CONNECT WITH US  

ಸುದ್ದಿಕೋಶ: ಉತ್ತಮ ಆರೋಗ್ಯ ಸೇವೆ ಭಾರತದ ಪ್ರಗತಿ

"ದ ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸಸ್‌' ಎಂಬ ಅಧ್ಯಯನದ ಅನ್ವಯ, "ಆರೋಗ್ಯ ಸೇವೆಗಳ ಗಮ್ಯತೆ, ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆ' ವಿಚಾರವಾಗಿ ಜಗತ್ತಿನ 195 ದೇಶಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ  ಭಾರತ 145ನೇ ಸ್ಥಾನ ಗಳಿಸಿದೆ. ಅಷ್ಟೇ ಅಲ್ಲ, ನೆರೆ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ, ಶ್ರೀಲಂಕಾ, ನೇಪಾಳಗಳನ್ನೂ ಹಿಂದಿಕ್ಕಿದೆ. ಆದರೆ, ಟಾಪ್‌ 100ರಲ್ಲಿ ಕಾಣಿಸಿಕೊಳ್ಳಲು ಭಾರತ ಮಾಡಬೇಕಾದ್ದೇನು, ಇನ್ನೂ ಯಾವ ಆರೋಗ್ಯ ಸೇವೆಗಳ ವಿಚಾರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ ಎಂಬುದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. 

ರಾಜ್ಯಗಳ ಕಾಣಿಕೆ
ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುವ ಹೆಗ್ಗಳಿಕೆಯನ್ನು ಗೋವಾ, ಕೇರಳ ಪಡೆದಿದ್ದು, ಈ ಎರಡೂ ರಾಜ್ಯಗಳು ಈ ವಿಚಾರದಲ್ಲಿ 60ಕ್ಕಿಂತ ಹೆಚ್ಚು ಅಂಕ ಪಡೆದಿವೆ. ಆದರೆ, ಅಸ್ಸಾಂ, ಉತ್ತರ ಪ್ರದೇಶ ರಾಜ್ಯಗಳು ಅತ್ಯಂತ ಕಳಪೆ ವೈದ್ಯಕೀಯ ಸೇವೆ ನೀಡುವ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿವೆ. 

ಅಂಕಿ, ಅಂಶಗಳಲ್ಲಿ ಭಾರತದ ಪ್ರಗತಿ  
ಅಧ್ಯಯನದ ಪ್ರಕಾರ, 1990ರಿಂದೀಚೆಗೆ ಭಾರತದಲ್ಲಿ ನೀಡಲಾಗುತ್ತಿರುವ ಆರೋಗ್ಯ ಸೇವೆಗಳ ಗುಣಮಟ್ಟದಲ್ಲಿ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳ ಜನರಿಗೂ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತಾಗಿದೆ. 1990ರಲ್ಲಿ ನಡೆದಿದ್ದ ಇದೇ ಮಾದರಿ ಅಧ್ಯಯನದಲ್ಲಿ ಭಾರತ 24.7 ಅಂಕ ಗಳಿಸಿದ್ದರೆ, 2016ರಲ್ಲಿ 41.2 ಅಂಕ ಗಳಿ ಸಿದೆ. 

ನೂರರೊಳಗೆ ಭಾರತ ಏಕಿಲ್ಲ?
ಭಾರತದಲ್ಲಿ ಉತ್ತಮ ಆರೋಗ್ಯ ಸೇವೆಗಳು ಸಿಗುತ್ತಿದ್ದರೂ, ಟಿಬಿ, ಹೃದ್ರೋಗ, ಪಾರ್ಶ್ವ ವಾಯು, ವೃಷಣ ಕ್ಯಾನ್ಸರ್‌, ಕರುಳು ಕ್ಯಾನ್ಸರ್‌ ಹಾಗೂ ಕಿಡ್ನಿ ವೈಫ‌ಲ್ಯ ಸಮಸ್ಯೆಗಳನ್ನು ಸಮರ್ಥವಾಗಿ ನಿವಾರಿಸುವಂಥ ಆರೋಗ್ಯ ಸೇವೆ ಎಲ್ಲರಿಗೂ ಸುಲಭವಾಗಿ ಲಭ್ಯವಿಲ್ಲ. ಈ ವಿಷಯದಲ್ಲಿ ಭಾರತ ಪ್ರಗತಿ ಸಾಧಿಸಬೇಕಿದೆ.

ಅತ್ಯುತ್ತಮ ಆರೋಗ್ಯ ಸೇವೆ ಎಲ್ಲೆಲ್ಲಿ? 
ದೇಶ                       ಅಂಕ
ಐಸ್‌ಲ್ಯಾಂಡ್‌            97.1
ನಾರ್ವೆ                     96.6
ಹಾಲೆಂಡ್‌                96.1
ಲಕ್ಸೆಂಬ ರ್ಗ್‌              96.0

ಕಳಪೆ ಸೇವೆ ಎಲ್ಲೆಲ್ಲಿ? 
ದೇಶ                       ಅಂಕ
ಆಫ್ರಿ ಕನ್‌ ರಿಪ ಬ್ಲಿ ಕ್‌    18.6
ಸೊಮಾ ಲಿ ಯಾ         19
ಗಿನಿ ಯಾ-ಬಿಸೌ         23.4
ಚಾಡ್‌                     25.4  

Trending videos

Back to Top