CONNECT WITH US  

ಇಪಿ-1 "ಪವರ್‌' ಬೈಕ್‌

ಉತ್ತರ ಕರ್ನಾಟಕದಲ್ಲಿ ಆರಂಭವಾದ ಸ್ಟಾರ್ಟ್‌ಅಪ್‌ ಸಂಸ್ಥೆ ಇದು. ಹುಬ್ಬಳ್ಳಿಯಿಂದ ರಾಷ್ಟ್ರರಾಜಧಾನಿ ನವದೆಹಲಿಯ ತನಕ ಸುದ್ದಿ ಮಾಡಿದೆ. ಶೀಘ್ರದಲ್ಲಿಯೇ ಇಪಿ-1 ನ್ಪೋರ್ಟ್ಸ್ ಬೈಕ್‌ ಮೂಲಕ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಸ್ಕೂಟರ್‌, ಬೈಕ್‌ಗಳಿಗೂ ಸವಾಲಾಗಿ ತಮ್ಮ ಹೊಸ ಉತ್ಪನ್ನವು ನಿಲ್ಲುತ್ತದೆಂಬ ವಿಶ್ವಾಸದಲ್ಲಿದೆ.

- ಕ್ರೇಜಿಗಳಿಗೂ ಎಲೆಕ್ಟ್ರಿಕ್‌ ಬೈಕ್‌
- ಹುಬ್ಬಳ್ಳಿ ಮೂಲದ ಕಂಪನಿ
- ಗಂಟೆಗೆ 250 ಕಿಮೀ ಗರಿಷ್ಠ ವೇಗದ ಮಿತಿ

ಪೆಟ್ರೋಲ್‌, ಡೀಸೆಲ್‌ ವಾಹನಗಳ ಯುಗಾಂತ್ಯಕ್ಕೆ ವಿಶ್ವಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದೆರಡು ದಶಕದಲ್ಲಾದ ಮೊಬೈಲ್‌ ಕ್ರಾಂತಿ ಆಟೋಮೊಬೈಲ್‌ ಕ್ಷೇತ್ರದಲ್ಲೂ ಸಾಧ್ಯವೇ ಎಂದು ಗೊಣಗಿಕೊಳ್ಳುತ್ತಿರುವಾಗಲೇ ಇಂಥದ್ದೊಂದು ಕ್ರಾಂತಿಗೆ ಈಗ ಪಕ್ಕಾ ಚಾಲನೆ ಸಿಕ್ಕಿರುವುದು ಸ್ಪಷ್ಟ.

ಅಂಥದ್ದೇನು ಕ್ರಾಂತಿ ನಡೆದಿದೆ ಅಥವಾ ನಡೆಯಲಿದೆ ಎನ್ನುವ ಕುತೂಹಲ ಸಹಜವಾಗಿ ಮೂಡಿರಬಹುದು. ಹೌದು, ಎಲ್ಲವೂ ಅಂದುಕೊಂಡಂತೆ ನಡದೇ ಹೋಯಿತೆಂದರೆ ಆಟೋಮೊಬೈಲ್‌ ಕ್ಷೇತ್ರವೇ ಹೊಸದೊಂದು ದಿಕ್ಕು ಕಂಡುಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಬದಲಾವಣೆಗೆ ಕಾರಣ ಎಲೆಕ್ಟ್ರಿಕಲ್‌ ವಾಹನಗಳ ಅಭಿವೃದ್ಧಿ, ಉತ್ಪಾದನೆಯಲ್ಲಿ ಆಗುತ್ತಿರುವ ಕ್ಷಿಪ್ರಗತಿಯ ಬೆಳವಣಿಗೆ.

ಕಳೆದೆರಡು ವರ್ಷದಿಂದೀಚೆಗೆ ಗಮನಾರ್ಹವಾದ ಬೆಳವಣಿಗೆಗಳು ಆಗುತ್ತಿವೆ. ಭಾರತದಲ್ಲಿ ಇದಕ್ಕೆ ವಿಶೇಷ ಪ್ರೋತ್ಸಾಹವೂ ಸಿಗುತ್ತಿದೆ. ಕೇಂದ್ರ ಸರ್ಕಾರವಷ್ಟೇ ಅಲ್ಲ, ಕರ್ನಾಟಕ ಸೇರಿದಂತೆ ವಾಣಿಜ್ಯೋದ್ಯಮಕ್ಕೆ ಪೂರಕ ವಾತಾವರಣ ಇರುವ ಉಳಿದ ರಾಜ್ಯಗಳ ಸರ್ಕಾರಗಳಿಂದಲೂ ಬೆಂಬಲ ಸಿಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಒಂದು ಹೆಜ್ಜೆ ಮುಂದಿದೆ. ಈಗಾಗಲೇ ಪ್ರತಿಷ್ಠಿತ ಕಂಪನಿಯೊಂದು ಸರ್ಕಾರದ ಜತೆ ಕೈಜೋಡಿಸಿ ಎಲೆಕ್ಟ್ರಿಕ್‌ ವಾಹನಗಳ ಕ್ರಾಂತಿಗೆ ಮುಂದಾಗಿದೆ. ಅದೇ ಕಾರಣಕ್ಕೆ ರಾಜ್ಯದ ಕೆಲ ಸಂಸ್ಥೆಗಳೂ ಮಾರುಕಟ್ಟೆಯಲ್ಲಿ ಪ್ರಭಾವ ಬೀರುವ ದಾರಿಯಲ್ಲಿವೆ. ಇದರಲ್ಲೊಂದು "ಮ್ಯಾನ್‌ಕ್ಯಾಮ್‌ ಆಟೋಮೋಟಿವ್‌'

ಮ್ಯಾನ್‌ಕ್ಯಾಮ್‌ ಮೂಲ ಎಲ್ಲಿ?
ಉತ್ತರ ಕರ್ನಾಟಕದಲ್ಲಿ ಆರಂಭವಾದ ಸ್ಟಾರ್ಟ್‌ಅಪ್‌ ಸಂಸ್ಥೆ ಇದು. ಹುಬ್ಬಳ್ಳಿಯಿಂದ ರಾಷ್ಟ್ರರಾಜಧಾನಿ ನವದೆಹಲಿಯ ತನಕ ಸುದ್ದಿ ಮಾಡಿದೆ. ಶೀಘ್ರದಲ್ಲಿಯೇ ಇಪಿ-1 ನ್ಪೋರ್ಟ್ಸ್ ಬೈಕ್‌ ಮೂಲಕ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಸ್ಕೂಟರ್‌, ಬೈಕ್‌ಗಳಿಗೂ ಸವಾಲಾಗಿ ತಮ್ಮ ಹೊಸ ಉತ್ಪನ್ನವು ನಿಲ್ಲುತ್ತದೆಂಬ ವಿಶ್ವಾಸದಲ್ಲಿದೆ. 2022ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ ಕಂಪನಿ. ಆದರೆ, ಈ ಬೈಕ್‌ನ ಬೆಲೆ ಇನ್ನಷ್ಟೇ ಗೊತ್ತಾಗಬೇಕಿದೆ.

ಸಾಮರ್ಥ್ಯಕ್ಕೆ ಮೆಚ್ಚುಗೆ
ಕಂಪನಿ ಹೇಳಿಕೊಂಡಿರುವಂತೆ ಒಮ್ಮೆ ಫ‌ುಲ್‌ ಚಾರ್ಜ್‌ ಆದರೆ 240 ಕಿಲೋ ಮೀಟರ್‌ ಓಡುವ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಶೀಘ್ರದಲ್ಲಿಯೇ 500 ಕಿಲೋಮೀಟರ್‌ ಓಡುವಂತೆ ಮಾಡುವ ಬ್ಯಾಟರಿ ಸಿದ್ಧಪಡಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದೂ ಕಂಪೆನಿ ಹೇಳಿಕೊಂಡಿದೆ. 54 ಎಚ್‌ಪಿ, 8000 ಆರ್‌ಪಿಎಂ ಓಟದ ಸಾಮರ್ಥ್ಯ ಹೊಂದಿರುವ ಇಪಿ-1ನಲ್ಲಿ 18.4ಕೆಡಬ್ಲ್ಯುಎಚ್‌ ಬ್ಯಾಟರಿ ಅಳವಡಿಸಲಾಗಿರುತ್ತದೆ. ಈ ಬೈಕ್‌ನ ಗರಿಷ್ಠ ವೇಗ, ಗಂಟೆಗೆ 250ಕಿ.ಮೀ. ಲಿಕ್ವಿಡ್‌ ಕೂಲ್ಡ್‌ ಬ್ಯಾಟರಿಯ ಭಾರ 80 ಕೆ.ಜಿ ಇದ್ದು, ಬೈಕ್‌ನ ಒಟ್ಟಾರೆ ಭಾರ 180 ಕೆ.ಜಿ ಇವೆಲ್ಲದರ ಜತೆಗೆ ತಾನೇ ಸಿದ್ದಪಡಿಸಿರುವ ಸಾಫ್ಟ್ವೇರ್‌ ಆಧಾರಿತ ಎಬಿಎಸ್‌ ಹಾಗೂ ಟ್ರಾಕ್ಷನ್‌ ಕಂಟ್ರೋಲ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬ್ಯಾಟರಿ ಕೂಡ ತಾನೇ ಸಿದ್ಧಪಡಿಸಿಕೊಂಡಿದ್ದೆಂದು ಕಂಪನಿ ಹೇಳಿಕೊಂಡಿದೆ.

ಜುಲೈ 1ರಿಂದ ಅಭಿಯಾನ
ಮ್ಯಾನ್‌ಕೇಮ್‌ ಜುಲೈ 1ರಿಂದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ತನ್ನ ಅಭಿಯಾನ ಆರಂಭಿಸಲಿದೆ.

ಹೈಲೈಟ್‌
- ಇಪಿ-1 ಸಾಮರ್ಥ್ಯದಲ್ಲಿ 500-600ಸಿಸಿ ಬೈಕ್‌ಗಳಿಗೆ ಏನೂ ಕಡಿಮೆಯಿಲ್ಲ.
- ಮುಂಭಾಗದಲ್ಲಿ 320 ಮಿ.ಮೀ. ಹಾಗೂ ಹಿಂಭಾಗದಲ್ಲಿ 240ಮಿ.ಮೀ. ಡಿಸ್ಕ್ ಬ್ರೇಕ್‌

ಸ್ಟಾರ್ಟ್‌ಅಪ್‌ಗ್ಳ ಸ್ಪರ್ಧೆ
2020ರಿಂದ 30ರ ಅವಧಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸ್ಪರ್ಧೆ ಈಗಿನ ಹತ್ತು ಪಟ್ಟು ಜಾಸ್ತಿಯಾಗಿರಲಿದೆ. ಕೇಂದ್ರ ಸರ್ಕಾರವೂ ಈಗಾಗಲೇ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಈಗಾಗಲೇ ಆಟೋಮೊಬೈಲ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹೆಚ್ಚಿನ ಸಂಸ್ಥೆಗಳು ತಮ್ಮ ಬ್ರಾಂಡ್‌ಗೂ ಧಕ್ಕೆ ಬರದಂತೆ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಯನ್ನೂ ಸುತ್ತುವರಿದುಕೊಳ್ಳುವ ಪ್ರಯತ್ನದಲ್ಲಿವೆ. ಜೊತೆಗೆ ಒಂದಿಷ್ಟು ಸ್ಟಾರ್ಟ್‌ಅಪ್‌ಗ್ಳು ಈಗಾಗಲೇ ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಆಮೆಗತಿಯಲ್ಲಿ ಹೊಸ ಹೊಸ ಮಾಡೆಲ್‌ಗ‌ಳನ್ನು ಪರಿಚಯಿಸುತ್ತಿವೆ. ಆದರೆ ಯಾವೆಲ್ಲಾ ಸಂಸ್ಥೆಗಳು ಗಟ್ಟಿಯಾಗಿ ಉಳಿದುಕೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಷ್ಟೆ.

- ಗಣಪತಿ ಅಗ್ನಿಹೋತ್ರಿ

Trending videos

Back to Top