CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

 ವ್ಯಕ್ತಿಯ ಹೊಟ್ಟೆಯಿಂದ 72 ನಾಣ್ಯಗಳ ಹೊರತೆಗೆದ ವೈದ್ಯರು!

ಮುಂಬಯಿ : ರಾಜ್ಯದ  ಪಾಲ್ಗರ್‌ ಜಿಲ್ಲೆಯ  ಬುಡಕಟ್ಟು ಸಮುದಾಯಕ್ಕೆ  ಸೇರಿದ  50ರ ಹರೆಯದ ವ್ಯಕ್ತಿಯೋರ್ವರ ಹೊಟ್ಟೆಯಿಂದ  72 ನಾಣ್ಯಗಳನ್ನು ಹೊರತೆಗೆಯುವಲ್ಲಿ  ವೈದ್ಯರು ಯಶಸ್ವಿಯಾಗಿದ್ದಾರೆ.ನಿರ್ದಿಷ್ಟ ಮಾನಸಿಕ ರೋಗದಿಂದ ಬಳಲುತ್ತಿರುವ ಈ ವ್ಯಕ್ತಿ ಸುದೀರ್ಘ‌ ಸಮಯದಿಂದ ಲೋಹದ ವಸ್ತುಗಳನ್ನು ನುಂಗುವ ಚಟವನ್ನು  ಬೆಳೆಸಿಕೊಂಡಿದ್ದನು.

ಪಾಲ್ಗರ್‌ ಜಿಲ್ಲೆಯ ತಲಸರಿಯ ಥೊರಾಟಪಾಡ ನಿವಾಸಿಯಾಗಿರುವ  ಕೃಷ್ಣ  ಸೊಮಲ್ಯಾ ಸಂಬಾರ್‌ಗೆ  ಕಳೆದ  20ವರ್ಷಗಳಿಂದ  ಈ  ಕಾಯಿಲೆ ಇದ್ದು ಕಬ್ಬಿಣ ಅಥವ ಇತರೆ ಲೋಹಗಳ ನಾಣ್ಯಗಳನ್ನು ನುಂಗುವುದನ್ನು  ಚಟವಾಗಿಸಿಕೊಂಡಿದ್ದನು.ಈ ಪೈಕಿ ಕೆಲ ನಾಣ್ಯಗಳು ಮಲ ವಿಸರ್ಜನೆ  ವೇಳೆ  ಹೊರ ಬರುತ್ತಿದ್ದರೆ ಉಳಿದವು  ಹೊಟ್ಟೆಯಲ್ಲಿಯೇ ಸಂಗ್ರಹವಾಗಿರುತ್ತಿದ್ದವು. 

ವಾಂತಿಬೇಧಿ ಕಾಣಿಸಿಕೊಂಡ  ಹಿನ್ನೆಲೆಯಲ್ಲಿ ಈತನನ್ನು ಎಕ್ಸ್‌-ರೇ ಪರೀಕ್ಷೆಗೊಳಪಡಿಸಿದಾಗ  ಈತನ ಹೊಟ್ಟೆಯಲ್ಲಿ  ನಾಣ್ಯಗಳಿರುವುದು ಪತ್ತೆಯಾಯಿತು. ಆ ಬಳಿಕ ವೈದ್ಯರ  ತಂಡ ಸರ್ಜರಿ ನಡೆಸಿ  ಆತನ ಹೊಟ್ಟೆಯಿಂದ  72 ನಾಣ್ಯಗಳನ್ನು ಹೊರತೆಗೆದರು. ಡಾ|ಅಮಿತ್‌ ಕೆಲೆ  ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ  ನೇತೃತ್ವವನ್ನು  ವಹಿಸಿದ್ದರು. ಈ ಶಸ್ತ್ರಚಿಕಿತ್ಸೆಗೆ ಸುಮಾರು  ಮೂರೂವರೆ ತಾಸುಗಳು  ಹಿಡಿದಿತ್ತು ಎಂದವರು  ತಿಳಿಸಿದರು. 
 

ಇಂದು ಹೆಚ್ಚು ಓದಿದ್ದು

Back to Top