CONNECT WITH US  

ಸುದ್ದಿ ಕೋಶ: ನಿತೀಶ್‌ ನಡೆ ನಿಗೂಢ

ಕಾಂಗ್ರೆಸ್‌-ಆರ್‌ಜೆಡಿ ಮೈತ್ರಿಕೂಟದಿಂದ ಹೊರ ಬಂದು ಬಿಜೆಪಿ ಜತೆಗೆ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಸರ್ಕಾರ ರಚಿಸಿ ಜು.27ಕ್ಕೆ 1 ವರ್ಷ ಪೂರ್ತಿಯಾಗಲಿದೆ. ಲೋಕಸಭೆ ಚುನಾವಣೆಗೆ ಪೂರಕವಾಗಿಯೇ ಸಿದ್ಧತೆ ನಡೆಸಿರುವ ನಿತೀಶ್‌ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧವಾಗಿ ಮಾತಾಡಿದ್ದಾರೆ. ಅವರು ಎನ್‌ಡಿಎ ಅಥವಾ ಯುಪಿಎ ಮೈತ್ರಿಯಲ್ಲಿ ಇರುತ್ತಾರೋ ಎನ್ನುವುದು ಇನ್ನೂ ನಿಗೂಢ.

ನಿತೀಶ್‌ ಹೀಗೆ ಹೇಳಿದ್ದರು!
ಯಾರು ನನಗೆ ಮತ ಹಾಕುತ್ತಾರೋ, ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ. ಆದರೆ ಸಂಘರ್ಷದ ವಾತಾವರಣ ಸಮಾಜದ ಶಾಂತಿ ಕೆಡಿಸುತ್ತದೆ. ಜಾತಿಯಾಧಾರದ ಮೇಲೆ ಮತ ಒಡೆಯುವ ಪ್ರಯತ್ನ ಸಂಘರ್ಷಕ್ಕೆ ಕಾರಣವಾಗುತ್ತದೆ 

ಯೋಗ ದಿನಕ್ಕೆ ಗೈರು
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಬಿಹಾರ ಸಿಎಂ ಭಾಗಿ ಆಗಿರ ಲಿಲ್ಲ. ಕಳೆದ ವರ್ಷ ಕಾರ್ಯಕ್ರಮ ಯಶಸ್ಸಿಗೆ ಕಾಳಜಿ ವಹಿಸಿದ್ದರು.

ಆರ್‌ಜೆಡಿ ಬಾಗಿಲು ಬಂದ್‌
ಲಾಲು ಯಾದವ್‌ ನೇತೃತ್ವದ ಆರ್‌ಜೆಡಿ ಜತೆಗೆ ಸೇರುವ ಸಾಧ್ಯತೆ ಇನ್ನು ಕ್ಷೀಣ. ಮಂಗಳವಾರ ಲಾಲುಗೆ ಫೋನ್‌ ಮಾಡಿ ಆರೋಗ್ಯ ವಿಚಾರಿಸಿದ್ದ ಹಿನ್ನೆಲೆಯಲ್ಲಿ ಮಹಾಮೈತ್ರಿ ಕೂಟಕ್ಕೆ ಜೆಡಿಯು ಸೇರಲಿದೆ ಎಂಬ ವದಂತಿ ಎದ್ದ ಹಿನ್ನೆಲೆಯಲ್ಲಿ ಆರ್‌ಜೆಡಿ ನಾಯಕ  ತೇಜಸ್ವಿ ಯಾದವ್‌ ಅದನ್ನು ತಳ್ಳಿ ಹಾಕಿದ್ದಾರೆ.

ನಾಯ್ಡುಗೆ ಬೆಂಬಲ
ನೀತಿ ಆಯೋಗದ ಸಭೆಯಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿದ್ದ ಸಿಎಂ ಚಂದ್ರಬಾಬು ನಾಯ್ಡುಗೆ ಬೆಂಬಲ ನೀಡಿ, ಬಿಹಾರಕ್ಕೂ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದರು.

ಅಮಾನ್ಯಕ್ಕೆ ಆಕ್ಷೇಪ
ಮೋದಿ ನೇತೃತ್ವದ ಸರ್ಕಾರದ ಕ್ರಮಕ್ಕೆ ಆರಂಭದಲ್ಲಿ ಪ್ರಶಂಸೆ ಮಾಡಿದ್ದರು ಬಿಹಾರ ಸಿಎಂ. ಬಳಿಕ ನಿಲುವು ಬದಲಿಸಿದ ಅವರು ನೋಟು ಅಮಾನ್ಯ ಮತ್ತು ನಗದು ವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದರು.
ಜನರಿಗೆ ಕಿಂಚಿತ್ತೂ ಪ್ರಯೋಜನ ವಾಗಿಲ್ಲ. ಹಣವಂತರು ಒಂದು ಕಡೆಯಿಂದ ಇನ್ನೊಂದೆಡೆಗೆೆ ಹಣ ಸಾಗಿಸಿದ್ದಷ್ಟೇ ಬಂತು ಎಂದಿದ್ದರು. 

ಬಿಹಾರ ಬಲ
41 ಒಟ್ಟು ಲೋಕಸಭೆ ಸ್ಥಾನ
21 ಬಿಜೆಪಿ ಗೆದ್ದದ್ದು
05 ಆರ್‌ಜೆಡಿ ಪಡೆದದ್ದು
02 ಜೆಡಿಯು ಜಯಗಳಿಸಿದ್ದು


Trending videos

Back to Top