CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಪಾಯಕಾರಿ ಜಾತ್ರೆ!;ಪರಸ್ಪರ ಕಲ್ಲು ತೂರಾಟ,ಸಾವಿರಾರು ಜನ ಭಾಗಿ

ಚಂಪಾವತ್‌ : ಭಾರತ ವಿಭಿನ್ನ ಧರ್ಮ, ಜಾತಿ , ಭಾಷೆ ಮತ್ತು ಆಚರಣೆಗಳಿಂದ ಕೂಡಿದ ರಾಷ್ಟ್ರ . ಇಲ್ಲಿ ಸಾವಿರಾರು ಭಿನ್ನ,ವಿಭಿನ್ನ ಧಾರ್ಮಿಕ ಆಚರಣೆಗಳನ್ನು ಕಾಣಬಹುದು. ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ದೇವಿಧುರಾ ಎಂಬಲ್ಲಿ  ಸಾವಿರಾರು ಜನರು ಪರಸ್ಪರ ಕಲ್ಲು ತೂರಾಡಿಕೊಂಡು ಬಾಗ್ವಾಲ್‌  ಎಂಬ ಹಬ್ಬ ವನ್ನು ಆಚರಿಸಿಕೊಳ್ಳುತ್ತಾರೆ. ವಿಡಿಯೋ ನೋಡಿ

ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಜನರು ಸೇರಿ ಪರಸ್ಪರ ಕಲ್ಲುಗಳನ್ನು ತೂರಾಡಿ ಕೊಳ್ಳುತ್ತಾರೆ. ಕಲ್ಲುಗಳು ದೇಹಕ್ಕೆ ತಗುಲದಂತೆ ಬಿದಿರಿನ ಗುರಾಣಿಗಳನ್ನು ಕೈಯಲ್ಲಿ ಹಿಡಿದುಕೊಳ್ಳಲಾಗುತ್ತದೆ. ಆದರೂ ಹಲವರು ಕಲ್ಲೇಟಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ.

ವಿಭಿನ್ನ ಹಬ್ಬವನ್ನು ಗ್ರಾಮದಲ್ಲಿ ಪ್ರತೀ ವರ್ಷ ರಕ್ಷಾ ಬಂಧನದ ದಿನದಂದು ಆಚರಿಸಲಾಗುತ್ತದೆ.

Back to Top