CONNECT WITH US  

ಜುಲೈ 7 ವಿಶ್ವ ಚಾಕೊಲೆಟ್‌ ದಿನ: ವ್ಹಾವ್‌! ಚಾಕೊಲೆಟ್‌ ...

ಚಾಕೊಲೆಟ್‌ ಗೂ ಭಾವನೆಗೂ ನಂಟಿನ ಅಂಟು. ಭಾವನೆಗೆ ರಸದ‌ ಅಂಟಾದರೆ, ಚಾಕೊಲೆಟ್‌ಗೆ ಭಾವನೆಯೇ ನಂಟು. ಒಂದು ಚಾಕೊಲೆಟ್‌ನ ಹಿಂದೆ ನೂರಾರು ಕಥೆಗಳಿರಬಹುದು. ಇದು ಚಾಕೊಲೆಟ್‌ ಕಥೆ. ಅಂದ ಹಾಗೆ ಇಂದು ವಿಶ್ವ ಚಾಕೊಲೆಟ್‌ ದಿನ.

ಚಾಕೊಲೆಟ್‌ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕಾರಣಕ್ಕಾಗಿ ಜಗತ್ತಿನಾದ್ಯಂತ ಜುಲೈ 7 ರಂದು ವಿಶ್ವ ಚಾಕೊಲೆಟ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಕೋಕೋದಿಂದ ಮಾಡಿರುವ ಚಾಕೊಲೆಟ್‌ ಅಂದ್ರೆ ಅನೇಕರಿಗೆ ಪಂಚಪ್ರಾಣ. ದಕ್ಷಿಣ ಅಮೆರಿಕದ ಮೂಲ ನಿವಾಸಿಗಳು ಅನೇಕ ವರ್ಷಗಳ ಕಾಲ ಇದನ್ನು ದೇವರ ಆಹಾರವೆಂದು ಸೇವಿಸುತ್ತಿದ್ದರು. ಸುಮಾರು 100 ವರ್ಷಗಳಿಂದಲೂ ಈ ಚಾಕೊಲೆಟ್‌, ಸ್ವಾದ ಹಾಗೂ ರುಚಿಯಿಂದಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ. ಚಾಕೊಲೆಟ್‌ ಸಾಮಾನ್ಯವಾಗಿ ಗಾಢ, ಹಾಲು ಮತ್ತು ಬಿಳಿ ಪ್ರಕಾರಗಳಲ್ಲಿ ಸಿಗುತ್ತದೆ. ಕೋಕೋ ಘನಪದಾರ್ಥಗಳು ಇದಕ್ಕೆ ಕಂದು  ಬಣ್ಣವನ್ನು ನೀಡುತ್ತವೆ.

ಚಾಕೊಲೆಟ್‌ ಉಷ್ಣವಲಯದ ಥಿಯೋಬ್ರೋಮಾ ಕಕೇಯೋ ಮರದ ಬೀಜದಿಂದ ಉತ್ಪಾದಿಸಲಾದ ಹಲವಾರು ಸಂಸ್ಕರಿಸದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಳ್ಳುತ್ತದೆ. ಕನಿಷ್ಠಪಕ್ಷ ಮೂರು ಸಾವಿರ ವರ್ಷಗಳಿಂದ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕೋಕೋ ಬೇಸಾಯಮಾಡಲಾಗುತ್ತಿದ್ದು, ಇದಕ್ಕೆ ಸರಿಸುಮಾರು ಕ್ರಿ.ಪೂ. 1100 ವರ್ಷಗಳ ಇತಿಹಾಸವಿದೆ. ಕಹಿ ನೀರು ಎಂಬ ಅರ್ಥನೀಡುವ ಒಂದು ನಾವಾಟಲ್‌ ಪದವಾದ, ಶೋಕೋಲಾಟಲ್‌ ಎಂಬ ಹೆಸರಿನಿಂದ ಪರಿಚಿತವಾದ ಪಾನೀಯವನ್ನು ತಯಾರಿಸುತ್ತಿದ್ದ ಆಜ್ಟೆಕ್‌ ಜನರನ್ನು ಒಳಗೊಂಡಂತೆ, ಮೆಸೋ ಅಮೆರಿಕದ ಬಹುಸಂಖ್ಯೆಯ ಜನರು ಚಾಕೊಲೇಟ್‌ ಪೇಯಗಳನ್ನು ತಯಾರಿಸುತ್ತಿದ್ದರು.


ಚಾಕೊಲೆಟ್‌ ಹೆಸರು

ಕೇಳಿದರೇನೇ ಆ ಬಾಲವೃದ್ಧರೆಲ್ಲರ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಅದರಲ್ಲೂ, ವಿದೇಶದಿಂದ ತಂದಿರುವ, ಸ್ವಲ್ಪ ದುಬಾರಿ ಚಾಕೊಲೆಟ್‌ ಗಳನ್ನು ತಿನ್ನುವುದೆಂದರೆ ಅದೇನೋ ಪ್ರೀತಿ.

6 ಲಕ್ಷ ರೂಪಾಯಿಯ ಚಾಕೊಲೆಟ್‌!
ದುಬಾರಿ ಚಾಕೊಲೆಟ್‌ ತಿನ್ನಬೇಕೆಂದಿದ್ದರೆ ಪೋರ್ಚುಗಲ್ಲಿಗೆ ಹೋಗಬೇಕು. ಯಾಕೆಂದರೆ ಇಲ್ಲಿ 'ಗ್ಲೋರಿಯಸ್‌' ಹೆಸರಿನ ಚಾಕೊಲೆಟ್‌ ಇದೆ. ಬೆಲೆ ಕೇವಲ 6 ಲಕ್ಷ ರೂ. ಮಾತ್ರ. 

ಚಾಕೊಲೆಟ್‌ ಉತ್ಪನ್ನ: ಕುತೂಹಲದ ಮಾತು
1. 2017ರ ಅಂದಾಜಿನಂತೆ, ಅತಿಹೆಚ್ಚು ಚಾಕೊಲೆಟ್‌ ಸೇವಿಸುವವರು ಇರುವುದು ಸ್ವಿಜರ್‌ಲ್ಯಾಂಡ್‌ ದೇಶದಲ್ಲಿ. ಪ್ರತಿಯೊಬ್ಬ ಪ್ರಜೆಯೂ ವರ್ಷಕ್ಕೆ ತಲಾ 8.8 ಕೆಜಿಯಷ್ಟು ಚಾಕೊಲೆಟ್‌ ಸೇವಿಸುತ್ತಾರೆ. 

2. ಉತ್ಪಾದನೆಯ ಗರಿಷ್ಠ  ಶೇ.50 ರಷ್ಟು  ಚಾಕೊಲೆಟ್‌ ಉತ್ಪನ್ನಗಳು ಮಾರಾಟವಾಗುವುದು ಯುರೋಪ್‌
ಖಂಡದ ದೇಶದಲ್ಲಿ.

3. ಬ್ರಿಟನ್‌, ಸ್ವಿಜ್ವರ್‌ಲ್ಯಾಂಡ್‌ ಹಾಗೂ ಜರ್ಮನ್‌ ದೇಶಗಳ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ 24 ಪೌಂಡ್‌ ನ‌ಷ್ಟು ಚಾಕೊಲೆಟ್‌ ಉತ್ಪನ್ನಗಳನ್ನು ಸೇವಿಸುತ್ತಾರೆ.

4. ಅಮೆರಿಕಕ್ಕೆ ಸುಮಾರು ಶೇ. 20.96 ರಷ್ಟು  ಕೋಕೋ ಬೀಜ ರಫ್ತುವಾಗುತ್ತಿದ್ದು, ಜಾಗತಿಕವಾಗಿ ಅತಿಹೆಚ್ಚು ಕೋಕೋ ಉತ್ಪನ್ನಗಳು ರಫ್ತುವಾಗುವ ದೇಶವಾಗಿದೆ. ಅಲ್ಲದೇ ಪ್ರಪಂಚದ ಶೇ.20ರಷ್ಟರಷ್ಟು ಚಾಕೊಲೆಟ್‌ ಅನ್ನು ದೇಶದ ಮಂದಿ ಸೇವಿಸುತ್ತಾರೆ. 

5. ಜಾಗತಿಕವಾಗಿ ಚಾಕೊಲೆಟ್‌ ಉತ್ಪನ್ನಗಳನ್ನು ಅತಿಹೆಚ್ಚು ಮಹಿಳೆಯರಿಗೆ ಸೇವಿಸುತ್ತಾರೆ. ಈ ಪ್ರಮಾಣದಲ್ಲಿ ಶೇ.91ರಷ್ಟು ಮಹಿಳೆಯರು ಸೇವಿಸಿದರೆ, ಪುರುಷರು ಶೇ.87 ರಷ್ಟು ಮಾತ್ರ ಚಾಕೊಲೆಟ್‌ ಸೇವಿಸುತ್ತಾರೆ.

6. ಕೈಗಾರಿಕೆಗಳಿಂದ ಉತ್ಪನ್ನವಾಗುವ ಚಾಕೊಲೆಟ್‌ ಅನ್ನು ಪ್ರೇಮಿಗಳ ದಿನದ ಒಂದು ದಿನವೇ  ಸುಮಾರು 400 ಮಿಲಿಯನ್‌ ರೂ. ನಷ್ಟು ಚಾಕೊಲೆಟ್‌ ಉತ್ಪನ್ನಗಳು ಮಾರಾಟವಾಗುತ್ತವೆ. ಉತ್ಪಾದನೆಯ ಶೇ. 5ರಷ್ಟು ವ್ಯಾಲೆಂಟೈನ್‌ ದಿನದ ಒಂದೇ ದಿನವೇ ಮಾರಾಟವಾಗುತ್ತದೆ ಎಂಬುದು ಗಮನಾರ್ಹವಾದುದು.

7. ಆಫ್ರಿಕಾ ಖಂಡದ ದೇಶಗಳಲ್ಲಿ ಅತಿ ಕಡಿಮೆ ಚಾಕೊಲೆಟ್‌ ಸೇವಿಸುತ್ತಾರೆ. ವಾರ್ಷಿಕವಾಗಿ ಶೇ. 3.28 ರಷ್ಟು ಮಾತ್ರ ಚಾಕೊಲೆಟ್‌ ಉತ್ಪನ್ನಗಳನ್ನು ಸೇವಿಸಲಾಗುತ್ತದೆ. 

ಆರೋಗ್ಯಕ್ಕೂ ಉಪಯೋಗ
- ಡಾರ್ಕ್‌ ಚಾಕೊಲೆಟ್‌ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ನೆನಪುಶಕ್ತಿ ಹೆಚ್ಚಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಮನಃಸ್ಥಿತಿ ಉತ್ತಮಪಡಿಸುತ್ತದೆ.

- ಡಾರ್ಕ್‌ ಚಾಕೊಲೆಟ್‌ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿದ್ದು ಅತ್ಯಧಿಕ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಮೆದುಳು, ಹೃದಯದ ಆರೋಗ್ಯಕ್ಕೆ ಉತ್ತಮ. 

- ಮೆದುಳಿನ ಕಾರ್ಯದ ಮೇಲೆ ಡಾರ್ಕ್‌ ಚಾಕೊಲೆಟ್‌ ಗಳ ಪ್ರಭಾವ ಕುರಿತು ವರ್ಷಗಳ ಕಾಲ ಅಧ್ಯಯನ ನಡೆಸಿದ್ದು ಅದರಲ್ಲಿನ ಸಕ್ಕರೆ ಅಂಶಗಳು ಕೂಡ ಮನುಷ್ಯನನ್ನು ಸಂತೋಷವಾಗಿಡುವಲ್ಲಿ ಸಹಕಾರಿಯಾಗಿದೆ.

- ಕಪ್ಪು ಚಾಕೊಲೆಟ್‌ ಕೊಲೆಸ್ಟ್ರಾಲ್‌ ಕಡಿಮೆಮಾಡಿ, ಅಧಿಕ ರಕ್ತದೊತ್ತಡ  ತಡೆಯುತ್ತದೆ.

- ಕಹಿ ಚಾಕೊಲೆಟ್‌ ನಲ್ಲಿರುವ ಫಿನಾತೈಲಮೈನ್‌ ಎಂಬ ಅಂಶ ಎಂಡ್ರೊಫೈನ್ಸ್‌ ಉತ್ಪತ್ತಿ ಮಾಡುವುದರಿಂದ ಸಂತೋಷದಿಂದ ಇರುವಂತೆ ಮಾಡುತ್ತದೆ.

2017ರಲ್ಲಿ ಜಾಗತಿಕವಾಗಿ ಅತಿಹೆಚ್ಚು ಮಾರಾಟವಾದ ಹಾಗೂ ಚಾಕೊಲೆಟ್‌ ಪ್ರಿಯರ ನೆಚ್ಚಿನ ಕಂಪೆನಿಯ ಚಾಕೊಲೆಟ್‌ಗಳೆಂದರೆ...,
ಮಾರ್ ವ್ರಾಗ್ಲೇ : 18,000 ಮಿಲಿಯನ್‌ ಡಾಲರ್‌ 
ಮಾಂಡೆಲೆಝ್ : 11,560 ಮಿಲಿಯನ್‌ ಡಾಲರ್‌
ಫೆರ್ರಾರೋ: 12,000 ಮಿಲಿಯನ್‌ ಡಾಲರ್‌
ಮೈಝಿj: 9,652 ಮಿಲಿಯನ್‌ ಡಾಲರ್‌
ನೆಸ್ಲೇ : 8,818 ಮಿಲಿಯನ್‌ ಡಾಲರ್‌
ಹಾರೆÕìಸೈ: 7,533 ಮಿಲಿಯನ್‌ ಡಾಲರ್‌

ಮಾಹಿತಿ: ಪುನೀತ್‌ ಸಾಲ್ಯಾನ್‌, ಶಿವ ಸ್ಥಾವರಮಠ, 
ವಿನ್ಯಾಸ: ಗಣೇಶ್‌ ಕಾಜಿಲ


Trending videos

Back to Top