CONNECT WITH US  

ಧರ್ಮಸ್ಥಳ ದೀಪೋತ್ಸವ; ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಜಾದೂ, ರಸಮಂಜರಿ ಕಾರ್ಯಕ್ರಮಗಳು ದೀಪೋತ್ಸವದ ಮೆರುಗನ್ನು ಹೆಚ್ಚಿಸಿದವು

ಉಜಿರೆ: ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸುಗಮ ಸಂಗೀತ ,ಜಾನಪದ ಹಾಸ್ಯ ಮತ್ತು ಜಾದೂ, ರಸಮಂಜರಿ ಕಾರ್ಯಕ್ರಮಗಳು ದೀಪೋತ್ಸವದ ಮೆರುಗನ್ನು ಹೆಚ್ಚಿಸಿದವು.

ಸುಗಮ ಸಂಗೀತವನ್ನು ತುಮಕೂರಿನ ಟಿ.ಎಸ್ ಸುಮಾ ಪ್ರಸಾದ್ ಮತ್ತು ತಂಡ ನೆರವೇರಿಸಿತು. ದ.ರಾ. ಬೇಂದ್ರೆ , ಶಿಶುನಾಳ ಷರೀಫ್, ಜಿ.ಎಸ್. ಶಿವರುದ್ರಪ್ಪ ಅವರ ರಚನೆಯ ಹಾಡುಗಳನ್ನು ಕುಸುಮಾ ಅವರು ಹಾಡುವ ಮೂಲಕ  ಸಂಗೀತ ಪ್ರಿಯರ ಮನ ರಂಜಿಸಿದರು.

ನಂತರ ಆರಂಭವಾದ ಜಾನಪದ, ಹಾಸ್ಯ ಮತ್ತು ಜಾದೂ, ರಸಮಂಜರಿ ಕಾರ್ಯಕ್ರಮವನ್ನು ಬೆಂಗಳೂರಿನ ಕಡಬ ಶ್ರೀನಿವಾಸ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳನ್ನು ಹಾಡಿ ಅದಕ್ಕೆ ಶ್ರೀನಿವಾಸ್ ಅವರ ತಂಡ ನೃತ್ಯದ ಮೂಲಕ ಕೆಲವು ಜಾದೂಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಕೊನೆಯ ಭಾಗವಾಗಿ ಯಕ್ಷಗಾನ ಪ್ರದರ್ಶನ ನಡೆಯಿತು. ಚೇರ್ಮಡಿಯ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳ ಶ್ರೀ ರಾಮ ದರ್ಶನ ಯಕ್ಷಗಾನ ಪ್ರದರ್ಶಿಸಿತು.

ವರದಿ  ವರದಶಂಕರ .ಕೆ.ಎಂ.

ಚಿತ್ರ :ಗುರುಗಣೇಶ್ ಭಟ್

Trending videos

Back to Top