CONNECT WITH US  

ಸುದ್ದಿ ಕೋಶ: ಒಂದು ಊಟಕ್ಕೆ ಭಾರತದಲ್ಲಿ 13.50!

ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದಲ್ಲಿ ಒಂದು ಹೊತ್ತಿನ ಊಟ 13.50 ರೂಪಾಯಿಯಲ್ಲಿ ಸಿಗುತ್ತದೆ. ವಿಶ್ವಸಂಸ್ಥೆ ವಿಶ್ವದ ವಿವಿಧ ದೇಶಗಳಲ್ಲಿ ಒಂದು ಹೊತ್ತಿನ ಊಟದ ವೆಚ್ಚದ ಬಗ್ಗೆ ಸಮಗ್ರ ಅಧ್ಯಯನ ವರದಿ ಮಂಡಿಸಿದ್ದು, ಅಭಿವೃದ್ಧಿ ಶೀಲ ಹಾಗೂ ಯುದ್ಧಪೀಡಿತ ದೇಶಗಳಲ್ಲಿ ದುಪ್ಪಟ್ಟು ತೆರಬೇಕಾಗುತ್ತಿದೆ.

ಒಂದು ಊಟ ಅಂದರೆ
600 ಕಿಲೋ ಕ್ಯಾಲರಿ ಆಹಾರ
ಅನ್ನ, ಬ್ರೆಡ್‌, ತರಕಾರಿ ಎಣ್ಣೆ, ಟೊಮಾಟೋ, ಈರುಳ್ಳಿ ಮತ್ತು ನೀರು

ಶೇ.4.5 - ತಲಾ ಆದಾಯ 1.12 ಲಕ್ಷ ರೂ.ಗೆ ಹೋಲಿಸಿದರೆ ಒಂದು ಹೊತ್ತಿನ ಊಟಕ್ಕೆ ಆಗುವ ಸರಾಸರಿ ವೆಚ್ಚ

79.5 ಕೋಟಿ - 2016ರಲ್ಲಿ ಜಗತ್ತಿನಾದ್ಯಂತ ಹಸಿವಿನಿಂದ ಬಳಲುತ್ತಿದ್ದ ಜನರ ಸಂಖ್ಯೆ

19 ಕೋಟಿ- ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಂದಿ(ಶೇ.14.5 ರಷ್ಟು)

119 - ವಿಶ್ವದ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ.

21 ಕೋಟಿ - ಭಾರತದಲ್ಲಿ ಇನ್ನೂ ಬಡತನದ ರೇಖೆಗಿಂತ ಕೆಳಗಿರುವ ಜನರು

ವಿಶ್ವದಲ್ಲೇ ಅತಿ ಹೆಚ್ಚು ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಹೊಂದಿದ ದೇಶ ಭಾರತ


Trending videos

Back to Top