CONNECT WITH US  

ಸುದ್ದಿ ಕೋಶ: ಭಾರತಕ್ಕೆ ಬರಲಿದೆ ಜಲ ಜಂಜಾಟ

ಜಗತ್ತಿನ ಭೂಖಂಡಗಳಲ್ಲಿರುವ ವಿವಿಧ ಜಲ ಸಂಪನ್ಮೂಲಗಳನ್ನು ನಿಖರವಾಗಿ ಅಧ್ಯಯನ ಮಾಡಿರುವ ಅಮೆರಿಕದ ನಾಸಾ ನೇತೃತ್ವದ ವಿಜ್ಞಾನಿಗಳ ತಂಡವೊಂದು, ಈ ನೀರಿನ ಸೆಲೆಗಳು ಮುಂದಿನ ಕೆಲ ವರ್ಷಗಳಲ್ಲೇ ಕ್ರಮೇಣ ಬತ್ತಲಾರಂಭಿಸುತ್ತವೆ ಎಂದು ಎಚ್ಚರಿಸಿದೆ. ಕಳೆದ 14 ವರ್ಷಗಳ ಅಧ್ಯಯನದ ವರದಿಯನ್ನು ನೇಚರ್‌ ಎಂಬ ನಿಯತಕಾಲಿಕೆಯಲ್ಲಿ ಈ ತಂಡ ಪ್ರಕಟಿಸಿದೆ. ಅದರ ಪ್ರಕಾರ, ಕೆಲವೇ ವರ್ಷಗಳಲ್ಲಿ ಭಾರತದಲ್ಲಿನ ಜಲ ಸಂಪನ್ಮೂಲಗಳೂ ಬತ್ತಿ ಹೋಗಲಿವೆ ಎಂದು ಹೇಳಲಾಗಿದೆ. 

ಅಧ್ಯಯನದ ರೀತಿ
ಅಮೆರಿಕ- ಜರ್ಮನಿ ನೇತೃತ್ವದಲ್ಲಿ ಗ್ರಾವಿಟಿರಿಕವರಿ ಆ್ಯಂಡ್‌ ಕ್ಲೈಮೇಟ್‌ ಎಕ್ಸ್‌ ಪೆರಿಮೆಂಟ್‌ (ಜಿಆರ್‌ಎಸಿಇ) ಎಂಬ ವಿಷಯದ ಅಧ್ಯಯನಕ್ಕಾಗಿ ವಿಜ್ಞಾನಿಗಳು ಹಾಗೂ ತಜ್ಞರ ತಂಡ ರಚನೆ. ತಂಡದಿಂದ 14 ವರ್ಷಗಳ ಕಾಲ ಅಧ್ಯಯನ. ಪ್ರಪಂಚದ ಅಗಾಧ ನೀರಿನ ಸೆಲೆಗಳುಳ್ಳ 34 ಭೂಖಂಡಗಳನ್ನು ಗುರುತಿಸಿ, ಅನೇಕ ಉಪಗ್ರಹಗಳ ಮೂಲಕ ನೀರಿನ ಸೆಲೆಗಳಲ್ಲಿನ ಬದಲಾವಣೆ ಅಧ್ಯಯನ. ಈ ತಂತ್ರ ಜ್ಞಾನಕ್ಕೆ ನಾಸಾದ ಜೆಟ್‌ ಪ್ರೊಪಲನ್‌ ಲ್ಯಾಬೊರೇಟರಿ (ಜೆಪಿಎಲ್‌) ಸಹಾಯ.

ನೀರಿನ ಕೊರತೆಯೇಕೆ?
ಮಾನವನ ಅವೈಜ್ಞಾನಿಕ ಜಲ ನಿರ್ವಹಣೆ 
ಮಿತಿಯಿಲ್ಲದ ಬಳಕೆ
ಅಂತರ್ಜಲ ಪ್ರಮಾಣ ಇಳಿಕೆ
ಹವಾಮಾನ ವೈಪರೀತ್ಯ
ಇತರ ನೈಸರ್ಗಿಕ ಕಾರಣಗಳು

ಎಲ್ಲೆಲ್ಲಿ ಬರಲಿದೆ ಜಲಕ್ಷಾಮ?
ಉತ್ತರ ಹಾಗೂ ಪೂರ್ವ ಏಷ್ಯಾ ಮಧ್ಯ ಪ್ರಾಚ್ಯರಾಷ್ಟ್ರಗಳು
ಕ್ಯಾಲಿಫೋರ್ನಿಯಾ  ಆಸ್ಟ್ರೇಲಿಯಾ

Trending videos

Back to Top