CONNECT WITH US  

ಸುದ್ದಿಕೋಶ: ಕಾಣದ ಚಂದಿರ ಕಾಣುವನೇ?

ನಮಗೆ ಕಾಣದ ಚಂದ್ರನ ಇನ್ನೊಂದು ಭಾಗವನ್ನು ನೋಡುವುದಕ್ಕೆಂದು ಚೀನಾ ಸೋಮವಾರ ಉಪಗ್ರಹವೊಂದನ್ನು ಉಡಾವಣೆ ಮಾಡಿದೆ. ಈ ಮಹತ್ವಾಕಾಂಕ್ಷಿ ಸ್ಯಾಟಲೈಟ್‌ಗೆ ಕ್ವಾಕಿಯಾವೋ ಎಂದು ಹೆಸರಿಡಲಾಗಿದ್ದು, ಇದು ಮೂರು ವರ್ಷಗಳವರೆಗೆ ಚಂದ್ರನ ಇನ್ನೊಂದು ಭಾಗದ ಮೇಲೆ ಇಳಿದು ಅಲ್ಲಿನ ಮಾಹಿತಿಯನ್ನು ಭೂಮಿಗೆ ರವಾನಿಸಲಿದೆ. 

ಹೆಚ್ಚಿನ ಅಧ್ಯಯನ
ಭೂಮಿ ಮತ್ತು ಚಂದ್ರನ ಮಧ್ಯದಲ್ಲಿರುವ ಎಲ್‌2 ಪಾಯಿಂಟ್‌ನಲ್ಲಿ ಹಲವು ಸಮಯಗಳವರೆಗೆ ಸ್ಯಾಟಲೈಟ್‌ ನಿಲ್ಲಲಿದೆ. ಇಲ್ಲಿ ಗುರುತ್ವಾಕರ್ಷಣೆಯ ವಿಶಿಷ್ಟ ಶಕ್ತಿಯಿಂ ದಾಗಿ ಕಡಿಮೆ ಇಂಧನದಲ್ಲಿ ಸ್ಯಾಟಲೈಟ್‌ ಇರಬಹುದಾ ಗಿದೆ. ಚಂದ್ರನ ಈ ಭಾಗ ಸಾಮಾನ್ಯವಾಗಿ ಭೂಮಿಯಿಂದ ಕಾಣದೇ ಇರುವುದರಿಂದ ಇಲ್ಲಿನ ಸನ್ನಿವೇಶದ ಬಗ್ಗೆ ಈವರೆಗೂ ಹೆಚ್ಚಿನ ತಿಳಿವಳಿಕೆ ಇಲ್ಲ. ಇಲ್ಲಿನ ಪರಿಸರದಿಂದಾಗಿ ವಿಜ್ಞಾನಿಗಳಿಗೆ ಇಂದಿಗೂ ಈ ಪ್ರದೇಶ ಕುತೂಹಲದ ವಸ್ತುವಾಗಿಯೇ ಉಳಿದುಕೊಂಡಿದೆ.

400 ಕೆ.ಜಿ ಉಪಗ್ರಹದ ತೂಕ
25 ನಿಮಿಷಗಳಲ್ಲಿ ಉಡಾವಣೆಯಾದ  ರಾಕೆಟ್‌ನಿಂದ  ಪ್ರತ್ಯೇಕಗೊಂಡು ಚಂದ್ರನತ್ತ ಸಾಗಿದ ಉಪಗ್ರಹ

ಚೀನಾದ ಕ್ಸಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡ್ಡಯನ
ಸ್ಯಾಟಲೈಟ್‌ನಲ್ಲಿ ಸಂವಹನಕ್ಕಾಗಿ 5 ಮೀ. ವ್ಯಾಸದ ಬೃಹತ್‌ ಆ್ಯಂಟೆನಾ ಸೇರಿ ಹಲವು ವಿಧದ ಆ್ಯಂಟೆನಾ ಅಳವಡಿಕೆ

 


Trending videos

Back to Top