CONNECT WITH US  

ಸುದ್ದಿ ಕೋಶ: ಹೈ ಸ್ಪೀಡ್‌ ರೈಲಿಗೆ ಸುರಕ್ಷಾ ಗೋಡೆ

ಪ್ರಸ್ತುತ ನಿರ್ಮಾಣವಾಗುತ್ತಿರುವ ದಿಲ್ಲಿ -ಮುಂಬಯಿ ಹೈ ಸ್ಪೀಡ್‌ ಕಾರಿಡಾರ್‌ನ ಎರಡೂ ಬದಿಯಲ್ಲಿ ರಕ್ಷಣಾ ಗೋಡೆಗಳನ್ನು ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಆ ಗೋಡೆಗಳ ಮೇಲೆ ಜಾಹೀರಾತು ಪ್ರಕಟಟಿಸಲು ಅವಕಾಶ ನೀಡುವ ಮೂಲಕ ಅದರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಭರಿಸಲು ಯೋಜಿಸಲಾಗಿದೆ. ಇದಕ್ಕಾಗಿ, ನಿರ್ಮಾಣ ಸಂಸ್ಥೆಗಳು, ಗುತ್ತಿಗೆದಾರರಿಂದ ಟೆಂಡರ್‌ ಕರೆಯಲಾಗಿದೆ. 

ವಿತ್ತೀಯ ಲೆಕ್ಕಾಚಾರ
ಅತಿ ಕಡಿಮೆ ಬಜೆಟ್‌ನಲ್ಲಿ ಗೋಡೆ ಕಟ್ಟಲು ಮುಂದೆ ಬರುವವರಿಗೆ ನಿರ್ಮಾಣ ಕಾಮಗಾರಿ ಹೊಣೆ ವಹಿಸಲಾಗುತ್ತದೆ. ಇದರ ವೆಚ್ಚವನ್ನು ಪೂರ್ತಿ ನಿರ್ಮಾಣ ಸಂಸ್ಥೆ/ ಕಾಂಟ್ರಾಕ್ಟರ್‌ ವಹಿಸಿಕೊಳ್ಳಬೇಕು. ಗೋಡೆ ಸಿದ್ಧಗೊಂಡ ಮೇಲೆ ಅವುಗಳ ಮೇಲೆ ಬರುವ ಜಾಹೀರಾತು ಹಣದಲ್ಲಿ ನಿರ್ಮಾತೃ ಹಾಗೂ ರೈಲ್ವೆ ಇಲಾಖೆಗೆ ಪಾಲು ಇರುತ್ತದೆ. 

ಪ್ರಾಯೋಗಿಕ ಪ್ರಾಜೆಕ್ಟ್
ಯೋಜನೆಯ ಸಾಧಕ ಬಾಧಕಗಳನ್ನು ಅಂದಾಜಿಸಲು, ಪ್ರಾಯೋಗಿಕ ಕಾಮಗಾರಿಯನ್ನು ಈಗಾಗಲೇ ನಡೆಸಲಾಗಿದೆ. ದಕ್ಷಿಣ ದೆಹಲಿಯ ಬಿಡುವಿಲ್ಲದ ರೈಲು ಸಂಚಾರವಿರುವ ಪ್ರದೇಶದಲ್ಲಿ, ಹಳಿಗಳ ಎರಡೂ ಕಡೆ ಇಂಥ ಸುರûಾ ಗೋಡೆ ನಿರ್ಮಿಸಲಾಗಿದ್ದು, ಇದರಿಂದ ಶಬ್ದ ಮಾಲಿನ್ಯ ಗಣನೀಯವಾಗಿ ಕಡಿಮೆ ಆಗಿದೆ. ಇದರಿಂದ ಪ್ರೇರಿತಗೊಂಡು, ಈಗ ದೆಹಲಿ-ಮುಂಬಯಿ ನಡುವಿನ ಹೈ ಸ್ಪೀಡ್‌ ಹಳಿಯ ಇಕ್ಕೆಲಗಳಲ್ಲಿ ತಡೆ ಗೋಡೆ ನಿರ್ಮಾಣಕ್ಕೆ ಅಡಿಯಿಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. 

ನಿರ್ಮಾಣದ ಉದ್ದೇಶವೇನು?
ಹಳಿಗಳ ಬಳಿ ಪ್ರಾಣಿಗಳು, ಮನುಷ್ಯರು ಸುಳಿಯದಂತೆ ರಕ್ಷಣೆ.
ಗೋಡೆ ಕಟ್ಟುವುದರಿಂದ ರೈಲುಗಳ ಶಬ್ದದಲ್ಲಿ ಶೇ.20ರಷ್ಟು ಇಳಿಕೆ.
ನಿವಾಸಿಗಳಿಂದ, ಭೂಗಳ್ಳರಿಂದ ಹಳಿಗಳ ಅಕ್ಕಪಕ್ಕದ ಭೂಮಿ ಕಬಳಿಕೆಗೆ ತಡೆ.  
ಪ್ರಯಾಣ ದರ ಹೊರತು ಪಡಿಸಿದ ಮತ್ತೂಂದು ಆದಾಯಕ್ಕೆ ನಾಂದಿ. 

7 8 ಅಡಿ ಸುರಕ್ಷಾ ಗೋಡೆಯ ಎತ್ತರ
20 ಡೆಸಿಬೆಲ್ಸ್‌ ಶಬ್ದವನ್ನು ಕಡಿಮೆ ಗೊಳಿಸಲಿರುವ ಗೋಡೆಗಳು
160 ಕಿ.ಮೀ./ಗಂಟೆ - ಹೈ ಸ್ಪೀಡ್‌ ಹಳಿಗಳ ಮೇಲೆ ಸಾಗುವ ರೈಲಿನ ಸರಾಸರಿ 

Trending videos

Back to Top