CONNECT WITH US  

ತೆಂಡುಲ್ಕರ್‌ ದಾಖಲೆ ಮುರಿಯಲಿರುವ ಅಲಸ್ಟೇರ್‌ ಕುಕ್‌

ಮುಂಬಯಿ: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಅಲೆಸ್ಟೇರ್‌ ಕುಕ್‌ ಅವರು ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ಅತೀ ವೇಗದ ಕ್ರಿಕೆಟಿಗ ಎಂದೆನಿಸಿಕೊಳ್ಳಲು ಕುಕ್‌ ಅವರಿಗೆ ಇನ್ನು 36 ರನ್‌ ಬೇಕಾಗಿದೆ.

2015ರಲ್ಲಿ ತೆಂಡುಲ್ಕರ್‌ ತನ್ನ 32ನೇ ಹುಟ್ಟುಹಬ್ಬ ಆಚರಿಸುವ ಒಂದು ತಿಂಗಳ ಮೊದಲು 10 ಸಾವಿರ ರನ್‌ ಪೂರ್ತಿಗೊಳಿಸಿದ ದಾಖಲೆ ಮಾಡಿದ್ದರು. ಕಳೆದ ವರ್ಷದ ಡಿಸೆಂಬರ್‌ 25ಕ್ಕೆ 31 ವರ್ಷಕ್ಕೆ ಕಾಲಿಟ್ಟ ಕುಕ್‌ ಅವರು ಹೆಡಿಂಗ್ಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಒಂದು ವೇಳೆ 36 ರನ್‌ ಗಳಿಸಿದರೆ ತೆಂಡುಲ್ಕರ್‌ ಅವರಿಗಿಂತ ಐದು ತಿಂಗಳು ಮುಂಚಿತವಾಗಿ ಈ ಸಾಧನೆಗೈದ ಮತ್ತು ದಾಖಲೆ ಮುರಿದ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ.

Trending videos

Back to Top