CONNECT WITH US  

ರಾಜ್ಯ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ

ಮೈಸೂರು: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುವ 2014ನೇ ಸಾಲಿನ ಪ್ರತಿಷ್ಠಿತ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಮತ್ತು ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದಿಂದ ನೀಡುತ್ತಿರುವ ಸಹಾಯಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ಮೈಸೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 15 ಮಂದಿಗೆ ಏಕಲವ್ಯ ಪ್ರಶಸ್ತಿ, 10 ಮಂದಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ನಾಲ್ವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾ ಕೂಟಗಳಲ್ಲಿ ಭಾಗವಹಿಸುತ್ತಿರುವ 41 ಕ್ರೀಡಾಪಟುಗಳಿಗೆ ಸರಕಾರದಿಂದ ಆರ್ಥಿಕ ಸಹಾಯಧನ ವಿತರಿಸಲಾಯಿತು.

ಏಕಲವ್ಯ ಪ್ರಶಸ್ತಿ ಪುರಸ್ಕೃತರು
ಎಂ. ಅರವಿಂದ್‌ (ಈಜು), ಆಕಾಶ್‌ ಆರಾಧ್ಯ (ರೋಲರ್‌ ಸ್ಕೇಟಿಂಗ್‌), ಡಾ| ಖ್ಯಾತಿ ವಖಾರಿಯಾ (ಆ್ಯತ್ಲೆಟಿಕ್ಸ್‌), ವಿನೀತ್‌ ಮ್ಯಾನ್ಯುಯೆಲ್‌ (ಬ್ಯಾಡ್ಮಿಂಟನ್‌), ಕೆ. ಟ್ವಿಶಾ (ವಾಟರ್‌ ನ್ಪೋರ್ಟ್ಸ್), ಉತ್ತಪ್ಪ ಸುನ್ನುಮಂಡ ಕುಶಾಲಪ್ಪ (ಹಾಕಿ), ಲಕ್ಷ್ಮಣ್‌ ಸಿ. ಕುರಣಿ (ಸೈಕ್ಲಿಂಗ್‌), ಸುಷ್ಮಿತಾ ಪವಾರ್‌ (ಕಬಡ್ಡಿ), ಮಲಪ್ರಭ ವೈ. ಜಾದವ್‌ (ಜೂಡೋ), ಕೆ. ಪುರುಷೋತ್ತಮ್‌ (ಶೂಟಿಂಗ್‌), ಎನ್‌. ಲೋಕೇಶ್‌ (ಜಿಮ್ನಾಸ್ಟಿಕ್ಸ್‌), ಅರ್ಚನಾ ಗಿರೀಶ್‌ ಕಾಮತ್‌ (ಟೇಬಲ್‌ ಟೆನಿಸ್‌), ನಿತ್ಯಾ ಜೋಸೆಫ್ (ವಾಲಿಬಾಲ್‌), ಶರ್ಮದಾ ಬಾಲು (ಲಾನ್‌ ಟೆನಿಸ್‌) ಹಾಗೂ ಎಂ. ನಿರಂಜನ್‌ (ಸ್ವಿಮ್ಮಿಂಗ್‌) ಅವರಿಗೆ 2 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಏಕಲವ್ಯ ಪ್ರಶಸ್ತಿಯನ್ನು ಅರ್ಪಿಸಲಾಯಿತು.

ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ
ಬಾಲ್‌ ಬ್ಯಾಡ್ಮಿಂಟನ್‌ ಸೇರಿದಂತೆ ಇನ್ನಿತರ ದೇಸಿ ಕ್ರೀಡೆಗಳಲ್ಲಿ ತೋರ್ಪಡಿಸಿದ ಉತ್ತಮ ಸಾಧನೆಗಾಗಿ 10 ಮಂದಿಗೆ 2014ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿತರಿಸಲಾಯಿತು. ವಿನೋದ್‌ ರಾಥೋಡ್‌ (ಆಟ್ಯ-ಪಾಟ್ಯ), ಕಾರ್ತಿಕ್‌ ಜಿ. ಕಾಟಿ (ಕುಸ್ತಿ), ಯೋಗೇಶ್‌ (ಖೋ-ಖೋ), ಇಬ್ರಾಹಿಂ ಸಾಬ್‌ ಮುಕುºಲ್‌ಸಾಬ್‌ ಅರಬ್‌ (ಗುಂಡು ಎತ್ತುವುದು), ಎಂ.ಆರ್‌. ಕಾವ್ಯಾ (ಬಾಲ್‌ ಬ್ಯಾಡ್ಮಿಂಟನ್‌), ದುಂಡಪ್ಪ ದಾಸನ್ನನವರ (ಮಲ್ಲಕಂಬ), ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ (ಕಂಬಳ), ಎಚ್‌.ಎಸ್‌. ಅನಿಲ್‌ ಕುಮಾರ್‌ (ಯೋಗ), ಬಿ.ಕೆ. ರೂಪಶ್ರೀ (ಕಬಡ್ಡಿ), ನಕ್ರೆ ಜಯಕರ ಮಡಿವಾಳ (ಕಂಬಳ) ಅವರಿಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡ‌ ಕರ್ನಾಟಕ ಕ್ರೀಡಾರತ್ನ ಪಶಸ್ತಿ ನೀಡಿ ಗೌರವಿಸಲಾಯಿತು.

ಜೀವಮಾನ ಶ್ರೇಷ್ಠ ಪ್ರಶಸ್ತಿ
ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಎಚ್‌. ಚಂದ್ರಶೇಖರ್‌ (ಫ‌ುಟ್ಬಾಲ್‌), ಜಿ.ಆರ್‌. ಶ್ರೀಧರ್‌ ಕುಮಾರ್‌ (ಕಬಡ್ಡಿ), ಐ. ಅಮಲದಾಸ್‌ (ಬಾಕ್ಸಿಂಗ್‌) ಹಾಗೂ ಡಾ| ಪ್ರಭಾಕರ್‌ ದೇವನಗಾವಿ (ಹಾಕಿ) ಅವರಿಗೆ 1.5 ಲಕ್ಷ ರೂ. ನಗದು ಒಳಗೊಂಡ 2014ನೇ ಸಾಲಿನ ಜೀವಮಾನ ಶ್ರೇಷ್ಠ ಪ್ರಶಸ್ತಿನೀಡಿ ಗೌರವಿಸಲಾಯಿತು.

ಸಹಾಯಧನ ವಿತರಣೆ
ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರಕಾರ ಈ ವರ್ಷದಿಂದ ಆರ್ಥಿಕ ನೆರವು ನೀಡಲು ಮುಂದಾಗಿದೆ. ಹೀಗಾಗಿ ಮುಂದಿನ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ರೋಹನ್‌ ಬೋಪಣ್ಣ (ಟೆನಿಸ್‌), ಎಂ.ಆರ್‌. ಪೂವಮ್ಮ (ಆ್ಯತ್ಲೆಟಿಕ್ಸ್‌) ಹಾಗೂ ಹಾಕಿ ಆಟಗಾರರಾದ ನಿಕ್ಕಿನ್‌ ತಿಮ್ಮಯ್ಯ, ನಿತಿನ್‌ ತಿಮ್ಮಯ್ಯ, ವಿ.ಆರ್‌. ತಿಮ್ಮಯ್ಯ, ವಿ.ಆರ್‌. ರಘುನಂದನ್‌ ಸೇರಿದಂತೆ ಒಟ್ಟು 41 ಮಂದಿಗೆ 2015-16ನೇ ಸಾಲಿನ ಕ್ರೀಡಾ ಶ್ರೇಷ್ಠತಾ ಯೋಜನೆಯಡಿ ಸಹಾಯಧನ ನೀಡಲಾಯಿತು. 

ಸಚಿವರಾದ ಕೆ. ಅಭಯಚಂದ್ರ, ವಿ. ಶ್ರೀನಿವಾಸ್‌ ಪ್ರಸಾದ್‌, ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್‌, ಮೇಯರ್‌ ಬಿ.ಎಲ್‌. ಭೈರಪ್ಪ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್‌, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಎಂ.ಪಿ. ಸೋಮಶೇಖರ್‌, ಮುಡಾ ಅಧ್ಯಕ್ಷ ಕೆ.ಆರ್‌. ಮೋಹನ ಕುಮಾರ್‌, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಕ್ರೀಡಾ ಇಲಾಖೆ ನಿರ್ದೇಶಕ ಎನ್‌. ಶಿವಪ್ರಸಾದ್‌, ಪ್ರಾದೇಶಿಕ ಆಯುಕ್ತ ಕುಂಜಪ್ಪ, ಜಿಲ್ಲಾಧಿಕಾರಿ ಸಿ. ಶಿಖಾ ಇನ್ನಿತರರು ಪಾಲ್ಗೊಂಡಿದ್ದರು.

Trending videos

Back to Top