CONNECT WITH US  

ಮುಂಬಯಿ:ಮಳೆ ಮಧ್ಯೆ ನಡುರಸ್ತೆಯಲ್ಲೇ ಜೋಡಿಯ ಕಾಮಕೇಳಿ;ವಿಡಿಯೋ ವೈರಲ್‌

 ಕಾಮಾತುರಣಾಂ ನ ಲಜ್ಜಾಂ ನ ಭಯಂ..!

ಮುಂಬಯಿ: ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೊ ಪಿಟೀಲು ಬಾರಿಸುತ್ತಿದ್ದ ಎಂಬ ಮಾತಿನಂತೆ ಮಹಾಮಳೆಗೆ ಮುಂಬಯಿ ನಗರಿ ತತ್ತರಿಸಿ ಜನರೆಲ್ಲಾ ಏನಾಗುತ್ತೋ ಎನ್ನುವ ಆತಂಕದಲ್ಲಿದ್ದ ವೇಳೆ ಜೋಡಿಯೊಂದು ಪ್ರಮುಖ ಸ್ಥಳದಲ್ಲೇ  ಕಾಮಕೇಳಿಗೆ ಇಳಿದು ನಿರ್ಲಜ್ಜ ತನ ಪ್ರದರ್ಶಿಸಿದೆ. 

ಶನಿವಾರ  ಪ್ರಮುಖ ಸ್ಥಳವಾದ ಮರೀನ್‌ ಡ್ರೈವ್‌ನಲ್ಲಿ ಈ ಹೇಯ ಘಟನೆ ನಡೆದಿದ್ದು, ವಿದೇಶಿ ಯುವಕ ಮತ್ತು ಭಾರತೀಯ ಯುವತಿಯ ಜೋಡಿ ಅಶ್ಲೀಲವಾಗಿ ವರ್ತಿಸುತ್ತಾ ಡಿವೈಡರ್‌ನ ಮಧ್ಯೆ ಕುಳಿತು ಕಾಮಕೇಳಿ ನಡೆಸತೊಡಗಿದೆ. ದೃಶ್ಯ ನೋಡಿದ ಕುತೂಹಲಿ ನೂರಾರು ಜನರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದು ಅದೀಗ ವೈರಲ್‌ ಆಗಿದೆ.

ಸಾರ್ವಜನಿಕ ಅಶ್ಲೀಲ ವರ್ತನೆ ಕಂಡ ಪೈಕಿ ಯಾರೋ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದನ್ನು ಗಮನಿಸಿ ಯುವಕ ಸ್ಥಳದಿಂದ ಕಾಲ್ಕಿತ್ತಿದ್ದು, ಯುವತಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. 

ಪೊಲೀಸರ ಬಳಿ ಯುವತಿ ಕ್ಷಣಕ್ಕೊಂದು ವಿಳಾಸ ಹೇಳುತ್ತಿದ್ದು  ಇದುವರೆಗೆ ಆಕೆ ಎಲ್ಲಿಯವಳು ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಯುವತಿ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾಳೆ ಎಂದೂ ಹೇಳಲಾಗಿದೆ. 

ಮಹಿಳೆಯನ್ನು ಚೆಂಬೂರ್‌ನ ರಿಮಾಂಡ್‌ ಹೋಮ್‌ಗೆ ಕಳುಹಿಸಲಾಗಿರುವ ಬಗ್ಗೆ ವರದಿಯಾಗಿದೆ. 

Trending videos

Back to Top