CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇನ್ನು ಕಬ್ಬಿನ ಇಂಧನ ಬಳಸಿ ಓಡಲಿದೆ ಕಾರು!

ಭವಿಷ್ಯದ ಇಂಧನ ಯಾವುದು ಎಂದು ತಲೆ ಕೆಡಿಸಿಕೊಂಡಿರುವ ವಿಜ್ಞಾನಿಗಳಿಗೆ ಈಗ ಹೊಸ ಅವಕಾಶ ಗೋಚರಿಸಿದೆ. ಅದು ಕಬ್ಬು! ಸಕ್ಕರೆ, ಬೆಲ್ಲಕ್ಕೆ ಬಳಸುವ ಕಬ್ಬನ್ನು ಭವಿಷ್ಯದಲ್ಲಿ ಇಂಧನಕ್ಕೂ ಉಪಯೋಗಿಸಬಹುದು. ಡೀಸೆಲ್‌ ಗೆ ಪರ್ಯಾಯವಾಗಿ ಬಳಸಬಹುದು ಎಂದು ಅಮೆರಿಕದ ವಿಜ್ಞಾನಿಗಳು ಇದನ್ನು ಮತ್ತಷ್ಟು ದೃಢಪಡಿಸಿದ್ದಾರೆ.

ಈಗಾಗಲೇ ಜೈವಿಕ ಇಂಧನಕ್ಕೆ ಕಬ್ಬು ಪೂರಕವಾಗಿದೆ ಎಂಬ ಸಂಶೋಧನೆಗಳು ನಡೆದಿದ್ದು, ಹೊಸ ಸಂಶೋಧನೆ ಕಬ್ಬಿಗೆ ಹೆಚ್ಚಿನ ಮೌಲ್ಯ ಒದಗಿಸುವ ನಿರೀಕ್ಷೆ ಇದೆ. ಭಾರತೀಯ ವಿಜ್ಞಾನಿಯೊಬ್ಬರೂ ಇದ್ದ ಎಲಿನೋಸ್‌ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ಕಬ್ಬಿನಿಂದ ಶೇ.60ರಷ್ಟು ತೈಲ ತೆಗೆಯಬಹುದು ಎಂದು ಹೇಳಿದೆ.

ಶೇ.90ರಷ್ಟು ಸಿಹಿ ಅಂಶದೊಂದಿಗೆ ಶೇ.60ರಷ್ಟು ತೈಲವನ್ನು ಪಡೆಯಬಹುದು ಎಂದು ಹೇಳಿದೆ. ಅಲ್ಲದೇ, ಕಬ್ಬಿನ ರಸವನ್ನು ಎಥೆನಾಲ್‌ ಆಗಿ ಪರಿವರ್ತಿಸುವ, ಸಿಹಿ ಮತ್ತು ತೈಲವನ್ನು ಪ್ರತ್ಯೇಕವಾಗಿಸುವ ಬಗ್ಗೆ ವಿಜ್ಞಾನಿಗಳ ತಂಡ ಶೋಧನೆ ಮಾಡಿದೆ. ತಂಡ ಸುಧಾರಿತ ಕಬ್ಬಿನಿಂದ ಶೇ.167ರಷ್ಟು ತೈಲವನ್ನು ಹೊರತೆಗೆದಿದೆ. ಅದೇ ಸುಧಾರಿತವಲ್ಲದ ಕಬ್ಬಿನಿಂದ ಶೇ.60ರಷ್ಟು ಮಾತ್ರ ತೈಲ ತೆಗೆಯಬಹುದು ಎಂದು ಹೇಳಿದೆ.

ಅಲ್ಲದೇ ಕಬ್ಬಿನಿಂದ ತೈಲ ತೆಗೆವುದು ಹೆಚ್ಚಾದಂತೆ, ಸಕ್ಕರೆ ತೆಗೆವ ಪ್ರಮಾಣ ಕಡಿಮೆಯಾಗಬಹುದು. ಆದರೆ ನಮ್ಮ ಧ್ಯೇಯ ಸಕ್ಕರೆ ತೆಗೆವ ಪ್ರಮಾಣ ಕಡಿಮೆಯಾಗದಂತೆ ತೈಲ ತೆಗೆಯುವುದಾಗಿದೆ. ಅರ್ಥಾತ್‌ ಭವಿಷ್ಯದಲ್ಲಿ ಕಬು ಎರಡಕ್ಕೂ ಉಪಯೋಗವಾಗುವಂತೆ ಮಾಡುವ ಗುರಿಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೇ ತಾವು ತೆಗೆದ ತೈಲವನ್ನು ಸುಲಭವಾಗಿ ಬಯೋಡೀಸೆಲ್‌ ಆಗಿ ಪರಿವರ್ತಿಸಬಹುದು.

ಇದು ಒಂದು ಎಕರೆ ಸೋಯಾಬೀನ್‌ನಿಂದ ತೈಲ ತೆಗೆಯುವುದಕ್ಕಿಂತ ಐದು ಪಟ್ಟು ಹೆಚ್ಚು ಲಾಭಕರ ಮತ್ತು ಒಂದು ಎಕರೆ ಜೋಳದಿಂದ ತೈಲ ತೆಗೆಯುವುದಕ್ಕಿಂತ ಎರಡು ಪಟ್ಟು ಲಾಭಕರವಾದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:36pm
Back to Top