CONNECT WITH US  

ಸುದ್ದಿ ಕೋಶ: ಆಪ್ತ ಸಹಾಯಕನ ಹೊಸ ರೂಪ ಗೂಗಲ್‌ ಅಸಿಸ್ಟಂಟ್‌

ಸಾಂದರ್ಭಿಕ ಚಿತ್ರ

ಈಗೀಗ ಎಲ್ಲರೂ ಬ್ಯುಸಿ. ಅದಕ್ಕಾಗಿ ಹಲವು ತಾಂತ್ರಿಕ ವ್ಯವಸ್ಥೆಗಳೂ ರೂಪುಗೊಂಡಿವೆ. ಅದಕ್ಕಾಗಿ ಕೃತಕ ಬದ್ಧಿಮತ್ತೆ ಆಧಾರಿತ ಯಂತ್ರೋಪಕರಣಗಳ ಅವಶ್ಯಕತೆ ಇಂದಿನ ದಿನಗಳಲ್ಲಿ ಎದ್ದು ಕಾಣುತ್ತಿದೆ. ಇದನ್ನು ಮನ ಗಂಡು, ಅನೇಕ ತಂತ್ರಜ್ಞಾನ ಸಂಸ್ಥೆಗಳು ಎಐ ಮತ್ತು ಮೆಷೀನ್‌ ಲರ್ನಿಂಗ್‌ (ಎಂಎಲ್‌) ತಂತ್ರಜ್ಞಾನಗಳನ್ನು ಬೆಸೆಯುವತ್ತ ದೊಡ್ಡ ಹೆಜ್ಜೆ ಇರಿಸುತ್ತಿವೆ. ಈ ನಿಟ್ಟಿನಲ್ಲಿ ಗೂಗಲ್‌ ಅಸಿಸ್ಟಂಟ್‌ ಎಂಬ ಹೊಸ "ಆಪ್ತ ಸಹಾಯಕ' ಅಪ್ಲಿಕೇಷನ್‌, ಈವರೆಗಿನ ಎಲ್ಲಾ ಎಐ ಆಧಾರಿತ ತಂತ್ರ ಜ್ಞಾನಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಏನಿದು ಗೂಗಲ್‌ ಅಸಿಸ್ಟಂಟ್‌?
ಊರಿನಲ್ಲಿರುವ ಅಪ್ಪ, ಅಪ್ಪನಿಗೊಂದು ಅಪರೂಪಕ್ಕಾದರೂ ಒಮ್ಮೆ ಫೋನು ಮಾಡಿ ಆರೋಗ್ಯ ವಿಚಾರಿಸದಿರಲು ಸಾಧ್ಯವಾಗದಷ್ಟು ಇಂದಿನ ಯುವ ಜನತೆ ಬ್ಯುಸಿಯಾಗಿದೆ. ಇವರ ಈ ಬಿಡುವಿಲ್ಲದ ಜೀವನದಲ್ಲಿ ಒತ್ತಡಗಳ ನಡುವೆಯೂ, ವೈದ್ಯರ ಅಪಾಯಿಂಟ್‌ಮೆಂಟ್‌ ಫಿಕ್ಸ್‌ ಮಾಡಲು, ರೈಲು ಅಥವಾ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಲು, ಇವರ ಪರವಾಗಿ ಪರ್ಸನಲ್‌ ಸೆಕ್ರೆಟರಿ ರೀತಿಯಲ್ಲಿ ಕೆಲಸ ಮಾಡುವ ಒಂದು ಮೊಬೈಲ್‌ ಅಪ್ಲಿಕೇಷನ್‌ "ಗೂಗಲ್‌ ಅಸಿಸ್ಟಂಟ್‌'

ಥ್ಯಾಂಕ್ಸ್‌ ಟು ಗೂಗಲ್‌ ಡ್ನೂಪ್ಲೆಕ್ಸ್‌
ಮಾತನಾಡುವ ಶೈಲಿ, ವಾಕ್ಯ ರಚನೆಗಳು ಒಬ್ಬೊಬ್ಬರದ್ದೂ ಒಂದೊಂದು ರೀತಿ. ಇದನ್ನೆಲ್ಲಾ ಗೂಗಲ್‌ ಅಸ್ಸಿಸ್ಟಂಟ್‌ ಹೇಗೆ ಅರ್ಥ ಮಾಡಿಕೊಳ್ಳುತ್ತದೆ, ಹೇಗೆ ಅದಕ್ಕೆ ಪ್ರತಿಯಾಗಿ ಸ್ಪಂದಿಸುತ್ತದೆ ಎಂಬುದಕ್ಕೆ ಕಾರಣ "ಗೂಗಲ್‌ ಡ್ಯುಪ್ಲೆಕ್ಸ್‌'. ಸಂಕೀರ್ಣ ವಾಕ್ಯಗಳ ಅರ್ಥೈಸುವಿಕೆಗಾಗಿ "ಟೆನ್ಸರ್‌ ಫ್ಲೋ ಎಕ್ಸ್‌ ಟೆಂಡೆಡ್‌ (ಟಿಎಫ್ಎಕ್ಸ್‌)' ಎಂದ ತಂತ್ರಾಂಶ ವನ್ನು ಡ್ಯುಪ್ಲೆಕ್ಸ್‌ ಹೊಂದಿದ್ದು, ಇದು ಮನು ಷ್ಯರ ಸಂಕೀರ್ಣ ಸಂಭಾಷಣೆಗಳನ್ನೂ ಅರ್ಥ ಮಾಡಿಕೊಂಡು ಸರಳವಾಗಿ ಉತ್ತರಿಸುತ್ತದೆ. 

ಏನು ವಿಶೇಷತೆ?
ಮಾನವರಂತೆಯೇ, ಅತ್ಯಂತ ಸಹಜವಾಗಿ, ಮನವೊಲಿಕೆಯ ಮಾದರಿಯಲ್ಲೇ ಸಂವಹನ ಮಾಡುವುದು ಇದರ ಹೆಗ್ಗಳಿಕೆ. ಮಾರುಕಟ್ಟೆಯಲ್ಲಿ ಈವರೆಗೆ ಬಂದಿರುವ ಅಮೆಜಾನ್‌ನ ಅಲೆಕ್ಸಾ ನಂಥ ಆಪ್ತ ಸಹಾಯಕ ಯಂತ್ರಗಳಲ್ಲಿ ಈ ವಿಶೇಷವಿಲ್ಲ. ಹಾಗಾಗಿ, ಗೂಗಲ್‌ ಅಸಿಸ್ಟಂಟ್‌ನ ಈ ಹೆಗ್ಗಳಿಕೆ ಭವಿಷ್ಯದಲ್ಲಿ ಮಹತ್ವದ್ದು ಎನ್ನುತ್ತಾರೆ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚೈ

Trending videos

Back to Top