CONNECT WITH US  

ಸುದ್ದಿ ಕೋಶ: ಸಿಂಗಾಪುರಕ್ಕೂ ಹರಡಿದ ಕ್ಯಾಶ್‌ಲೆಸ್‌ ಕನಸು

ಸಿಂಗಾಪುರದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ, ಭಾರತದಲ್ಲಿ ಚಾಲ್ತಿ ಇರುವ "ರುಪೇ', "ಭೀಮ್‌' ಹಾಗೂ "ಎಸ್‌ಬಿಐ' ಆ್ಯಪ್‌ಗಳ ಅಂತಾರಾಷ್ಟ್ರೀಯ ಮಾದರಿಗಳನ್ನು ಬಿಡುಗಡೆ ಮಾಡಿದ್ದರು. ಈ ಮೂಲಕ ತಮ್ಮ ಮಹತ್ವಾಕಾಂಕ್ಷೆಯ ನಗದುರಹಿತ ವಹಿವಾಟಿಗೆ ಹೊಸ ಸ್ಪರ್ಶ ಕೊಟ್ಟರು. ಇದರಿಂದಾಗಿ, ಭಾರತದ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊ ರೇಷನ್‌ ಆಫ್ ಇಂಡಿಯಾ (ಎನ್‌ಪಿಸಿಐ) ವ್ಯವಸ್ಥೆ  ಹಾಗೂ ಸಿಂಗಾಪುರದ ನೆಟ್‌ವರ್ಕ್‌ ಫಾರ್‌ ಇಲೆಕ್ಟ್ರಾನಿಕ್‌ ಟ್ರಾನ್ಸ್‌ ಫ‌ರ್ಸ್‌ (ನೆಟ್ಸ್‌) ಸಹಯೋಗ ನಿರ್ಮಾಣವಾಗಿದ್ದು, ಭಾರತದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬುವ ನಿರೀಕ್ಷೆಯಿದೆ. 

ತಜ್ಞರ ಅಭಿಮತ
ಭಾರತದ ವ್ಯಾವಹಾರಿಕ ಆ್ಯಪ್‌ಗಳನ್ನು ಹೀಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದದ್ದು ಇದೇ ಮೊದಲು. ಕೇಂದ್ರ ಸರ್ಕಾರದ "ಡಿಜಿಟಲ್‌ ಪೇಮೆಂಟ್‌' ಕ್ಷೇತ್ರದಲ್ಲಿ ಇದೊಂದು ಹೊಸ ಅಧ್ಯಾಯ. ಎನ್‌ಪಿಸಿಐ ವ್ಯಾಪ್ತಿಯೊಳಗೆ  ದೊಡ್ಡ ಪ್ರಮಾಣದ ಗ್ರಾಹಕರ ಸಮೂಹ  ಸೇರ್ಪಡೆ. 

ಅನುಕೂಲಗಳು 
ವರ್ಷಕ್ಕೆ ಏನಿಲ್ಲವೆಂದರೂ 50 ಲಕ್ಷ ಭಾರತೀಯರು ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವುದರಿಂದ ಅವರೆಲ್ಲರಿಗೂ ಇ-ಪಾವತಿ ಈಗ ಮತ್ತಷ್ಟು ಸರಳ.

ಸಿಂಗಾಪುರ ಬ್ಯಾಂಕುಗಳ ಡೆಬಿಟ್‌, ಕ್ರೆಡಿಟ್‌ ಕಾರ್ಡುಗಳನ್ನು ಉಪಯೋಗಿಸಿ ಅಲ್ಲಿನ ಭಾರತೀಯರು ಭಾರತದ ಯಾವುದೇ ರುಪೇ ಆಧಾರಿತ ಪಾಯಿಂಟ್‌ ಆಫ್ ಸೇಲ್‌ಗಳಲ್ಲಿ ಶಾಪಿಂಗ್‌ ಮಾಡುವ ಅವಕಾಶ. 

ಎಸ್‌ಬಿಐ ಆ್ಯಪ್‌ ಬಿಡುಗಡೆಯಿಂದಾಗಿ, ಸಿಂಗಾಪುರದಲ್ಲಿರುವ 6 ಎಸ್‌ಬಿಐ ಶಾಖೆಗಳ ಭಾರತೀಯ ಗ್ರಾಹಕರಿಗೆ ಸ್ವದೇಶಕ್ಕೆ ಹಣ ಕಳುಹಿಸುವುದು ಮತ್ತಷ್ಟು ಸುಲಭ. 

ಎಸ್‌ಬಿಐ ಆ್ಯಪ್‌ನ ಮೂಲಕ, ಎಲ್ಲಾ ಉಳಿತಾಯ ಖಾತೆ ದಾರರಿಗೆ ವಿ.ಪಿ.ಎ. ಮಾದರಿಯ ಪೇಮೆಂಟ್‌ ಮೂಲಕ 1 ಲಕ್ಷ ರೂ.ವರೆಗೆ ಸುಲಭ ಹಣ ವರ್ಗಾವಣೆಗೆ ಅವಕಾಶ. 

50,00,000
ಪ್ರತಿ ವರ್ಷ ಸಿಂಗಾಪುರಕ್ಕೆ ಭೇಟಿ ನೀಡುವ ಭಾರತೀಯರು
1,00,000 ರೂ.
ಸಿಂಗಾಪುರದ ಭಾರತೀಯರಿಗೆ ಎಸ್‌ಬಿಐ ಆ್ಯಪ್‌ನಿಂದ ಇಷ್ಟು ಹಣ ವರ್ಗಾವಣೆ ಸುಲಭ


Trending videos

Back to Top