CONNECT WITH US  

ಸುದ್ದಿ ಕೋಶ: ದತ್ತು ನೋಟ

ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಚ್ಚು ಬೇಡಿಕೆ

ನಮ್ಮ ದೇಶದಲ್ಲಿ ಮಕ್ಕಳನ್ನು ದತ್ತು ಪಡೆಯಲು ಸಾಕಷ್ಟು ದಂಪತಿಗಳು ನೋಂದಾಯಿಸಿಕೊಂಡಿ ದ್ದರೂ ಅವರ ಆಸೆ ಕೈಗೂಡುತ್ತಿಲ್ಲ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಆದರೆ ಭಾರತದ ದಂಪತಿಗಳು 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ದತ್ತು ಪಡೆಯಲು ಮುಂದೆ ಬರುತ್ತಿಲ್ಲ ಎನ್ನುತ್ತದೆ ಅಧಿಕೃತ ಅಂಕಿ ಅಂಶ. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, 2017-18ರಲ್ಲಿ ದತ್ತು ಸ್ವೀಕರಿಸಲ್ಪಟ್ಟ ಶೇ.80ರಷ್ಟು ಮಕ್ಕಳು 2 ವರ್ಷಕ್ಕಿಂತ ಕೆಳಗಿನವರು. ಎಲ್ಲರೂ ಈ ವಯಸ್ಸಿನ ಮಕ್ಕಳೇ ಬೇಕು ಎನ್ನುವ ಕಾರಣ 2ಕ್ಕಿಂತ ಮೇಲ್ಪಟ್ಟವರನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ.

ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಅಡಿ 8 ಸಾವಿರಕ್ಕೂ ಅಧಿಕ ಚೈಲ್ಡ್‌ಕೇರ್‌ ಸಂಸ್ಥೆಗಳು ನೋಂದಣಿಯಾಗಿದ್ದು, ಇಲ್ಲಿರುವ ಶೇ.90ರಷ್ಟು ಮಕ್ಕಳು 5-6 ವರ್ಷ ವಯಸ್ಸಿನವರಾಗಿದ್ದಾರೆ. ಆದರೆ, ಈ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಯಾರೂ ಮುಂದೆ ಬರುವುದಿಲ್ಲ.
ಲೆ| ಕ| (ನಿವೃತ್ತ) ದೀಪಕ್‌ ಕುಮಾರ್‌, ಸಿಎಆರ್‌ಎ ಸಿಇಒ

Trending videos

Back to Top