CONNECT WITH US  

ಯೂರೋ  ಕಪ್‌ ಕ್ವಾರ್ಟರ್‌ ಫೈನಲ್‌ ಪೋರ್ಚುಗಲ್‌-ಪೋಲೆಂಡ್‌ ಪೈಪೋಟಿ

ಮಾರ್ಸೆಲ್ಲೆ: ಯೂರೋ ಕಪ್‌ ಫ‌ುಟ್ಬಾಲ್‌ ಕೂಟದ ಕ್ವಾರ್ಟರ್‌ ಫೈನಲ್‌ ಸ್ಪರ್ಧೆಗಳು ಗುರುವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಪೋಲೆಂಡ್‌- ಪೂರ್ಚುಗಲ್‌ ತಂಡಗಳು ಮುಖಾಮುಖೀಯಾಗುತ್ತಿವೆ. ಗುರುವಾರ ತಡರಾತ್ರಿ 12.30ಕ್ಕೆ ಪಂದ್ಯ ಆರಂಭವಾಗಲಿದೆ.

ಪೋರ್ಚುಗಲ್‌ ತಂಡದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಸ್ಟಾರ್‌ ಆಟಗಾರರಾಗಿದ್ದಾರೆ. ಅಭಿಮಾನಿಗಳ ಕಣ್ಣು ಇವರ ಮೇಲೆಯೇ ಇದೆ. ಬಲಿಷ್ಠ ತಂಡವನ್ನು ಹೊಂದಿರುವ ಪೋರ್ಚುಗಲ್‌ ಗೆದ್ದು ಸೆಮಿಫೈನಲ್‌ ಪ್ರವೇಶದ ಕನಸು ಕಾಣುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಯೂರೋ ಕಪ್‌ ಪ್ರವೇಶಿಸಿರುವ ಪೋಲೆಂಡ್‌ ಹೇಗಾದರೂ ಮಾಡಿ ಪಂದ್ಯವನ್ನು ಗೆಲ್ಲುವತ್ತ ಯೋಜನೆ ರೂಪಿಸುತ್ತಿದೆ.

ಲೀಗ್‌ ಹಂತದ ಗುಂಪು "ಎಫ್' ಪೋರ್ಚುಗಲ್‌ 3 ಪಂದ್ಯಗಳಲ್ಲಿ ಮೂರನ್ನೂ ಡ್ರಾ ಸಾಧಿಸಿ 3ನೇ ಸ್ಥಾನಿಯಾಗಿ ಕೂಟ ಮುಗಿಸಿತ್ತು. ಗುಂಪು "ಸಿ'ನಲ್ಲಿ ಲೀಗ್‌ ಆಡಿದ್ದ ಪೋಲೆಂಡ್‌ ಒಟ್ಟು 3 ಪಂದ್ಯಗಳಲ್ಲಿ 2 ಗೆದ್ದು 1 ಪಂದ್ಯದಲ್ಲಿ ಡ್ರಾ ಕಂಡಿತ್ತು. ಅನಂತರ ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಈ ಎರಡೂ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಏರಿದವು.

Trending videos

Back to Top