CONNECT WITH US  

"ಕಂಪಾಸ್‌ ಬೆಡ್‌ರಾಕ್‌':ಜೀಪ್‌ನಿಂದ ಲಿಮಿಟೆಡ್‌ ಎಡಿಷನ್‌ ಕಡೆಗೆ

ಭಾರತದ ಆಟೋಮೊಬೈಲ್‌ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದರೆ ಕೆಲ ಸಂಸ್ಥೆಗಳ, ಬೆರಳೆಣಿಕೆಯಷ್ಟು ವಾಹನಗಳು ಎಂದೆಂದೂ ಮರೆಯಲಾಗದ ಬ್ರಾಂಡ್‌ಗಳಾಗಿ ಮನಸ್ಸಲ್ಲಿ ಉಳಿದುಕೊಂಡು ಬಿಡುತ್ತವೆ. ಆ ಸಂಸ್ಥೆಗಳ ಹೆಸರುಗಳೂ ಮನಸ್ಸಿಂದ ಜಾರುವುದಿಲ್ಲ. ಇಂಥ ಸಂಸ್ಥೆಗಳ ಸಾಲಿನಲ್ಲಿ ಅಮೆರಿಕ ಮೂಲದ ಸಂಸ್ಥೆ "ಜೀಪ್‌' ಕೂಡ ಒಂದು.
"ಜೀಪ್‌' ಇದೀಗ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನದಲ್ಲಿದೆ. ಸಹಸ್ರಾರು ವಾಹನಗಳನ್ನು ಮಾರಾಟ ಮಾಡಿರುವ ಜೀಪ್‌ ಸಂಸ್ಥೆ ಇತ್ತೀಚೆಗಷ್ಟೇ ಪರಿಚಯಿಸಿದ ಕಂಪಾಸ್‌ ಎಸ್‌ಯುವಿ ವಾಹನವನ್ನು ಈಗಾಗಲೇ ಇಪ್ಪತ್ತೆçದು ಸಾವಿರಕ್ಕೂ ಹೆಚ್ಚು ಮಾರಾಟ ಮಾಡಿದೆ. ಈ ಜನಪ್ರಿಯತೆ ಬಳಸಿಕೊಂಡು ಮಾರುಕಟ್ಟೆಯನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಲಿಮಿಟೆಡ್‌ ಎಡಿಷನ್‌ ಪರಿಚಯಿಸಿದೆ. ಅದೇ "ಕಂಪಾಸ್‌ ಬೆಡ್‌ರಾಕ್‌'!

ಭಾರತದಲ್ಲಿ ಎಸ್‌ಯುವಿ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವುದೂ ಕೂಡ ಕಂಪಾಸ್‌ ಬೆಡ್‌ರಾಕ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮತ್ತೂಂದು ಪ್ರಮುಖ ಕಾರಣ. ನ್ಪೋರ್ಟ್ಸ್ ಮಾದರಿ ವಿನ್ಯಾಸದ ಎಸ್‌ಯುವಿ ತಯಾರಿಕೆಯಲ್ಲಿ ಸೈ ಎನಿಸಿಕೊಂಡಿರುವ ಜೀಪ್‌ ಸಂಸ್ಥೆ ಬೆಡ್‌ರಾಕ್‌ನಲ್ಲೂ ಅದೇ ಮಾದರಿಯ ವಿನ್ಯಾಸವನ್ನು ಕಾಯ್ದುಕೊಂಡು ಒಂದಿಷ್ಟು ಬದಲಾವಣೆ ಮಾಡಿರುವುದನ್ನು ಗುರುತಿಸಬಹುದು. ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳು ಲಿಮಿಟೆಡ್‌ ಎಡಿಷನ್‌ ಪರಿಚಯಿಸುವಾಗ ವಿಶೇಷ ಬಣ್ಣಗಳಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಜೀಪ್‌ ಕೂಡ ಇದರಿಂದ ಹೊರತಾಗಿಲ್ಲ. ಅಪರೂಪದ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

ಬ್ರಾಂಡ್‌ ಬಿಲ್ಡ್‌ ಮ್ಯಾಜಿಕ್‌
 ಅಷ್ಟಕ್ಕೂ ಕಂಪಾಸ್‌ ಹಾಗೂ ಬೆಡ್‌ರಾಕ್‌ಗೆ ಭಾರಿ ಎನ್ನುವಂತಹ ಬದಲಾವಣೆ ಇಲ್ಲದಿದ್ದರೂ, ಗಮನಿಸಬಹುದಾದ ಹಾಗೂ ಆಕರ್ಷಣೀಯವಾದ ಒಂದಿಷ್ಟು ಬದಲಾವಣೆಯನ್ನಂತೂ ಮಾಡಿದೆ. ಜೀಪ್‌ನ ಹೊರ ಕವಚದ ಮೇಲೆ ಹಾಗೂ ಸೀಟ್‌ಗಳ ಮೇಲೆ ಬೆಡ್‌ರಾಕ್‌ ಎಂದು ಬರೆದಿರುವ ವಿಶೇಷ ಲೋಗೊವೊಂದನ್ನು ಇರಿಸಲಾಗಿದೆ. ಸ್ಪೆಷಲ್‌ ಎಡಿಷನ್‌ಗಳನ್ನು ಪರಿಚಯಿಸುವಾಗ ಬ್ರಾಂಡ್‌ ಜನಪ್ರಿಯತೆಗೆ ಸಂಸ್ಥೆಗಳು ವಿಶೇಷ ಲೋಗೋ ಇರುವಂತೆ, ಹೊಸ ಬ್ರಾಂಡ್‌ಗೆ ಅಥವಾ ಮುಂದಿನ ಎಡಿಷನ್‌ನ ಮಾರುಕಟ್ಟೆಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತದೆ. ಜೊತೆಗೆ ಇಂಥ ಲಿಮಿಟೆಡ್‌ ಎಡಿಷನ್‌ಗಳನ್ನು ಖರೀದಿಸುವ ಗ್ರಾಹಕರು ಕೆಲವೊಂದು ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆಯೂ ನೋಡಿಕೊಳ್ಳುವುದುಂಟು.

ಎಂಜಿನ್‌ ಸಾಮರ್ಥ್ಯ
ಮೊದಲೇ ಹೇಳಿದಂತೆ ಕಂಪಾಸ್‌ನಲ್ಲಿನ ಸಾಕಷ್ಟು ಸಾಮ್ಯತೆ ಹೊಂದಿರುವ ಬೆಡ್‌ರಾಕ್‌ ಎಸ್‌ಯು 2.0ಲೀಟರ್‌ ಟಬೋì ಎಂಜಿನ್‌ ಹೊಂದಿದೆ. 173 ಬಿಎಚ್‌ಪಿ ಉತ್ಪಾದನೆಯ 6 ಸ್ಪೀಡ್‌ ಮ್ಯಾನ್ಯುವಲ್‌ ಗೇರ್‌ಬಾಕ್ಸ್‌ ಹಾಗೂ 4x2 ಎಸ್‌ಯುವಿ ಇದಾಗಿದೆ.

ವಿನ್ಯಾಸ ಅಚ್ಚುಮೆಚ್ಚು
ಈಗಾಗಲೇ ಜೀಪ್‌ ಕಂಪಾಸ್‌ನ ವಿನ್ಯಾಸವನ್ನು ಮೆಚ್ಚಿಸಿರುವ ಸಂಸ್ಥೆ, ಇದೀಗ ಬೆಡ್‌ರಾಕ್‌ನ ವಿನ್ಯಾಸವನ್ನು ಇನ್ನಷ್ಟು ಉತ್ತಮಗೊಳಿಸಿರುವುದಾಗಿ ಹೇಳಿಕೊಂಡಿದೆ. ಐದು ಇಂಚಿನ ಸ್ಮಾರ್ಟ್‌ ಸ್ಕೀನ್‌ನೊಂದಿಗೆ ಡ್ಯಾಶ್‌ಬೋರ್ಡ್‌ನಲ್ಲಿನ ವಿನ್ಯಾಸವನ್ನು ಸಣ್ಣ ಪ್ರಮಾಣದಲ್ಲಿ ಬದಲಾಯಿಸಿದೆ. ಫ್ರಂಟ್‌ ಗ್ರಿಲ್‌, ಸೀಟ್‌ಗಳ ವಿನ್ಯಾಸದಲ್ಲಿಯೂ ಕೊಂಚ ಬದಲಾವಣೆ ಮಾಡಲಾಗಿದೆ. ಉಳಿದಂತೆ ಕಂಪಾಸ್‌ನಲ್ಲಿರುವ ಎಲ್ಲಾ ಫ್ಯೂಚರ್‌ಗಳನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದೆ.

ಎಕ್ಸ್‌ ಶೋ ರೂಂ ಬೆಲೆ: 17.53 ಲಕ್ಷ ರೂ.

ಎಷ್ಟು ಬಣ್ಣಗಳಲ್ಲಿ ಲಭ್ಯ?
ವೋಕಲ್‌ ವೈಟ್‌, ಮಿನಿಮಲ್‌ ಗ್ರೇ, ಎಕೊÕàಟಿಕಾ ರೆಡ್‌

ಹೈಲೈಟ್ಸ್‌
- 16ಇಂಚ್‌ ಗ್ಲಾಸ್‌ ಬ್ಲ್ಯಾಕ್‌ ಅಲಾಯ್‌ ವೀಲ್‌ ಬಳಕೆ
- ಬ್ಲ್ಯಾಕ್‌ ರೂಫ್ ರೇಲ್ಸ್‌ಗಳ ಬಳಕೆ
- ಟಚ್‌ಸ್ಕ್ರೀನ್‌ನ ವಿನ್ಯಾಸ ಕಂಪಾಸ್‌ಗಿಂತ ಭಿನ್ನ

- ಗಣಪತಿ ಅಗ್ನಿಹೋತ್ರಿ


Trending videos

Back to Top