CONNECT WITH US  

ಸುದ್ದಿ ಕೋಶ: ಎಸಿ:  24 ಡಿ.ಸೆ.

ಹವಾನಿಯಂತ್ರಿತ ವ್ಯವಸ್ಥೆ(ಎಸಿ)ಯಲ್ಲಿ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್‌ ಎಂದು ಡಿಫಾಲ್ಟ್ ಸೆಟ್ಟಿಂಗ್‌ ಮಾಡುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಶುಕ್ರವಾರ ನಡೆದ ಸಭೆಯಲ್ಲಿ ವಿದ್ಯುತ್‌ ಸಚಿವ ಆರ್‌.ಕೆ.ಸಿಂಗ್‌ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ದೃಷ್ಟಿಯಿಂದಲೂ ಗ್ರಾಹಕರಿಗೆ ಲಾಭವಾಗಲಿದೆ ಎಂದಿದ್ದಾರೆ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ, ಕೆಲವೇ ತಿಂಗಳಲ್ಲಿ ಇದು ಜಾರಿಯಾಗಲಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

8 ಕೋಟಿ ಟಿಆರ್‌(ಟನ್‌ ಆಫ್ ರೆಫ್ರಿಜರೇಟರ್‌)- ಪ್ರಸ್ತುತ ದೇಶದಲ್ಲಿ ಅಳವಡಿಸಲಾಗಿರುವ ಎಸಿಗಳ ಒಟ್ಟಾರೆ ಸಾಮರ್ಥ್ಯ
25 ಕೋಟಿ ಟಿಆರ್‌ - 2030ರ ವೇಳೆಗೆ ಈ ಪ್ರಮಾಣದಲ್ಲಾಗುವ ಅಂದಾಜು
4 ಕೋಟಿ ಯುನಿಟ್‌- ಬೇಡಿಕೆಗೆ ಅನುಸಾರವಾಗಿ ಲೆಕ್ಕ ಹಾಕು ವುದಿದ್ದರೆ, ದಿನಕ್ಕೆ ಉಳಿತಾಯ ಆಗಬಹುದಾದ ವಿದ್ಯುತ್‌

ಅನುಷ್ಠಾನ ಹೇಗೆ?
ಮೊದಲಿಗೆ ಏರ್‌ಪೋರ್ಟ್‌ಗಳು, ಹೋಟೆಲ್‌, ಶಾಪಿಂಗ್‌ ಮಾಲ್‌, ಕಚೇರಿ, ಸರ್ಕಾರಿ ಕಟ್ಟಡಗಳು ಸೇರಿದಂತೆ ಎಲ್ಲ ಸಂಸ್ಥೆಗಳು ಹಾಗೂ ತಯಾರಕರಿಗೆ ಈ ಕುರಿತು ಸುತ್ತೋಲೆ ಕಳುಹಿಸುವುದು, 4-6 ತಿಂಗಳ ಕಾಲ ಜನಜಾಗೃತಿ ಮೂಡಿಸುವುದು. ಡಿಫಾಲ್ಟ್ ಸೆಟ್ಟಿಂಗ್‌ ಕಡ್ಡಾಯಗೊಳಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯುವುದು ಸರಕಾರದ ಯೋಜನೆ.

ಭಾರತಕ್ಕೇನು ಲಾಭ?
ದೇಶದಲ್ಲಿ ಶೇ.6ರಷ್ಟು ಮನೆಗಳಲ್ಲಿ ಮಾತ್ರ ಹವಾನಿಯಂತ್ರಿತ ವ್ಯವಸ್ಥೆ ಬಳಕೆಯಾಗುತ್ತಿದೆ. ಈ ಎಲ್ಲ ಗ್ರಾಹಕರೂ ಡಿಫಾಲ್ಟ್ ಟೆಂಪರೇಚರ್‌ ಸೆಟ್ಟಿಂಗ್‌(ಪೂರ್ವ ನಿಯೋಜಿತ ತಾಪಮಾನ ವ್ಯವಸ್ಥೆ) ಅನ್ನು ಅಳವಡಿಸಿಕೊಂಡರೆ, ಭಾರತವು ವರ್ಷಕ್ಕೆ 20 ಶತಕೋಟಿ ಯುನಿಟ್‌ ವಿದ್ಯುತ್ತನ್ನು ಉಳಿಸಬಹುದು.

ನಿರ್ಧಾರಕ್ಕೆ ಕಾರಣವೇನು?
ಏರ್‌ ಕಂಡೀಷನರ್‌ನ ತಾಪಮಾನ ಹೆಚ್ಚಿದ್ದಷ್ಟು ವ್ಯಯವಾಗುವ ವಿದ್ಯುತ್‌ನ ಪ್ರಮಾಣ ಕಡಿಮೆಯಾಗುತ್ತದೆ.
ಒಂದು ಡಿಗ್ರಿ ತಾಪಮಾನ ಹೆಚ್ಚಿಸಿದರೂ ಶೇ.6ರಷ್ಟು ವಿದ್ಯುತ್‌ ಉಳಿತಾಯ
ಮಾನವನ ದೇಹದ ಸಾಮಾನ್ಯ ಉಷ್ಣತೆ ಸುಮಾರು 36-37 ಡಿ.ಸೆ. ಆಗಿರುತ್ತದೆ.
ಎಸಿಯಲ್ಲಿ 18-21 ಡಿ.ಸೆ. ತಾಪಮಾನ ನಿಗದಿಪಡಿಸುವುದು ಕಿರಿಕಿರಿಯಷ್ಟೇ ಅಲ್ಲ, ಅನಾರೋಗ್ಯಕರವೂ ಹೌದು
 


Trending videos

Back to Top