CONNECT WITH US  

ಸುದ್ದಿ ಕೋಶ: ಇದು ನಿಸರ್ಗದ ಎಚ್ಚರಿಕೆ

ರವಿವಾರ ಸಂಜೆಯಾಗುತ್ತಲೇ ಉತ್ತರ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಬಡಿದದ್ದು ಧೂಳಿನ ಗಾಳಿ, ಮಳೆ, ಗುಡುಗು ಸಿಡಿಲು. ಈ ಪ್ರಾಕೃತಿಕ ವಿಕೋಪದಿಂದಾಗಿ ಭಾನುವಾರ 50ರಷ್ಟಿದ ಸಾವಿನ ಸಂಖ್ಯೆ ಸೋಮವಾರದ ವೇಳೆಗೆ 80ಕ್ಕೆ ಏರಿಕೆಯಾಗಿದೆ. ಹಲವು ಭಾಗಗಳಲ್ಲಿ ಮನೆಗಳ ಚಾವಣಿ ಹಾರಿಹೋಗಿದೆ. ಜಾನುವಾರುಗಳು ಕೂಡ ಜೀವ ಕಳೆದುಕೊಂಡಿವೆ. ಅಕಾಲಿಕವಾಗಿ ಆಗಿರುವ ನಷ್ಟದ ಪಕ್ಷಿನೋಟ ಇಲ್ಲಿದೆ.

ದಿಲ್ಲಿ, ಉತ್ತರ ಪ್ರದೇಶದ ಹಲವು ಭಾಗಗಳು, ಪಶ್ಚಿಮ ಬಂಗಾಲ, ಆಂಧ್ರಪ್ರದೇಶಗಳಲ್ಲಿ ಧೂಳು ಬಿರುಗಾಳಿಯಿಂದ ವ್ಯಾಪಕ ಹಾನಿ
80 ಮಂದಿ ಅಸುನೀಗಿದವರು
136 ಗಾಯಗೊಂಡವರ ಸಂಖ್ಯೆ
05 ಸಾವು-ನೋವಿಗೆ ಸಾಕ್ಷಿಯಾದ ರಾಜ್ಯಗಳ ಸಂಖ್ಯೆ

ಐಎಂಡಿ ಮುನ್ನೆಚ್ಚರಿಕೆ
ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ, ಕೇರಳ, ಬಿಹಾರ, ಪೂರ್ವ ಉತ್ತರ ಪ್ರದೇಶ, ಛತ್ತೀಸ್‌ಗಡ, ಆಂಧ್ರ ಕರಾವಳಿ ಪ್ರದೇಶಗಳಲ್ಲಿ ಭಾರಿ ಗುಡುಗು ಸಿಡಿಲು, ಗಾಳಿ ಬೀಸುವ ಸಾಧ್ಯತೆ
16, 17, 18ರಂದು ಕರ್ನಾಟಕದ ದಕ್ಷಿಣ ಒಳ ನಾಡು ಪ್ರದೇಶ ಕೇರಳಗಳಲ್ಲಿ ಧಾರಾಕಾರ ಮಳೆ
ಉತ್ತರಾಖಂಡದಲ್ಲಿ ಗಂಟೆಗೆ 50-70 ಕಿಮೀ ವರೆಗೆ ಬಿರುಗಾಳಿ ಬೀಸುವ ಸಾಧ್ಯತೆ
ಮಧ್ಯಪ್ರದೇಶ, ವಿದರ್ಭ, ರಾಜಸ್ಥಾನದ ಕೆಲ ಭಾಗಗಳಿಗೆ ಬಿಸಿ ಗಾಳಿಯ ಪ್ರಭಾವ
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳಗಳಲ್ಲಿ 48 ಗಂಟೆಗಳಲ್ಲಿ ಧಾರಾಕಾರ ಮಳೆ.

ಗುಡುಗು ಸಿಡಿಲಿನ ಭೀಕರತೆ
24 ಜಿಲ್ಲೆ ಉತ್ತರ ಪ್ರದೇಶ
06 ಜಿಲ್ಲೆ ಪಶ್ಚಿಮ ಬಂಗಾಲ
03 ಜಿಲ್ಲೆ ಆಂಧ್ರಪ್ರದೇಶ
01 ಜಿಲ್ಲೆ ಉತ್ತರಾಖಂಡ

ಸಾವು-ನೋವು
51ಉತ್ತರ ಪ್ರದೇಶ
02ದಿಲ್ಲಿ
14ಪ. ಬಂಗಾಲ
01 ಉತ್ತರಾಖಂಡ
12ಆಂಧ್ರಪ್ರದೇಶ
25 ಜಿಲ್ಲೆಗಳಲ್ಲಿ ಹಾನಿ
121 ಮನೆಗಳ ನಾಶ

Trending videos

Back to Top