CONNECT WITH US  

ಸುದ್ದಿ ಕೋಶ: ವಿಶ್ವದ ಪ್ರಥಮ ತೇಲುವ ಅಣು ವಿದ್ಯುದಾಗಾರ

ವಿಶ್ವದಲ್ಲೇ ಪ್ರಥಮ ತೇಲುವ ಅಣು ವಿದ್ಯುತ್‌ ಘಟಕ ರಷ್ಯಾದಲ್ಲಿ ಲೋಕಾರ್ಪಣೆಗೊಂಡಿದೆ. ಇದನ್ನು ಮರ್ಮನ್‌ಸ್ಕ್ನಲ್ಲಿ ಅನಾವರಣಗೊಳಿಸಲಾಗಿದ್ದು, ಇಲ್ಲಿಂದ ಸೈಬೀರಿಯಾ ಕಡೆಗೆ ಸಮುದ್ರದಲ್ಲಿ ಸಾಗಲಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಿರ್ಮಿಸ ಲಾಗಿರುವ ಅಕಾಡೆಮಿಕ್‌ ಲೊಮೊನೊಸೊವ್‌ ಘಟಕವು ಸಮುದ್ರದಲ್ಲಿ ತೇಲುತ್ತಲೇ ವಿದ್ಯುತ್‌ ಉತ್ಪಾದನೆ ಮಾಡುವುದು ವಿಶೇಷ.

ಪರಿಸರ ಸ್ನೇಹಿ
5,00,000 ಟನ್‌ಗಳಷ್ಟು ಕಾರ್ಬನ್‌ ಡೈಆಕ್ಸೆ„ಡ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅನುಕೂಲ
ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಇದನ್ನು ಬಳಸಲು ನಿರ್ಧರಿ ಸಲಾಗಿತ್ತಾದರೂ ಸುರಕ್ಷತೆ ದೃಷ್ಟಿಯಿಂದ ಸ್ಥಳ ಬದಲಾವಣೆ
ಬಾಲ್ಟಿಕ್‌ ಸಮುದ್ರದ ಗಡಿ ಹಂಚಿಕೊಂಡಿರುವ ದೇಶಗಳಿಂದ ಭದ್ರತಾ ಆತಂಕ
15ಕ್ಕೂ ಹೆಚ್ಚು ದೇಶಗಳಿಂದ ತೇಲುವ ಅಣುವಿದ್ಯುತ್‌ ಘಟಕ ಸ್ಥಾಪನೆಗೆ ಪ್ರಸ್ತಾವನೆ

ಬಳಕೆ ಎಲ್ಲಿ?
ರಷ್ಯಾದ ಈಶಾನ್ಯಭಾಗದಲ್ಲಿರುವ ಪೆವೆಕ್‌ ಪ್ರಾಂತ್ಯದಲ್ಲಿ ವಿದ್ಯುತ್‌ ಬಳಕೆ
5,000 ನಾಗರಿಕರಿಗೆ ಈ ಹಡಗಿನಿಂದ ವಿದ್ಯುತ್‌ನ ಉಪಯೋಗ
2019ರಲ್ಲಿ ಪೆವೆಕ್‌ಗೆ ಹಡಗು ಪ್ರಯಾಣ ಸಾಧ್ಯತೆ
2 ಲಕ್ಷ ಕುಟುಂಬಗಳಿಗೆ ವಿದ್ಯುತ್‌ ಒದಗಿಸುವ ಸಾಮರ್ಥ್ಯ
ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪದಲ್ಲಿ ಹೊರತೆಗೆಯಲೂ ಬಳಕೆ

21,000 ಟನ್‌ ತೂಕದ ಹಡಗು
35 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ
ರೊಸಟೋಮ್‌ ಅಣುವಿದ್ಯುತ್‌ ತಯಾರಿಕೆ ಕಂಪನಿಯಿಂದ ನಿರ್ಮಾಣ
144/30 ಮೀಟರ್‌  ಹಡಗಿನಲ್ಲಿ ಎರಡು ರಿಯಾಕ್ಟರುಗಳ ಅಳವಡಿಕೆ


Trending videos

Back to Top