 

ಕೇವಲ 26 ನಿಮಿಷದಲ್ಲಿ 20 ಉಪಗ್ರಹಗಳ ಉಡ್ಡಯನ
ಇಸ್ರೋ ಉದ್ದೇಶಿತ 20 ಉಪಗ್ರಹಗಳ ಉಡ್ಡಯನ ಕೇವಲ 26 ನಿಮಿಷದಲ್ಲಿ ಮುಕ್ತಾಯವಾಗಲಿದೆ! ಬುಧವಾರ ಬೆಳಗ್ಗೆ
9.25ಕ್ಕೆ ಪಿಎಸ್‌ಎಲ್‌ವಿ ರಾಕೆಟ್‌ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ. ಅದಾಗಿ 26 ನಿಮಿಷ 30 ಸೆಕೆಂಡ್‌ನ‌ಲ್ಲಿ
ರಾಕೆಟ್‌ ನಭಕ್ಕೇರಿ ಉಪಗ್ರಹಗಳನ್ನು ಕಕ್ಷೆಗೆ ಬಿಡಲಿದೆ. ಮೊದಲು ಇಸ್ರೋ ನಿರ್ಮಿತಿಯ ಕಾಟೋìಸ್ಯಾಟ್‌-2 ಉಪಗ್ರಹ
ಪ್ರತ್ಯೇಕಗೊಳ್ಳಲಿದ್ದು, ನಂತರ ಪುಟಾಣಿ 12 ಡೋವ್‌ ಉಪಗ್ರಹಗಳು ಪ್ರತ್ಯೇಕಗೊಳ್ಳಲಿವೆ. 

ಕಾಟ್ರೋ ಸ್ಯಾಟೇ ಅತಿ ದೊಡ್ಡ ಉಪಗ್ರಹ
ಬುಧವಾರ ಉಡ್ಡಯನವಾಗಲಿರುವ ಪಿಎಸ್‌ಎಲ್‌ವಿ ರಾಕೆಟ್‌ ಒಳಗೆ ಇಸ್ರೋದ ಭೂಸರ್ವೇಕ್ಷಣಾ ಉಪಗ್ರಹ
ಕಾಟೋìಸ್ಯಾಟ್‌ 2 ಅತಿ ದೊಡ್ಡದು. ಉಡ್ಡಯನದಲ್ಲಿನ ಮುಖ್ಯ ಉಪಗ್ರಹ ಇದು 727.5 ಕೇಜಿ ಭಾರ ಹೊಂದಿದೆ.
ಇದರೊಂದಿಗೆ 19 ಪುಟ್ಟ ಉಪಗ್ರಹಗಳಿವೆ. ಇದರಲ್ಲಿ ಜರ್ಮನಿಯ ಬ್ರಿಯೋಸ್‌, ಕೆನಡಾದ ಎಮ್‌3ಎಮ್‌ಸ್ಯಾಟ್‌,
ಜಿಎಚ್‌ಎಸ್‌ಸ್ಯಾಟ್‌-ಡಿ, ಅಮೆರಿಕದ ಸ್ಕೈಸ್ಯಾಟ್‌ ಜೆನ್‌2-1 (ಗೂಗಲ್‌ನದ್ದು) ಮತ್ತು 12 ಡೋವ್‌ ಉಪಗ್ರಹಗಳು,
ಇಂಡೋನೇಷ್ಯಾದ ಲಾಪಾನ್‌-ಎ3 ಉಪಗ್ರಹಗಳಿವೆ. ಜೊತೆಗೆ 2 ವಿದ್ಯಾರ್ಥಿ ಉಪಗ್ರಹಗಳು ಚೆನ್ನೈ ಸತ್ಯಭಾಮಾ ವಿವಿ
ಮತ್ತು ಪುಣೆ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನ ಪುಟಾಣಿ ಉಪಗ್ರಹಗಳಿವೆ. ಈ ಎಲ್ಲಾ

Trending videos

Back to Top