CONNECT WITH US  

ಸುದ್ದಿ  ಕೋಶ: ಗ್ರೀನ್‌ ಕಾರ್ಡ್‌ಗೆ ಕಾಯಬೇಕು 151 ವರ್ಷ

ಎಂಜಿನಿಯರ್‌, ಡಾಕ್ಟರ್‌ ಪದವಿ ಪಡೆದುಕೊಂಡು ಅಮೆರಿಕಕ್ಕೆ ಹೋಗಿ, ನೆಲೆ ನಿಲ್ಲಬೇಕೆನ್ನುವುದು ಪ್ರತಿ ಯುವ ಭಾರತೀಯನ ಕನಸು. ಮುಂದಿನ ದಿನಗಳಲ್ಲಿ ಆ ಕನಸು ಈಡೇರುವುದು ಕಷ್ಟ. ವಾಷಿಂಗ್ಟನ್‌ನ ಕಾಟೋ ಇನ್ಸ್ಟಿಟ್ಯೂಟ್‌ ನಡೆಸಿದ ಅಧ್ಯಯನದ ಪ್ರಕಾರ ಅಮೆರಿಕದಲ್ಲಿ ಈಗ ಇರುವ ಭಾರತೀಯರಿಗೆ ಗ್ರೀನ್‌ ಕಾರ್ಡ್‌ ಪಡೆಯಲು 151 ವರ್ಷ ಬೇಕಾದೀತು ಎಂದು ಕಂಡುಕೊಂಡಿದೆ. ಹಾಗಿದ್ದರೆ ಯಾವ ಯಾವ ವಿಭಾಗದ ವ್ಯಾಪ್ತಿಯಲ್ಲಿ ಭಾರತೀಯರು ಇದ್ದಾರೆ ಎನ್ನುವುದನ್ನು ನೋಡೋಣ

ಗ್ರೀನ್‌ ಕಾರ್ಡ್‌ ಎಂದರೇನು?
ಅಮೆರಿಕದಲ್ಲಿ ಶಾಶ್ವತವಾಗಿ ನೆಲೆ ನಿಂತು ಜೀವಿಸಲು, ಉದ್ಯೋಗ ಪಡೆಯಲು ಇರುವ ವ್ಯವಸ್ಥೆ. ಸರಳವಾಗಿ ಹೇಳುವುದಿದ್ದರೆ ಅಲ್ಲಿನ ಪೌರತ್ವ ಪಡೆಯುವ ವ್ಯವಸ್ಥೆ.

ಅಧ್ಯಯನದ ಪ್ರಮುಖ ಅಂಶಗಳು
ಸಾಂಖೀಕ ಮಾಹಿತಿ ಈ ವರ್ಷದ ಏ.20ಕ್ಕೆ ಕೊನೆಗೊಂಡಂತೆ ಇದೆ. 
ಎಲ್ಲಾ ಅರ್ಜಿದಾರರಿಗೆ ಗ್ರೀನ್‌ ಕಾರ್ಡ್‌ ಪಡೆಯಲು 151 ವರ್ಷ ಬೇಕು
ಪ್ರತಿ ವರ್ಷವೂ ಬದಲಾಗುವ ವೀಸಾ ನಿಯಮಗಳಿಂದ ಈ ವಿಳಂಬ. 
ಅಮೆರಿಕ ಸರ್ಕಾರ ಪ್ರತಿ ದೇಶಕ್ಕೆ ಶೇ.7ರಷ್ಟು ಅವಕಾಶ ಮಾತ್ರ ನೀಡುವುದೂ ಒಂದು ಕಾರಣ

Trending videos

Back to Top