CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೋದಿ ಸರ್ಕಾರಕ್ಕೆ ಎಷ್ಟು ಮಾರ್ಕ್ಸ್?

ಇನ್ನೇನು ಕೆಲವೇ ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಭಾರತವನ್ನು
ಹೊಸ ದಿಕ್ಕಿಗೆ ಕೊಂಡೊಯ್ಯುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರವಿದು. ಆದರೆ "ಮೋದಿ
ಸರ್ಕಾರ ಎಲ್ಲಾ ವಲಯಗಳಲ್ಲೂ ಸಂಪೂರ್ಣವಾಗಿ ವಿಫ‌ಲವಾಗಿದೆ, 2019ರ ಚುನಾವಣೆಯಲ್ಲಿ ಬಿಜೆಪಿ
ಮುಗ್ಗರಿಸಲಿದೆ' ಎನ್ನುವುದು ವಿರೋಧ ಪಕ್ಷಗಳ ಅಂಬೋಣ. ಆದರೆ ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌
ಎಂಬ ಭರವಸೆಯ ಅಲೆಗೆ ಮನಸೋತಿದ್ದ ಭಾರತೀಯರು ಮೋದಿಯವರ 3 ವರ್ಷದ ಆಡಳಿತವನ್ನು
ಬಹಳ ಮೆಚ್ಚಿಕೊಂಡಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು. ಲೋಕಲ್‌ಸರ್ಕಲ್‌ ಸಂಸ್ಥೆಯ ಸಮೀಕ್ಷೆಯ ಪ್ರಕಾರ,
60 ಪ್ರತಿಶತಕ್ಕಿಂತಲೂ ಹೆಚ್ಚು ಭಾರತೀಯರು "ಮೋದಿ ಸರ್ಕಾರದ ಕಾರ್ಯವೈಖರಿ ತೃಪ್ತಿದಾಯಕವಾಗಿದೆ ಅಥವಾ ತಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದೆ' ಎನ್ನುತ್ತಿದ್ದಾರೆ. ನರೇಂದ್ರ ಮೋದಿ ಆಡಳಿತದಲ್ಲಿ ತಮ್ಮ ಮತ್ತು ತಮ್ಮ ಕುಟುಂಬಗಳ ಭವಿಷ್ಯ ಉತ್ತಮವಾಗಿರಲಿದೆ ಎಂಬ ಆಶಾಭಾವನೆ 69 ಪ್ರತಿಶತ ಭಾರತೀಯರದ್ದು! ಸುಮಾರು ಮೂರು ವಾರಗಳವರೆಗೆ ದೇಶದ 200 ನಗರಗಳಲ್ಲಿ ನಡೆಸಲಾದ ಈ ಸಮೀಕ್ಷೆಯಿಂದ ಬಹಿರಂಗಗೊಂಡಿರುವ ವಿವರಗಳಿವು. ಇನ್ನು ಸಾಮಾನ್ಯ ಜನರಷ್ಟೇ ಅಲ್ಲದೇ, ಇಂಡಸ್ಟ್ರೀಗಳು, ಮಾರುಕಟ್ಟೆಗಳ ಸಿಇಒಗಳೂ ಮೋದಿ ಸರ್ಕಾರದ ಕಾರ್ಯವೈಖರಿಗೆ ಥಂಬ್ಸ್ಅಪ್‌ ಎನ್ನುತ್ತಿದ್ದಾರೆ. ಆರ್ಥಿಕತೆಯ ನಿಯಂತ್ರಣ, ಕಪ್ಪುಹಣದ ಮೇಲಿನ ದಾಳಿ, ಮೂಲಸೌಕರ್ಯಾಭಿವೃದ್ಧಿಗೆ ಒತ್ತು...ಸೇರಿದಂತೆ ಅನೇಕ ವಲಯಗಳಲ್ಲಿ ಈ ಸರ್ಕಾರ ಗುಣಾತ್ಮಕ ಹಾದಿಯಲ್ಲಿ ನಡೆಯುತ್ತಿದೆ ಎನ್ನುವುದು ಬಹುತೇಕ ಸಮೀಕ್ಷೆಗಳ ಒಟ್ಟಾಭಿಪ್ರಾಯ. ಆಂಗ್ಲ ಪತ್ರಿಕೆ ಎಕನಾಮಿಕ್‌ ಟೈಮ್ಸ್‌ ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿದ್ದು, ಜನರು ಮತ್ತು ಸಿಇಒಗಳ ಮುಂದೆ ಅದು ಕೆಲವು ಪ್ರಶ್ನೆಗಳನ್ನಿಟ್ಟಿತ್ತು. ಅವರೆಲ್ಲಾ ಮೋದಿ ಸರ್ಕಾರದ ಬಗ್ಗೆ ಏನನ್ನುತ್ತಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ...

ಇಂದು ಹೆಚ್ಚು ಓದಿದ್ದು

Back to Top