CONNECT WITH US  

ಗ್ರಾಜಿಯಾ; ಸ್ಕೂಟರ್‌ ಲೋಕದ ಸೋಜಿಗ

ಬೇಡಿಕೆ ಹೆಚ್ಚಿಸಿಕೊಂಡ ಹೋಂಡಾ

ಗ್ರಾಜಿಯಾ, ಸಿಂಗಲ್‌ ಸಿಲಿಂಡರ್‌ನಿಂದ ಕೂಡಿದ 124.9ಸಿಸಿ ಸಾಮರ್ಥ್ಯದ ಸ್ಕೂಟರ್‌ ಆಗಿದ್ದು, 125ಸಿಸಿ ಸಾಮರ್ಥ್ಯದ ಆಕ್ಟಿವಾಗೇ ಸವಾಲೆಸೆಯಬಲ್ಲ ಸ್ಕೂಟರ್‌ ಆಗಿದೆ. ಏರ್‌ ಕೂಲ್ಡ್‌ ಎಂಜಿನ್‌ ಕೂಡ ಹೊಂದಿದೆ.

ಸ್ಕೂಟರ್‌ ಎಂದರೆ, ಅದು  ಫ್ಯಾಮಿಲಿಗೇ ಮೀಸಲು ಎನ್ನುವ ಒಂದು ಕಾಲವಿತ್ತು. ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡು, ಕುಟುಂಬ ಸಮೇತ ಹೊರಟರೆ ಅದನ್ನು ನೋಡಿ ಪೆಟ್ಟಿಗೆ ಅಂಗಡಿ ಬಾಗಿಲಲ್ಲಿ ನಿಂತು ಹುಬ್ಬೇರಿಸುವ ಆಡಿಕೊಳ್ಳುವ ಸಂದರ್ಭಗಳೂ ಇದ್ದವು. ಆದರೆ, ಆ ಟ್ರೆಂಡ್‌ ಮೀರಿಸಿ ಸ್ಕೂಟರ್‌ಗಳನ್ನು ಬಲು ಬೇಗನೆ ಓವರ್‌ಟೇಕ್‌ ಮಾಡಿದ ತರಹೇವಾರಿ ಬೈಕ್‌ಗಳು ಬಂದ ಬಳಿಕ ಕೆಲವು ವರ್ಷಗಳ ಕಾಲ ಸ್ಕೂಟರ್‌ಗಳಿಗೆ ಮಾರುಕಟ್ಟೆ ಇರಲಿಲ್ಲ ಎಂಬುದು ನಿಜ. ಆದರೆ ಈಗ ಮತ್ತೆ ಸ್ಕೂಟರ್‌ಗಳಿಗೆ ಶುಕ್ರದೆಸೆ ಶುರುವಾಗಿದೆ.

ಕಳೆದೊಂದು ದಶಕದಲ್ಲಿ, ಬದಲಾದ ಸ್ಕೂಟರ್‌ಗಳ ವಿನ್ಯಾಸ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಅದರಲ್ಲೂ ಹೊಸ ವಿನ್ಯಾಸದೊಂದಿಗೆ ಹೋಂಡಾ ಸಂಸ್ಥೆಯ ಆಕ್ಟೀವಾ ಸ್ಕೂಟರ್‌ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಅಗ್ರ ಪಂಕ್ತಿಯಲ್ಲಿರುವ ಬಹುತೇಕ ಸಂಸ್ಥೆಗಳು ಇದೇ ಮಾದರಿಯಲ್ಲಿ ಸ್ಕೂಟರ್‌ಗಳನ್ನು ಪರಿಚಯಿಸಲಾರಂಭಿಸಿದವು. ಈಗ ಸಾಕಷ್ಟು ಮಾಡೆಲ್‌ಗ‌ಳು ತಮ್ಮದೇ ಆದ ಗ್ರಾಹಕ ಸಮೂಹ, ಜನಪ್ರಿಯತೆ ಗಳಿಸಿಕೊಳ್ಳುವುದರ ಜತೆಗೆ ಬೇಡಿಕೆಯನ್ನು ವೃದ್ಧಿಸಿಕೊಳ್ಳುತ್ತಿವೆ.

ವಿಭಿನ್ನ ವಿನ್ಯಾಸದ ಸ್ಕೂಟರ್‌ಗಳನ್ನು ಪರಿಚಯಿಸಿರುವ ಹೋಂಡಾ ಸಂಸ್ಥೆಯ ಗ್ರಾಜಿಯಾ ಈಗ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಬಿಡುಗಡೆಯಾದ ಒಂದೂವರೆ ವರ್ಷದಲ್ಲಿಯೇ ದಾಖಲೆಯ ಮಾರಾಟ ಮಾಡಿದ್ದಲ್ಲದೇ ಇದೀಗ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಯುವ ಜನತೆಕೂಡ ಈ ಸ್ಕೂಟರಿನ  ವಿನ್ಯಾಸ ಹಾಗೂ ಪರ್ಫಾರೆ¾ನ್ಸ್‌ಗೆ ಮರುಳಾಗಿರುವುದು ಬೇಡಿಕೆ ಹೆಚ್ಚಿಸಿಕೊಳ್ಳಲು ಕಾರಣ ಇರಬಹುದೆಂದು ವಿಶ್ಲೇಷಿಸಬಹುದು. ಗಮನಿಸಬಹುದಾದ ಒಂದು ಅಂಶ ಏನೆಂದರೆ, ಡಿಯೋ ಸ್ಕೂಟರಿಗೂ ಗ್ರಾಜಿಯಾಗೂ ಸಾಕಷ್ಟು ಸಾಮ್ಯತೆ ಇರುವುದನ್ನು ಕಾಣಬಹುದಾಗಿದೆ. ಇದೀಗ ಗ್ರಾಜಿಯಾದ ನೂತನ ಮಾಡೆಲ್‌ಗ‌ಳು ಶೋರೂಂಗಳಲ್ಲಿ ಲಭ್ಯವಿದೆ.

ವಿನ್ಯಾಸ ಅಚ್ಚುಮೆಚ್ಚು
ಗ್ರಾಜಿಯಾದ ವಿನ್ಯಾಸ ವಿಭಿನ್ನವಾಗಿದ್ದು, ಕ್ಯೂಬಿಸ್ಟ್‌ ಕಲಾಕಾರರ ಕಲಾಕೃತಿಗಳಲ್ಲಿನ ಜಾಮೆಟ್ರಿಕಲ್‌ ವಿನ್ಯಾಸಕ್ಕೆ ಹೋಲುವಂತೆ ಇರುವುದನ್ನು ಕಾಣಬಹುದಾಗಿದೆ. ಡಿಜಿಟಲ್‌ ಸ್ಪೀಡೋಮೀಟರ್‌ರ ಹೊರ ವಿನ್ಯಾಸ ವಿಶೇಷ ಎನಿಸುವಂತಿದೆ. ಎಲ್‌ಇಡಿ ಹೆಡ್‌ಲೈಟ್‌ನ ವಿನ್ಯಾಸವೂ ನಯವಾಗಿದ್ದು, ಸರ್ಕಾರದ ಈಗಿನ ನಿಯಮದಂತೆ ಡೇಟೈಂ ಲೈಟ್‌ ಜೋಡಿಸಲಾಗಿದೆ. ಸಂಪೂರ್ಣವಾಗಿ ಎಲ್‌ಇಡಿ ಹೆಡ್‌ಲೈಟ್‌ ಬಳಕೆ ಮಾಡಿ ಮಾರುಕಟ್ಟೆಗೆ ಪರಿಚಯಿಸಿದ ಭಾರತದ ಮೊದಲ ಸ್ಕೂಟರ್‌ ಗ್ರಾಜಿಯಾ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಅಷ್ಟೇ ಅಲ್ಲ. ಇದು ಎಲ್ಲವೂ ಡಿಜಿಟಲ್‌ ಮೊನೋಕ್ರೋಮ್‌ಗಳಿಂದ ಕೂಡಿರುವ ಕ್ಲಸ್ಟರ್‌ ಸ್ಕೂಟರ್‌. ಜೊತೆಗೆ ಇಂಡಿಕೇಟರ್‌ಗಳೂ ಎಲ್‌ಇಡಿ ಜತೆ ಹಾಲೋಜಿನ್‌ ಲೈಟ್‌ಗಳಿಂದ ಕೂಡಿದೆ.

18ಲೀ. ಸ್ಟೋರೇಜ್‌
ಸೀಟಿನ ಕೆಳಕ್ಕೆ 18ಲೀಟರ್‌ನಷ್ಟು ಸ್ಟೋರೇಜ್‌ಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಸ್ಕೂಟರ್‌ ಮೇಲ್ನೋಟಕ್ಕೆ ಚಿಕ್ಕದಾಗಿ ತೋರಿದರೂ ಸುಲಭವಾಗಿ ಹೆಲ್ಮೆಟ್‌ ಜತೆ ಇನ್ನೂ ಸಣ್ಣ ಪುಟ್ಟ ಸಾಮಗ್ರಿಗಳನ್ನು ಇರಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಇಲ್ಲೇ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ.

ಇಂಜಿನ್‌ ಸಾಮರ್ಥ್ಯ
ಗ್ರಾಜಿಯಾ, ಸಿಂಗಲ್‌ ಸಿಲಿಂಡರ್‌ನಿಂದ ಕೂಡಿದ 124.9ಸಿಸಿ ಸಾಮರ್ಥ್ಯದ ಸ್ಕೂಟರ್‌ ಆಗಿದ್ದು, 125ಸಿಸಿ ಸಾಮರ್ಥ್ಯದ ಆಕ್ಟಿವಾಗೇ ಸವಾಲೆಸೆಯಬಲ್ಲ ಸ್ಕೂಟರ್‌ ಆಗಿದೆ. ಏರ್‌ ಕೂಲ್ಡ್‌ ಎಂಜಿನ್‌ ಹೊಂದಿರುವ ಗ್ರಾಜಿಯಾ 8ಬಿಎಚ್‌ಪಿ, 10.54ಎನ್‌ಎಂ ಶಕ್ತಿ ಉತ್ಪಾದನೆಯೊಂದಿಗೆ ಆಫ್ ರೋಡ್‌ನ‌ಲ್ಲೂ ಸುಲಭವಾಗಿ ಮುನ್ನುಗ್ಗಬಲ್ಲದು.

ಎಕ್ಸ್‌ ಶೋರೂಂ ಬೆಲೆ: 62,250 ರೂ.
ಮೈಲೇಜ್‌: ಪ್ರತಿ ಲೀಟರ್‌ ಪೆಟ್ರೋಲ್‌ಗೆ 55ರಿಂದ 60ಕಿ.ಮೀ.

ಹೈಲೈಟ್ಸ್‌
- ಇಂಧನ ಶೇಖರಣಾ ಸಾಮರ್ಥ್ಯ 5.3ಲೀಟರ್‌
- ಗರಿಷ್ಠ ವೇಗ ಗಂಟೆಗೆ 85ಕಿ.ಮೀ.
- ಒಟ್ಟು ಆರು ಬಣ್ಣಗಳಲ್ಲಿ ಲಭ್ಯ
- ಕರ್ಬ್ ವೇಟ್‌ 107 ಕಿಲೋಗ್ರಾಂ

- ಗಣಪತಿ ಅಗ್ನಿಹೋತ್ರಿ

Trending videos

Back to Top