ಪರಿಸರ ದಿನದ ವಿಶೇಷ; ರಿಯಲನ್ಸ್ ನಿಂದ ವಿಶೇಷ ಟಿ ಶರ್ಟ್ ಬಿಡುಗಡೆ

ಮುಂಬೈ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ (ಆರ್ ಐಎಲ್), `ದಿ ಅರ್ಥ್ ಟಿ' ಬ್ರಾಂಡ್ ನ, ಪ್ರಸಿದ್ಧ ಫ್ಯಾಶನ್ ಡಿಸೈನರ್ ಅನಿತಾ ಡೋಂಗ್ರೆ ವಿನ್ಯಾಸಗೊಳಿಸಿದ ಒಂದು ವಿಶೇಷ ಟಿ-ಶರ್ಟ್ ಅನ್ನು, ತನ್ನ ವಿಶಿಷ್ಟ ಕಾರ್ಯಕ್ರಮ- `ಫ್ಯಾಶನ್ ಫಾರ್ ಅ ಅರ್ಥ್ ' ನ ಅಡಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿದೆ.
ಫ್ಯಾಶನ್ನತ್ತ ಸ್ವಿಚ್ ಆಗುವ ಜನರು ಕೇವಲ ಸೌಂದರ್ಯವಷ್ಟೇ ಅಲ್ಲ, ಜತೆಗೆ ಪರಿಸರ ಮತ್ತು ನಮ್ಮ ಭೂಮಿಯ ಸಂರಕ್ಷಣೆಗೆ ನೆರವಾಗುವಂತೆ ಮಾಡುವುದು ಇದರ ಹಿಂದಿನ ಚಿಂತನೆಯಾಗಿದೆ.
2018ರ ಜನವರಿಯಲ್ಲಿ ಐಎಂಜಿ ರಿಲಯನ್ಸ್ ನ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಆರ್|ಇಲಾನ್ ನ ಬಿಡುಗಡೆ ವೇಳೆ, ಆರ್ ಐಎಲ್ ಕಾರ್ಯಕ್ರಮದ ಸ್ಥಳವಾದ ಬಿಕೆಸಿಯಲ್ಲಿನ ಜಿಯೋ ಗಾರ್ಡನ್ ನಿಂದ ಗ್ರಾಹಕರು ಬಳಸಿದ ಪಿಇಟಿ ಬಾಟಲಿಗಳನ್ನು ಸಂಗ್ರಹಿಸಿತ್ತು.ಆ ಬಳಿಕ ಅವುಗಳನ್ನು ಸಂಸ್ಕರಿಸಿ, ರಿಸೈಕಲ್ ಮಾಡಲಾಯಿತು ಮತ್ತು ಬಳಿಕ ಆರ್ ಐಎಲ್ ನ ಗ್ರೀನ್ ಗೋಲ್ಡ್ ಫ್ಯಾಬ್ರಿಕ್ಸ್ ಆಗಿ ಪರಿವರ್ತಿಸಲಾಯಿತು- ಇದು ಅನಿತಾ ಡೋಂಗ್ರೆ ಅವರು ವಿನ್ಯಾಸಗೊಳಿಸಲು ಉಪಯೋಗಿಸಿದ ಅತ್ಯಂತ ಹಸಿರು ಫ್ಯಾಬ್ರಿಕ್ನಲ್ಲೊಂದಾಗಿದೆ ಮತ್ತು ಇದು `ದಿ ಅರ್ಥ್ ಟಿ' ಎಂದು ಹೆಸರಿಸಲಾಗಿದೆ.
ಈ ಸೀಮಿತ ಆವೃತ್ತಿಯ `ದಿ ಅರ್ಥ್ ಟಿ' ಯನ್ನು ಐಎಂಜಿ ರಿಲಯನ್ಸ್ ಹಾಗೂ ಅನಿತಾ ಡೋಂಗ್ರೆ ಅವರು ಆಯ್ಕೆ ಮಾಡಿದ, ಫ್ಯಾಶನ್ ಫಾರ್ ಅರ್ಥ್ ಆಂದೋಲನದಲ್ಲಿ ಮತ್ತು ದಿ ಅರ್ಥ್ ಟಿ ಉಪಕ್ರಮಗಳಲ್ಲಿ ಕೈಜೋಡಿಸಿದ ಸೆಲೆಬ್ರಿಟಿಗಳಿಗೆ ನೀಡಲಾಯಿತು.
``ಪಾರಿಸರಿಕವಾಗಿ ಸುಸ್ಥಿರತೆಯನ್ನು ಖಾತ್ರಿಗೊಳಿಸುವುದು ಹಾಗೂ ಶ್ರೇಷ್ಠತೆಯ ಅತ್ಯುನ್ನತ ಮಟ್ಟಗಳನ್ನು ಸಾಧಿಸಲು ಜವಾಬ್ದಾರಿಯುತ ಕಾರ್ಯಾ ಚರಣೆಗಳಿಗೆ ರಿಲಯನ್ಸ್ ಬದ್ಧವಾಗಿದೆ. ಪರಿಸರ ಹಾಗೂ ಭೂಮಿಯ ರಕ್ಷಣೆಯ ನಿಟ್ಟಿನಲ್ಲಿನ ನಮ್ಮ ಪ್ರಯತ್ನಗಳಲ್ಲಿ ಜನರನ್ನು ಭಾಗೀದಾರಿಕೆ ಮಾಡಲು ಫ್ಯಾಶನ್ ಫಾರ್ ಅರ್ಥ್ ಒಂದು ಪ್ರಯತ್ನವಾಗಿದೆ. ಪಾರಿಸರಿಕವಾಗಿ ಜವಾಬ್ದಾರಿಯ ಫ್ಯಾಶನ್ನ ಹೊಸ ಮಾದರಿಯಾದ ದಿ ಅರ್ಥ್ ಟಿಯನ್ನು ಅನಿತಾ ಡೋಂಗ್ರೆ ವಿನ್ಯಾಸಗೊಳಿಸಿದ್ದಾರೆ'' ಎಂದು ಆರ್ಐಎಲ್ ವಕ್ತಾರರು ತಿಳಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್, ಬ್ರಾಂಡ್ ಆರ್|ಇಲಾನ್ ನ ಮಾಲೀಕನಾಗಿದ್ದು, ಇದು ಭಾರತದಲ್ಲಿ ಅತಿದೊಡ್ಡ ಪಿಇಟಿ ಬಾಟಲಿಗಳ ರಿಸೈಕಲರ್ಗಳಲ್ಲೊಂದಾಗಿದೆ, ಇದು ವರ್ಷಕ್ಕೆ 2.2 ಶತಕೋಟಿ ಪಿಇಟಿ ಬಾಟಲಿಗಳನ್ನು ರಿಸೈಕಲ್ ಮಾಡುತ್ತಿದೆ.
ರಿಸೈಕಲ್ ಮಾಡಿದ ಪಿಇಟಿಯಿಂದ ಫ್ಯಾಬ್ರಿಕ್ ತಯಾರಿಸುವ ವೇಳೆ ನೀರಿನ ಬಳಕೆ ತುಂಬಾ ಕಡಿಮೆ ಸಾಕಾಗುತ್ತದೆ, ಜತೆಗೆ ಹಸಿರುಮನೆ ಅನಿಲಗಳ ಬಿಡುಗಡೆಯೂ ಗಣನೀಯವಾಗಿ ತಗ್ಗುತ್ತದೆ. ಬಳಸುವ ತುಸು ನೀರನ್ನೂ ಕೂಡಾ ಶೇ.90ರಷ್ಟು ರಿಸೈಕಲ್ ಮಾಡಲಾಗುತ್ತದೆ.