CONNECT WITH US  

ಸುದ್ದಿ ಕೋಶ; ಸದ್ಯದಲ್ಲೇ ಆಗಸದಲ್ಲಿ ಚೀನಾ ಪಾರುಪತ್ಯ

ಸುಮಾರು ಕಾಲು ಶತಮಾನದವರೆಗೆ "ಆಗಸದ ಕಾವಲು ಪಡೆ'ಗೆ ಅತ್ಯಗತ್ಯ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ಅಮೆರಿಕವನ್ನು ಚೀನಾ ಈಗ ಕ್ರಮೇಣ ಹಿಂದಿಕ್ಕುತ್ತಿದೆ. ಬೆಳೆಯುತ್ತಿರುವ ಚೀನಾದ ಆರ್ಥಿಕತೆ, ಹೆಚ್ಚುತ್ತಿರುವ ಸಿರಿವಂತಿಕೆ ಹಾಗೂ ಸಂಪನ್ಮೂಲಗಳು ಆ ದೇಶವನ್ನು ಜಾಗತಿಕ ಯುದ್ಧ ವಿಮಾನ ತಯಾರಿಕಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ನೆರವಾಗುತ್ತಿವೆ. ಏಷ್ಯಾ ಉಪಖಂಡದಲ್ಲಿ ಚೀನಾದ ಈ ದೈತ್ಯ ಬೆಳವಣಿಗೆ ಸಹಜವಾಗಿ ಭಾರತದಂಥ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. 

ರಕ್ಷಣೆಗೆ ಚೀನಾ ವಿಶೇಷ ಒತ್ತು
ತನ್ನ ರಕ್ಷಣೆಗೆ ಚೀನಾ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ನೀಡುತ್ತಿದೆ. ರಕ್ಷಣಾ ವೆಚ್ಚ ಶೇ. 5.6ರಷ್ಟು ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ರಷ್ಯಾದಂಥ ರಾಷ್ಟ್ರವೇ ತನ್ನ ರಕ್ಷಣಾ ಬಜೆಟ್‌ನಲ್ಲಿ ಶೇ.20ರಷ್ಟು ಕಡಿತ ಮಾಡಿರುವಾಗ, ಚೀನಾ ಅದಕ್ಕೆ ಸಡ್ಡು ಹೊಡೆದಿದೆ. ಅಲ್ಲದೆ, ಚೀನಾದಲ್ಲಿ
ಅಗಾಧವಾಗಿ ಬೆಳೆಯುತ್ತಿರುವ ತಂತ್ರಜ್ಞಾನವೂ ರಕ್ಷಣಾ ವಲಯದ ಯುದ್ಧ ಪರಿಕರಗಳ, ವಿಶೇಷವಾಗಿ ಯುದ್ಧ ವಿಮಾನಗಳ ತಯಾರಿಕೆಗೆ ತನ್ನದೇ ಆದ ಕಾಣಿಕೆ ನೀಡಲಾರಂಭಿಸಿವೆ. ಇದರ ಸಂಪೂರ್ಣ ಲಾಭ ಪಡೆಯಲು ಚೀನಾ ಸಜ್ಜಾಗಿದೆ. 

ಅಮೆರಿಕಕ್ಕೆ "ಡ್ರಾಗನ್‌' ಸವಾಲು
ಅಮೆರಿಕದ ಶಸ್ತ್ರಾಸ್ತ್ರಗಳ ಸಾಮರ್ಥ್ಯಕ್ಕಿಂತ ಮತ್ತಷ್ಟು ಸುಧಾರಿತ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿರುವುದೇ ಚೀನಾದ ಹೆಗ್ಗಳಿಕೆ. ಇದು, ಆ ದೇಶದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಉದಾಹರಣೆಗೆ, ಅಮೆರಿಕದ ರೇಥಿಯಾನ ಏರ್‌-ಟು-ಏರ್‌ ಕ್ಷಿಪಣಿಯು 160 ಕಿ.ಮೀವರೆಗೆ ಸಾಗಬಲ್ಲದಾದರೆ, ಇದಕ್ಕೆ ಸಡ್ಡು ಹೊಡೆಯುವ ಚೀನಾದ ಪಿಎಲ್‌-15 ಕ್ಷಿಪಣಿ 150ರಿಂದ 200 ಕಿ.ಮೀವರೆಗೆ ಸಾಗಬಲ್ಲದ್ದಾಗಿದೆ. ಇಂಥ ಅನೇಕ ಸುಧಾರಿತ ತಂತ್ರಜ್ಞಾನಗಳೇ ಚೀನಾಕ್ಕೆ ವರದಾನವಾಗಿವೆ. 

ತಯಾರಿಕೆಗೆ ಪೂರಕ ಅಂಶ
*13 ಲಕ್ಷಕೋಟಿ ಅಮೆರಿಕನ್‌ ಡಾಲರ್‌ಗಳ ಆರ್ಥಿಕತೆ
*ತಂತ್ರಜ್ಞಾನದ ಬೆಳವಣಿಗೆಯಲ್ಲಿ ದಾಪುಗಾಲು
* ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಪ್ರಗತಿ
* ಹೆಚ್ಚುತ್ತಿರುವ ದೇಶದ ಸಂಪತ್ತು

Trending videos

Back to Top