CONNECT WITH US  

ಸರ್ವ ಧರ್ಮಗಳ ಸಂಕೇತ ಕೊಪ್ಪಳದ ಅಜ್ಜನ ಜಾತ್ರೆ

ಮಠದ ಜಾತ್ರೆಗಳೆಂದರೆ ಸಾಮಾನ್ಯವಾಗಿ ಒಂದು ಜಾತಿ ಅಥವ ಮಂಥಗಳಿಗೆ ಸೀಮಿತವಾಗಿರುತ್ತೆ. ಆದರೆ ಕೊಪ್ಪಳದ ಗವಿಸಿದ್ದೇಶನ ಜಾತ್ರೆ ಮಾತ್ರ ಎಲ್ಲ ಜಾತಿಗಳನ್ನ ಮೀರಿದ್ದು ಸರ್ವಜನಾಂಗದ ಶಾಂತಿಯ ತೋಟವಾಗಿದೆ, ಹೌದು ನಮ್ಮ ಕೊಪ್ಪಳದ ಗವಿಸಿದ್ದೇಶನ ಜಾತ್ರೆ ನಿಜಕ್ಕೂ ಒಂದು ಪವಾಡವೇ ಸರಿ ಸುಮಾರು 6 ಲಕ್ಷ ಜನ ಜಾತ್ರೆಗೆ ಸೇರುತ್ತಾರೆಂದರೆ, ಅದ್ಯಾವ ಶಕ್ತಿ ಭಕ್ತರ ಮನದಲ್ಲಿ ಮನೆ ಮಾಡಿರಬಹುದು, ಇಂತಹದೊಂದು ಪ್ರಶ್ನೇ ಬೇರೆ ಬೇರೆ ರಾಜ್ಯದಿಂದ,ಜಿಲ್ಲೆಗಳಿಂದ ಬರುವ ಭಕ್ತಾಧಿಗಳ ಮನದಲ್ಲಿ ಮೂಡದೇ ಇರುವುದಿಲ್ಲ,
ಗವಿಸಿದ್ದೇಶರನು ಪ್ರತಿಯೊಬ್ಬ ಭಕ್ತರ ಹೃದಯ ಮಂದಿರದಲ್ಲಿ ನೆಲಿಸಿ ಸಕಲ ಮನು ಕುಲಕ್ಕೂ ಶಾಂತಿ ಹಾಗೂ ಒಗ್ಗಟ್ಟಿನ ಸಂದೇಶವನ್ನು ನೀಡುತಿದ್ದಾನೆ. ಹಾಗಗಿ ಇಲ್ಲಿ ಜಾತಿಯ ಬೇದವಿಲ್ಲ ಮೇಲು ಕೀಳೇಂಬ ಬಾವನೆಗಳಿಲ್ಲ ಎಲ್ಲರೂ ಒಂದಾಗಿ ಅಜ್ಜನ ಜಾತ್ರೆಯನ್ನ ವಿಜೃಂಭಣೆಯಿಂದ ಮಾಡುತ್ತಾರೆ

ಸಣ್ಣನೆಯ ಮಳಲೊಳಗೆಣ ನುಣ್ಣನೆಯ ಶಿಲೆಯೊಳಗೆಣ
ಬಣ್ಣಿಸಿ ಬರೆದ ಪಟದೊಳಗೆಯಿರುವಾಣ
ತನ್ನೊಳಗೆ ಇರನೇ ಸರ್ವಜ್ಙಣಣ

ಮರಳಿನ ಕಣದಲ್ಲಿಯೂ, ದೊಡ್ಡ ಶಿಲೆಯಲ್ಲಿಯೂ,ಮನೆಯಲ್ಲಿರುವ ಚಿತ್ರಪಟದಲ್ಲಿಯೂ ದೇವರು ಇದ್ದಾನೆಂದ ಮೇಲೆ,ನಮ್ಮ ದೇಹದಲ್ಲಿ ಅವನು ಇರುವುದಿಲ್ಲವೇ, ಸರ್ವಜ್ಞನವರು ವಚನದಲ್ಲಿ ತಿಳಿಸಿದಾಗೆ ನಿಜಕ್ಕೂ ಕೊಪ್ಪಳದ ಗವಿಸಿದ್ದೇಶ, ಭಕ್ತರ ಮನದಲ್ಲಿ ಸ್ಪೂತರ್ಿಯಾಗಿ, ದೇಹದಲ್ಲಿ ಶಕ್ತಿಯಾಗಿ ನಮ್ಮೆಲ್ಲೆರಲ್ಲೂ ಮನೆಮಾಡಿದ್ದಾನೆ, ಹಾಗಾಗಿ ಜಾತ್ರೆಯಲ್ಲಿ ಪವಾಡಗಳೇ ನಡೆದು ಹೋಗುತ್ತವೆ ಜಾತ್ರೆಯಲ್ಲಿ ಸೇರುವ  ಲಕ್ಷಾಂತರ ಭಕ್ತರಿಗೆ ಪ್ರಸಾದ ತಯಾರು ಮಾಡುವವರ್ಯಾರು ,ಉಣ ಬಡಿಸುವರ್ಯಾರು ಗವಿಸಿದ್ದೇಶ ನಮ್ಮ ದೇಹದಲ್ಲಿವೆಂದದಾರೆ ಇದೆಲ್ಲಾ ಸಾಧ್ಯವೇ ಇಲ್ಲ,

ಅಜ್ಜನ ಜಾತ್ರೆ ಬತ್ತೆಂದರೆ ಸಾಕು ಹಳ್ಳಿಗಳಿಂದ ರೊಟ್ಟಿ,ದವಸ,ಧಾನ್ಯಗಳು ತುಂಬಿದ ಬಂಡಿ ಹಾಗೂ ಗಾಡಿಗಳು  ಕೊಪ್ಪಳ ನಗರದ ತುಂಬೆಲ್ಲಾ ಸಾಲುಗಟ್ಟಿ ನಿಂತಿರುತ್ತವೆ, ಅದೆಂಥ ಬರಗಾಲವಿದ್ದರೂ ಅಜ್ಜನ ಜಾತ್ರೆಗೆ ಮಾತ್ರ ಭಕ್ತರು ಪ್ರತಿವರ್ಷದಂತೆ ತಮ್ಮ ಸಕಲ ಸೇವೆಯನ್ನು ಒದಗಿಸುತ್ತಾರೆ ,ಮನದಲ್ಲೂ ದೇಹದಲ್ಲೂ ಅಜ್ಜನೇ ಮನೆ ಮಾಡಿರುವಾಗ ಅಜ್ಜನಿಗಲ್ಲದೆ ಇನ್ಯಾರಿಗೆ ನಮ್ಮ ಸೇವೆ ಎನ್ನುತ್ತಾರೆ ಗವಿಸಿದ್ದೇಶ್ವರನ ಭಕ್ತರು.

ಮಠದ ಜಾತ್ರೆ ಎಂದರೆ ಸಾಮಾನ್ಯವಾಗಿ ಜನರ ತಲೆಗೆ ಬರುವುದು ಅಲ್ಲಿ ನಡೆಯುವ ಪೂಜೆ ಪುನಸ್ಕಾರ ಮತ್ತು ಹೋಮ ಹವನ, ರಥೋತ್ಸವ ಇವುಗಳೇ ಆದರೆ ಗವಿಮಠ ಮಾತ್ರ ವಿಬಿನ್ನವಾಗಿದೆ.ಜಾತ್ರೆ ಬಂದರೆ ಸಾಕು ನಗರದ ಜನರಿಗೆ ಭರಪೂರ ಮನರಂಜನೆಯ ರಸದೌತಣ ನಾಡಿನ ಖ್ಯಾತ ಕಲಾವಿದರಿಂದ ಸಂಗೀತ ,ನಾಟಕ, ನಗೆಚಟಾಕಿ ಮತ್ತು ನಾಡಿನ ಶ್ರೇಷ್ಠ ಮಠಗಳ ದೇವರ ಸ್ವರೂಪವೇ ಆಗಿರುವ ಮಠಾದೀಪತಿಗಳ ಬದುಕಿನ ಪಾಠಗಳನ್ನ ಭೋದಿಸುವ ನುಡಿಮುತ್ತುಗಳು, ಕೈಲಾಸವೇ ದರೆಗಿಳಿದಿರುವಂತೆ ದ್ವೀಪದ ಅಲಂಕಾರಗಳಿಂದ ಕಾಣುವ ಗವಿಸಿದ್ದೇಶನ ಬೆಟ್ಟ ಮೂರು ದಿನಗಳ ಕಾಲ ನಡೆಯುವ ಜಾತ್ರೆ ಭಕ್ತರ ಮನಸ್ಸಿಗೆ ನವೋಲ್ಲಾಸವನ್ನು ನೀಡುವುದರ ಮೂಲಕ ಬದುಕಿನ ಏಳು ಬಿಳುಗಳನ್ನು ಸರಿದುಗಿಸುವ ಜಾತ್ರೆ ಅಜ್ಜನ ಜಾತ್ರೆ.

ಬಹುಶಃ ದೂರದಿಂದ ನೋಡುವವರು ಇದು ಜಾತ್ರೆಯಲ್ಲ ಯಾವುದೋ ಜಾನಜಾಗೃತಿ ಯಾತ್ರೆ ಎಂಬತ್ತೇ ಕಾಣಿಸಬಹುದು ಏಕೆಂದರೆ ಜಾತ್ರೆಯ ತುಂಬೆಲ್ಲಾ ರಕ್ತದಾನ ಶಿಬಿರ,ಬಾಲ್ಯವಿವಾಹ ತಡೆ ,ಜಲದಿಕ್ಷೇ,ವಿಧಾವ ಮರುವಿವಾಹ,ಶೌಚಲಯ ಜಾಗೃತಿ ಇಂತಹ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತ ಗವಿಮಠ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡುತ್ತಿರುವುದು ಶ್ಲಾಘನೀಯ. ದೇಶದಲ್ಲಿರುವ ಎಲ್ಲಾ ಮಠ ಮಾನ್ಯಗಳು ಗವಿಮಠದಂತೆ ಜಾತ್ರೆಯ ಮಾಡುವುದರ ಮೂಲಕ ಜಾನಜಾಗೃತಿ ಯಾತ್ರೆಯನ್ನು ಮಾಡಿದರೆ ಗಾಂದೀಜಿಯವರ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.

 ಸರ್ವ ಧರ್ಮಗಳ ಸಂಕೇತ ಅಜ್ಜನ ಜಾತ್ರೆ.
 ಅಜ್ಜನ ಜಾತ್ರೆ ನಿಜಕ್ಕೂ ಅಧ್ಬುತ. 
 ಇದು ಜಾತ್ರೆಯಲ್ಲ ಜನಜಾಗೃತಿ ಯಾತ್ರೆ.

*ಕೃಷ್ಣಾರೆಡ್ಡಿ ಕಾವಲಿ

Trending videos

Back to Top