CONNECT WITH US  

ಸುದ್ದಿ ಕೋಶ: ಸೆಪ್ಟೆಂಬರ್‌ಗೆ ಸಿದ್ಧ ಕಣ್ಣೂರು ವಿಮಾನ ನಿಲ್ದಾಣ

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇರಳದ ಕಣ್ಣೂರಿನಲ್ಲಿ ಸದ್ಯ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾ ಗಲಿದೆ. ಈ ಮೂಲಕ, ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆ ದೇವರೊಲಿದ ನಾಡಿಗೆ ಲಭ್ಯವಾಗಲಿದೆ. ಇತ್ತೀಚೆಗಷ್ಟೇ ಸಚಿವ ಸುರೇಶ್‌ ಪ್ರಭು ಅವರು ಕಣ್ಣೂರು ಏರ್‌ಪೋರ್ಟ್‌ ಗೆ ಒಪ್ಪಿಗೆ ನೀಡಿರುವ ಬಗ್ಗೆ ಘೋಷಿಸಿದ್ದರು.

1,892 ಕೋಟಿ ವಿಮಾನ ನಿಲ್ದಾಣ ಕಾಮಗಾರಿ ವೆಚ್ಚ
2,330 ಎಕರೆ ಯೋಜನೆ ಜಾರಿಗಾಗಿ ಸ್ವಾಧೀನ ಮಾಡಿಕೊಂಡ ಜಮೀನು

ವಿಮಾನ ನಿಲ್ದಾಣ ಇರುವ ಸ್ಥಳವೆಲ್ಲಿ?
ಕಣ್ಣೂರು ನಗರದಿಂದ 25 ಕಿ.ಮೀ. ದೂರದಲ್ಲಿರುವ ಮಟ್ಟನ್ನೂರ್‌. ಇದು ಮಂಗಳೂರಿನಿಂದ 165.5 ಕಿ.ಮೀ. ದೂರದಲ್ಲಿದೆ.

ಪಾಲುದಾರಿಕೆ
35% ಕೇರಳ ಸರ್ಕಾರ
30% ಬ್ಯಾಂಕ್‌ಗಳು, ವೈಯಕ್ತಿಕ ಷೇರುಗಳು
25% ಸಾರ್ವಜನಿಕ ಕ್ಷೇತ್ರದ ಹೂಡಿಕೆ
10% ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ

ಭದ್ರತಾ ಹೊಣೆ
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಗೆ ರಕ್ಷಣೆಯ ಹೊಣೆ
600 ಮಂದಿ ಕೇಂದ್ರ ಗೃಹ ಖಾತೆಯಿಂದ ಮಂಜೂರಾಗಿರುವ ಸಿಬ್ಬಂದಿ

1997 ಸಿ.ಎಂ.ಇಬ್ರಾಹಿಂ ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವರಾಗಿದ್ದ ವೇಳೆ ಯೋಜನೆ ಬಗ್ಗೆ ಆರಂಭಕ್ಕೆ ಒಲವು
2008 ಕೇಂದ್ರದಿಂದ ಅನುಮತಿ
2010 ಕಾಮಗಾರಿ ಆರಂಭ 
2016 ಫೆಬ್ರವರಿ ಪ್ರಾಯೋಗಿಕವಾಗಿ ನಡೆದ ಹಾರಾಟ
15 ಲಕ್ಷ ವಾರ್ಷಿಕವಾಗಿ ಪ್ರಯಾಣಿಕರ ಹಾರಾಟ ನಡೆಸುವ ಸಾಮರ್ಥ್ಯ
3,050 ಮೀಟರ್‌ ರನ್‌ವೇ ಉದ್ದ
3,400 ಮೀಟರ್‌ ಇನ್ನು 18 ತಿಂಗಳಲ್ಲಿ ವಿಸ್ತಾರವಾಗಲಿರುವ ರನ್‌ವೇ ಉದ್ದ
4,000 ಮೀಟರ್‌ ಕಾಮಗಾರಿ ಪೂರ್ತಿಯಾದ ಬಳಿಕ ದೇಶದಲ್ಲಿರುವ 4 ಅತಿ ದೊಡ್ಡ ರನ್‌ವೇಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ.
10,30,000 ಚದರ ಅಡಿ ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರಯಾಣಿಕರಿಗೆ ಮೀಸಲಾಗಿರುವ ಸ್ಥಳ. 
48 ಚೆಕ್‌ ಇನ್‌ ಕೌಂಟರ್‌ಗಳು

 


Trending videos

Back to Top